Darling Krishna: ಡಾರ್ಲಿಂಗ್​ ಕೃಷ್ಣ ಬರ್ತ್​ಡೇಗೆ ಹೊಸ ಸಿನಿಮಾ ಘೋಷಣೆ, 'ದಿಲ್​ ಪಸಂದ್​‘ ಚಿತ್ರದ ಫಸ್ಟ್ ಗ್ಲಿಂಪ್ಸ್ ರಿಲೀಸ್

ಡಾರ್ಲಿಂಗ್ ಕೃಷ್ಣ ಅವರ ಜನ್ಮದಿನದ ಪ್ರಯುಕ್ತ ಅವರ ಮುಂದಿನ ಹೊಸ ಸಿನಿಮಾ ಒಂದು ಘೋಷಣೆ ಆಗಿದೆ. ನಿರ್ದೇಶಕ ಶಶಾಂಕ ಅವರ ಬ್ಯಾನರ್ ಅಡಿಯಲ್ಲಿ ಅವರ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರಲಿದೆ.

ಡಾರ್ಲಿಂಗ್ ಕೃಷ್ಣ

ಡಾರ್ಲಿಂಗ್ ಕೃಷ್ಣ

  • Share this:
ಸ್ಯಾಂಡಲ್​ವುಡ್​ ನಟ ಡಾರ್ಲಿಂಗ್ ಕೃಷ್ಣ (Darling Krishna) ಇಂದು ಹುಟ್ಟುಹಬ್ಬದ (Birthday) ಸಂಭ್ರಮದಲ್ಲಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ಕೃಷ್ಣ ಫುಲ್ ಬ್ಯುಸಿಯಾಗಿದ್ದಾರೆ. ಕೃಷ್ಣ ಇಂದು ತಮ್ಮ 36ನೇ ವಸಂತಕ್ಕೆ ಕಾಲಿಟಿದ್ದು, ಅಭಿಮಾನಿಗಳು ಹಾಗೂ ಕುಟುಂಬದವರು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಷಯಗಳನ್ನು ಕೋರಿತ್ತಿದ್ದಾರೆ. ಇನ್ನು, ಇನ್ನು ತೆರೆ ಮೇಲೆ ಮೋಡಿ ಮಾಡಿದ್ದ ಕೃಷ್ಣ ಮತ್ತು ಮಿಲನ ನಾಗರಾಜ್ (Milana Nagaraj) ಜೋಡಿ, ರಿಯಲ್ ಲೈಫ್​ನಲ್ಲಿ ಸಹ ಕಪಲ್ ಆಗಿ ಹಸೆಮಣೆ ಏರಿದ್ದಾರೆ. ಇಬ್ಬರ ಜೋಡಿಯನ್ನು ಸ್ಯಾಂಡಲ್​ವುಡ್​ನಲ್ಲಿ ಕ್ಯೂಟ್​ ಕಪಲ್ ಎಂದು ಕರೆಯುತ್ತಾರೆ. ಮಿಲನ ಸಹ ತಮ್ಮ ಪತಿಗೆ ವಿಭಿನ್ನವಾಗಿ ಜನ್ಮದಿನದ ಶುಭಕೋರಿದ್ದಾರೆ. ಇದರ ನಡುವೆ ಕೃಷ್ಣ ಮತ್ತು ಶಶಾಂಕ್ (Shashank) ಕಾಂಬಿನೇಷನ್​ ನಲ್ಲಿ ಹೊಸ ಚಿತ್ರವೊಂದು ಘೊಷಣೆ ಆಗಿದೆ.

ಹೊಸ ಸಿನಿಮಾ ಘೋಷಣೆ:

ಡಾರ್ಲಿಂಗ್ ಕೃಷ್ಣ ಅವರ ಜನ್ಮದಿನದ ಪ್ರಯುಕ್ತ ಅವರ ಮುಂದಿನ ಹೊಸ ಸಿನಿಮಾ ಒಂದು ಘೋಷಣೆ ಆಗಿದೆ. ನಿರ್ದೇಶಕ ಶಶಾಂಕ ಅವರ ಬ್ಯಾನರ್ ಅಡಿಯಲ್ಲಿ ಅವರ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರಲಿದೆ. ಕೃಷ್ಣನ್ ಲವ್ ಸ್ಟೋರಿ, ಮೊಗ್ಗಿನ ಮನಸ್ಸು ಸೇರಿದಂತೆ ಅನೇಖ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿರುವ ಶಶಾಂಕ್ ಮೊದಲ ಬಾರಿಗೆ ಕೃಷ್ಣ ಅವರಿಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

ಕುತೂಹಲ ಹೆಚ್ಚಿಸಿದ ಟ್ವೀಟ್:

ಇನ್ನು, ಶಶಾಂಕ್ ಮತ್ತು ಕೃಷ್ಣ ಕಾಂಬಿನೇಷನ್​ ನಲ್ಲಿ ಮೂಡಿಬರುತ್ತಿರುವ ಹೊಸ ಚಿತ್ರದ ಕುರಿತು ಶಶಾಂಕ್ ಟ್ವೀಟ್ ಮಾಡಿದ್ದು, ‘ನಮ್ಮ ತಂಡದ ಹೊಸ ಚಿತ್ರ ಪ್ರೀತಿಯ ಡಾರ್ಲಿಂಗ್ ಕೃಷ್ಣ ಜೊತೆಗೆ. ಅವರಿಗೆ ಜನ್ಮದಿನದ ಶುಭಾಷಯಗಳು. ನಿಮ್ಮ ಶುಭ ಹಾರೈಕೆಗಳು ನಮ್ಮೊಂದಿಗಿರಲಿ‘ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಪೋಸ್ಟರ್ ಒಂದನ್ನು ಸಹ ಹಂಚಿಕೊಂಡಿದ್ದು, ಗಡ್ಡ ಮತ್ತು ಕೂದಲು ಇರುವ ವ್ಯಕ್ತಿಯ ಚಿತ್ರ ಇದಾಗಿದೆ. ಅಲ್ಲದೇ ಪೋಸ್ಟರ್​ ನಲ್ಲಿ ‘ಟೇಲ್ ಆಫ್ ಅ ರಿಯಲ್ ಮ್ಯಾನ್‘ ಎನ್ನುವ ಮೂಲಕ ಇದೊಂದು ನೈಜ ಕಥೆ ಆಗಿರಲಿದೆಯೇ ಎಂಬ ಅನುಮಾನ ಮೂಡಿಸುವಂತಿದೆ. ಈ ಮೂಲಕ ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.





ಸದ್ಯ ಚಿತ್ರಕ್ಕೆ ಯಾವುದೇ ಶೀರ್ಷಿಕೆ ಅನೌನ್ಸ್ ಆಗಿಲ್ಲ. ಆದರೆ ಶೀಘ್ರದಲ್ಲಿ ಘೊಷಿಸುವುದಾಗಿ ತಿಳಿಸಿದ್ದಾರೆ. ಅಲ್ಲದೇ ಚಿತ್ರದ ಯಾವ ಪಾತ್ರವರ್ಗಳ ಕುರಿತೂ ಸಹ ಚಿತ್ರತಂಡ ಯಾವ ವಿಷಯವನ್ನೂ ರಿವೀಲ್​ ಮಾಡಿಲ್ಲ.

ಇದನ್ನೂ ಓದಿ: Darling Krishna Birthday: ಹುಟ್ಟುಹಬ್ಬದ ಸಂಭ್ರಮದಲ್ಲಿ ಡಾರ್ಲಿಂಗ್ ಕೃಷ್ಣ, ದಿಲ್ ಪಸಂದ್ ಚಿತ್ರತಂಡದಿಂದ ಸ್ಪೆಷಲ್ ಗಿಫ್ಟ್

 ದಿಲ್​ ಪಸಂದ್​ ಚಿತ್ರದ ಫಸ್ಟ್ ಗ್ಲಿಂಪ್ಸ್ ಬಿಡುಗಡೆ:

ಸದ್ಯ ಡಾರ್ಲಿಂಗ್ ಕೃಷ್ಣ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ದಿಲ್​ ಪಸಂದ್​, ರಶ್ಮಿ ಫಿಲಂಸ್ ಮೂಲಕ ಸುಮಂತ್ ಕ್ರಾಂತಿ ಅವರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಶಿವ ತೇಜಸ್ ಆಕ್ಷನ್ ಕಟ್​ ಹೇಳಿದ್ದಾರೆ.  ಡಾರ್ಲಿಂಗ್ ಕೃಷ್ಣ ಅವರಿಗೆ ನಾಯಕಿಯಾಗಿ ನಿಶ್ವಿಕಾ ನಾಯ್ಡು ನಟಿಸಿದ್ದಾರೆ. ಅಲ್ಲದೇ  ದಿಲ್​ ಪಸಂದ್​ ಚಿತ್ರತಂಡ ಸ್ಪೆಷಲ್ ಗಿಫ್ಟ್ ನೀಡಲಿದ್ದು, ಚಿತ್ರದ ಫಸ್ಟ್ ಗ್ಲಿಂಪ್ಸ್ ಬಿಡುಗಡೆಯಾಗಿದೆ.



ಬರ್ತಡೇಗೆ ಮಾಲ್ಡೀವ್ಸ್​ಗೆ ಹಾರಿದ ಕೃಷ್ಣ ಜೋಡಿ:

ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಅವರು ಇಂದು ಮಾಲ್ಡೀವ್ಸ್​ ತೆರಳಿದ್ದಾರೆ. ಇಂದು ಕೃಷ್ಣ ಜನ್ಮದಿನದ ಪ್ರಯುಕ್ತ ಈ ಕ್ಯೂಟ್ ಕಪಲ್ ಗಳು ಮಾಲ್ಡೀವ್ಸ್​ ಗೆ ಹಾರಿದ್ದಾರೆ. ಸದ್ಯ ಸಿನಿಮಾದಿಂದ ಬ್ರೇಕ್ ತೆಗೆದುಕೊಂಡಿರುವ ಇಬ್ಬರೂ ಬಿಂದಾಸ್​ ಆಗಿ ಮಾಲ್ಡೀವ್ಸ್​ ನ ಬೀಚ್​ ಗಳಲ್ಲಿ ಸುತ್ತಿದ್ದಾರೆ. ಈ ಕುರಿತ ಪೋಸ್ಟ್ ಒಂದನ್ನು ಮಿಲನಾ ನಾಗರಾಜ್ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ.






ಈ ಜೋಡಿ 2021ರ ಫೆಬ್ರವರಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರು. ಇಬ್ಬರ ಜೋಡಿಯನ್ನು ಸ್ಯಾಂಡಲ್​ವುಡ್​ನಲ್ಲಿ ಕ್ಯೂಟ್​ ಕಪಲ್ ಎಂದು ಕರೆಯುತ್ತಾರೆ. ಅಲ್ಲದೇ ಇವರಿಬ್ಬರ ಕಾಂಬಿನೇಷನ್​ನಲ್ಲಿ ಲವ್​ ಮಾಕ್ಟೆಲ್ ಮತ್ತು ಲವ್​ ಮಾಕ್ಟೆಲ್ 2 ಚಿತ್ರಗಳು ಭರ್ಜರಿ ಗೆಲುವನ್ನು ಸಾಧಿಸಿದ್ದವು.
Published by:shrikrishna bhat
First published: