• Home
  • »
  • News
  • »
  • entertainment
  • »
  • ತಾನು ಬೆಳೆದು ತನ್ನವರನ್ನ ಬೆಳೆಸೋ ಯಜಮಾನ; ಪ್ರಜ್ವಲ್ ದೇವರಾಜ್ ಬೆನ್ನ ಹಿಂದಿದೆ ದರ್ಶನ್ ಬಲ!

ತಾನು ಬೆಳೆದು ತನ್ನವರನ್ನ ಬೆಳೆಸೋ ಯಜಮಾನ; ಪ್ರಜ್ವಲ್ ದೇವರಾಜ್ ಬೆನ್ನ ಹಿಂದಿದೆ ದರ್ಶನ್ ಬಲ!

ದರ್ಶನ್

ದರ್ಶನ್

Dboss: ದರ್ಶನ್ ಪ್ರಜ್ವಲ್ ಗೆಲ್ಲಬೇಕು ಅಂತ ಜೊತೆ ನಿಂತಿರೋದು ಇದೇ ಮೊದಲೇನಲ್ಲ. ಅವರ ಪ್ರತಿ ಚಿತ್ರಕ್ಕೂ ದರ್ಶನ್ ಬೆಂಬಲ ಇದ್ದೇ ಇರುತ್ತದೆ. ಪ್ರಜ್ವಲ್ ನಟನೆಯ ‘ಚೌಕ‘ ಚಿತ್ರದಲ್ಲಿ ಒಂದು ಸಣ್ಣ ರೋಲ್‌ನಲ್ಲಿ ದರ್ಶನ್ ಕಾಣಿಸಿಕೊಂಡಿದ್ದರು. ಹಾಗೆಯೇ ಇನ್‌ಪೆಕ್ಟರ್ ‘ವಿಕ್ರಂ‘ ಚಿತ್ರದಲ್ಲೂ ಸಹ ಆತ್ಮೀಯ ಗೆಳೆಯನಿಗಾಗಿ ಒಂದು ಪಾತ್ರವನ್ನ ನಿಭಾಯಿಸಿದ್ದಾರೆ.

ಮುಂದೆ ಓದಿ ...
  • Share this:

ಯಜಮಾನ ಸಿನಿಮಾದ ಟೈಟಲ್ ಸಾಂಗ್‌ನಲ್ಲಿ 'ತಾನು ಬೆಳೆದು ತನ್ನವರನ್ನ ಬೆಳೆಸೋ ಆ ಗುಣ' ಅನ್ನೋ ಸಾಲು ಇದೆ. ಇದು ನಿಜವಾಗಿಯೂ ಯಜಮಾನ ಸಿನಿಮಾದ ಪಾತ್ರಕ್ಕಾಗಿ ಬರೆದ ಸಾಲಲ್ಲ.. ಬದಲಾಗಿ, ದರ್ಶನ್ ಅವರ ನಿಜ ಗುಣವನ್ನು, ನೈಜ ವ್ಯಕ್ತಿತ್ವವನ್ನ ಬಣ್ಣಿಸೋ ಸಾಲು.


ನಟ ದರ್ಶನ್​ ರೀಲ್‌ನಲ್ಲಷ್ಟೇ ಅಲ್ಲ. ರಿಯಲ್ ಲೈಫ್‌ನಲ್ಲೂ ಸಹ ತನ್ನವರಿಗೆ ಬಲವಾಗಿ ನಿಲ್ಲುತ್ತಾರೆ . ನಂಬಿದವರಿಗಾಗಿ.. ಅವರ ಗೆಲುವಿಗಾಗಿ.. ಅವಿರತವಾಗಿ ಶ್ರಮ ಪಡುತ್ತಾನೆ ಇದ್ದಾರೆ. ತನ್ನವರು ಎಲ್ಲಿ ಯಾವಾಗ ಕರೆದರು ಜೊತೆ ಇರ್ತಾರೆ ಡಿ-ಬಾಸ್. ಅದಕ್ಕೆ ಬೆಸ್ಟ್ ಎಕ್ಸಾಂಪಲ್ ಅಂದ್ರೆ ಪ್ರಜ್ವಲ್ ದೇವರಾಜ್. ತನ್ನ ಗೆಳೆಯ ಪ್ರಜ್ವಲ್​ ಗೆಲ್ಲಬೇಕು ಇಂಡಸ್ಟ್ರಿಯಲ್ಲಿ ಗಟ್ಟಿಯಾಗಿ ನಿಲ್ಲಬೇಕು ಎಂದು ಅದೆಷ್ಟು ಎಫರ್ಟ್ ಹಾಕಿದ್ದಾರೆ ಗೊತ್ತಾ ಚಾಲೆಂಜಿಂಗ್ ಸ್ಟಾರ್.


ಡೈನಾಮಿಕ್ ಸ್ಟಾರ್ ದೇವರಾಜ್ ಫ್ಯಾಮಿಲಿಯಲ್ಲಿ ದರ್ಶನ್ ಕೂಡ ಒಬ್ಬ ಸದಸ್ಯರಂತೆ ಆಗಿ ಹೋಗಿದ್ದಾರೆ. ದರ್ಶನ್ ಮನೆಯಲ್ಲಿ ಏನಾದರು ಸಮಾರಂಭ ನಡೆದರೆ ಅಲ್ಲಿ ದೇವರಾಜ್ ಫ್ಯಾಮಿಲಿ ಇರುತ್ತೆ. ಹಾಗೆಯೇ ದೇವರಾಜ್ ಫ್ಯಾಮಿಲಿಯಲ್ಲಿ ಏನಾದದರು ಕಾರ್ಯಕ್ರಮವಿದ್ದರು ಅಲ್ಲಿ ಡಿಬಾಸ್ ಇರುತ್ತಾರೆ. ಇಷ್ಟರ ಮಟ್ಟಿಗೆ ದೇವರಾಜ್ ಕುಟುಂಬದ ಜೊತೆ ಒಡನಾಟವನ್ನ ಇಟ್ಕೊಂಡಿದ್ದಾರೆ ಯಜಮಾನ.


ಪ್ರಜ್ವಲ್ ದೇವರಾಜ್‌ಗೆ ಗೆಳೆಯನಾಗಿ, ಅಣ್ಣನಾಗಿ ಎಲ್ಲಾ ಸಮಯದಲ್ಲೂ ಒಡೆಯನ ಸಪೋರ್ಟ್ ಇದ್ದೇ ಇರುತ್ತದೆ. ಸದ್ಯ ಪ್ರಜ್ವಲ್ ದೇವರಾಜ್ ‘ಜೆಂಟಲ್‌ಮನ್‘ ಆಗಿ ಥಿಯೇಟರ್​ಗೆ ಬಂದಿದ್ದಾರೆ. ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ವಿಕ್ಷಿಪ್ತ ಖಾಯಿಲೆಯಿಂದ ಬಳಲೋ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.


ಕನ್ನಡದಕ್ಕೊಂದು ಹೊಸತನದ ಕಥೆಯನ್ನ ಹೊಂದಿರೋ ಜಂಟಲ್‌ಮನ್‌ಗೆ ಪ್ರೇಕ್ಷಕರ ಪ್ರೀತಿ ಬಹುವಾಗಿ ಸಿಕ್ಕಿದೆ. ಒಂದು ಲಾಂಗ್ ಟೈಮ್‌ನ ಬಳಿಕ ಪ್ರಜ್ವಲ್ ಚಿತ್ರವೊಂದು ಪಾಸಿಟಿವ್ ಟಾಕ್ ಪಡೆದುಕೊಂಡಿದೆ. ಗೆಲುವಿನತ್ತ ಹೆಜ್ಜೆ ಇಟ್ಟಿದೆ. ಈ ಮೂಲಕ ಪ್ರಜ್ವಲ್ ದೇವರಾಜ್ ಕಂಬ್ಯಾಕ್ ಮಾಡಿದ್ದಾರೆ.


ಸಾಕಷ್ಟು ವರ್ಷಗಳಿಂದ ಗೆಲುವಿಗಾಗಿ ಹುಡುಕಾಡುತ್ತಿದ್ದ ನಟ ಪ್ರಜ್ಜಲ್​​ಗೆ ಜೆಂಟಲ್‌ಮನ್ ಗೆಲುವಿನ ಸವಿ ಉಣಿಸಿದ್ದಾನೆ. ಅಂದಹಾಗೆ ಈ ಗೆಲುವಿನ ಪಾಲು ದರ್ಶನ್‌ಗೂ ಸಲ್ಲಲೇಬೇಕು. ಯಾಕಂದರೆ ‘ಜಂಟಲ್‌ಮನ್‘ ಶುರುವಾದಾಗಿನಿಂದ  ದರ್ಶನ್ ಪೂರ್ಣ ಪ್ರಮಾಣದಲ್ಲಿ ಸಪೋರ್ಟ್​ ನಿಂತಿದ್ದರು. ಜಂಟಲ್‌ಮನ್ ಮುಹೂರ್ತಕ್ಕೂ ಅಭಿಮಾನಿಗಳ ಪ್ರೀತಿಯ ಡಿಬಾಸ್ ಆಗಮಿಸಿ ಕ್ಲಾಪ್ ಮಾಡಿದ್ದರು. ಚಿತ್ರಕ್ಕೆ ಶುಭ ಕೋರಿದ್ದರು.


ಇದನ್ನೂ ಓದಿ: ಫೆ. 21ಕ್ಕೆ ಸುಕ್ಕ ಸೂರಿ ‘ಪಾಪ್ ಕಾರ್ನ್ ಮಂಕಿ ಟೈಗರ್‘ ರಿಲೀಸ್​


ಅಷ್ಟೇ ಅಲ್ಲ,  ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಸಹ ದರ್ಶನ್ ಪಾಲ್ಗೊಂಡಿದ್ದರು. ಗೆಳೆಯನ ಸಿನಿಮಾವನ್ನ ತುಂಬು ಮನಸ್ಸಿನಿಂದ ಹೊಗಳಿದ್ದರು. ಈ ವೇಳೆ ಇಂತಹ ಚಿತ್ರ ಸೋಲಬಾರದು. ಸೋತರೆ ಅದು ಕನ್ನಡ ಚಿತ್ರರಂಗದ ದೌರ್ಭಾಗ್ಯ ಅನ್ನುವ ರೀತಿಯಲ್ಲಿ ಮಾತನಾಡಿದ್ದರು.  ಫೋನಿನಲ್ಲಿ ಪರಭಾಷೆಗೆ ಸಪೋರ್ಟ್ ಮಾಡುವರಿಗೂ, ಕನ್ನಡ ಚಿತ್ರಗಳು ಚೆನ್ನಾಗಿಲ್ಲ ಅಂತ ಹೀಗಳೆಯುವರಿಗೂ ಛಾಟಿ ಬೀಸಿದ್ರು.


ಇನ್ನು ಇತ್ತೀಚೆಗೆ ನಡೆದ ಪ್ರೀಮಿಯರ್ ಶೋನಲ್ಲಿ ಸಹ ದರ್ಶನ್ ಪಾಲ್ಗೊಂಡಿದ್ದರು. ಚಿತ್ರ ನೋಡಿ ಥ್ರಿಲ್ ಆಗಿದ್ರು. ಒಟ್ಟಾರೆ ಗೆಳೆಯನ ಸಿನಿಮಾವನ್ನ ಯಾವೆಲ್ಲಾ ರೀತಿ ಪ್ರಮೋಟ್ ಮಾಡಬಹುದೋ? ಅಷ್ಟು ಪ್ರಮೋಷನ್ ಸಿಗುವಂತೆ ನೋಡಿಕೊಂಡಿದ್ದರು.


ಕೊನೆಗೂ ದರ್ಶನ್ ಅವರ ಶ್ರಮಕ್ಕೆ ಫಲ ಸಿಕ್ಕಿದೆ. ‘ಜಂಟಲ್‌ಮನ್‘ ಸಿನಿಮಾ ನಿರೀಕ್ಷೆಗೂ ಮೀರಿ ಅದ್ಭುತ ಪ್ರತಿಕ್ರಿಯೆ ಪಡೆದುಕೊಳ್ತಿದೆ. ಆ ಮೂಲಕ ದರ್ಶನ್ ಕೇವಲ ಗೆಳೆಯನ ಸಿನಿಮಾ ಅಂತ ‘ಜಂಟಲ್‌ಮನ್‘ ಸಿನಿಮಾವನ್ನ ಹೊಗಳಲಿಲ್ಲ. ಆ ಚಿತ್ರದಲ್ಲಿ ನಿಜವಾಗಿಯೂ ಅಂತ ಸ್ಟಫ್ ಇತ್ತು ಅನ್ನೋದು ಸಹ ಪ್ರೂವಾಗಿದೆ.


ಅಂದಹಾಗೆ, ದರ್ಶನ್ ಪ್ರಜ್ವಲ್ ಗೆಲ್ಲಬೇಕು ಅಂತ ಜೊತೆ ನಿಂತಿರೋದು ಇದೇ ಮೊದಲೇನಲ್ಲ. ಅವರ ಪ್ರತಿ ಚಿತ್ರಕ್ಕೂ ದರ್ಶನ್ ಬೆಂಬಲ ಇದ್ದೇ ಇರುತ್ತದೆ. ಪ್ರಜ್ವಲ್ ನಟನೆಯ ‘ಚೌಕ‘ ಚಿತ್ರದಲ್ಲಿ ಒಂದು ಸಣ್ಣ ರೋಲ್‌ನಲ್ಲಿ ದರ್ಶನ್ ಕಾಣಿಸಿಕೊಂಡಿದ್ದರು. ಹಾಗೆಯೇ ಇನ್‌ಪೆಕ್ಟರ್ ‘ವಿಕ್ರಂ‘ ಚಿತ್ರದಲ್ಲೂ ಸಹ ಆತ್ಮೀಯ ಗೆಳೆಯನಿಗಾಗಿ ಒಂದು ಪಾತ್ರವನ್ನ ನಿಭಾಯಿಸಿದ್ದಾರೆ.


ಹಾಗೆಯೇ ‘ವೀರಂ‘ ಎಂಬ ಚಿತ್ರದ ಟೀಸರ್ ಸಹ ಸ್ವತಃ ದರ್ಶನ್ ಅವರೇ ಲಾಂಚ್ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಪ್ರಜ್ವಲ್ ದೇವರಾಜ್ ಸಹೋದರ ಪ್ರಣಮ್ ನಾಯಕನಾಗಿ ನಟಿಸಿದ್ದ ‘ಕುಮಾರಿ ೨೧‘ ಚಿತ್ರಕ್ಕೂ ಸಹ ದರ್ಶನ್ ಅದೇ ರೀತಿಯ ಸಹಕಾರ ನೀಡಿದ್ದರು. ಒಟ್ಟಾರೆ ದೇವರಾಜ್ ಫ್ಯಾಮಿಲಿ ಮೇಲಿರೋ ಪ್ರೀತಿ ಅಕ್ಕರೆಯನ್ನ, ಅವರ ಮಕ್ಕಳ ಸಿನಿಮಾಗಳ ಪ್ರೋತ್ಸಾಹ ಬೆಂಬಲಕ್ಕೆ ನಿಲ್ಲೋ ಮೂಲಕ ಡಿ‘ಬಾಸ್‘ ತೋರಿಸುತ್ತಿದ್ದಾರೆ.


ದರ್ಶನ್ ತಮ್ಮ ಸ್ನೇಹಬಳಗದಲ್ಲಿರೋರಿಗೆ ನಿರಂತರವಾಗಿ ಬೆನ್ನೆಲುಬಾಗಿ ನಿಲ್ಲುತ್ತಾರೆ. ಅದರಲ್ಲಿ ಡೆಡ್ಲಿ ಆದಿತ್ಯಾ ಕೂಡ ಒಬ್ಬರು. ಆದಿತ್ಯಾ ಹಾಗೂ ದರ್ಶನ್ ಬಾಲ್ಯ ಸ್ನೇಹಿತರು.ಇವರಿಬ್ಬರ ಸ್ನೇಹ ಶುರುವಾಗಿದ್ದು ‘ಪಿತಾಮಹಾ‘ ಸಿನಿಮಾ ಶೂಟಿಂಗ್ ಟೈಮ್‌ನಲ್ಲಿ. ಚಡ್ಡಿ ಹಾಕುವಾಗ ಶುರುವಾದ ಇವರಿಬ್ಬರ ನಡುವಿನ ಸ್ನೇಹಕ್ಕೆ ಒಂಚೂರು ಚ್ಯುತಿ ಬಂದಿಲ್ಲ. ವರ್ಷ ಕಳೆದಂತೆ ಇವರಿಬ್ಬರ ನಡುವಿನ ಒಡನಾಟ ಗಾಢವಾಗ್ತಿದೆ.


ಡಿ-ಬಾಸ್ ದರ್ಶನ್ ಸ್ಯಾಂಡಲ್‌ವುಡ್‌ನ ಮನಿಮಿಷನ್. ನಿರ್ದೇಶಕರು, ನಿರ್ಮಾಪಕರ ಪಾಲಿನ ಡಾರ್ಲಿಂಗು. ಆದರೆ ಆದಿತ್ಯಾಗೆ ಅದ್ಯಾಕೋ ಸ್ಟಾರ್ ಪಟ್ಟ ಸಿಕ್ಕಿಯೇ ಇಲ್ಲ. ಇಂಡಸ್ಟ್ರಿ ತಿರುಗಿ ನೋಡುವಂತಹ ಗೆಲುವು ಸಿಕ್ಕೇ ಇಲ್ಲ. ಆದರೇನಂತೆ ತನ್ನ ಗೆಳೆಯನ ಕೆರಿಯರರ್​​ರನ್ನ ಮೇಲ್ಮಟ್ಟಕ್ಕೆ ಕೊಂಡೊಯ್ಯಲೇಬೇಕು ಅಂತ ಡಿ-ಬಾಸ್ ಪಣ ತೊಟ್ಟಿದ್ದಾರೆ. ಹೀಗಾಗಿ ಅಗತ್ಯ ಬಿದ್ದಾಗಲೆಲ್ಲಾ ದರ್ಶನ್ ಗೆಳೆಯನ ಜೊತೆ ನಿಲ್ಲುತ್ತಿದ್ದಾರೆ. ಚಿತ್ರಗಳಿಗೆ ಸಪೋರ್ಟ್ ಮಾಡುತ್ತಿದ್ದಾರೆ.


ಇದನ್ನೂ ಓದಿ: ನಟ ವರುಣ್ ಧವನ್ ಮದುವೆ ಡೇಟ್ ಫಿಕ್ಸ್; ಭಾರತದಲ್ಲಿ ನಡೆಯೊಲ್ಲ ಅವರ ಕಲ್ಯಾಣ!


ಆದಿತ್ಯಾ ‘ಮುಂದುವರೆದ ಆದ್ಯಾಯ' ಎಂಬ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರದ ಟ್ರೇಲರ್ ಈಗಾಗಲೇ ರಿಲೀಸ್ ಆಗಿದೆ. ಚಿತ್ರಪ್ರೇಮಿಗಳಿಂದ ಭರ್ಜರಿ ಪ್ರತಿಕ್ರಿಯೆ ಪಡೆದುಕೊಳ್ತಿದೆ. ಖಂಡಿತ ಈ ಸಿನಿಮಾ ಆದಿತ್ಯಾಗೆ ಬ್ರೇಕ್ ಕೊಟ್ಟೇ ಕೊಡಲಿದೆ ಎಂಬ ಟಾಕ್ ಪಡೆದುಕೊಂಡಿದೆ.


ಇನ್ನು ಈ ಸಿನಿಮಾ ಶೂಟಿಂಗ್​ ಪ್ರಾರಂಭವಾಗಿನಿಂದಲೂ ದರ್ಶನ್ ಜೊತೆ ನಿಂತಿದ್ದಾರೆ. ಇತ್ತೀಚೆಗೆ ಟ್ರೇಲರ್​ ರಿಲೀಸ್ ವೇಳೆಯೂ ಡಿ-ಬಾಸ್ ಸಾಥ್ ಕೊಟ್ಟಿದ್ದರು. ಅಲ್ಲಿಗೆ ಪ್ರಜ್ವಲ್ ಗೆಲುವು ಸಿಕ್ಕಂತೆ, ಆದಿತ್ಯಾಗೂ ಗೆಲುವು ಸಿಕ್ಕರೆ ಡಿ‘ಬಾಸ್‌‘ರ ಇನ್ನೊಬ್ಬ ಗೆಳೆಯ ಸ್ಯಾಂಡಲ್‌ವುಡ್‌ನಲ್ಲಿ ಮಿಂಚೋದರಲ್ಲಿ ಡೌಟೇ ಇಲ್ಲ.


ಹಾಗೆಯೇ ದರ್ಶನ್ ಅವರ ಗೆಳೆಯರ ಬಳಗದ ಸದಸ್ಯರಲ್ಲಿ ವಿನೋದ್ ಪ್ರಭಾಕರ್ ಕೂಡ ಒಬ್ಬರು. ಸ್ಯಾಂಡಲ್‌ವುಡ್‌ನಲ್ಲಿ ಟೈಗರ್ ಎಂದು ಕರೆಸಿಕೊಂಡಿದ್ದ  ಪ್ರಭಾಕರ್ ಅಂದರೆ ದರ್ಶನ್‌ಗೆ ಎಲ್ಲಿಲ್ಲದ ಅಭಿಮಾನ. ಇನ್ನು ಅವರ ಮಗ ವಿನೋದ್​ ಪ್ರಬಾಕರ್​ ಮೇಲೂ ಅಷ್ಟೇ ಪ್ರೀತಿ.  ಹೀಗಾಗಿ ವಿನೋದ್ ಅವರನ್ನ ಟೈಗರ್  ಎಂದು  ಕರೆಯೋದು ದರ್ಶನ್.


ಇನ್ನು ವಿನೋದ್ ಪ್ರಭಾಕರ್‌ ಅವರಿಗೂ ಸಕ್ಸಸ್ ಅನ್ನೋದು ಆರಂಭದಲ್ಲಿ ಸಿಗಲೇ ಇಲ್ಲ. ಒಂದು ರೀತಿ ಆಕಾಶದಲ್ಲಿರೋ ನಕ್ಷತ್ರದಂತೆ ಕಣ್ಣಿಗೆ ಕಂಡರೂ ಕೈಗೆಟುಕದ ರೀತಿಯಾಗಿತ್ತು ಸಕ್ಸಸ್. ಹೀಗಾಗಿ ಒಂದಷ್ಟು ಕಾಲ ವಿನೋದ್ ಇಂಡಸ್ಟಿಯಿಂದಲೇ ದೂರ ಇದ್ದರು.


ಟೈಗರ್​ ಪ್ರಭಾಕರ್ ಪುತ್ರ ಸಿನಿಮಾ ಇಂಡಸ್ಟ್ರಿಯಲ್ಲಿ ನಿಲ್ಲಬೇಕು, ಗೆಲ್ಲಬೇಕು. ಇದು ದರ್ಶನ್ ಆಶಯ. ಹೀಗಾಗಿ ನಿನ್ನ ಜೊತೆ ನಾನಿರ್ತಿನಿ . ಸಿನಿಮಾ ಮಾಡು ಎಂದು ಉತ್ಸಾಹ ತುಂಬಿದ್ದೇ ದರ್ಶನ್ ಅಂತೆ. ಹಾಗಾಗಿ ವಿನೋದ್ ಪ್ರಭಾಕರ್ ಅವರ ಯಾವುದೇ ಸಿನಿಮಾ ಇರಲಿ, ಮಹೂರ್ತ, ಆಡಿಯೋ ರಿಲೀಸ್, ಟ್ರೇಲರ್ ರಿಲೀಸ್ ಎಲ್ಲಾ ಕಾರ್ಯಕ್ರಮಗಳಿಗೂ ದರ್ಶನ್ ಅಟೆಂಡ್ ಮಾಡುತ್ತಾರೆ.


ಇದನ್ನೂ ಓದಿ: ನಟ ವರುಣ್ ಧವನ್ ಮದುವೆ ಡೇಟ್ ಫಿಕ್ಸ್; ಭಾರತದಲ್ಲಿ ನಡೆಯೊಲ್ಲ ಅವರ ಕಲ್ಯಾಣ!


ಇದಿಷ್ಟೇ ಅಲ್ಲದೆ, ನೆನಪಿರಲಿ ಪ್ರೇಮ್ ಕೂಡ ದರ್ಶನ್ ಅವರ ಆತ್ಮೀಯ ಗೆಳೆಯ. ಅಂದಹಾಗೆ ನೆನಪಿರಲಿ ಪ್ರೇಮ್‌ಗೆ ಬ್ರೇಕ್ ಕೊಟ್ಟ ‘ಜೊತೆ ಜೊತೆಯಲಿ‘ ಸಿನಿಮಾ ಮೂಡಿಬಂದಿದ್ದೇ ದರ್ಶನ್ ತೂಗುದೀಪ್ ಬ್ಯಾನರ್‌ನಲ್ಲಿ. ಇನ್ನು ಸೃಜನ್, ಧರ್ಮ ಕೀರ್ತಿರಾಜ್, ಶ್ರೀ ಮುರಳಿ ಹೀಗೆ ಒಬ್ಬರಾ ಇಬ್ಬರಾ? ದರ್ಶನ್ ಗೆಳೆಯರ ಬಳಗದಲ್ಲಿರೋರು. ಇವರಿಗೆಲ್ಲಾ ದರ್ಶನ್ ಪ್ರತಿ ಸಮಯದಲ್ಲಿಯೂ ಸಾಥ್ ಕೊಡ್ತಾರೆ. ಒಟ್ಟಾರೆ ತಮ್ಮ ಜೊತೆಗಿರೋರನ್ನ ದರ್ಶನ್ ಎಂದಿಗೂ ಕೈ ಬಿಡೋದಿಲ್ಲ ಅನ್ನೋದು ಯಜಮಾನನ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ.

Published by:Harshith AS
First published: