• Home
  • »
  • News
  • »
  • entertainment
  • »
  • Yellow Gangs: ಜೊತೆ ಜೊತೆಯಲಿ ಧಾರಾವಾಹಿ ಹರ್ಷವರ್ಧನ್ ಈಗ ಸಿನಿಮಾ ಹೀರೋ!

Yellow Gangs: ಜೊತೆ ಜೊತೆಯಲಿ ಧಾರಾವಾಹಿ ಹರ್ಷವರ್ಧನ್ ಈಗ ಸಿನಿಮಾ ಹೀರೋ!

ಯೆಲ್ಲೋ ಗ್ಯಾಂಗ್ಸ್

ಯೆಲ್ಲೋ ಗ್ಯಾಂಗ್ಸ್

ಯೆಲ್ಲೋ ಗ್ಯಾಂಗ್ಸ್ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದ್ದು, ಕುತೂಹಲ ಹುಟ್ಟಿಸಿದೆ. ಕ್ರೈಮ್ ಥ್ರಿಲ್ಲರ್ ಕಥಾಹಂದರವನ್ನು ಈ ಚಿತ್ರ ಒಳಗೊಂಡಿದೆ, ಸ್ನೇಹಿತರೇ ಸೇರಿ ಈ ಚಿತ್ರವನ್ನು ಮಾಡಿದ್ದಾರೆ ಎನ್ನುವುದು ಇನ್ನೊಂದು ವಿಶೇಷ.

  • News18 Kannada
  • Last Updated :
  • Karnataka, India
  • Share this:

    ಜೀ ಕನ್ನಡದಲ್ಲಿ (Zee Kannada) ರಾತ್ರಿ 8.30ಕ್ಕೆ ಪ್ರಸಾರವಾಗುವ ಜೊತೆ ಜೊತೆಯಲಿ (Jothe Jotheyali) ಸೀರಿಯಲ್ (Serial) ಹೆಚ್ಚು ಜನಪ್ರಿಯತೆ ಗಳಿಸಿದೆ. ಆರ್ಯವರ್ಧನ್ ಪಾತ್ರದಷ್ಟೇ, ಹರ್ಷವರ್ಧನ್ ಪಾತ್ರ ಕೂಡ ಗಮನ ಸೆಳೆದಿದೆ. ಅಣ್ಣನ ಪ್ರೀತಿಯ ತಮ್ಮನಾಗಿ ಹರ್ಷ ತಮ್ಮ ಪಾತ್ರ ನಿರ್ವಹಿಸಿದ್ದಾರೆ. ಹರ್ಷನ (Harsha) ಅಭಿನಯ ಎಲ್ಲರಿಗೂ ಇಷ್ಟ ಆಗಿದೆ. ಹರ್ಷ ಅಂದ್ರೆ ದೇವ್ ದೇವಯ್ಯ ಈಗ ಸಿನಿಮಾದಲ್ಲಿ (Film) ನಾಯಕರಾಗಿದ್ದಾರೆ. ಯೆಲ್ಲೋ ಗ್ಯಾಂಗ್ಸ್ ಚಿತ್ರದಲ್ಲಿ ನಾಯಕ ನಟನಾಗಿ ಮಿಂಚಿದ್ದಾರೆ. ಯೆಲ್ಲೋ ಗ್ಯಾಂಗ್ಸ್ (Yellow Gangs) ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದ್ದು, ಕುತೂಹಲ ಹುಟ್ಟಿಸಿದೆ. ಕ್ರೈಮ್ ಥ್ರಿಲ್ಲರ್ ಕಥಾಹಂದರವನ್ನು ಈ ಚಿತ್ರ ಒಳಗೊಂಡಿದೆ, ಸ್ನೇಹಿತರೇ ಸೇರಿ ಈ ಚಿತ್ರವನ್ನು ಮಾಡಿದ್ದಾರೆ ಎನ್ನುವುದು ಇನ್ನೊಂದು ವಿಶೇಷ.


    ಸ್ನೇಹಿತರೇ ಸೇರಿಕೊಂಡು ಸಿನಿಮಾ ನಿರ್ಮಾಣ
    ಯೆಲ್ಲೋ ಗ್ಯಾಂಗ್ಸ್​ನ ಮತ್ತೊಂದು ವಿಶೇಷ ಎಂದ್ರೆ, ಈ ಚಿತ್ರವನ್ನು ಸ್ನೇಹಿತರೇ ಸೇರಿಕೊಂಡು ನಿರ್ಮಾಣ ಮಾಡಿದ್ದಾರೆ. ವಿಭಿನ್ನ ಸ್ಟುಡಿಯೋಸ್, ವಾಟ್ ನೆಕ್ಸ್ಟ್ ಮೂವೀಸ್ ಹಾಗೂ ಕೀ ಲೈಟ್ಸ್ ಸಂಸ್ಥೆಗಳ ಜೊತೆಯಾಗಿ ಈ ಚಿತ್ರವನ್ನು ನಿರ್ಮಿಸಿವೆ. ಶಿವಮೊಗ್ಗದ ನವೋದಯ ಶಾಲೆಯಲ್ಲಿ ಓದಿರುವ ವಿದ್ಯಾರ್ಥಿಗಳ ಗುಂಪು ಸೇರಿ ಈ ಚಿತ್ರಕ್ಕೆ ಹಣ ಹಾಕಿದ್ದಾರೆ. ಇದರ ನಿರ್ದೇಶಕರು ರವೀಂದ್ರ ಪರಮೇಶ್ವರಪ್ಪ. ಇವರಿಗೆ ಸ್ನೇಹಿತರೇ ಹಣ ನೀಡಿ ಬೆಂಬಲಿಸಿದ್ದಾರೆ.


    19 ಪ್ರಮುಖ ಪಾತ್ರಗಳು
    ಯೆಲ್ಲೋ ಗ್ಯಾಂಗ್ಸ್ ಚಿತ್ರದಲ್ಲಿ ನಾಯಕನಾಗಿ ದೇವ್ ದೇವಯ್ಯ ಇದ್ದಾರೆ. ನಾಯಕಿ ಆಗಿ ಅರ್ಚನಾ ಕೊಟ್ಟಿಗೆ ಇದ್ದಾರೆ. ಇವರಿಬ್ಬರು ಸೇರಿ 19 ಪ್ರಮುಖ ಪಾತ್ರಗಳನ್ನು ನಿರ್ದೇಶಕರು ಸೃಷ್ಟಿಸಿದ್ದಾರೆ. ಈ ಚಿತ್ರದಲ್ಲಿ 3 ಗ್ಯಾಂಗ್​ಗಳು ಇರಲಿದ್ದು, ಆ ಮೂರು ಗುಂಪುಗಳಿಗೆ ಮೂರು ನಾಯಕರು ಇರುತ್ತಾರಂತೆ.


    ಇದನ್ನೂ ಓದಿ: BBK Season 9: ಟಾಸ್ಕ್​​ನಲ್ಲಿ ತಮಾಷೆ ಹೋಗಿ ಜಗಳವೇ ಶುರುವಾಯ್ತು! ಗುರೂಜಿಗೆ ಅಮೂಲ್ಯ ಅವಾಜ್! 


    ನವೆಂಬರ್ 11ರಂದು ಚಿತ್ರ ಬಿಡುಗಡೆ
    ನಿರ್ದೇಶಕರು ರವೀಂದ್ರ ಪರಮೇಶ್ವರಪ್ಪ ಅವರ ಯೆಲ್ಲೋ ಗ್ಯಾಂಗ್ ಚಿತ್ರಕ್ಕೆ ನ್ ಅವರ ಛಾಯಾಗ್ರಹಣ, ರೋಹಿತ್ ಸೋವರ್ ಸಂಗೀತ ನಿರ್ದೇಶನ ಇದೆ. ಈ ಸಿನಿಮಾವನ್ನು ಟ್ರ್ಯಾಲಿ ಬಳಸದೇ ಚಿತ್ರಿಸಿದ್ದಾರಂತೆ. ನಾಯಕನಾಗಿ ದೇವ್ ದೇವಯ್ಯ ಚೆನ್ನಾಗಿ ಅಭಿನಯಿಸಿದ್ದಾರಂತೆ. ಚಿತ್ರ ಮುಂದಿನ ತಿಂಗಳ ನವೆಂಬರ್ 11ಕ್ಕೆ ಬಿಡುಗಡೆ ಆಗಲಿದೆ.


    Sandalwood Actor Dev Devaiah, Dev Acting in Yellow Gangs Kannada film, yellow gang Kannada movie, Jothe jotheyali Serial Actor, ಸ್ಯಾಂಡಲ್ವುಡ್ ನಟ ದೇವ್ ದೇವಯ್ಯ, ಯೆಲ್ಲೋ ಗ್ಯಾಂಗ್ಸ್ ಕನ್ನಡ ಚಿತ್ರದಲ್ಲಿ ದೇವ್ ನಟನೆ, ಹಳದಿ ಗ್ಯಾಂಗ್ ಕನ್ನಡ ಚಿತ್ರ, ಜೊತೆ ಜೊತೆಯಲಿ ಸೀರಿಯಲ್ ನಟ, Kannada news, Karnataka news,
    ಯೆಲ್ಲೋ ಗ್ಯಾಂಗ್ಸ್


    ನಿದೇರ್ಶಕರು ಏನ್ ಹೇಳ್ತಾರೆ?
    ಬೇರೆ ಕೆಲಸ ಮಾಡುತ್ತಿದ್ದ ನನ್ನನ್ನು ಸಿನಿಮಾ ಲೋಕ ಕೈ ಬೀಸಿ ಕರೆದಿದೆ. ಇದು ನನ್ನ ಮೊದಲ ಪ್ರಯತ್ನವಾಗಿದೆ. ಈ ಯೆಲ್ಲೋ ಗ್ಯಾಂಗ್ ಸಿನಿಮಾ ಕ್ರೈಮ್ ಥ್ರಿಲ್ಲರ್ ಆಗಿದೆ. ಬೇರೆ ಸಿನಿಮಾಗಳಿಗಿಂತ ವಿಭಿನ್ನವಾಗಿದೆ. ಎಲ್ಲರೂ ಸಿನಿಮಾ ನೋಡಿ ಆಶೀರ್ವಾದ ಮಾಡಬೇಕು ಎಂದು ನಿರ್ದೇಶಕರು ರವೀಂದ್ರ ಪರಮೇಶ್ವರಪ್ಪ ಹೇಳಿದ್ದಾರೆ.


    ಇದನ್ನೂ ಓದಿ: BBK Season 9: ಬಿಗ್ ಬಾಸ್​ ಮನೆಗೆ ಎಂಟ್ರಿ ಕೊಡ್ತಿದ್ದಾರೆ ಸೋನು ಗೌಡ!


    ಪೊಲೀಸ್ ವಿಕ್ರಮ್ ಆಗಿ ಹರ್ಷ
    ದೇವ್ ದೇವಯ್ಯ ಈ ಚಿತ್ರದಲ್ಲಿ ವಿಕ್ರಮ್ ಎಂಬ ಹೆಸರಿನ ಪೆÇಲೀಸ್ ಅಧಿಕಾರಿಯಾಗಿ ಪಾತ್ ಮಾಡಿದ್ದಾರೆ. ಪೊಲೀಸ್ ಪಾತ್ರವನ್ನು ಖಡಕ್ ಆಗಿ ಮಾಡಿದ್ದಾರೆ. ನನಗೆ ಇದೊಂದು ಉತ್ತಮ ಚಿತ್ರ ಎಂದು ನಾಯಕಿ ಅರ್ಚನಾ ಕೊಟ್ಟಿಗೆ ಹೇಳಿದ್ದಾರೆ. ಸತ್ಯ ಬಿ.ಜಿ, ಅರುಣ್ ಕುಮಾರ್, ನಾಟ್ಯ ರಂಗ, ವಿನೀತ್ ಕಟ್ಟಿ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.


    Sandalwood Actor Dev Devaiah, Dev Acting in Yellow Gangs Kannada film, yellow gang Kannada movie, Jothe jotheyali Serial Actor, ಸ್ಯಾಂಡಲ್ವುಡ್ ನಟ ದೇವ್ ದೇವಯ್ಯ, ಯೆಲ್ಲೋ ಗ್ಯಾಂಗ್ಸ್ ಕನ್ನಡ ಚಿತ್ರದಲ್ಲಿ ದೇವ್ ನಟನೆ, ಹಳದಿ ಗ್ಯಾಂಗ್ ಕನ್ನಡ ಚಿತ್ರ, ಜೊತೆ ಜೊತೆಯಲಿ ಸೀರಿಯಲ್ ನಟ, Kannada news, Karnataka news,
    ಯೆಲ್ಲೋ ಗ್ಯಾಂಗ್ಸ್


    ಯೆಲ್ಲೋ ಗ್ಯಾಂಗ್ಸ್ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದ್ದು, ಕುತೂಹಲ ಹುಟ್ಟಿಸಿದೆ. ಕ್ರೈಮ್ ಥ್ರಿಲ್ಲರ್ ಕಥಾಹಂದರವನ್ನು ಈ ಚಿತ್ರ ಒಳಗೊಂಡಿದೆ, ಸ್ನೇಹಿತರೇ ಸೇರಿ ಈ ಚಿತ್ರವನ್ನು ಮಾಡಿದ್ದಾರೆ ಎನ್ನುವುದು ಇನ್ನೊಂದು ವಿಶೇಷ.

    Published by:Savitha Savitha
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು