ರೆಬೆಲ್ ಸ್ಟಾರ್ ಅಂಬರೀಶ್ (Ambareesh) ಮತ್ತು ಸುಮಲತಾ (Suma Latha) ಅವರ ಪುತ್ರ ನಟ ಅಭಿಷೇಕ್ ಅಂಬರೀಷ್ (Abhishek Ambareesh) ಜೀವನದಲ್ಲಿ ಹೊಸ ಅಧ್ಯಾಯ ಶುರುವಾಗಿದೆ. ತಾವು ಇಷ್ಟ ಪಟ್ಟ ಹುಡುಗಿ ಅವಿವಾ ಬಿದ್ದಪ್ಪ ಜೊತೆ ಅವರ ಎಂಗೇಜ್‍ಮೆಂಟ್ (Engagement) ಮಾಡಿಕೊಂಡಿದ್ದಾರೆ. ಬೆಂಗಳೂರಿನ (Bengaluru) ಖಾಸಗಿ ಹೋಟೆಲ್‍ನಲ್ಲಿ ಡಿಸೆಂಬರ್ 11 ರಂದು ನಿಶ್ಚಿತಾರ್ಥ ನೆರವೇರಿದೆ. ಕುಟುಂಬದವರು, ಆಪ್ತರು ಹಾಗೂ ಗಣ್ಯರ ಸಮ್ಮುಖದಲ್ಲಿ ಅಭಿಷೇಕ್ ಮತ್ತು ಅವಿವಾ ಬಿದ್ದಪ್ಪಉಂಗುರು ಬದಲಾಯಿಸಿಕೊಂಡಿದ್ದಾರೆ. ಇಬ್ಬರದ್ದು ಒಳ್ಳೆಯ ಜೋಡಿ ಎಂದು ಅಭಿಮಾನಿಗಳು ಹೇಳಿದ್ದಾರೆ. ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥ ದವಿಡಿಯೋ ರಿವೀಲ್ ಆಗಿದ್ದು, ಅದ್ಭುತವಾಗಿದೆ. ವಿಡಿಯೋದಲ್ಲಿ (Video) ನಟ ಅಂಬರೀಶ್ ಫೋಟೋ ಎಲ್ಲೆಲ್ಲೂ ರಾರಾಜಿಸಿದೆ.
ಸ್ಯಾಂಡಲ್‍ವುಡ್ ನಲ್ಲಿ ಮದುವೆ ಸಂಭ್ರಮ
ಸ್ಯಾಂಡಲ್‍ವುಡ್‍ನಲ್ಲಿ ಸಾಲು ಸಾಲು ಮದುವೆಗಳು ನಡೆಯುತ್ತಿವೆ. ಇತ್ತೀಚೆಗಷ್ಟೇ ನಟಿ ಅದಿತಿ ಪ್ರಭುದೇವ ಅವರು ಗ್ರ್ಯಾಂಡ್ ಆಗಿ ಮದುವೆ ಆಗಿದ್ದರು. ಅಲ್ಲದೇ ನಟಿ ಹರಿಪ್ರಿಯಾ- ನಟ ವಸಿಷ್ಠ ಸಿಂಹ ಅವರ ನಿಶ್ಚಿತಾರ್ಥ ಆಗಿದೆ. ಈಗ ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಸುಮಲತಾ ಅವರ ಪುತ್ರ ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥ ಅದ್ಧೂರಿಯಾಗಿ ನಡೆದಿದೆ.
ನಾಲ್ಕು ವರ್ಷಗಳಿಂದ ಪ್ರೀತಿ ಮಾಡ್ತಿದ್ದ ಜೋಡಿ
ಅಭಿಷೇಕ್ ಮತ್ತು ಅವಿವಾ ಬಿದ್ದಪ್ಪ 4 ವರ್ಷಗಳಿಂದ ಪ್ರೀತಿಸುತ್ತಿದ್ದರು. ಇಬ್ಬರ ಕುಟುಂಬದವರು ಇವರ ಪ್ರೀತಿಗೆ ಒಪ್ಪಿಗೆ ಸೂಚಿಸಿ, ನಿಶ್ಚಿತಾರ್ಥ ಮಾಡಿದ್ದಾರೆ. ಅಭಿಷೇಕ್ ಮತ್ತು ಅವಿವಾ ಮದುವೆ ಮುಂದಿನ ವರ್ಷ ಅಂದ್ರೆ ಜನವರಿ 2023ರ ಸಂಕ್ರಾಂತಿ ಹಬ್ಬದಂದು ಅದ್ಧೂರಿಯಾಗಿ ನಡೆಯಲಿದೆ ಎಂದು ಹೇಳಲಾಗ್ತಿದೆ.
ಇದನ್ನೂ ಓದಿ: Abhishek Ambareesh: ಮಗನ ನಿಶ್ಚಿತಾರ್ಥದ ಫೋಟೋಸ್ ಶೇರ್ ಮಾಡಿದ ಸುಮಲತಾ! ಅಂಬಿ ಬಗ್ಗೆ ಹೇಳಿದ್ದೇನು?
ನಿಶ್ಚಿತಾರ್ಥದಲ್ಲಿ ತಾರೆಗಳ ಸಮಾಗಮ
ಅಭಿಷೇಕ್ ಮತ್ತು ಅವಿವಾ ಬಿದ್ದಪ್ಪ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ನಟ ಯಶ್, ರಾಧಿಕಾ ಪಂಡಿತ್, ಅನಿರುದ್ಧ್ ದೇರಿ ಹಲವು ತಾರೆಗಳು ಬಂದು ವಿಶ್ ಮಾಡಿ ಹೋಗಿದ್ದಾರೆ. ಅಲ್ಲದೇ ಸಚಿವರಾದ ಆರ್.ಅಶೋಕ್, ಅಶ್ವತ್ಥ ನಾರಾಯಣ್, ಸುಧಾಕರ್ ಸೇರಿದಂತೆ ರಾಜಕೀಯ ಗಣ್ಯರು ಈ ಸಮಾರಂಭಕ್ಕೆ ಸಾಕ್ಷಿ ಆಗಿದ್ದಾರೆ.
ಎಲ್ಲೆಲ್ಲೂ ರಾರಾಜಿಸಿದ ಅಂಬಿ ಫೋಟೋ
ಅಭಿಷೇಕ್ ಮತ್ತು ಅವಿವಾ ಬಿದ್ದಪ್ಪ ನಿಶ್ಚಿತಾರ್ಥದ ವಿಡಿಯೋದಲ್ಲಿ ಅಂಬರೀಶ್ ಅವರ ಫೋಟೋ ಎಲ್ಲೆಡೆ ರಾರಾಜಿಸಿದೆ. ಅಂಬರೀಶ್ ಅವರು ಇದಿದ್ರೆ ತುಂಬಾ ಖುಷಿ ಪಡ್ತಾ ಎಂದು ಅಭಿಮಾನಿಗಳು ಕಾಮೆಂಟ್ ಹಾಕಿದ್ದಾರೆ. ಅದ್ಧೂರಿಯಾಗಿ ನಿಶ್ಚಿತಾರ್ಥ ನೆರವೇರಿದೆ. ಸುಮಲತಾ ತುಂಬಾ ಖುಷಿ ಆಗಿದ್ದಾರೆ.
ಅಭಿಷೇಕ್ ಗಿಂತ ದೊಡ್ಡವರ ಅವಿವಾ?
ಈ ಅವಿವಾ ಸಖತ್ ಡಿಮ್ಯಾಂಡ್ ಇರೋ ಫ್ಯಾಷನ್ ಡಿಸೈನರ್ ಆಗಿದ್ದಾರೆ. ಜೊತೆಗೆ ಇನ್‍ಸ್ಟಾಗ್ರಾಮ್‍ನಲ್ಲಿ 44 ಸಾವಿರಕ್ಕೂ ಹೆಚ್ಚಿನ ಫಾಲೋವರ್ಸ್ ಹೊಂದಿದ್ದಾರೆ. ಪ್ರಸಾದ್ ಹಾಗೂ ಜುಡಿತ್ ಅವರ ಪುತ್ರಿ ಅವಿವಾಗೆ ಆದಾಮ್ ಎಂಬ ಸಹೋದರನಿದ್ದಾನೆ. ಮತ್ತೊಂದು ವಿಶೇಷ ಅಂದರೆ ಅವಿವಾ ಅವರು ಅಭಿಷೇಕ್ ಅಂಬರೀಶ್‍ಗಿಂತ ದೊಡ್ಡವರು ಅಂತ ಹೇಳಲಾಗುತ್ತಿದೆ. ಅವಿವಾ ಅಭೀಷೇಕ್‍ಗಿಂತ 3 ವರ್ಷ ದೊಡ್ಡವರು ಎನ್ನಲಾಗುತ್ತಿದೆ.
ಇದನ್ನೂ ಓದಿ: Abhishek Ambareesh: ಅವಿವಾಗೆ ಅಭಿಷೇಕ್ ತೊಡಿಸಿದ ಉಂಗುರದ ಬೆಲೆ ಎಷ್ಟು ಗೊತ್ತೇ?
ಫ್ಯಾಷನ್ ಡಿಸೈನರ್ ಆಗಿರುವ ಅವಿವಾ ಅವರು ಅಭಿಷೇಕ್ ಬಾಳಿಗೆ ಬಂದಿದ್ದಾರೆ. ಈ ಜೋಡಿಯ ಮದುವೆ ಬಗ್ಗೆ ಅಭಿಮಾನಿಗಳು ಈಗಾಗಲೇ ಕುತೂಹಲದಲ್ಲಿದ್ದಾರೆ.ಅಭಿಷೇಕ್ ಅವರು ಅವಿವಾ ಬೆರಳಿಗೆ ಬರೋಬ್ಬರಿ 37 ಲಕ್ಷ ರೂಪಾಯಿ ಬೆಲೆ ಬಾಳುವ ವಜ್ರದ ಉಂಗುರವನ್ನು ತೊಡಿಸಿದ್ದಾರೆ. ಈ ಉಂಗುರವನ್ನು ವಿಶೇಷವಾಗಿ ಪುಣೆಯಲ್ಲಿ ಮಾಡಿಸಲಾಗಿತ್ತು ಎಂದು ಹೇಳಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ