Dhruva Sarja: ಗುರು ರಾಯರ ದರ್ಶನ ಪಡೆದ ಧ್ರುವ ಸರ್ಜಾ, ಸೆಲ್ಫಿಗಾಗಿ ಮುಗಿಬಿದ್ದ ಫ್ಯಾನ್ಸ್​​!

ಮಂತ್ರಾಲಯದ ಪೀಠಾಧಿಪತಿ ಶ್ರೀ ಸುಭದೇಂದ್ರ ತೀರ್ಥರ ಆಶೀರ್ವಾದ ಪಡೆದಿದ್ದಾರೆ. ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್​ ಆಗುತ್ತಿವೆ. 

ಮಂತ್ರಾಲಯದಲ್ಲಿ ಧ್ರುವ ಸರ್ಜಾ

ಮಂತ್ರಾಲಯದಲ್ಲಿ ಧ್ರುವ ಸರ್ಜಾ

  • Share this:
ಸ್ಯಾಂಡಲ್​ವುಡ್(Sandalwood)​ನ ಬಹುತೇಕ ನಟ- ನಟಿಯರು ತುಂಬಾ ನಂಬುವುದು ಅಂದರೆ ಅದು ಶ್ರೀ ಗುರುರಾಘವೇಂದ್ರ ಸ್ವಾಮಿ(Sri (Gururaghavendra Swamy)ಗಳು. ಸಿನಿಮಾ ರಿಲೀಸ್​ ಸಮಯವಾಗಲಿ, ಮತ್ಯಾವುದೋ ತೊಂದರೆ ಇರಲಿ ಮಂತ್ರಾಲಯ(Mantralaya)ಕ್ಕೆ ಭೇಟಿ ನೀಡಿ ಗುರು ರಾಘವೇಂದ್ರ ಶ್ರೀಗಳ ದರ್ಶನ ಪಡೆದರೆ ಕಷ್ಟವೆಲ್ಲಾ ದೂರವಾಗುತ್ತೆ. ಅದರಲ್ಲೂ ನವರಸನಾಯಕ ಜಗ್ಗೇಶ್(Jaggesh)​ ಅವರು ರಾಘವೇಂದ್ರ ಸ್ವಾಮಿಗಳು ಭಕ್ತರು. ಈಗ ನಟ ಧ್ರುವ ಸರ್ಜಾ (Dhruva Sarja) ಅವರು ಶೂಟಿಂಗ್​ ಕೆಲಸಗಳಿಂದ ಕೊಂಚ ಬಿಡುವು ಮಾಡಿಕೊಂಡಿದ್ದಾರೆ. ಆ ಬಿಡುವಿನಲ್ಲಿ ರಾಘವೇಂದ್ರ ಸ್ವಾಮಿಗಳ (Raghavendra Swamy) ದರ್ಶನ ಪಡೆಯಲು ಅವರು ಮಂತ್ರಾಲಯಕ್ಕೆ ತೆರಳಿದ್ದಾರೆ. ಗುರುವಾರ (ಫೆ.03) ರಾಯರ ಸನ್ನಿಧಿಗೆ ಭೇಟಿ ನೀಡಿದ್ದಾರೆ. ಮಂತ್ರಾಲಯದ ಪೀಠಾಧಿಪತಿ ಶ್ರೀ ಸುಭದೇಂದ್ರ ತೀರ್ಥರ ಆಶೀರ್ವಾದ ಪಡೆದಿದ್ದಾರೆ. ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್​ ಆಗುತ್ತಿವೆ. 

ಸೆಲ್ಫಗಾಗಿ ಮುಗಿಬಿದ್ದ ಧ್ರುವ ಸರ್ಜಾ ಫ್ಯಾನ್ಸ್​!

ಮಂತ್ರಾಲಯದಲ್ಲಿ ಧ್ರುವ ಸರ್ಜಾ ಅವರನ್ನು ಕಂಡ ಅಭಿಮಾನಿಗಳು ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಗಿ ಬಿದ್ದಿದ್ದಾರೆ. ಸೆಲ್ಫಿಗೆ ಪೋಸ್​ ನೀಡುವ ಮೂಲಕ ಅಭಿಮಾನಿಗಳನ್ನು ಧ್ರುವ ಖುಷಿಪಡಿಸಿದ್ದಾರೆ. ಎಲ್ಲರಿಗೂ ನಗುಮುಖದಲ್ಲೇ ಧ್ರುವ ಸರ್ಜಾ ಫೋಟೋಗೆ ಪೋಸ್​ ನೀಡಿದ್ದಾರೆ. ರಾಘವೇಂದ್ರ ಸ್ವಾಮಿಗಳ ತೇರನ್ನು ಸಹ ಧ್ರುವ ಸರ್ಜಾ ಎಳೆದಿದ್ದಾರೆ. ಸುಭದೇಂದ್ರ ತೀರ್ಥರು ಧ್ರುವ ಸರ್ಜಾ ಅವರಿಗೆ ಗುರುಗಳ ಪ್ರತಿಮೆಯನ್ನು ನೀಡಿದ್ದಾರೆ. ಇನ್ನೂ ಧ್ರುವ ಸರ್ಜಾ ಕಾರು ಹತ್ತುವ ವೇಳೆ ಜನರು ಗುಂಪು ಸೇರಿ ಫೋಟೋಗೆ ಮುಗಿಬಿದಿದ್ದರು.

ಇದನ್ನೂ ಓದಿ: 'ಸಲಗ'ವನ್ನೇ ಗೆದ್ದು ‘ಭೀಮ'ನಾದ ವಿಜಯ್! ಹುಷಾರ್.. ಇವರನ್ನ ಕೆಣಕದಿದ್ರೆ ನಿಮಗೇ ಕ್ಷೇಮ

70ರ ದಶಕದ ಕಥೆಯಲ್ಲಿ ಧ್ರುವ ಸರ್ಜಾ!

‘ಏಕ್ ಲವ್ ಯಾ’ ರಿಲೀಸ್ ಆಗುತ್ತಿದ್ದಂತೆ ಕನ್ನಡ ಸಿನಿಮಾಗಳ ಹೆಡ್ ಆಫೀಸ್ ಗಾಂಧಿನಗರದಲ್ಲಿ ಮತ್ತೊಂದು ಸುದ್ದಿ ಹರಿದಾಡುತ್ತಿದೆ. ಧ್ರುವ ಸರ್ಜಾ ಹಾಗೂ ಪ್ರೇಮ್ ಕಾಂಬಿನೇಷನ್‌ನಲ್ಲಿ ಶೀಘ್ರದಲ್ಲಿಯೇ ಆರಂಭ ಆಗಿದ್ಯಂತೆ. ಅದಕ್ಕೆ ಪ್ರೇಮ್ 70ರ ದಶಕದ ನಗರವನ್ನೇ ಸೃಷ್ಟಿ ಮಾಡುತ್ತಿದ್ದಾರಂತೆ. ಈ ಹಿಂದೆ ಭೂಗತ ಲೋಕದ ಕಥೆ ಹೇಳಿದ್ದರು. ಕರಿಯಾ, ಜೋಗಿ, ಜೋಗಯ್ಯದಲ್ಲಿ ಭೂಗತ ಲೋಕವನ್ನು ಅನಾವರಣ ಮಾಡಿದ್ದ ಪ್ರೇಮ್​ ಮತ್ತೆ ಅಂಥಹದ್ದೇ ಸಿನಿಮಾ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅದರಲ್ಲೂ ಸ್ಯಾಂಡಲ್​ವುಡ್​ ಆ್ಯಕ್ಷನ್​ ಪ್ರಿನ್ಸ್​ ಧ್ರುವ ಸರ್ಜಾ, ಪ್ರೇಮ್ ಸಿನಿಮಾದಲ್ಲಿ ನಟಿಸುತ್ತಿರುವುದು ಮತ್ತಷ್ಟು ಕುತೂಹಲ ಹೆಚ್ಚಿಸಿದೆ.​

ಇದನ್ನೂ ಓದಿ: ಭೂಗತಲೋಕದ ದೊರೆಯಾಗ್ತಿದ್ದಾರೆ ಧ್ರುವ ಸರ್ಜಾ, ಜಿಮ್​ನಲ್ಲಿ ಬಹದ್ದೂರ್​ ಗಂಡು `ಭರ್ಜರಿ’ ವರ್ಕೌಟ್​!

ಕೋಟಿ ವೆಚ್ಚದಲ್ಲಿ ಬೃಹತ್​ ಸೆಟ್​ ನಿರ್ಮಾಣ?

ಏಕ್​ ಲವ್​ ಯಾ ಸಿನಿಮಾ ರಿಲೀಸ್​ ಆಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಒಂದೆರಡು ವಾರದ ಬಳಿಕ ಧ್ರುವ ಸರ್ಜಾ ಸಿನಿಮಾ ಕಡೆ ಮುಖ ಮಾಡಲಿದ್ದಾರೆ . ಈ ಕಾರಣಕ್ಕೆ 70 ದಶಕಕ್ಕೆ ಹೋಲುವ ಸೆಟ್ಟನ್ನು ನಿರ್ಮಿಸಲಾಗುತ್ತಿದ್ದು, ಇದು ಭೂಗಲೋಕದ ಕಥೆಯನ್ನು ಹೇಳುತ್ತಿದ್ದಾರೆ ಎನ್ನಲಾಗಿದೆ. ಕೊತ್ವಾಲ್ ರಾಮಚಂದ್ರ ಹಾಗೂ ಎಂ ಪಿ ಜೈರಾಜ್ ಕಾಲ ಭೂಗತಲೋಕದ ಕತೆಯೊಂದನ್ನು ತೆರೆಮೇಲೆ ತರಲು ಹೊರಟಿದ್ದಾರೆ ಅನ್ನುವ ಮಾತುಗಳು ಸ್ಯಾಂಡಲ್‌ವುಡ್‌ನಲ್ಲಿ ಹರಿದಾಡುತ್ತಿದೆ. ಸದ್ಯ ಮಾರ್ಟಿನ್​ ಸಿನಿಮಾದಲ್ಲಿ ಧ್ರುವ ಸರ್ಜಾ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಬಳಿಕ ಅವರು ಜೋಗಿ ಪ್ರೇಮ್​ ಅವರ ನಿರ್ದೇಶನದ ಸಿನಿಮಾದ ಶೂಟಿಂಗ್​ನಲ್ಲಿ ಭಾಗಿಯಾಗಲಿದ್ದಾರೆ.
Published by:Vasudeva M
First published: