news18-kannada Updated:July 1, 2020, 5:36 PM IST
ಬೇಬಿ ಇಂದಿರಾ
70- 80ರ ದಶಕದಲ್ಲಿ ಕನ್ನಡ ಸಿನಿ ಪರದೆಯ ಮೇಲೆ ನಟಿಸಿದ್ದ ಬೇಬಿ ಇಂದಿರಾ ಈಗ ಹೇಗಿದ್ದಾರೆ? ಏನು ಮಾಡುತ್ತಿದ್ದಾರೆ? ಎಂಬ ಕುತೂಹಲಕ್ಕೆ ಉತ್ತರ ಇಲ್ಲಿದೆ.
ಬಾಲ ನಟಿಯಾಗಿ ಕನ್ನಡ ಸಿನಿಮಾ ರಂಗ ಪ್ರವೇಶಿಸಿದ ಬೇಬಿ ಇಂದಿರಾ ಅವರು ಡಾ. ರಾಜ್ ಕುಮಾರ್, ವಿಷ್ಣು ವರ್ಧನ್ ಹೀಗೆ ಅನೇಕ ಮೇರು ನಟರ ಸಿನಿಮಾದಲ್ಲಿ ವಿಭಿನ್ನ ಪಾತ್ರದ ಮೂಲಕ ನಟಿಸಿ ಅಭಿಮಾನಿಗಳನ್ನು ಸೆಳೆದಿದ್ದರು. ಅಷ್ಟೇ ಏಕೆ ತನ್ನ ಪಾತ್ರದ ಮೂಲಕ ಅಭಿಮಾನಿಗಳನ್ನು ಅಳಿಸಿದ್ದ ಉದಾಹರಣೆ ಕೂಡ ಇದೆ. ಪಾತ್ರದ ಒಳಹೊಕ್ಕಿ ಅದಕೊಂದು ಜೀವ ತುಂಬುತಿದ್ದ ಬೇಬಿ ಇಂದಿರಾ ಬಾಲ ನಟಿಯಾಗಿ ಅನೇಕ ಸಿನಿಮಾದಲ್ಲಿ ಮಿಂಚಿದ್ದರು.
ಬೇಬಿ ಇಂದಿರಾ ‘ಜನ್ಮ ರಹಸ್ಯ’ ಸಿನಿಮಾದ ಮೂಲಕ ಬಾಲ ನಟಿಯಾಗಿ ಕನ್ನಡ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು. ಡಾ. ರಾಜ್ಕುಮಾರ್, ವಿಷ್ಣು ವರ್ಧನ್ ನಟನೆಯ ಈ ಸಿನಿಮಾ ಅಂದಿಗೆ ದೊಡ್ಡ ಹಿಟ್ ಆಗಿತ್ತು. ಬೇಬಿ ಇಂದಿರಾ ಅವರ ಪಾತ್ರ ಕೂಡ ಭಿನ್ನವಾಗಿ ಮೂಡಿಬಂದಿತ್ತು. ಆನಂತರ ಬೇಬಿ ಇಂದಿರಾ ಪುಟಾಣಿ ಏಜೆಂಟ್ 123, ಸಿಂಹದಮರಿ ಸೈನ್ಯ, ಮಕ್ಕಳಭಾಗ್ಯ, ರಾಮ ಲಕ್ಷಣ ಚಿತ್ರಗಳಲ್ಲಿ ಬಾಲ ನಟಿಯಾಗಿ ಅಭಿನಯಿಸಿದರು.
ಕನ್ನಡ ಸಿನಿಮಾ ಮಾತ್ರದಲ್ಲದೆ ನಂತರ ದಿನಗಳಲ್ಲಿ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಸಿನಿಮಾದಲ್ಲೂ ಬೇಬಿ ಇಂದಿರಾ ನಟಿಸಿದ್ದಾರೆ. 1984 ರಲ್ಲಿ ಅರ್ಜುನ್ ಸರ್ಜಾ ನಟನೆಯ ಮಳೆ ಬಂತು ಮಳೆ ಸಿನಿಮಾದಲ್ಲಿ ನಾಯಕಿಯಾಗಿ ಮಿಂಚಿದ್ದರು. ಹೀಗೆ 100ಕ್ಕೂ ಹೆಚ್ಚಿನ ಸಿನಿಮಾದಲ್ಲಿ ಬೇಬಿ ಇಂದಿರಾ ಬಣ್ಣ ಹಚ್ಚಿದ್ದಾರೆ.

ಮಾಸ್ಟರ್ ಶ್ರೀಧರ್

ಬೇಬಿ ಇಂದಿರಾ
ಬೇಬಿ ಇಂದಿರಾ ತಮಿಳಿನ ಬಾಲ ನಟನನಾಗಿ ಮಿಂಚಿದ್ದ ಮಾಸ್ಟರ್ ಶ್ರೀಧರ್ ಅವರನ್ನು ವಿವಾಹವಾದರು. ನಂತರ ಈ ದಂಪತಿಗಳಿ ಪ್ರಶಾಂತ್ ಹಾಗೂ ರಕ್ಷಿತ್ ಎಂಬ ಗಂಡು ಮಕ್ಕಳು ಜನಿಸುತ್ತಾರೆ.ಬೇಬಿ ಇಂದಿರಾ ಅವರ ಪತಿ ಮಾಸ್ಟರ್ ಶ್ರೀಧರ್ 2013ರಲ್ಲಿ ಹೃದಯಾಘಾತದಿಂದ ನಿಧನರಾದರು. ಸದ್ಯ ನಟಿ ತಮ್ಮ ಮಕ್ಕಳೊಂದಿಗೆ ಚೆನ್ನೈನಲ್ಲಿ ವಾಸಿಸುತ್ತಿದ್ದಾರೆ.
First published:
July 1, 2020, 5:32 PM IST