Sandalwood: ಹೊಸಬರ ಬೆನ್ನಿಗೆ ನಿಂತ ಸ್ಟಾರ್​ ನಟರು.. `ಮೈಕಲ್​ & ಮಾರ್ಕೊನಿ’ಗೆ ಸಾಥ್​ ಕೊಟ್ಟ ಡಾಲಿ-ಲೂಸ್​ ಮಾದ!

‘ಬ್ಲಾಕ್ ಬಿಲ್ಲಿ’ ಎಂಬ ಪಾತ್ರವನ್ನು ಪ್ರಶಾಂತ್ ಸಿದ್ದಿ ಪೋಷಣೆ‌ ಮಾಡ್ತಿದ್ದಾರೆ. ಬ್ಲಾಕ್ ಬಿಲ್ಲಿ ಕ್ಯಾರೆಕ್ಟರ್ ನಂಬರ್ 18, ಏರಿಯಾ ನಂಬರ್-51 ಅಂತಾ ಪೋಸ್ಟರ್ ನಲ್ಲಿ ಅನೌನ್ಸ್ ಮಾಡಲಾಗಿದೆ. ಇದು ಚಿತ್ರರಸಿಕರ ಕ್ಯೂರಿಯಾಸಿಟಿಯನ್ನು ದುಪ್ಪಟ್ಟು ಮಾಡಿದೆ.

ಧನಂಜಯ್​, ಲೂಸ್ ಮಾದ ಯೋಗಿ

ಧನಂಜಯ್​, ಲೂಸ್ ಮಾದ ಯೋಗಿ

  • Share this:
ಸಿನಿಮಾ(Movie) ಎಂಬ ಸಮುದ್ರದಲ್ಲಿ ಈಜಿ ದಡ ಸೇರುವುದು ಅಂದರೆ ಸಾಮಾನ್ಯದ ಮಾತಲ್ಲ. ಈ ಬಣ್ಣದ ಲೋಕದ‌‌ ಕನಸು ಕಾಣುತ್ತಾ.. ಇಲ್ಲಿಯೇ ಬದುಕು ಕಟ್ಟಿಕೊಳ್ಳಬೇಕೆಂಬ ಇಚ್ಛೆಯಿಂದ ಬಂದ ಇಲ್ಲೊಂದು ತಂಡ ಹಲವು ಅವಮಾನ, ಸೋಲು ಮೆಟ್ಟಿ ಮತ್ತೊಂದು ಸಿನಿಮಾಗೆ ಅಧಿಕೃತ ಮುದ್ರೆ ಒತ್ತಿದೆ. ಈ ಹಿಂದೆ ಸ್ಟಾರ್ ಕನ್ನಡಿಗ(Star Kannadiga) ಅನ್ನೋ ಸಿನಿಮಾ ಬಂದಿತಲ್ಲ. ಅದೇ ತಂಡ ಸೇರಿಕೊಂಡು ಈಗ ‘ಮೈಕಲ್ ಅಂಡ್ ಮಾರ್ಕೊನಿ’(Michael and Marconi)ಎಂಬ ಸಿನಿಮಾ ಮಾಡುತ್ತಿದೆ. ಸ್ಟಾರ್ ಕನ್ನಡಿಗ ಸಿನಿಮಾದ ನಿರ್ದೇಶನದ ಜವಾಬ್ದಾರಿ ಹೊತ್ತು ಜೊತೆಗೆ ಬಣ್ಣ ಹಚ್ಚಿದ್ದ ಮಂಜುನಾಥ್ ವಿ ಆರ್(Manjunath VR) ಮೈಕಲ್ ಅಂಡ್ ಮಾರ್ಕೊನಿ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಶ್ರೀ ಮಂಜುನಾಥ್ ಪಿಕ್ಚರ್ಸ್ ನಡಿ ನಿರ್ಮಾಣವಾಗ್ತಿರುವ ಈ ಸಿನಿಮಾಗೆ ಹರೀಶ್ ಜೋಡಿ ಬಂಡವಾಳ ಹೂಡಿದ್ದಾರೆ.

ಪಕ್ಕಾ ಗ್ಯಾಂಗ್​ಸ್ಟಾರ್​ ಕಥೆ ಹೊಂದಿರುವ ಸಿನಿಮಾ!

ಪಕ್ಕಾ ಗ್ಯಾಂಗ್ ಸ್ಟಾರ್ ಕಥೆಯೊಳ್ಳ, ‘ರಾ’ ಥೀಮ್ ಕಾನ್ಸೆಪ್ಟ್ ನಲ್ಲಿ ತಯಾರಾಗುತ್ತಿರುವ ‘ಮೈಕಲ್ ಅಂಡ್ ಮಾರ್ಕೊನಿ’ ಸಿನಿಮಾದ ಟೈಟಲ್ ನ್ನು ನಟರಾಕ್ಷಸ ಡಾಲಿ ಧನಂಜಯ್ ಮೆಚ್ಚಿ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿ,‌ ತಂಡಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ.

‘ಲೂಸ್ ಮಾದ’ ಯೋಗಿ ಮೆಚ್ಚುಗೆ

ಲೂಸ್ ಮಾದ ಯೋಗಿ ‘ಮೈಕಲ್ ಅಂಡ್ ಮಾಕೋನಿ’ ಸಿನಿಮಾದ ಟೈಟಲ್ ಹಾಗೂ ಬ್ಲಾಕ್ ಬಿಲ್ಲಿ ಕ್ಯಾರೆಕ್ಟರ್ ಇಂಟ್ರುಡಕ್ಷನ್ ಥ್ರಿಲ್ ಆಗಿ, ಇಡೀ ಟೀಂಗೆ ಶುಭ ಹಾರೈಸಿ, ಸಿನಿಮಾ ತಂಡದ ಗೆಲುವಿಗೆ ಸಾಥ್ ಕೊಟ್ಟಿದ್ದಾರೆ. ‘ಮೈಕಲ್ ಅಂಡ್ ಮೊರ್ಕೊನಿ’ ಸಿನಿಮಾದ ಟೈಟಲ್ ಜೊತೆಗೆ ಸಿನಿಮಾದ ಇಂಟ್ರೆಸ್ಟಿಂಗ್ ಕ್ಯಾರೆಕ್ಟರ್​ವೊಂದನ್ನು ಚಿತ್ರತಂಡ ರಿವೀಲ್ ಮಾಡಿದೆ.

ಇದನ್ನೂ ಓದಿ: ಬಂದ.. ಬಂದ.. ರಣಬೇಟೆಗಾರ ಬಂದ! ಮಾರ್ಚ್​ 27ಕ್ಕೆ ಕೆಜಿಎಫ್​ 2 ಟ್ರೈಲರ್ ರಿಲೀಸ್​!

‘ಬ್ಲಾಕ್​ ಬಿಲ್ಲಿ’ ಪಾತ್ರದಲ್ಲಿ ಪ್ರಶಾಂತ್​ ಸಿದ್ದಿ!

‘ಬ್ಲಾಕ್ ಬಿಲ್ಲಿ’ ಎಂಬ ಪಾತ್ರವನ್ನು ಪ್ರಶಾಂತ್ ಸಿದ್ದಿ ಪೋಷಣೆ‌ ಮಾಡ್ತಿದ್ದಾರೆ. ಬ್ಲಾಕ್ ಬಿಲ್ಲಿ ಕ್ಯಾರೆಕ್ಟರ್ ನಂಬರ್ 18, ಏರಿಯಾ ನಂಬರ್-51 ಅಂತಾ ಪೋಸ್ಟರ್ ನಲ್ಲಿ ಅನೌನ್ಸ್ ಮಾಡಲಾಗಿದೆ. ಇದು ಚಿತ್ರರಸಿಕರ ಕ್ಯೂರಿಯಾಸಿಟಿಯನ್ನು ದುಪ್ಪಟ್ಟು ಮಾಡಿದೆ. ಸದ್ಯ ಟೈಟಲ್ ಹಾಗೂ ‘ಬ್ಲಾಕ್ ಬಿಲ್ಲಿ’ ಪಾತ್ರವನ್ನಷ್ಟೇ ಪರಿಚಯಿಸಿರುವ ಚಿತ್ರತಂಡ ಸದ್ಯದಲ್ಲಿಯೇ ಇಡೀ ತಂಡದೊಟ್ಟಿಗೆ ಪ್ರೇಕ್ಷಕರ ಎದುರು ಹಾಜರಾಗಲಿದೆ.

ಇದನ್ನೂ ಓದಿ: ಭೂಗತಲೋಕದ ದೊರೆಯಾಗ್ತಿದ್ದಾರೆ ಧ್ರುವ ಸರ್ಜಾ, ಜಿಮ್​ನಲ್ಲಿ ಬಹದ್ದೂರ್​ ಗಂಡು `ಭರ್ಜರಿ’ ವರ್ಕೌಟ್​!

ಹೊಸಬರ ಬೆನ್ನಿಗೆ ನಂತ ಸ್ಟಾರ್​ ನಟರು!

ಮೊದಲಿನಿಂದಲೂ ಹೊಸಬರ ಸಿನಿಮಾಗಳು ಸ್ಯಾಂಡಲ್​ವುಡ್​ನಲ್ಲಿ ನೆಲೆಯೂರಲು ಪರದಾಡುತ್ತಿರುತ್ತವೆ. ಇಂಥಹ ಸಮಯದಲ್ಲಿ ಸ್ಟಾರ್​ ನಟರು ಹೊಸಬರ ತಂಡಕ್ಕೆ ಸಪೋರ್ಟ್​ ಮಾಡಿದರೆ, ಅವರು ಕೂಡ ಇಲ್ಲಿ ನೆಲಯೂರಬಹುದು. ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಈ ರೀತಿಯ ಕೆಲಸಗಳನ್ನು ಹೆಚ್ಚು ಮಾಡುತ್ತಿದ್ದರು. ಹೊಸಬರ ಸಿನಿಮಾಗಳನ್ನು ತಯಾರಿಸಲೆಂದೇ ಪಿಆರ್​ಕೆ ಪ್ರೊಡಕ್ಷನ್​ ಸಂಸ್ಥೆ ಹುಟ್ಟುಹಾಕಿದ್ದರು. ಇದೀಗ ಹೊಸಬರ ಬೆನ್ನಿಗೆ ಡಾಲಿ ಧನಂಜಯ್​ ಹಾಗೂ ಲೂಸ್​ ಮಾದ ನಿಂತಿದ್ದಾರೆ.
Published by:Vasudeva M
First published: