ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ (Martin Movie) ಮಾರ್ಟಿನ್ ಚಿತ್ರದ ಹೊಸ ಅಪ್ಡೇಟ್ ಹೊರ ಬಿದ್ದಿದೆ. ಸಿನಿಮಾ ಪ್ರೇಮಿಗಳಿಗೆ ಧ್ರುವ ಸರ್ಜಾ ಈ ಮೂಲಕ ಹೊಸ ಸುದ್ದಿ ಕೊಟ್ಟಿದ್ದಾರೆ. ಪೊಗರು (Pogaru Movie) ಆದ್ಮೇಲೆ ಧ್ರುವ (Dhruva Sarja Martin Cinema) ಮಾರ್ಟಿನ್ ಚಿತ್ರದಲ್ಲಿ ಬ್ಯುಸಿ ಆಗಿದ್ದರು. ಇದಾದ್ಮೇಲೆ ಈಗ ಕೆಡಿ ಚಿತ್ರದ ಕೆಲಸದಲ್ಲಿ ನಿರತರಾಗಿದ್ದಾರೆ. ಆದರೆ ಚಿತ್ರದ ನಿರೀಕ್ಷೆಯಲ್ಲಿರೋ ಅಭಿಮಾನಿಗಳಿಗೆ ಮಾರ್ಟಿನ್ ಚಿತ್ರ ತಂಡ ಗುಡ್ ನ್ಯೂಸ್ ಕೊಟ್ಟಿದೆ. ಈ ಚಿತ್ರದ ಆ (Martin Film Latest News) ಸುದ್ದಿ ಯಾವುದು ಅನ್ನೋದು ಇನ್ನೇನು ಕೆಲವೇ ದಿನಗಳಲ್ಲಿ ತಿಳಿಯಲಿದೆ. ಅದರ ಸುತ್ತ ಇಲ್ಲೊಂದು ಸುದ್ದಿ ಇದೆ ಓದಿ.
ಮಾರ್ಟಿನ್ ಸಿನಿಮಾ ತಂಡದ ಹೊಸ ಅಪ್ಡೇಟ್ಸ್ ಏನು?
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಮಾರ್ಟಿನ್ ಚಿತ್ರದ ಬಗ್ಗೆ ನಿರೀಕ್ಷೆ ಇದೆ. ನಿರೀಕ್ಷೆ ಮೂಡಿಸುವಂತಹ ಕಂಟೆಂಟ್ ಜೊತೆಗೇನೆ ಈ ಸಿನಿಮಾ ಬರ್ತಿದೆ ಅನ್ನೋ ನಂಬಿಕೆ ಸಿನಿಪ್ರೇಮಿಗಳಲ್ಲಿದೆ. ಧ್ರುವ ಸರ್ಜಾ ಫ್ಯಾನ್ಸ್ ಕೂಡ ಇದನ್ನೇ ಎದುರು ನೋಡುತ್ತಿದ್ದಾರೆ.
ಭರ್ಜರಿ ಆ್ಯಕ್ಷನ್ಗಳ ಈ ಚಿತ್ರದಲ್ಲಿ ಅದ್ಭುತ ಕ್ಲೈಮ್ಯಾಕ್ಸ್ ಇದೆ. ಸಾಹಸ ಪ್ರೇಮಿಗಳಿಗೆ ಹೇಳಿ ಮಾಡಿಸಿದಂತಹ ಕ್ಲೈಮ್ಯಾಕ್ಸ್ನ್ನ ಇಲ್ಲಿ ತೆಗೆಯಲಾಗಿದ್ದು, ಈ ಒಂದು ಕ್ಲೈಮ್ಯಾಕ್ಸ್ ದೃಶ್ಯವನ್ನ ಇಬ್ಬರು ಸಾಹಸ ನಿರ್ದೇಶಕರು ಡೈರೆಕ್ಟ್ ಮಾಡಿರೋದು ವಿಶೇಷವಾಗಿದೆ.
ಮಾರ್ಟಿನ್ ಚಿತ್ರದ ಆ ಹೊಸ ಅಪ್ಡೇಟ್ಸ್ ಏನು?
ಮಾರ್ಟಿನ್ ಚಿತ್ರದ ಬಹುತೇಕ ಎಲ್ಲ ಕೆಲಸ ಪೂರ್ಣ ಆಗಿದೆ. ಈ ಚಿತ್ರದ ಚಿತ್ರೀಕರಣದ ಕೆಲಸ ಮುಗಿದಮೇಲೆ ನಾಯಕ ನಟ ಧ್ರುವ ಸರ್ಜಾ, ಕೆಡಿ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ.
ಅತ್ತ ಕೆಡಿ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದರೆ, ಇತ್ತ ಮಾರ್ಟಿನ್ ಚಿತ್ರದ ಚಿತ್ರೀಕರಣದ ನಂತರದ ಕೆಲಸ ನಡೆಯುತ್ತಿದ್ದು, ಚಿತ್ರದ ಡೈರೆಕ್ಟರ್ ಎ.ಪಿ.ಅರ್ಜುನ್ ಸದ್ಯ ಚಿತ್ರದ ಫೈನಲ್ ಎಡಿಟಿಂಗ್ ಕೆಲಸದಲ್ಲಿ ನಿರತರಾಗಿದ್ದಾರೆ.
ಮಾರ್ಟಿನ್ ಚಿತ್ರಕ್ಕೆ ಫೆಬ್ರವರಿ 23 ಯಾಕೆ ಸ್ಪೆಷಲ್?
ಮಾರ್ಟಿನ್ ಸಿನಿಮಾದ ಡೈರೆಕ್ಟರ್ ಎ.ಪಿ.ಅರ್ಜುನ್ ಈಗೊಂದು ಸ್ಪೆಷಲ್ ದಿನ ಫಿಕ್ಸ್ ಮಾಡಿದ್ದಾರಂತೆ. ಈ ದಿನದಂದು ಒಂದು ಸ್ಪೆಷಲ್ ವಿಷಯವೂ ರಿವೀಲ್ ಆಗಲಿದೆ ಅನ್ನುವ ಸುದ್ದಿ ಹರಿದಾಡುತ್ತಿದೆ.
ಇಲ್ಲಿವರೆಗೂ ಚಿತ್ರದ ನಾಯಕನ ಪಾತ್ರದ ಪೋಸ್ಟರ್ ಮಾತ್ರ ಬಿಟ್ಟುಕೊಟ್ಟಿರೋ ನಿರ್ದೇಶಕ ಎ.ಪಿ.ಅರ್ಜುನ್, ಈಗ ಚಿತ್ರದ ಇನ್ನೂ ಒಂದಷ್ಟು ವಿಷಯವನ್ನ ರಿವೀಲ್ ಮಾಡೋಕೆ ಪ್ಲಾನ್ ಮಾಡಿದ್ದಾರೆ. ಅದಕ್ಕೊಂದು ಡೇಟ್ನ್ನು ಫಿಕ್ಸ್ ಮಾಡಿದ್ದಾರೆ ಅನ್ನೋ ಸುದ್ದಿ ಕೂಡ ಕೇಳಿ ಬರುತ್ತಿದೆ.
ಫೆಬ್ರವರಿ-23 ರಂದು ಮಾರ್ಟಿನ್ ಟೀಸರ್ ರಿಲೀಸ್?
ಮಾರ್ಟಿನ್ ಚಿತ್ರದ ಟೀಸರ್ ರಿಲೀಸ್ ಪ್ಲಾನ್ ಆಗಿದೆ. ಸಿನಿಮಾದ ಒಟ್ಟು ಝಲಕ್ ಕೊಡಲು ಈ ಒಂದು ಟೀಸರ್ ಪ್ಲಾನ್ ಮಾಡಲಾಗಿದಿಯೇ? ಇಲ್ಲವೇ ನಾಯಕನ ಪರಿಚಯದ ಟೀಸರ್ ಇದಾಗಿರುತ್ತದೆಯೇ? ಈ ವಿಷಯ ಮಾತ್ರ ಇನ್ನೂ ಎಲ್ಲೂ ಹೊರ ಬಂದಿಲ್ಲ.
ಫೆಬ್ರವರಿ ತಿಂಗಳು ಟೀಸರ್ ರಿಲೀಸ್ ಗ್ಯಾರಂಟಿನಾ?
ಹೌದು, ಸೋಷಿಯಲ್ ಮೀಡಿಯಾ ಮತ್ತು ವ್ಯಾಟ್ಸ್ ಅಪ್ ಗ್ರೂಪ್ಗಳಲ್ಲಿ ಟೀಸರ್ ರಿಲೀಸ್ ಮಾಹಿತಿ ಹರಿದಾಡುತ್ತಿದೆ. ಧ್ರುವ ಸರ್ಜಾ ಎಡಿಟಿಂಗ್ ರೂಮ್ನಲ್ಲಿ ಕುಳಿತ ಒಂದು ಫೋಟೋ ಕೂಡ ಈ ವಿಷಯದೊಂದಿಗೆ ಹರಿದಾಡುತ್ತಿದೆ.
ಫೆಬ್ರವರಿ ತಿಂಗಳು ಮಾರ್ಟಿನ್ ಟೀಸರ್ ರಿಲೀಸ್ ಅನ್ನೋದನ್ನ ಈ ಒಂದು ಫೋಟೋದಲ್ಲಿ ನೋಡಬಹುದಾಗಿದೆ. ಇನ್ನು ಚಿತ್ರದ ನಿರ್ದೇಶಕರಾಗಲಿ, ಚಿತ್ರದ ನಾಯಕ ನಟರಾಗಲಿ, ಯಾರೂ ಇನ್ನೂ ಅಧಿಕೃತವಾಗಿ ಟೀಸರ್ ರಿಲೀಸ್ ಬಗ್ಗೆ ಹೇಳಿಕೊಂಡಿಲ್ಲ. ಆದರೆ ಸುದ್ದಿ ಮಾತ್ರ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಮಾರ್ಟಿನ್ ಚಿತ್ರದ ಡೈರೆಕ್ಟರ್ ಎ.ಪಿ.ಅರ್ಜುನ್ ಏನಂತಾರೆ?
ಡೈರೆಕ್ಟರ್ ಎ.ಪಿ.ಅರ್ಜುನ್ ಈ ಒಂದು ಸುದ್ದಿ ಬಗ್ಗೆ ನ್ಯೂಸ್-18 ಕನ್ನಡ ಡಿಜಿಟಲ್ಗೆ ರಿಯಾಕ್ಟ್ ಮಾಡಿದ್ದಾರೆ. ಚಿತ್ರದ ಟೀಸರ್ ರಿಲೀಸ್ ಡೇಟ್ ಇನ್ನು ಫಿಕ್ಸ್ ಆಗಿಲ್ಲ. ಚಿತ್ರದ ಫೈನಲ್ ಕಟ್ ಎಡಿಟಿಂಗ್ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Ram Charan: ಟಾಲಿವುಡ್ ಮಗಧೀರನ ಬೇಡಿಕೆ ದಿನೇ ದಿನೇ ಹೆಚ್ಚು; ಸಾಲು ಸಾಲು ಸಿನಿಮಾ ಒಪ್ಪಿದ ರಾಮ್ ಚರಣ್!
ಇನ್ನುಳಿದಂತೆ ಫೆಬ್ರವರಿ ತಿಂಗಳಲ್ಲಿ ಮಾರ್ಟಿನ್ ಚಿತ್ರದ ಟೀಸರ್ ರಿಲೀಸ್ ಆಗುತ್ತದೆ ಅನ್ನೋದು ಪಕ್ಕಾ ಅಂತ ತಿಳಿದುಕೊಳ್ಳಬಹುದೇನೋ, ಸದ್ಯಕ್ಕೆ ಇದೇ ಸುದ್ದಿ ಹರಿದಾಡುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ