• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Manoranjan Ravichandran: ಕ್ರೇಜಿಸ್ಟಾರ್ ಮನೆಯಲ್ಲಿ ಮತ್ತೊಂದು ಮದುವೆ ಸಂಭ್ರಮ, ಮಗನ ವಿವಾಹ ತಯಾರಿಯಲ್ಲಿ ರವಿಚಂದ್ರನ್ ಬ್ಯುಸಿ

Manoranjan Ravichandran: ಕ್ರೇಜಿಸ್ಟಾರ್ ಮನೆಯಲ್ಲಿ ಮತ್ತೊಂದು ಮದುವೆ ಸಂಭ್ರಮ, ಮಗನ ವಿವಾಹ ತಯಾರಿಯಲ್ಲಿ ರವಿಚಂದ್ರನ್ ಬ್ಯುಸಿ

ರವಿಂದ್ರನ್ ಮತ್ತು ಮನೋರಂಜನ್ ರವಿಚಂದ್ರನ್

ರವಿಂದ್ರನ್ ಮತ್ತು ಮನೋರಂಜನ್ ರವಿಚಂದ್ರನ್

ಸ್ಯಾಂಡಲ್​ವುಡ್​ ನ ಖ್ಯಾತ ನಟ, ಕ್ರೇಜಿಸ್ಟಾರ್​ ರವಿಚಂದ್ರನ್ ಅವರ ಮನೆಯಲ್ಲಿ ಇದೀಗ ವಿವಾಹದ ಸಿದ್ಧತೆಗಳು ನಡೆಯುತ್ತಿವೆ. ಹೌದು ರವಿಚಂದ್ರನ್ ಅವರ ಮಗ ಮನೋರಂಜನ್​ ರವಿಚಂದ್ರನ್ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ.

  • Share this:

ಚಿತ್ರರಂಗದಲ್ಲಿ ಸದ್ಯ ಸಾಲು ಸಾಲು ಸಿನಿಮಾಗಳು ಬಿಡುಗಡೆ ಆಗುತ್ತಿದ್ದರೆ ಮತ್ತೊಂದೆಡೆ ಸ್ಟಾರ್​ಗಳ ವಿವಾಹವು ಸಹ ಒಂದರ ಹಿಂದೆ ಒಂದರಂತೆ ನಡೆಯುತ್ತಿದೆ. ಹೌದು, ಬಾಲಿವುಡ್​ ನಲ್ಲಿ ಆಲಿಯಾ ಮತ್ತು ರಣಬೀರ್(Alia Bhatt-Ranbir Kapoor) ವಿವಾಹವಾದರೆ, ಕಳದೆ ತಿಂಗಳು ನಯನತಾರಾ ಮತ್ತು ವಿಘ್ನೇಶ್ ಶಿವನ್ (Nayanthara - Vignesh Shivan) ಅವರ ವಿವಾಹವು ನಡೆಯಿತು. ಇದೀಗ ಸ್ಟಾಂಡಲ್​ವುಡ್​ನಲ್ಲಿ ಸಹ ಯುವ ನಟರೊಬ್ಬರ ವಿವಾಹದ ಸುದ್ದಿ ಹೊರಬಿದ್ದಿದೆ. ಹೌದು, ಸ್ಯಾಂಡಲ್​ವುಡ್​ ನ ಖ್ಯಾತ ನಟ, ಕ್ರೇಜಿಸ್ಟಾರ್​ ರವಿಚಂದ್ರನ್ (Crazy Star Ravichandran)​ ಅವರ ಮನೆಯಲ್ಲಿ ಇದೀಗ ವಿವಾಹದ ಸಿದ್ಧತೆಗಳು ನಡೆಯುತ್ತಿವೆ. ಹೌದು ರವಿಚಂದ್ರನ್ ಅವರ ಮಗ ಮನೋರಂಜನ್​ ರವಿಚಂದ್ರನ್ (Manoranjan Ravichandran) ಅವರು ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ.


ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಮನೋರಂಜನ್​ ರವಿಚಂದ್ರನ್:


ಹೌದು, ರವಿಚಂದ್ರನ್​ ಕುಟುಂಬ ಈಗ ಮದುವೆಯ ಸಂಭ್ರಮದಲ್ಲಿದೆ, ರವಿಚಂದ್ರನ್ ಹಾಗೂ ಸುಮತಿ ದಂಪತಿಯ ಹಿರಿಯ ಮಗ ಮನೋರಂಜನ್​ ರವಿಚಂದ್ರನ್​ ಅವರು ವೈವಾಹಿಕ ಜೀವನಕ್ಕೆ ಶೀಘ್ರವೇ ಕಾಲಿಡಲಿದ್ದಾರೆ ಎಂದು ತಿಳಿದುಬಂದಿದೆ. ಮೂಲಗಳ ಮಾಹಿತಿ ಪ್ರಕಾರ ಆಗಸ್ಟ್ 21 ಹಾಗೂ 22ರಂದು ಮನೋರಂಜನ್​ ಅವರ ಮದುವೆಯ ನೆರವೇರಲಿದೆ ಎಂದು ತಿಳಿದುಬಂದಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಹುಡುಗಿಯನ್ನು ಮನೋರಂಜನ್ ವಿವಾಹವಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಹುಡುಗಿಯ ಯಾವುದೇ ಹೆಚ್ಚಿನ ಮಾಹಿತಿ ಈವೆರೆಗೂ ಅಧಿಕೃತವಾಗಿ ಹೊರಬಂದಿಲ್ಲ. ಇದರ ನಡುವೆ ರವಿಚಂದ್ರನ್ ಅವರ ಪುತ್ರನ ವಿವಾಹದ ಸುದ್ದಿ ತಿಳಿದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶುಭಕೋರುತ್ತಿದ್ದಾರೆ.


ಮಗಳ ಮದುವೆಯನ್ನು ಅದ್ಧೂರಿಯಾಗಿ ಮಾಡಿದ್ದ ಕ್ರೇಜಿಸ್ಟಾರ್​:


ಹೌದು, ಸ್ಯಾಂಡಲ್​ವುಡ್​ನ ಕನಸುಗಾರ ವಿ. ರವಿಚಂದ್ರನ್ ತಮ್ಮ ಪುತ್ರಿಯ ವಿವಾಹವನ್ನು ಅದ್ಧೂರಿಯಾಗಿ ನೆರವೇರಿಸಿದ್ದರು. 2019ರಲ್ಲಿ ರವಿಚಂದ್ರನ್ ಅವರ ಪುತ್ರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಹಿರಿಯ ಮಗ ಮನೋರಂಜನ್ ಅವರ ವಿವಾಹವು ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಕುರಿತು ಕುಟುಂಬದದವರ ಅಧಿಕೃತ ಮಾಹಿತಿಯೊಂದು ಹೊರಬೀಳಬೇಕಿದೆ. ಕಿರಿಯ ಪುತ್ರ ವಿಕ್ರಮ್​ ರವಿಚಂದ್ರನ್ ಇತ್ತೀಚೆಗೆ ತೆರೆಕಂಡ 'ತ್ರಿವಿಕ್ರಮ' ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಪಾದಾರ್ಪಣೆ ಮಾಡಿದರು.


ಇದನ್ನೂ ಓದಿ: Shivaranjan: ಸ್ಯಾಂಡಲ್​ವುಡ್​ ನಟ ಶಿವರಂಜನ್ ಮೇಲೆ ಗುಂಡಿನ ದಾಳಿ, ಓರ್ವನ ಬಂಧನ


ಸ್ಯಾಂಡಲ್​ವುಡ್​ನಲ್ಲಿ ಬ್ಯುಸಿ ನಟರಾಗಿರುವ ಮನೋರಂಜನ್:


ರವಿಂಚಂದ್ರನ್ ಅವರ ಹಿರಿಯ ಪುತ್ರ ಮನೋರಂಜನ್ ಸದ್ಯ ಸ್ಯಾಂಡಲ್​ವುಡ್​ನ ಬ್ಯುಸಿ ನಟರುಗಳಲ್ಲಿ ಒಬ್ಬರು. ಇವರು 2017ರಲ್ಲಿ ತೆರೆಕಂಡ 'ಸಾಹೇಬ' ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಬಳಿಕ ಪ್ರಾರಂಭ, ಬ್ರಹಸ್ಪತಿ, ಕ್ರೇಜಿಸ್ಟಾರ್​ ಮತ್ತು ಮುಗಿಲು ಪೇಟೆ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಾಲು ಸಾಲು ಸಿನಿಮಾಗಳ ನಡುವೆ ಇದಿಗ ಮನೋರಂಜನ್ ಅವರು ತಮ್ಮ ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ರವಿಂದ್ರನ್ ಅವರ ಇಬ್ಬರು ಗಂಡು ಮಕ್ಕಳು ಸಹ ಚಿತ್ರಂಗದಲ್ಲಿ ಕಾಣಿಸಿಕೊಂಡಿದ್ದಾರೆ.


ಇದನ್ನೂ ಓದಿ: Ravichandran: ತೆಲುಗು ಸಿನಿಮಾದಲ್ಲಿ ಆ್ಯಕ್ಟ್ ಮಾಡ್ತಾರಾ ರವಿಚಂದ್ರನ್? ಮಹೇಶ್ ಬಾಬುಗೆ ತಂದೆ ಆಗ್ತಾರಂತೆ ಕ್ರೇಜಿಸ್ಟಾರ್!


ತೆಲುಗಿಗೆ ಹೋಗ್ತಾರಾ ರವಿಚಂದ್ರನ್?: 


ಕ್ರೇಜಿಸ್ಟಾರ್ ರವಿಚಂದ್ರನ್ ಈಗ ಫುಲ್ ಬ್ಯುಸಿ. ಒಂದೆಡೆ ರೀಲಿಸ್‌ಗೆ ಅವರ ಸಿನಿಮಾಗಳು ರೆಡಿಯಾಗಿವೆ. ಮತ್ತೊಂದೆಡೆ ಸಿನಿಮಾಗಳ ಮೇಲೆ ಸಿನಿಮಾ ಮಾಡ್ತಿದ್ದಾರೆ. ಇದರ ನಡುವೆಯೇ ಜೀ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ಡ್ರಾಮಾ ಜ್ಯೂನಿಯರ್ಸ್‌ನಲ್ಲಿ ಕ್ರೇಜಿಸ್ಟಾರ್ ಆ್ಯಕ್ಟ್ ಮಾಡ್ತಿದ್ದಾರೆ. ಇದೀಗ ಅವರ ಅಭಿಮಾನಿಗಳು ಖುಷಿ ಪಡುವ ಸುದ್ದಿಯೊಂದು ಬಂದಿದೆ. ಅದೇನಪ್ಪಾ ಅಂದ್ರೆ ರವಿಚಂದ್ರನ್ ಅವರು ತೆಲುಗು ಸಿನಿಮಾದ ಸ್ಟಾರ್ ನಟ ಮಹೇಶ್​ ಬಾಬು ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಆ್ಯಕ್ಟ್ ಮಾಡ್ತಿದ್ದಾರಂತೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ.

Published by:shrikrishna bhat
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು