• Home
 • »
 • News
 • »
 • entertainment
 • »
 • Raj B Shetty: ಸೈಕೋ ಕಿಲ್ಲರ್​ ಜೊತೆ ರಾಜ್​ ಬಿ ಶೆಟ್ಟಿ ಫೋಟೋ, ವಿದೇಶದಲ್ಲಿ ಕನ್ನಡ ನಟನ ಬಗ್ಗೆ ಅಪಹಾಸ್ಯ ಮಾಡಿದ್ರಾ?

Raj B Shetty: ಸೈಕೋ ಕಿಲ್ಲರ್​ ಜೊತೆ ರಾಜ್​ ಬಿ ಶೆಟ್ಟಿ ಫೋಟೋ, ವಿದೇಶದಲ್ಲಿ ಕನ್ನಡ ನಟನ ಬಗ್ಗೆ ಅಪಹಾಸ್ಯ ಮಾಡಿದ್ರಾ?

ರಾಜ್​ ಬಿ ಶೆಟ್ಟಿ

ರಾಜ್​ ಬಿ ಶೆಟ್ಟಿ

ವಿದೇಶದ ರಸ್ತೆಗಳಲ್ಲಿ ರಾಜ್​ ಬಿ ಶೆಟ್ಟಿ ಅವರ ಫೋಟೋ ಹಿಡಿದುಕೊಂಡು ಕೆಲ ವ್ಯಕ್ತಿಗಳು ಓಡಾಡುತ್ತಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಅರೇ ರಾಜ್​ ಬಿ ಶೆಟ್ಟಿ ಅವರ ಫೋಟೋ ಯಾಕೆ ಇವರ ಕೈಯಲ್ಲಿದೆ? ಅದು ಒಬ್ಬ ಸೈಕೋ ಕಿಲ್ಲರ್​ ಜೊತೆ ಯಾಕೆ ಅಂತೀರಾ? ಮುಂದೆ ನೋಡಿ.

ಮುಂದೆ ಓದಿ ...
 • Share this:

  ‘ಒಂದು ಮೊಟ್ಟೆಯ ಕಥೆ’ ಸಿನಿಮಾದ ಮೂಲಕ ಸ್ಯಾಂಡಲ್​ವುಡ್​ (Sandalwood) ಪ್ರವೇಶಿಸಿದ ಕರಾವಳಿ ಪ್ರತಿಭೆ ನಟ ರಾಜ್ ಬಿ ಶೆಟ್ಟಿ (Raj B Shetty) .  ಸದ್ಯ ಸ್ಯಾಂಡಲ್​ವುಡ್​ನ ಬಹುಮುಖ ಪ್ರತಿಭೆ ಎನ್ನಬಹುದು. ಎಲ್ಲೆಲ್ಲೂ ರಾಜ್​ ಬಿ ಶೆಟ್ಟಿ ಅವರ ಹವಾ ಎಂದರೆ ತಪ್ಪಾಗಲ್ಲ. ಗರುಡ ಗಮನ ವೃಷಭ ವಾಹನ (Garuda Gamana Vrishbha Vahana) ಸಿನಿಮಾ ಬಂದ ಮೇಲಂತೂ ರಾಜ್​ ಬಿ ಶೆಟ್ಟಿ ಅವರ ಖದರ್​ ಏನಂಥ ಇಡೀ ಭಾರತೀಯ ಚಿತ್ರರಂಕ್ಕೆ ತಿಳಿದಿತ್ತು. ಬೇರೆ ಭಾಷೆಯ ನಟ-ನಟಿಯರು ಗರುಡ ಗಮನ ವೃಷಭ ವಾಹನ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ನಟನೆ (Acting) , ನಿರ್ದೇಶನ (Direction), ಬರವಣಿಗೆ (Writing) ಹೀಗೆ ಮೂರರಲ್ಲೂ ತಮ್ಮನ್ನ ತಾವೂ ತೊಡಗಿಸಿಕೊಂಡಿರುವ ರಾಜ್ ಬಿ ಶೆಟ್ಟಿ, ಗರುಡ ಗಮನ ವೃಷಭ ವಾಹನ ಸಿನಿಮಾ ಮೂಲಕ ಸಿನಿರಂಗದಲ್ಲಿ ಹೊಸ ಹಾದಿ ಹುಟ್ಟು ಹಾಕಿದ್ದಾರೆ.


  ವಿದೇಶದಲ್ಲೂ ರಾಜ್​ ಬಿ ಶೆಟ್ಟಿ ಹವಾ!

  ಮಂಗಳೂರಿನ ಎಫ್​ಎಂ ಒಂದರಲ್ಲಿ ರೆಡಿಯೋ ಜಾಕಿಯಾಗಿದ್ದ ಈ ಪ್ರತಿಭಾನ್ವಿತ ನಟ, ನಾಟಕ ತಂಡ ಸೇರಿಕೊಂಡು ಡಾಕ್ಯೂಮೆಂಟರಿಗಳನ್ನು ಮಾಡುತ್ತಿದ್ದರು. ಅಲ್ಲಿಂದ ಆರಂಭವಾದ ಜರ್ನಿ ಈಗ ಇಲ್ಲಿ ಬಂದು ನಿಂತಿದೆ. ಈಗ ಯಾಕೆ ಇವರ ವಿಚಾರ ಅಂತೀರಾ? ಅದಕ್ಕೂ ಒಂದು ಕಾರಣವಿದೆ. ವಿದೇಶದ ರಸ್ತೆಗಳಲ್ಲಿ ರಾಜ್​ ಬಿ ಶೆಟ್ಟಿ ಅವರ ಫೋಟೋ ಹಿಡಿದುಕೊಂಡು ಕೆಲ ವ್ಯಕ್ತಿಗಳು ಓಡಾಡುತ್ತಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಅರೇ ರಾಜ್​ ಬಿ ಶೆಟ್ಟಿ ಅವರ ಫೋಟೋ ಯಾಕೆ ಇವರ ಕೈಯಲ್ಲಿದೆ? ಅದು ಒಬ್ಬ ಸೈಕೋ ಕಿಲ್ಲರ್​ ಜೊತೆ ಅಂತೀರಾ? ಮುಂದೆ ನೋಡಿ.


  ಸೈಕೋ ಕಿಲ್ಲರ್​ ಜೊತೆ ರಾಜ್​ ಬಿ ಶೆಟ್ಟಿ ಫೋಟೋ!


  ಹೌದು. ವಿದೇಶದ ಯೂಟ್ಯೂಬರ್​ ಒಬ್ಬರು ತಮ್ಮ ಮೊಬೈಲ್​ನಲ್ಲಿ ಇಬ್ಬರ ಫೋಟೋ ಹಿಡಿದುಕೊಂಡು ಜನರಿಗೆ ತೋರಿಸಿ ಇವರ ಫೋಟೊ ನೋಡಿದರೆ, ನಿಮಗೆ ಯಾರನ್ನು ನಂಬಬೇಕು ಎಂದೆನ್ನಿಸುತ್ತೆ ಅಂತ ಕೇಳುತ್ತಾರೆ. ಈ ಇಬ್ಬರ ಫೋಟೋದಲ್ಲಿ ಒಬ್ಬರು ರಾಜ್​ ಬಿ ಶೆಟ್ಟಿ ಮತ್ತೊಬ್ಬರ ಫೋಟೋ ಸೈಕೋ ಕಿಲ್ಲರ್ ಅವರದ್ದು. ಇವರಿಬ್ಬರ ಫೋಟೋ ನೋಡಿದರೆ, ಯಾರನ್ನು  ನಂಬಬೇಕು ಅಂತ ಕೇಳಿದ್ದಕ್ಕೆ, ಜನರೆಲ್ಲ ಸೈಕೋ ಕಿಲ್ಲರ್​ ಅವರ ಭಾವಚಿತ್ರಕ್ಕೆ ಒಪ್ಪಿಗೆ ಸೂಚಿಸುತ್ತಾರೆ. ನಂತರ ಯುಟ್ಯೂಬರ್ ಇಬ್ಬರ ಬಗ್ಗೆ ಜನರಿಗೆ ಹೇಳುತ್ತಾರೆ. ನೀವು ಆಯ್ಕೆ ಮಾಡಿರುವ ವ್ಯಕ್ತಿ ಸೈಕೋ ಕಿಲ್ಲರ್​. ಮತ್ತೊಬ್ಬರು ರಾಜ್​ ಬಿ ಶೆಟ್ಟಿ ಭಾರತೀಯ ನಟ ಎಂದು ಹೇಳುತ್ತಾರೆ.

  View this post on Instagram


  A post shared by Karim Jovian (@karimjovian)
  ಇದನ್ನೂ ಓದಿ: ಮತ್ತೆಂದೂ 'ಶಿವ'ನ ಅವತಾರ ತಾಳಲ್ವಂತೆ ರಾಜ್ ಬಿ ಶೆಟ್ಟಿ, ಈ ಸಲ ಇನ್ನೊಂದು ಡಿಫರೆಂಟ್ ಅವತಾರಕ್ಕೆ ಸಜ್ಜು


  ರಾಜ್​ ಬಿ ಶೆಟ್ಟಿ ಮುಂದಿನ ಸಿನಿಮಾ ಯಾವುದು?  Published by:ವಾಸುದೇವ್ ಎಂ
  First published: