Daali Dhananjaya: ದೊಡ್ಡದಾಯಿತು ನಟರಾಕ್ಷಸನ ಕುಟುಂಬ..! ಮಂಗಳಮುಖಿಯರಿಂದ ರಾಖಿ ಕಟ್ಟಿಸಿಕೊಂಡ ಡಾಲಿ!

ಜೆಪಿನಗರದ ಡಾಲಿ ಧನಂಜಯ್ ಮನೆಗೆ ಬಂದಿದ್ದ ಅಕ್ಕೈ ಪದ್ಮಶಾಲಿ ಮತ್ತು ತಂಡ, ಪ್ರೀತಿಯ ಅಣ್ಣನಿಗೆ ರಾಖಿ ಕಟ್ಟಿ, ಸಿಹಿ ತಿನಿಸಿ ಸಂಭ್ರಮಿಸಿದರು. ಎಲ್ಲರಿಗೂ ಒಂದೊಂದು ಸೀರೆ ಉಡುಗೊರೆಯಾಗಿ ನೀಡಿದ ನಟ ಡಾಲಿ ಧನಂಜಯ, ಅಣ್ಣನ ಕರ್ತವ್ಯ ನಿಭಾಯಿಸುವುದಾಗಿ ತಿಳಿಸಿದರು.

ಮಂಗಳಮುಖಿಯರ ಕೈಯಲ್ಲಿ ರಾಖಿ ಕಟ್ಟಿಸಿಕೊಂಡ ಡಾಲಿ ಧನಂಜಯ

ಮಂಗಳಮುಖಿಯರ ಕೈಯಲ್ಲಿ ರಾಖಿ ಕಟ್ಟಿಸಿಕೊಂಡ ಡಾಲಿ ಧನಂಜಯ

  • Share this:
ಸಾಮಾನ್ಯವಾಗಿ ಸಿನಿಮಾ, ನಟನೆ, ಚಿತ್ರರಂಗ ಹೊರತುಪಡಿಸಿ ಸಾಮಾಜಿಕವಾಗಿ, ಸಾಹಿತ್ಯಿಕವಾಗಿ ಬೇರೆ ಬೇರೆ ವಿಷಯಗಳ ಬಗ್ಗೆ ಸೆಲೆಬ್ರಿಟಿಗಳಿಗೆ ತಿಳುವಳಿಕೆ ಕಡಿಮೆ ಎಂಬ ಮಾತಿದೆ. ಬಹುತೇಕ ನಟ, ನಟಿಯರ ವಿಷಯದಲ್ಲಿ ಇದು ನಿಜವೂ ಹೌದು. ಆದರೆ ಸ್ಯಾಂಡಲ್‍ವುಡ್‍ನ ನಟರಾಕ್ಷಸ ಡಾಲಿ ಧನಂಜಯ ಅವರ ವಿಷಯಕ್ಕೆ ಬಂದರೆ, ಅದು ಸುಳ್ಳು. ಯಾಕೆಂದರೆ ಸಿನಿಮಾ ಜೊತೆಗೆ ಸಾಹಿತ್ಯ ಓದುವ ಅಭಿರುಚಿ ಬೆಳೆಸಿಕೊಂಡಿರುವ ಡಾಲಿ ಧನಂಜಯ, ಹತ್ತು ಹಲವು ವಿಷಯಗಳ ಬಗ್ಗೆ ಜ್ಞಾನ ಹೊಂದಿದ್ದಾರೆ. ಹೀಗಾಗಿಯೇ ಅವರು ಅಂದರೆ ಎಲ್ಲರಿಗೂ ಅಚ್ಚುಮೆಚ್ಚು.

ಇಂತಹ ಡಾಲಿ ಧನಂಜಯ ಇಂದು ಎಲ್ಲರಿಗೂ ಮಾದರಿಯಾಗುವ ಕೆಲಸ ಮಾಡಿದ್ದಾರೆ. ಮಂಗಳಮುಖಿಯರಿಂದ ರಾಖಿ ಕಟ್ಟಿಸಿಕೊಂಡು, ಅಣ್ಣನಾಗಿದ್ದಾರೆ. ಕಷ್ಟ ಕಾಲದಲ್ಲಿ ನಿಮ್ಮ ಜೊತೆಗೆ ನಿಲ್ಲುತ್ತೇನೆ ಎಂದು ಅಭಯ ನೀಡಿದ್ದಾರೆ. ಎಲ್ಲರಿಗೂ ಸೀರೆಗಳನ್ನು ಉಡುಗೊರೆಯಾಗಿ ನೀಡಿ ಅಣ್ಣನಂತೆ ಆಶಿರ್ವದಿಸಿದ್ದಾರೆ. ಹೌದು, ಹೊರಗೆ ರಸ್ತೆಗಳಲ್ಲಿ ಸಿಕ್ಕಾಗ ಯಾರಾದರೂ ಮಂಗಳಮುಖಿ ಬಂದು ಹಣ ಕೇಳಿದಾಗ ಅಸಹ್ಯಪಟ್ಟು ಓಡುವವರ ನಡುವೆ, ನಟ ಡಾಲಿ ಧನಂಜಯ ಮಂಗಳಮುಖಿಯರನ್ನು ತಮ್ಮ ಮನೆಗೇ ಕರೆದು ಆತಿಥ್ಯ ನೀಡಿದ್ದಾರೆ. ಆ ಮೂಲಕ ಸಮಾಜಕ್ಕೆ ಒಂದೊಳ್ಳೆ ಸಂದೇಶ ನೀಡಿದ್ದಾರೆ.

ಇದನ್ನೂ ಓದಿ:ಕಾಂಗ್ರೆಸ್​ ವಿರೋಧ ಪಕ್ಷಕ್ಕೂ ನಾಲಾಯಕ್​ ಅಂತಾ ಜನ ಮನೆಗೆ ಕಳುಹಿಸಿದ್ದಾರೆ; ನಳೀನ್ ಕುಮಾರ್ ಕಟೀಲ್ ಲೇವಡಿ

ಇತ್ತೀಚೆಗಷ್ಟೇ ರಿಲೀಸ್ ಆದ ರತ್ನನ್ ಪ್ರಪಂಚ ಚಿತ್ರದ ಟ್ರೇಲರ್‍ಗೆ ಎಲ್ಲೆಡೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ರೋಹಿತ್ ಪದಕಿ ನಿರ್ದೇಶನದ ರತ್ನನ್ ಪ್ರಪಂಚದಲ್ಲಿ ರತ್ನಾಕರನ ಪಾತ್ರದಲ್ಲಿ ಡಾಲಿ ಧನಂಜಯ ನಟಿಸಿದ್ದು, ಅವರ ತಾಯಿಯಾಗಿ ಮಾಜಿ ಸಚಿವೆ, ಹಿರಿಯ ನಟಿ ಉಮಾಶ್ರೀ ಮಿಂಚಿದ್ದಾರೆ. ವಿಶೇಷ ಅಂದರೆ ಈ ಚಿತ್ರದಲ್ಲಿ ಮಂಗಳಮುಖಿ ಅಕ್ಕೈ ಪದ್ಮಶಾಲಿ ಕೂಡ ನಟ ಡಾಲಿ ಧನಂಜಯ ಅವರ ಅಕ್ಕನ ಪಾತ್ರದಲ್ಲಿ ನಟಿಸಿದ್ದಾರಂತೆ.

ಮೊದಲ ದಿನದ ಚಿತ್ರೀಕರಣದ ವೇಳೆ ಸಿಕ್ಕಾಗ ಅಕ್ಕೈ ಪದ್ಮಶಾಲಿ, ನಿಮ್ಮಿಂದ ಇಂದಿನ ಯುವಪೀಳಿಗೆ ಹಾಳಾಗುತ್ತಿದೆ. ಟಗರು ಚಿತ್ರದಲ್ಲಿ ಯಾಕೆ ಆ ತರ ಕೆಟ್ಟ ಪಾತ್ರ ಮಾಡಿದೀರಾ ಅಂತ ಕೇಳಿದ್ದರಂತೆ. ಅದಕ್ಕೆ ನಾನೊಬ್ಬ ನಟನಾಗಿ ಯಾವ ರೀತಿಯ ಪಾತ್ರಗಳು ಬಂದರೂ ಅದಕ್ಕೆ ಜೀವ ತುಂಬುವ ಪ್ರಯತ್ನ ಮಾಡಲೇಬೇಕು ಅಂತ ನಟ ಡಾಲಿ ಧನಂಜಯ ಉತ್ತರಿಸಿದ್ದರಂತೆ. ಆ ಬಳಿಕ ಹಲವು ದಿನಗಳ ಕಾಲ ಜಮ್ಮು ಕಾಶ್ಮೀರದಲ್ಲಿ ಶೂಟಿಂಗ್‍ನಲ್ಲಿ ಧನಂಜಯ ಅವರನ್ನು ನೋಡಿ, ಅವರ ಜೊತೆ ಮಾತನಾಡಿ, ಅವರ ಬಗ್ಗೆ ತಿಳಿದುಕೊಂಡು ಅಕ್ಕೈ ಪದ್ಮಶಾಲಿ ಅವರಿಗೆ ಸ್ಪೆಷಲ್ ಸ್ಟಾರ್ ಬಗೆಗಿದ್ದ ಭಾವನೆಗಳು ಸಂಪೂರ್ಣವಾಗಿ ಬದಲಾಗಿವೆ. ಅವರ ಮೇಲಿನ ಗೌರವ, ಪ್ರೀತಿ ಹೆಚ್ಚಿದೆ. ಹೀಗಾಗಿಯೇ ಶೂಟಿಂಗ್‍ನಿಂದ ವಾಪಸ್ ಬರುವಾಗ ನಿಮಗೆ ನಾನು ರಾಖಿ ಕಟ್ಟಬೇಕು, ನೀವು ನನ್ನ ಅಣ್ಣನಾಗಬೇಕು ಎಂದು ಕೇಳಿಕೊಂಡಿದ್ದಾರೆ. ಅದಕ್ಕೆ ಪ್ರೀತಿಪೂರ್ವಕವಾಗಿ ಒಪ್ಪಿದ ನಟ ಡಾಲಿ ಧನಂಜಯ್, ಇವತ್ತು ಅಕ್ಕೈ ಪದ್ಮಶಾಲಿ ಸೇರಿದಂತೆ ಅವರ ತಂಡವನ್ನು ಮನೆಗೆ ಕರೆದಿದ್ದರು.

ಇದನ್ನೂ ಓದಿ:ಆಲಮಟ್ಟಿಗೆ ಡ್ಯಾಂಗೆ ಬಾಗಿನ ಅರ್ಪಿಸಿ, ರೈತರ ಮನವಿ ಸ್ವೀಕರಿಸಿದ ಸಿಎಂ ಬೊಮ್ಮಾಯಿ

ಅದರಂತೆ ಇವತ್ತು ಜೆಪಿನಗರದ ಡಾಲಿ ಧನಂಜಯ್ ಮನೆಗೆ ಬಂದಿದ್ದ ಅಕ್ಕೈ ಪದ್ಮಶಾಲಿ ಮತ್ತು ತಂಡ, ಪ್ರೀತಿಯ ಅಣ್ಣನಿಗೆ ರಾಖಿ ಕಟ್ಟಿ, ಸಿಹಿ ತಿನಿಸಿ ಸಂಭ್ರಮಿಸಿದರು. ಎಲ್ಲರಿಗೂ ಒಂದೊಂದು ಸೀರೆ ಉಡುಗೊರೆಯಾಗಿ ನೀಡಿದ ನಟ ಡಾಲಿ ಧನಂಜಯ, ಅಣ್ಣನ ಕರ್ತವ್ಯ ನಿಭಾಯಿಸುವುದಾಗಿ ತಿಳಿಸಿದರು. ಇದೇ ಸಮಯದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಡಾಲಿ, `ರತ್ನನ್ ಪ್ರಪಂಚ ಶೂಟಿಂಗ್ ಸಮಯದಲ್ಲಿ ನನ್ನ ಮತ್ತು ಅಕ್ಕೈಯವರ ಪರಿಚಯವಾಯಿತು. ಶೂಟಿಂಗ್ ನಡೀತಾ ನಡೀತಾ ಅವರು ನನ್ನ ಬಗ್ಗೆ ತಿಳಿದುಕೊಂಡರು, ನಾನು ಅವರ ಬಗ್ಗೆ, ಅವರ ಜೀವನದ ಬಗ್ಗೆ, ಅವರ ಹೋರಾಟಗಳ ಬಗ್ಗೆ ತಿಳಿದುಕೊಂಡೆ. ಒಬ್ಬ ಅಣ್ಣ ತಂಗಿಯ ಬಾಂಧವ್ಯ ಶುರುವಾಗಿದೆ. ಇದು ನನಗೆ ತುಂಬಾ ಖುಷಿ ನೀಡಿದೆ. ನಮ್ಮ ಅಕ್ಕ ತಂಗಿಯರಂತೆ ಇವರೂ ಸಹ' ಎಂದರು.
Published by:Latha CG
First published: