ತೆರೆಮೇಲೆ ನಗಿಸಿದ್ದ ಸ್ಯಾಂಡಲ್​​​ವುಡ್ ನಟನಿಗೂ ಕಾಡಿತ್ತು ಖಿನ್ನತೆ: ಸುಶಾಂತ್ ಸಿಂಗ್ ಸಾವಿನ ಬೆನ್ನಲ್ಲೇ ಬಹಿರಂಗ!

‘ಹಂಬಲ್‌ ಪೊಲಿಟಿಶಿಯನ್‌ ನೋಗರಾಜ್‘​ ಸಿನಿಮಾ ಖ್ಯಾತಿಯ ನಟ ದ್ಯಾನಿಶ್​​ ಸೇಟ್​ ‘ನಾನೂ ಖಿನ್ನತೆಗೆ ಒಳಗಾಗಿದ್ದೆ. ಆ ಕಷ್ಟವನ್ನು ಅರ್ಥಮಾಡಿಕೊಳ್ಳಲು, ವಿವರಿಸಲು ಕಷ್ಟ. ವೈದ್ಯರೇ ನನ್ನ ಏಕೈಕ ಭರವಸೆ‘ ಎಂದು ಹೇಳಿದ್ದಾರೆ.

ದ್ಯಾನಿಶ್​ ಸೇಟ್

ದ್ಯಾನಿಶ್​ ಸೇಟ್

 • Share this:
  ಬಾಲಿವುಡ್​​ನ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ಮುಂಬೈನ ತಮ್ಮ ಮನೆಯಲ್ಲಿ ಭಾನುವಾರ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದರು. ಹಲವಾರು ಬಾಲಿವುಡ್ ಸಿನಿಮಾದಲ್ಲಿ ನಟಿಸಿದ್ದ ಸುಶಾಂತ್ ಸಿಂಗ್ ಸಾವು ಅಭಿಮಾನಿಗಳಿಗೆ ಆಘಾತ ಉಂಟುಮಾಡಿತ್ತು. ಕಳೆದ 6 ತಿಂಗಳಿನಿಂದ ಖಿನ್ನತೆಯಿಂದ ಬಳಲುತ್ತಿದ್ದ ಅವರು ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಸುಶಾಂತ್ ಸ್ನೇಹಿತರು ಪೊಲೀಸರಿಗೆ ತಿಳಿಸಿದ್ದರು. ಇದೀಗ ಇವರ ಸಾವಿನ ಬೆನ್ನಲ್ಲೇ ಸ್ಯಾಂಡಲ್​ವುಡ್​ ನಟರೊಬ್ಬರು ನನಗೂ ಖಿನ್ನತೆ ಕಾಡಿತ್ತು ಎಂದು ಹೇಳಿಕೊಂಡಿದ್ದಾರೆ.

  ‘ಹಂಬಲ್‌ ಪೊಲಿಟಿಶಿಯನ್‌ ನೋಗರಾಜ್‘​ ಸಿನಿಮಾ ಖ್ಯಾತಿಯ ನಟ ದ್ಯಾನಿಶ್​ ಸೇಟ್​ ‘ನಾನೂ ಖಿನ್ನತೆಗೆ ಒಳಗಾಗಿದ್ದೆ. ಆ ಕಷ್ಟವನ್ನು ಅರ್ಥಮಾಡಿಕೊಳ್ಳಲು, ವಿವರಿಸಲು ಕಷ್ಟ. ವೈದ್ಯರೇ ನನ್ನ ಏಕೈಕ ಭರವಸೆ‘ ಎಂದು ಹೇಳಿದ್ದಾರೆ.

  ನಟ ದ್ಯಾನಿಶ್​​ ಟ್ವೀಟ್​ ಮಾಡುವ ಮೂಲಕ ಈ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ‘ನಾನು 3 ವರ್ಷಗಳ ಕಾಲ ಆ್ಯಂಟಿ ಡಿಪ್ರೆಸೆಂಟ್​ ಮತ್ತು ಥೆರಪಿ ಮಾಡಿಸಿಕೊಂಡಿದ್ದೇನೆ. ನನಗೆ ಟ್ಯಾಬ್ಲೆಟ್​​ ತೆಗೆದುಕೊಳ್ಳದಿದ್ದರೆ ರಾತ್ರಿ ನಿದ್ದೆ ಬರುವುದಿಲ್ಲ. ಖಿನ್ನತೆ ಇರುವುದು ಗೊತ್ತಾಗುವುದಿಲ್ಲ. ಅದು ಇದ್ದಾಗ ನಮಗೆ ಏನೂ ಅನಿಸುವುದಿಲ್ಲ. ಖಿನ್ನತೆಯನ್ನು ವಿವರಿಸುವುದು ಕಷ್ಟ, ಅರ್ಥ ಮಾಡಿಕೊಳ್ಳುವುದು ಕಷ್ಟ. ವೈದ್ಯರು /ವೃತ್ತಿಪರರು ನನ್ನ ಏಕೈಕ ಭರವಸೆ‘ ಎಂದು ಬರೆದುಕೊಂಡಿದ್ದಾರೆ.

     ದ್ಯಾನಿಶ್​ ಸೇಟ್ ‘ಫ್ರೆಂಚ್​ ಬಿರಿಯಾನಿ‘ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ನಟ ಪುನೀತ್​ ರಾಜ್​ ಕುಮಾರ್​​ ಅವರ ಪಿಆರ್​ಕೆ ಪ್ರೊಡಕ್ಷನ್​ನಲ್ಲಿ ಮೂಡಿಬಂದಿದೆ.  ‘ಫ್ರೆಂಚ್​ ಬಿರಿಯಾನಿ‘ ಸಿನಿಮಾವನ್ನು ಓಟಿಟಿಯಲ್ಲಿ ರಿಲೀಸ್​ ಮಾಡಬೇಂಕೆಂದು ಚಿತ್ರತಂಡ ನಿರ್ಧರಿಸಿದೆ. ಹಾಗಾಗಿ ಜುಲೈ​ 24ರಂದು ಅಮೆಜಾನ್​ ಪ್ರೈಮ್​ನಲ್ಲಿ ಬಿಡುಗಡೆ ಆಗಲಿದೆ.

   

  Google: ಚಿರಂಜೀವಿ ಸರ್ಜಾ ಹಾಗೂ ಸುಶಾಂತ್​ ಸಿಂಗ್​ ಸಾವಿಗೆ ಶೋಕ ವ್ಯಕ್ತಪಡಿಸಿದ ಗೂಗಲ್​

  WhatsApp Digital Payments: ಡಿಜಿಟಲ್​ ಪೇಮೆಂಟ್​ ಸೇವೆ ಆರಂಭಿಸಿದ ವಾಟ್ಸ್​ಆ್ಯಪ್​!
  First published: