ಲಕ್ಷಾಂತರ ರೂಪಾಯಿ ಟೋಪಿ ಹಾಕಿದ ಚಂದನವನದ ನಟ ಯಾರು ಗೊತ್ತಾ?

news18
Updated:June 22, 2018, 11:44 AM IST
ಲಕ್ಷಾಂತರ ರೂಪಾಯಿ ಟೋಪಿ ಹಾಕಿದ ಚಂದನವನದ ನಟ ಯಾರು ಗೊತ್ತಾ?
news18
Updated: June 22, 2018, 11:44 AM IST
ನ್ಯೂಸ್​ 18 ಕನ್ನಡ 

'ಟಗರು' ಚಿತ್ರದಲ್ಲಿ ನಟನೆ ಮಾಡಿದ್ದ ನಟನೊಬ್ಬ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಘಟನೆ ಸುಬ್ರಮಣ್ಯಪುರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

'ಟಗರು' ಸೇರಿದಂತೆ ಸಹ ಕಲಾವಿದನಾಗಿ ಕಾಣಿಸಿಕೊಂಡಿದ್ದ ದೇವನಾಥ್​ ಸದ್ಯ ವಂಚಿಸಿ, ತಲೆಮರೆಸಿಕೊಂಡಿರುವ ಆರೋಪಿ. ಒಂದು ನಿವೇಶನದಲ್ಲಿರುವ ಮನೆಯನ್ನು ಇಬ್ಬರಿಗೆ ಮಾರಾಟ ಮಾಡಲು ಯತ್ನಿಸಿ, 53 ಲಕ್ಷ ಹಣ ವಂಚಿಸಿದ್ದಾರೆ.

ಮನೆಯ ಮಾರಾಟ ಮಾಡುವುದಾಗಿ ಹೇಳಿ ಪ್ರಶಾಂತ್ ಎಂಬುವರ ಬಳಿ ಮುಂಗಡವಾಗಿ ದೇವನಾಥ್​ ಹಣ ಪಡೆದಿದ್ದರು. ಸುಬ್ರಮಣ್ಯಪುರದ ಸಿಂಹಾದ್ರಿ ಬಡಾವಣೆಯಲ್ಲಿನ 30/40 ನಿವೇಶನದಲ್ಲಿದ್ದ ಮನೆಯನ್ನು ಮಾರಾಟ ಮಾಡುವ ನೆಪದಲ್ಲಿ ವಂಚಿಸಿರುವ ಆರೋಪ ಎದುರಿಸುತ್ತಿದ್ದಾರೆ ದೇವನಾಥ್​.

ಮನೆ ಮಾರುವುದಾಗಿ ಹೇಳಿ ಪ್ರಶಾಂತ್ ಅವರ ಬಳಿ‌ 75 ಲಕ್ಷಕ್ಕೆ ಮಾತುಕತೆ ನಡೆಸಿದ್ದ ದೇವನಾಥ್​, ಮುಂಗಡ ಹಣವಾಗಿ 53 ಲಕ್ಷವನ್ನು ಪಡೆದು, ಮನೆಯ ಸೇಲ್ ಅಗ್ರಿಮೆಂಟ್ ಮಾಡಿಸಿಕೊಡುವುದಾಗಿ ಮಾತು ನೀಡಿದ್ದರಂತೆ ದೇವನಾಥ್​. ಆದರೆ ಪ್ರಶಾಂತ್ಗೆ ಅವರಿಗೆ ಗೊತ್ತಾಗದ ಹಾಗೆ 1.2 ಕೋಟಿಗೆ ಬೇರೆಯವರಿಗೆ ಸೇಲ್ ಅಗ್ರಿಮೆಂಟ್ ಮಾಡಿಸಿದ್ದರು ಎನ್ನಲಾಗುತ್ತಿದೆ.

ಈ ಬಗ್ಗೆ ಅನುಮಾನ ಬಂದು ಮನೆಯ ಮೂಲ ದಾಖಲೆಗಳನ್ನು ಕೊಡುವಂತೆ ಪ್ರಶಾಂತ್​ ಕೇಳಿದಾಗ, ಅಗ್ರಿಮೆಂಟ್​ ಸಮಯದಲ್ಲಿ ಕೊಡುವುದಾಗಿ ದೇವನಾಥ್​ ತಿಳಿಸಿದ್ದಾರೆ. ಇದರಿಂದ ಅನುಮಾನ ಮತ್ತಷ್ಟು ಹೆಚ್ಚಾಗಿ ಮನೆ ಬಳಿ‌ ಹೋಗಿ ವಿಚಾರಿಸಿದಾಗ, ಕಿಶೋರ್ ಎಂಬಾತನಿಗೆ ಆಸ್ತಿಯನ್ನು ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ.

ನಂತರ ದೇವನಾಥ್​ ಅವರ ಬಳಿ ಹಣ ಕೇಳಲು ಹೋದ ಪ್ರಶಾಂತ್​ ಅವರಿಗೆ ಹಣ ನೀಡುವುದಿಲ್ಲ, ಮತ್ತೆ ಬಂದರೆ ಕೈಕಾಲು ಮುರಿಸುತ್ತೇನೆ ಎಂದು ಧಮ್ಕಿ ಹಾಕಿದ್ದಾರೆ. ಇದರಿಂದ ಬೇಸತ್ತ ಪ್ರಶಾಂತ್​ ಸುಬ್ರಮಣ್ಯಪುರ ಪೊಲೀಸರಿಗೆ ದೂರು ನೀಡಿದ್ದಾರೆ.
Loading...

ದೇವನಾಥ್​ ಮೈ ತುಂಬ ಚಿನ್ನಾಭರಣ ಹಾಕಿಕೊಂಡು ಫಾರ್ಚುನರ್​ ಕಾರಿನಲ್ಲಿ ಓಡಾಡಿಕೊಂಡಿದ್ದು, ಸಿನಿಮಾದಲ್ಲಿ ಅಭಿನಯಿಸುವ ಹುಚ್ಚು ಬೆಳೆಸಿಕೊಂಡಿದ್ದರಂತೆ. ಇದರಿಂದಾಗಿಯೇ ಹೇಗೋ ಹಾಗೆ ಟಗರು ಚಿತ್ರ ತಂಡದೊಂದಿಗೆ ಸ್ನೇಹ ಬೆಳೆಸಿಕೊಂಡು, ಡೈಲಾಗ್​ ಇಲ್ಲದೇ ಹೋದಲು ಸುಮ್ಮನೆ ಹಾಗೆ ಕಾಣಿಸಿಕೊಳ್ಳುವ ಪಾತ್ರದಲ್ಲಿ ಅಭಿನಯಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯ ದೇವನಾಥ್ ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
First published:June 22, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ