ಸ್ಯಾಂಡಲ್ವುಡ್ನ (Sandalwood) ಕ್ಯೂಟ್ ಜೋಡಿ ಮಿಲನಾ ನಾಗರಾಜ್ (Milana nagaraj) ಹಾಗೂ ಡಾರ್ಲಿಂಗ್ ಕೃಷ್ಣ (Darling Krishna). ಲವ್ ಮಾಕ್ಟೇಲ್ನಂತರ (Love Mocktail) ಹಿಟ್ ಸಿನಿಮಾ ಕೊಟ್ಟ ಜೋಡಿ (Couple) ಈಗ ಸಖತ್ ಫೇಮಸ್ ಆಗಿ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಮಿಲನಾ ನಾಗರಾಜ್ ಸುಬ್ಬಲಕ್ಷ್ಮಿ ಹುಕ್ ಸ್ಟೆಪ್ ಮಾಡೋಕೆ ತುಂಬಾ ಪ್ರಯತ್ನಪಟ್ಟಿದ್ದಾರೆ. ನಿಮಗೆ ಸುಬ್ಬಲಕ್ಷ್ಮಿ ಹುಟ್ಸ್ಟೆಕ್ ಮಾಡಬಹುದಾ? ಎಂದು ಡಾರ್ಲಿಂಗ್ ಕೃಷ್ಣ ಅವರು ಇನ್ಸ್ಟಾಗ್ರಾಮ್ ವಿಡಿಯೋಗೆ ಕ್ಯಾಪ್ಶನ್ ಕೊಟ್ಟಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹೆಂಡ್ತಿ ಡ್ಯಾನ್ಸ್ ಕಲಿಯೋ ವಿಡಿಯೋವನ್ನು ಶೇರ್ ಮಾಡಿದ್ದಾರೆ.
ಮಿಸ್ಟರ್ ಬ್ಯಾಚುರಲ್ ಸಿನಿಮಾ ಹಾಡು
ಮಿಸ್ಟರ್ ಬ್ಯಾಚುರಲ್ ಸಿನಿಮಾದಲ್ಲಿ ಆಲ್ ಓಕೆ, ಡಾರ್ಲಿಂಗ್ ಕೃಷ್ಣ, ನಿಮಿಕಾ ರತ್ನಾಕರ್, ಮಣಿಕಾಂತ್ ಕದ್ರಿ ನಟಿಸಿದ ಈ ಹಾಡು ಸಖತ್ ವೈರಲ್ ಆಗಿದೆ. ಈ ಸೂಪರ್ ಲಿರಿಕಲ್ ಸಾಂಗ್ನಲ್ಲಿ ಒಂದು ಸ್ಟೈಲಿಷ್ ಹುಕ್ಸ್ಟೆಪ್ ಇದ್ದು ಇದು ರೀಲ್ಸ್ ಮಾಡೋರಿಗೆ ಅಚ್ಚುಮೆಚ್ಚಾಗಿ ಮಾರ್ಪಟ್ಟಿದೆ.
ಪತ್ನಿಗೆ ಹುಕ್ಸ್ಟೆಪ್ ಕಲಿಸಿದ ಡಾರ್ಲಿಂಗ್
ಡಾರ್ಲಿಂಗ್ ಕೃಷ್ಣ ಮಿಲನಾ ಅವರಿಗೆ ಹುಕ್ಸ್ಟೆಪ್ ಹೇಳಿಕೊಟ್ಟಿದ್ದಾರೆ ಡಾರ್ಲಿಂಗ್ ಕೃಷ್ಣ. ಸ್ವಲ್ಪ ಟಫ್ ಎನಿಸುವ ಈ ಸ್ಟೆಪ್ ಮಿಲನಾ ಅವರಿಗೆ ತುಂಬಾ ಕಷ್ಟವಾಗಿದೆ. ನಟಿ ಸ್ಟೆಪ್ ಟ್ರೈ ಮಾಡಿ ಮಾಡಲಾಗದೆ ಜೋರಾಗಿ ನಗುವುದನ್ನು ಕಾಣಬಹುದು. ಇದೀಗ ಅವರ ಕ್ಯೂಟ್ ವಿಡಿಯೋ ಈಗ ವೈರಲ್ ಆಗಿದೆ.
View this post on Instagram
ಮಿಲನಾ ಅವರು ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ. ಪತಿ ಪೋಸ್ಟ್ ಮಾಡಿದ ವಿಡಿಯೋಗೆ ಅಯ್ಯೋ ನನ್ನನ್ನು ಎಂಬರಾಸ್ ಮಾಡೋಕೆ ಇಂಥಹ ವಿಡಿಯೋ ಎಲ್ಲ ಯಾಕೆ ಶೂಟ್ ಮಾಡ್ತೀರಾ ಎಂದು ಕೇಳಿ ಡಾರ್ಲಿಂಗ್ ಕೃಷ್ಣ ಅವರನ್ನು ಟ್ಯಾಗ್ ಮಾಡಿದ್ದಾರೆ.
ಇದನ್ನೂ ಓದಿ: Darling Krishna: ಡಾರ್ಲಿಂಗ್ ಕೃಷ್ಣ ಸಿನಿಮಾದಲ್ಲಿ ನಟಿಸಲು ಅವಕಾಶ! ಕಂಡೀಷನ್ಸ್ ಹೀಗಿವೆ
ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಈ ಜೋಡಿ
ಮಿಲನಾ ಹಾಗೂ ಡಾರ್ಲಿಂಗ್ ಕೃಷ್ಣ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಈ ಜೋಡಿ ತಮ್ಮ ಅಭಿಮಾನಿಗಳ ಜೊತೆ ಸಿನಿಮಾದ ಹಾಗೂ ಪರ್ಸನಲ್ ಲೈಫ್ ಅಪ್ಡೇಟ್ಗಳನ್ನು ಅಭಿಮಾನಿಗಳ ಜೊತೆ ಶೇರ್ ಮಾಡುತ್ತಾರೆ.
ಸೋಷಿಯಲ್ ಮೀಡಿಯಾದಲ್ಲಿ ಫಾಲೋವರ್ಸ್ ಕ್ರೇಜ್
ಡಾರ್ಲಿಂಗ್ ಕೃಷ್ಣ ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಫ್ಯಾನ್ಸ್ ಇದ್ದಾರೆ. -ನಟ ಇಲ್ಲಿವರೆಗೆ 575 ಪೋಸ್ಟ್ ಮಾಡಿದ್ದರೂ ಈಗಾಗಲೇ 708 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ಗಳನ್ನು ಗಳಿಸಿಕೊಂಡಿದ್ದಾರೆ. ನಟ ಪೋಸ್ಟ್ ಮಾಡಿದ ವಿಡಿಯೋಗೆ 75 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. 115ಕ್ಕೂ ಹೆಚ್ಚು ಜನರು ವಿಡಿಯೋ ಎಂಜಾಯ್ ಮಾಡಿ ಕಾಮೆಂಟ್ ಮಾಡಿದ್ದಾರೆ.
ಮಿಲನಾ ನಾಗರಾಜ್
ನಟಿ ಮಿಲನಾ ನಾಗರಾಜ್ ಅವರು ಇನ್ಸ್ಟಾಗ್ರಾಮ್ನಲ್ಲಿ 1 ಮಿಲಿಯನ್ ಫಾಲೋವರ್ಸ್ಗಳನ್ನು ಹೊಂದಿದ್ದಾರೆ. ಅವರು 578ಕ್ಕೂ ಹೆಚ್ಚು ಪೋಸ್ಟ್ಗಳನ್ನು ಮಾಡಿದ್ದಾರೆ. ನಟಿ ಕೂಡಾ ಸಿನಿಮಾ ಹಾಗೂ ಇತರ ವಿಚಾರಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಶೇರ್ ಮಾಡುತ್ತಿರುತ್ತಾರೆ.
ಲವ್ ಮಾಕ್ಟೇಲ್ ಹಿಟ್
ಇವರಿಬ್ಬರು ಜೋಡಿಯಾಗಿ ನಟಿಸಿದ ಲವ್ ಮಾಕ್ಟೇಲ್ ಸಿನಿಮಾ ಸೂಪರ್ ಹಿಟ್ ಆಯಿತು. ಸಖತ್ ಹವಾ ಸೃಷ್ಟಿಸಿದ ಸಿನಿಮಾ ವಿಶೇಷವಾಗಿ ಯೂತ್ಗೆ ಇಷ್ಟವಾಗಿತ್ತು. ಎಲ್ಲರೂ ಸಿನಿಮಾವನ್ನು ಮತ್ತೆ ಮತ್ತೆ ನೋಡಿ ಸೂಪರ್ ಹಿಟ್ ಮಾಡಿದ್ದರು. ಈ ಸಿನಿಮಾ ಮೂಲಕ ಈ ಜೋಡಿ ಕೂಡಾ ಕನ್ನಡ ಚಿತ್ರರಂಗದಲ್ಲಿ ಸೂಪರ್ ಹಿಟ್ ಆದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ