ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಎಲ್ಲರಿಗೂ ಸ್ಪೂರ್ತಿನೇ (Sandalwood Action Prince) ಆಗಿದ್ದಾರೆ. ಒಂದು ರೀತಿ ಫಿಟ್‌ನೆಸ್ ರಾಯಭಾರಿ ಆಗಿದ್ದಾರೆ. ಪ್ರಿನ್ಸ್ ಫಿಟ್‌ನೆಸ್ ಕಂಡು ಅದೆಷ್ಟು ಜನ ಥ್ರಿಲ್ ಆಗುತ್ತಾರೆ. ಹೆವಿ ವೇಟ್ (Heavy Workout Video) ಲಿಫ್ಟ್ ಮಾಡಿ ಥ್ರಿಲ್ ಮೂಡಿಸುತ್ತಲೇ ಇದ್ದಾರೆ. ಏನೆಲ್ಲ ತಪ್ಪಿಸಿದರೂ ಕೂಡ ಧ್ರುವ ಸರ್ಜಾ ರೂಟಿನ್ ವರ್ಕೌಟ್ ತಪ್ಪಿಸೋದಿಲ್ಲ. ಸಿನಿಮಾಗೋಸ್ಕರ ಬೇಕಾಗೋ ತಯಾರಿನೂ (Prince Dhruva Sarja) ಮಾಡಿಕೊಳ್ಳುತ್ತಾರೆ. ಹಾಗೆ ಫಿಟ್‌ನೆಸ್‌ಮೆಂಟೇನ್ ಮಾಡುತ್ತಲೇ ಬಂದಿರೋ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ಫಿಟ್‌ನೆಸ್ ಪ್ರಿಯರಿಗೆ ಒಂದು ರೀತಿ ಸ್ಪೂರ್ತಿಯ ಸೆಲೆ ಆಗಿದ್ದು, ಧ್ರುವ ಸರ್ಜಾ (Workout Video Viral) ವರ್ಕೌಟ್ ವಿಡಿಯೋ ಅಷ್ಟೇ ಗಮನ ಸೆಳೆದು ವೈರಲ್ ಆಗುತ್ತಿವೆ.
ಆ್ಯಕ್ಷನ್ ಪ್ರಿನ್ಸ್ ಹೆವಿ ವರ್ಕೌಟ್ ವಿಡಿಯೋ ವೈರಲ್
ಧ್ರುವ ಸರ್ಜಾ ಅವರ ಬಾಡಿ ಅವರ ಮಾತು ಕೇಳುತ್ತದೆ. ಹೇಗೆ ಬೇಕೋ ಹಾಗೆ ದೇಹದ ತೂಕ ಇಳಿಸಿಕೊಳ್ಳುತ್ತಾರೆ. ಅಷ್ಟೇ ಬೇಗನೇ ದೇಹದ ತೂಕವನ್ನ ಹೆಚ್ಚಿಕೊಂಡದ್ದು ಇದೆ. ಹಾಗೇ ದೇಹವನ್ನ ಮೇಣದಂತೆ ಬದಲಿಸಿಕೊಳ್ಳುವ ಆ್ಯಕ್ಷನ್ ಪ್ರಿನ್ಸ್, ಕೆಡಿ ಚಿತ್ರಕ್ಕಾಗಿಯೇ ದೇಹದ ತೂಕ ಇಳಿಸಿಕೊಂಡು ಅಭಿನಯಸಿದ್ದಾರೆ.
ಜಿಮ್‌ನಲ್ಲಿ ಮತ್ತೆ ಬೆವರಿಳಿಸ್ತಿರೋ ಧ್ರುವ ಸರ್ಜಾ
ಆದರೆ ಇದೀಗ ಆ ಲುಕ್‌ನ ಕೆಲಸ ಮುಗಿದಂತೆ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಮತ್ತೆ ದೇಹದ ತೂಕವನ್ನ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿಯೇ ಧ್ರುವ ಸರ್ಜಾ ಜಿಮ್‌ನಲ್ಲಿ ಬೆವರು ಇಳಿಸುತ್ತಿದ್ದಾರೆ. ಹೆವಿ ವೇಟ್ ಹಾಕಿ ಕಸರತ್ತು ಮಾಡುತ್ತಿದ್ದಾರೆ.
ಹೆವಿ ವರ್ಕೌಟ್-ಸೂಕ್ತ ಡಯೆಟ್-ಧ್ರುವ ರೂಟಿನ್
ಧ್ರುವ ಸರ್ಜಾ ಹೆವಿ ವೇಟ್ ಹಾಕಿಯೇ ವರ್ಕೌಟ್ ಮಾಡುತ್ತಾರೆ. ಅದಕ್ಕೆ ಬೇಕಾಗೋ ಸೂಕ್ತ ಡಯೆಟ್ ಅನ್ನು ಫಾಲೋ ಮಾಡ್ತಾರೆ. ಜೊತೆಗೆ ಟ್ರೈನರ್‌ಗಳಿಂದಲೇ ದೇಹದ ತೂಕ ಇಳಿಸೋ ಮತ್ತು ಹೆಚ್ಚಿಸಿಕೊಳ್ಳುವ ಮಾರ್ಗದರ್ಶನ ಕೂಡ ಪಡೆದುಕೊಳ್ಳುತ್ತಿದ್ದಾರೆ.
ಇಂಟೆನ್ಸ್ ವರ್ಕೌಟ್‌ನಲ್ಲಿ ಕೆಡಿ ಹೀರೋ ಫುಲ್ ಬ್ಯುಸಿ
ಧ್ರುವ ಸರ್ಜಾ ತಮ್ಮ ಚಿತ್ರಗಳಿಗಾಗಿಯೇ ಮಾಡೋ ವರ್ಕೌಟ್ ಕೂಡ ಅಷ್ಟೇ ಇಂಟೆನ್ಸ್ ಆಗಿಯೇ ಇರುತ್ತವೆ. ಈಗ ಮಾಡ್ತಿರೋ ವರ್ಕೌಟ್ ಕೂಡ ಹೆವಿ ಆಗಿಯೇ ಇದೆ. ಅದ್ಹೇಗೆ ಅನ್ನೋರಿಗೆ ವೈರಲ್ ವಿಡಿಯೋಗಳೇ ಸಾಕ್ಷಿ ಅಂತಲೇ ಹೇಳಬಹುದು.
ಬೈಸೆಪ್ಸ್ ಟ್ರೈಸೆಪ್ಸ್‌ಗೆ ಹೆವಿ ವರ್ಕೌಟ್ ಮಾಡೋ ಧ್ರುವ ಸರ್ಜಾ
ಬೈಸೆಪ್ಸ್ ಮತ್ತು ಟ್ರೈಸೆಪ್ಸ್‌ಗಾಗಿಯೇ 25 ಕೆಜಿಯ ಎರಡು ಪ್ಲೇಟ್ ಹಾಕಿಯೇ ವರ್ಕೌಟ್ ಮಾಡುತ್ತಾರೆ. ಬ್ಯಾಕ್ ಆ್ಯಂಡ್ ಸೋಲ್ಡ್ ವರ್ಕೌಟ್ ಮಾಡೋವಾಗ್ಲೂ ಅಷ್ಟೇನೆ, ಒಂದಲ್ಲ ಎರಡಲ್ಲ ಮೂರು ಮೂರು ಪ್ಲೇಟ್ಸ್ ಹಾಕಿಯೇ ಕಸರತ್ತು ಮಾಡುತ್ತಾರೆ.
ಹೆವಿ ವರ್ಕೌಟ್ ವಿಡಿಯೋ ಈಗ ಫುಲ್ ವೈರಲ್
ಅಷ್ಟು ಹೆವಿ ವೇಟ್ ವರ್ಕೌಟ್ ಮಾಡೋ ಧ್ರುವ ಸರ್ಜಾ ಬಹು ಬೇಗನೇ ದೇಹದಲ್ಲಿ ಚೇಂಜಸ್ ಕಾಣುತ್ತಾರೆ. ಅಭಿಮಾನಿಗಳೂ ತಮ್ಮ ನಾಯಕನ ಹೊಸ ರೀತಿಯ ಲುಕ್ ಆ್ಯಂಡ್ ಫೀಲ್ ಕಂಡು ಫುಲ್ ಖುಷ್ ಆಗುತ್ತಾರೆ. ಮಾರ್ಟಿನ್ ಚಿತ್ರದ ಲುಕ್ ಅನ್ನ ನೋಡಿದ್ರೆ ಈಗಲೂ ವಾವ್ ಅನ್ನುವ ಉದ್ಘಾರ ಹೊರಬರುತ್ತದೆ.
View this post on Instagram
ಕೆಡಿ ಚಿತ್ರದಲ್ಲಿ ರೆಟ್ರೋ ಲುಕ್ ಇರೋದ್ರಿಂದಲೇ ದೇಹದ ತೂಕ ಇಳಿಸಿರೋದು ಕೂಡ ಗಮನ ಸೆಳೆದಿದೆ. ಇದೀಗ ಧ್ರುವ ಸರ್ಜಾ ಮತ್ತೊಮ್ಮೆ ದೇಹವನ್ನ ದಂಡಿಸಿ ಗಟ್ಟಿಮಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: Adha Sharma: ದಿ ಕೇರಳ ಸ್ಟೋರಿ ಅದಾ ಶರ್ಮಾ ಸೀಕ್ರೆಟ್ ರಿವೀಲ್ ಮಾಡಿದ ರಣವಿಕ್ರಮ ಡೈರೆಕ್ಟರ್!
ಈ ತಯಾರಿ ಕೆಡಿ ಚಿತ್ರಕೇನಾ ಅನ್ನುವ ಕುತೂಹಲ ಕೂಡ ವಿಡಿಯೋ ನೋಡಿದವರಲ್ಲಿ ಹುಟ್ಟಿಕೊಂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ