• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Vikrant Rona: ವಿಕ್ರಾಂತ್​ ರೋಣ ಕುರಿತು ಅಪಸ್ವರ ಎತ್ತಿದ ಚೇತನ್, ಸ್ಯಾಂಡಲ್​ವುಡ್​ನಲ್ಲಿ ಬಿರುಗಾಳಿ ಎಬ್ಬಿಸಿದ ನಟ

Vikrant Rona: ವಿಕ್ರಾಂತ್​ ರೋಣ ಕುರಿತು ಅಪಸ್ವರ ಎತ್ತಿದ ಚೇತನ್, ಸ್ಯಾಂಡಲ್​ವುಡ್​ನಲ್ಲಿ ಬಿರುಗಾಳಿ ಎಬ್ಬಿಸಿದ ನಟ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ದೇಶವೇ ಮೆಚ್ಚಿಕೊಂಡಿರುವ ಕನ್ನಡದ ವಿಕ್ರಾಂತ್ ರೋಣ ಸಿನಿಮಾ ಕುರಿತು ಇದೀಗ ಕನ್ನಡದ ನಟ ಚೇತನ್ ಕುಮಾರ್​ ಈ ಚಿತ್ರದ ಕುರಿತು ಮಾಡಿರುವ ಟ್ವೀಟ್​ ಸಖತ್ ಚರ್ಚೆಗೆ ಗ್ರಾಸವಾಗಿದೆ.

  • Share this:

ಸ್ಯಾಂಡಲ್​ವುಡ್​ನ (Sandalwood) ಕಿಚ್ಚ ಸುದೀಪ್​ (Kiccha Sudeep) ಅಭಿನಯದ ಬಹುನಿರೀಕ್ಷಿತ ವಿಕ್ರಾಂತ್ ರೋಣ (Vikrant Rona) ಸಿನಿಮಾ ಅದ್ಧೂರಿಯಾಗಿ ತೆರೆಕಂಡಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಚಿತ್ರದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರ ನಡುವೆ ಚಿತ್ರಕ್ಕೆ ಪೈರಸಿ (Piracy) ಕಾಟ ಎದುರಾಗಿತ್ತು. ಆದರೂ ಕಿಚ್ಚನ ಅಬ್ಬರಕ್ಕೆ ಯಾವುದೇ ಕೊರತೆ ಆಗಲಿಲ್ಲ. ವಿಕ್ರಾಂತ್​ ರೋಣ ಚಿತ್ರವು ಭರ್ಜರಿ ಕಲೆಕ್ಷನ್ ಮಾಡಿದೆ.  ಇದರ ನಡುವೆ ಇದೀಗ ಕೆಲವರು ಚಿತ್ರದ ಕುರಿತು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಹೌದು, ಈ ಚಿತ್ರದ ಕುರಿತು ನಟ ಚೇತನ್ ಕುಮಾರ್ (Chetan Kumar) ನೀಡಿರುವ ಹೇಳಿಕೆ ಇದೀಗ ಸ್ಯಾಂಡಲ್​ವುಡ್​ ಒಲಯದಲ್ಲಿ ಬಿರುಗಾಳಿ ಎಬ್ಬಿಸಿದೆ.


ವಿಕ್ರಾಂತ್ ರೊಣ ಚಿತ್ರದ ಕುರಿತು ಅಪಸ್ವರ ಎತ್ತಿದ ನಟ:


ಹೌದು, ದೇಶವೇ ಮೆಚ್ಚಿಕೊಂಡಿರುವ ಕನ್ನಡದ ವಿಕ್ರಾಂತ್ ರೋಣ ಸಿನಿಮಾ, ಈಗಾಗಲೇ ಬಿಡುಗಡೆ ಆಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದರ ನಡುವೆ ಕಲೆಕ್ಷನ್ ವಿಚಾರದಲ್ಲಿಯೂ ಕಿಚ್ಚ ಈ ಬಾರಿ ಕುದುರೆಯ ರೀತಿ ಓಡುತ್ತಿದ್ದು, 100 ಕೋಟಿ ಕ್ಲಬ್​ ಸೇರಿದೆ. ಆದರೆ ಇದೀಗ ಕನ್ನಡದ ನಟ ಚೇತನ್ ಕುಮಾರ್​ ಈ ಚಿತ್ರದ ಕುರಿತು ಮಾಡಿರುವ ಟ್ವೀಟ್​ ಸಖತ್ ಚರ್ಚೆಗೆ ಗ್ರಾಸವಾಗಿದೆ.



ಹೌದು, ಚೇತನ್ ಕುಮಾರ್​ ವಿಕ್ರಾಂತ್ ರೋಣ ಕುರಿತು ತಮ್ಮ ಟ್ವಿಟರ್​ ನಲ್ಲಿ ಬರೆದುಕೊಂಡಿದ್ದು, ‘ವಿಕ್ರಾಂತ್ ರೋಣ ಚಿತ್ರ ತಾಂತ್ರಿಕವಾಗಿ ಮತ್ತು ಅಭಿನಯದ ದೃಷ್ಟಿಯಿಂದ ನೋಡಿದರೆ ಉತ್ತಮವಾಗಿದೆ. ಆದರೆ, ದಲಿತರನ್ನು-ಬಹುಜನರನ್ನು ದುಷ್ಟ, ಪೈಶಾಚಿಕರಂತೆ ಬಿಂಬಿಸಿ ಮುಸ್ಲಿಮರನ್ನು ಸ್ಟೀರಿಯೋಟೈಪ್ ಮಾಡಿದ್ದಾರೆ, ಈ ಸೂಕ್ಷ್ಮವಿಲ್ಲದ ಚಿತ್ರಣದಿಂದ ನಾನು ನಿರಾಶೆಗೊಂಡಿದ್ದೇನೆ. ಚಲನಚಿತ್ರ ನಿರ್ಮಾಣ ಮಾಡವವರು ಐತಿಹಾಸಿಕ ಅನ್ಯಾಯಗಳನ್ನು ಸೂಕ್ಷ್ಮವಾಗಿ ಗಮನಿಸದೆ ಕೇವಲ ಲಾಭಕ್ಕಾಗಿ ಜಾತಿ-ಧರ್ಮವನ್ನು ತಮ್ಮ ಚಿತ್ರಗಳಲ್ಲಿ ಬಳಸಿಕೊಳ್ಳುವುದನ್ನು ನಿಲ್ಲಿಸಬೇಕು’ ಎಂದು ಬರೆದುಕೊಂಡಿದ್ದಾರೆ.



ಚೇತನ್ ಹೇಳಿಕೆ ಕಿಚ್ಚನ ಅಭಿಮಾನಿಗಳಿಂದ ವಿರೋಧ:


ಹೌದು, ನಟ ಚೇತನ್ ಈ ಹೇಳಿಕೆ ನೀಡುತ್ತಲೇ ಕಿಚ್ಚನ ಅಭಿಮಾನಿಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ನೋಡುವವರ ಮನಸ್ಥಿತಿಯ ಮೇಲೆ ಪ್ರತಿಯೊಂದು ನಿಂತಿದೆ. ನೀವು ಆಕ್ಟ್ ಮಾಡಿ ಫೇಮಸ್ ಆಗಿ, ಈ ತರದ ವಿಷಯದಿಂದ ಬೇಡ ಎಂದು ಅಭಿಮಾನಿಯೊಬ್ಬ ಟ್ವಿಟ್​ ಗೆ ಕಾಮೆಂಟ್​ ಮಾಡಿದ್ದು, ಮತ್ತೊಬ್ಬ ಇದರಲ್ಲೂ ಜಾತಿ ಹುಡುಕುತ್ತಿರುವ ನಿಮ್ಮ ಮನಸ್ಸು ಮತ್ತು ನಿಮ್ಮ ಮಿದುಳು ಎಂದು ಹೇಳಿದ್ದಾರೆ. ಒಟ್ಟಾರೆಯಾಗಿ ಅನೇಕ ವಿರೋಧಗಳು ಕೇಳಿಬರುತ್ತಿವೆ.


ಇದನ್ನೂ ಓದಿ: Vikrant Rona: ಜಪಾನ್​ನಲ್ಲೂ ‘ವಿಕ್ರಾಂತ್ ರೋಣ‘ ಕ್ರೇಜ್​, ಸಿನಿಮಾ ನೋಡಲು 300 KM ನಡೆದ ಅಭಿಮಾನಿ!


ಜಪಾನ್​ ದೇಶದಲ್ಲಿಯೂ ಕಿಚ್ಚನ ಅಬ್ಬರ:

top videos


    ಹೌದು, ಕಿಚ್ಚ ಸುದೀಪ್ ಅಭಿನಯದ ಸೂಪರ್ ಹಿಟ್ ಚಿತ್ರ ವಿಕ್ರಾಂತ್ ರೋಣ ಚಿತ್ರವು ಈಗಾಗಲೇ ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲೆಯಾಳಂ ಭಾಷೆಗಳಲ್ಲಿ ಬಿಡುಗಡೆ ಆಗಿದೆ. ಆದರೆ ಇದೀಗ ಚಿತ್ರತಂಡ ಒಂದು ಹೆಜ್ಜೆ ಮುಂದುವರೆದಿದ್ದು, ಚಿತ್ರವವನ್ನು ಜಪಾನ್ ದೇಶದಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಈ ಕುರಿತು ಸ್ವತಃ ಕಿಚ್ಚ ಸುದೀಪ್​ ಅವರೇ ಟ್ವೀಟ್​ ಮೂಲಕ ತಿಳಿಸಿದ್ದಾರೆ.

    First published: