HOME » NEWS » Entertainment » SANDALWOOD ACTOR DAALI DHANANJAYA TWEET ABOUT DELHI VIOLENCE HG

Delhi Violence: ದೆಹಲಿ ಹಿಂಸಾಚಾರದ ಬಗ್ಗೆ ಡಾಲಿ ಧನಂಜಯ್​​ ಹೇಳಿದ್ದೇನು?

Daali dhananjaya: ಸ್ಯಾಂಡಲ್​ವುಡ್​ ನಟ ಧನಂಜಯ್​ ಕೂಡ ದೆಹಲಿಯ ಹಿಂಸಾಚಾರದ ಪ್ರತಿಭಟನೆಗೆ ಟ್ವೀಟ್ ಸಂಬಂಧ ಟ್ವೀಟ್​​ ಮಾಡಿ ಸಂದೇಶ ರವಾನಿಸಿದ್ದಾರೆ. ಈ ಸಂದೇಶವೂ ಕವನ ರೂಪದಲ್ಲಿ ವ್ಯಕ್ತಪಡಿಸಿದ್ದಾರೆ.

news18-kannada
Updated:February 26, 2020, 5:59 PM IST
Delhi Violence: ದೆಹಲಿ ಹಿಂಸಾಚಾರದ ಬಗ್ಗೆ ಡಾಲಿ ಧನಂಜಯ್​​ ಹೇಳಿದ್ದೇನು?
ನಟ ಧನಂಜಯ್
  • Share this:
ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಪರ-ವಿರೋಧಿಗಳ ನಡುವಿನ ಘರ್ಷಣೆಯೂ ಭಾರೀ ಹಿಂಸಾಚಾರಕ್ಕೆ ಕಾರಣವಾಗಿದೆ. ಮೂರು ದಿನಗಳ ಹಿಂದೆಯೇ ಶುರುವಾದ ಈ ಘರ್ಷಣೆಯೂ ಹಿಂಸಾಚಾರಕ್ಕೆ ತಿರುಗಿದ ಪರಿಣಾಮ ಸಾಕಷ್ಟು ಜನ ಸಾವನಪ್ಪಿದ್ದಾರೆ. ಕೇಂದ್ರ ಸರ್ಕಾರ ಕಂಡಲ್ಲಿ ಗುಂಡಿಕ್ಕಿ ಎಂಬ ಆದೇಶ ಹೊರಡಿಸಿದರೂ ಹಿಂಸಾಚಾರದ ಪ್ರಮಾಣ ಕಡಿಮೆ ಆಗಿಲ್ಲ, ಬದಲಿಗೆ ಹೆಚ್ಚಾಗುತ್ತಲೇ ಇದೆ. ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು, ಸಿನಿಮಾ ತಾರೆಯರು, ಖ್ಯಾತ ಸೆಲೆಬ್ರಿಟಿಗಳು ಸಾಮಾಜಿಕ ತಾಣಗಳಲ್ಲಿ ದೆಹಲಿ ಹಿಂಸಾಚಾರದ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಸ್ಯಾಂಡಲ್​ವುಡ್​ ನಟ ಧನಂಜಯ್​ ಕೂಡ ದೆಹಲಿಯ ಹಿಂಸಾಚಾರದ ಪ್ರತಿಭಟನೆಗೆ ಟ್ವೀಟ್ ಸಂಬಂಧ ಟ್ವೀಟ್​​ ಮಾಡಿ ಸಂದೇಶ ರವಾನಿಸಿದ್ದಾರೆ. ಈ ಸಂದೇಶವೂ ಕವನ ರೂಪದಲ್ಲಿ ವ್ಯಕ್ತಪಡಿಸಿದ್ದಾರೆ. ‘ಸೂರ್ಯಕಾಂತಿಯ ನೋಡಿ ಕಲಿಯಿರಿ ಎಂದೆ ಧರ್ಮದತ್ತ ವಾಲಿದರು!. ಹೊಳೆಯ ನಿಶ್ಯಬ್ಧತೆಯೆಡೆಗೆ ನಡೆಯಿರಿ ಎಂದೆ ಗುಂಡಿನ ಶಬ್ಧಕ್ಕೆ ಮಾರುಹೋದರು!. ಸೂರ್ಯ ಮುಳುಗುತ್ತಿದ್ದಾನೆ!. ಹೊಳೆ ಹೆಪ್ಪುಗಟ್ಟುತ್ತಿದೆ! ಎಂದು ಅರ್ಥಗರ್ಭಿತ ಸಾಲುಗಳು ಟ್ವೀಟ್​​ ಮಾಡುವ ಮೂಲಕ ತಮ್ಮ ಅಭಿಪ್ರಾಯ ಹೇಳಿದ್ದಾರೆ.
ಇತ್ತೀಚೆಗೆ ನಟ ಧನಂಜಯ್​ ಅಭಿನಯದ ಪಾಪ್​​ ಕಾರ್ನ್​ ಮಂಕಿ ಟೈಗರ್​ ಸಿನಿಮಾ ಬಿಡುಗಡೆಯಾಗಿದೆ. ಸೂರಿ ನಿರ್ದೇಶನ ಈ ಸಿನಿಮಾಗೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಈ ಸಿನಿಮಾದಲ್ಲಿ ಡಾಲಿ ಧನಂಜಯ್​ಗೆ ಮೂರು ನಾಯಕಿಯರು. ನಟಿ ನಿವೇದಿತಾ, ಅಮೃತಾ ಅಯ್ಯಂಗಾರ್, ಮೋನಿಶಾ ನಾಡಿಗೇರ್ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಸೂಪರ್​ ಸ್ಟಾರ್ 168ನೇ ಸಿನಿಮಾ ‘ಅಣ್ಣಾತೆ‘; ಡಾನ್​ ಪಾತ್ರದಲ್ಲಿ ಮಿಂಚಲಿದ್ದಾರೆ ರಜನಿಕಾಂತ್​!?

ಇದನ್ನೂ ಓದಿ: ರಕ್ಷಿತ್​ ಶೆಟ್ಟಿ ವಿರುದ್ಧ ಬಂಧನದ ವಾರೆಂಟ್​ ಹೊರಡಿಸಿದ ನ್ಯಾಯಾಲಯ; ಸಂಕಷ್ಟದಲ್ಲಿ ನಟ, ಏಕೆ ಗೊತ್ತಾ?
Youtube Video
First published: February 26, 2020, 5:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories