• Home
  • »
  • News
  • »
  • entertainment
  • »
  • Dhruva Sarja: `ಬಹದ್ದೂರು ಗಂಡು’ ಧ್ರುವ ಸರ್ಜಾ `ಭರ್ಜರಿ’ ವರ್ಕೌಟ್​! ಅಬ್ಬಬ್ಬಾ...ಏನ್​ ಬೈಸಿಪ್ಸ್​​ ಗುರೂ

Dhruva Sarja: `ಬಹದ್ದೂರು ಗಂಡು’ ಧ್ರುವ ಸರ್ಜಾ `ಭರ್ಜರಿ’ ವರ್ಕೌಟ್​! ಅಬ್ಬಬ್ಬಾ...ಏನ್​ ಬೈಸಿಪ್ಸ್​​ ಗುರೂ

ಧ್ರುವ ಸರ್ಜಾ

ಧ್ರುವ ಸರ್ಜಾ

‘ಅದ್ಧೂರಿ’ಯಾಗಿ ತೆರೆ ಮೇಲೆ ಎಂಟ್ರಿಯಾಗಿದ್ದ ಧ್ರುವ ಸರ್ಜಾ ‘ಬಹದ್ದೂರ್’​ ಆಗಿ ‘ಭರ್ಜರಿ’ಯಾಗಿ ಸೌಂಡ್(Sound)​ ಮಾಡಿದ್ದರು. ಇದಾದ ಬಳಿಕ ತಮ್ಮ ‘ಪೊಗರು’ ತೋರಿಸಿದ್ದರು. ಈ ನಾಲ್ಕು ಸಿನಿಮಾಗಳು ಧ್ರುವ ಸರ್ಜಾಗೆ ಊಹೆಗೆ ಮೀರಿ ಯಶಸ್ಸು ತಂದುಕೊಡ್ತು.

  • Share this:

ಸ್ಯಾಂಡಲ್​ವುಡ್​ನ ಆ್ಯಕ್ಷನ್​ ಪ್ರಿನ್ಸ್ ​(Action Prince) ಧ್ರುವ ಸರ್ಜಾ (Dhruva Sarja) ಕಡಿಮೆ ಅವಧಿಯಲ್ಲಿ ಹೆಚ್ಚು ಹೆಸರು ಗಳಿಸದವರು. ಅವರು ಮಾಡಿರುವ ಬೆರಳಿಕೆಯ ಚಿತ್ರಗಳೇ ಸೂಪರ್-ಡೂಪರ್ (Super -Duper)​ ಹಿಟ್​ ಆಗಿವೆ. ಕೋಟ್ಯಾಂತರ ಅಭಿಮಾನಿಗಳನ್ನು ಕೇವಲ ನಾಲ್ಕು ಸಿನಿಮಾಗಳಿಂದ ಧ್ರುವ ಸರ್ಜಾ ಸಂಪಾದಿಸಿದ್ದಾರೆ. ‘ಅದ್ಧೂರಿ’ಯಾಗಿ ತೆರೆ ಮೇಲೆ ಎಂಟ್ರಿಯಾಗಿದ್ದ ಧ್ರುವ ಸರ್ಜಾ ‘ಬಹದ್ದೂರ್’​ ಆಗಿ ‘ಭರ್ಜರಿ’ಯಾಗಿ ಸೌಂಡ್ (Sound)​ ಮಾಡಿದ್ದರು. ಇದಾದ ಬಳಿಕ ತಮ್ಮ ‘ಪೊಗರು’ ತೋರಿಸಿದ್ದರು. ಈ ನಾಲ್ಕು ಸಿನಿಮಾಗಳು ಧ್ರುವ ಸರ್ಜಾಗೆ ಊಹೆಗೆ ಮೀರಿ ಯಶಸ್ಸು ತಂದುಕೊಡ್ತು. ಇದೀಗ ಧ್ರುವ ಸರ್ಜಾ ತಮ್ಮ ಮುಂದಿನ ಸಿನಿಮಾ ‘ಮಾರ್ಟಿನ್​’ (Martin) ಅವತಾರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಎಲ್ಲಿರಿಗೂ ಗೊತ್ತೆ ಇದೆ. ‘ಮಾರ್ಟಿನ್​’ ಸಿನಿಮಾದಲ್ಲಿ ಧ್ರುವ ಸರ್ಜಾ ಯೋಧ(Soldier)ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಧ್ರುವ ಸಖತ್​ ವರ್ಕೌಟ್​ ಮಾಡುತ್ತಿದ್ದಾರೆ. 


ಸಖತ್​ ವರ್ಕೌಟ್​ ಮಾಡುತ್ತಿದ್ದಾರೆ ಧ್ರುವ ಸರ್ಜಾ!


ನಾಲ್ಕು ಸಿನಿಮಾಗೆ ಧ್ರುವ ಸರ್ಜಾ ಸ್ಟಾರ್​ ಆಗಿ ನೆಲೆಯೂರಿದ್ದಾರೆ. ಇದೀಗ ಅವರ ಮುಂದಿನ ಸಿನಿಮಾ ನಿರ್ದೇಶಕ ಜೋಗಿ ಪ್ರೇಮ್ ​(Jogi Prem) ಜೊತೆ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ.ಈ ಸಿನಿಮಾದಲ್ಲಿ ಭೂಗತಲೋಕದ ದೊರೆ ಪಾತ್ರದಲ್ಲಿ ಧ್ರುವ ಸರ್ಜಾ ನಟಿಸುತ್ತಾರೆ ಅಂತ ಹೇಳಲಾಗುತ್ತಿದೆ. ಇದಕ್ಕಾಗಿ ಆ್ಯಕ್ಷನ್​ ಪ್ರಿನ್ಸ್​ ಜಿಮ್​ನಲ್ಲಿ ಸಖತ್​ ವರ್ಕೌಟ್​ ಮಾಡುತ್ತಿದ್ದಾರೆ. ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ. ಸಖತ್​ ಬೈಸಿಪ್ಸ್​ ವರ್ಕೌಟ್​ ಮಾಡುತ್ತಿರುವ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಧ್ರುವ ಸರ್ಜಾ ತೋಳು ಕಂಡು ಅಭಿಮಾನಿಗಳು ದಂಗಾಗಿ ಹೋಗಿದ್ದಾರೆ.



ಮೊದಲಿನಿಂದಲೂ ಜಿಮ್​ ಫ್ರಿಕ್​ ಧ್ರುವ ಸರ್ಜಾ!


ಧ್ರುವ ಸರ್ಜಾ ಜಿಮ್​ ಫ್ರಿಕ್​. ಅದ್ದೂರಿ ಸಿನಿಮಾದಲ್ಲೇ ಕಟ್ಟುಮಸ್ತಾದ ದೇಹದ ಮೂಲಕವೇ ಸೌಂಡ್ ಮಾಡಿದ್ದರು. ಸಿನಿಮಾ ರಂಗಕ್ಕೂ ಬರುವ ಮುನ್ನ ಧ್ರುವ ಸರ್ಜಾ ಅವರ ಸಿಕ್ಸ್​​ ಪ್ಯಾಕ್​ ಫೋಟೋಗಳು ಸಿಕ್ಕಾಪಟ್ಟೆ ವೈರಲ್​ ಆಗಿದ್ದವು. ಧ್ರುವ ಸರ್ಜಾ ಅವರ ತೋಳುಗಳಿಗೆ ಅನೇಕರು ಫಿದಾ ಆಗಿದ್ದಾರೆ. ಪ್ರತಿದಿನ ಮಿಸ್​ ಮಾಡದೇ ಧ್ರುವ ಸರ್ಜಾ ಜಿಮ್​ಗೆ ತೆರಳಿ ವರ್ಕೌಟ್​ ಮಾಡುತ್ತಾರೆ. ಈ ಹಿಂದೆಯೂ ಧ್ರುವ ಸರ್ಜಾ ಅವರ ಜಿಮ್​ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಪೊಗರು ಸಿನಿಮಾದ ಚಿತ್ರೀಕರಣದ ವೇಳೆ ಧ್ರುವ ಸಖತ್​ ವರ್ಕೌಟ್​ ಮಾಡುತ್ತಿದ್ದರು.


ಇದನ್ನೂ ಓದಿ: `ಬಂಗಾರದ ಮನುಷ್ಯ’ನಿಗೆ ಬರೋಬ್ಬರಿ 50 ವರ್ಷ.. ಅದೆಷ್ಟೋ ಜನರ ಬದುಕು ಬದಲಿಸಿದ ಅಣ್ಣಾವ್ರ ಸಿನಿಮಾ!


ಪೊಗರು ಸಿನಿಮಾದಲ್ಲಿ ಅಂತಾರಾಷ್ಟ್ರೀಯ ಬಾಡಿಬಿಲ್ಡರ್​​ಗಳು!


ಅಂತಾರಾಷ್ಟ್ರೀಯ ಬಾಡಿ ಬಿಲ್ಡ್​ರ್​ಗಳನ್ನು ಸಿನಿಮಾದಲ್ಲಿ ಬಳಸಿಕೊಂಡಿದ್ದರು. ಅದರಲ್ಲಿ ಕಾಯ್​ ಗ್ರೀನ್​ ಅವರ ಜೊತೆ ಧ್ರುವ ಸರ್ಜಾ ವರ್ಕೌಟ್​ ಮಾಡುವ ವಿಡಿಯೋಗಳು ವೈರಲ್ ಆಗಿದ್ದವು. ಇದೀಗ ಧ್ರುವ ಸರ್ಜಾ ಜಿಮ್​ನಲ್ಲಿ​ ವರ್ಕೌಟ್​ ಮಾಡಿದ್ದಾರೆ. ಹೀಗೆ ಧ್ರುವ ಇಷ್ಟೊಂದು ಬೆವರು ಹರಿಸುತ್ತಿರುವ ಅವರ ಮುಂದಿನ ಸಿನಿಮಾಗಾಗಿ ಎಂಬ ಟಾಕ್​ ಕೂಡ ಶುರುವಾಗಿದೆ.


ಇದನ್ನೂ ಓದಿ: ವ್ಹಾವ್​.. ಸೇಮ್​ ನಮ್​ ಅಪ್ಪುನೇ, ಒಬ್ರಲ್ಲ.. ಇಬ್ಬಿಬ್ರು ಪುನೀತ್ ರಾಜ್​ಕುಮಾರ್​! ನೀವೇ ನೋಡಿ


70ರ ದಶಕದ ಕಥೆಯಲ್ಲಿ ಧ್ರುವ ಸರ್ಜಾ!


‘ಏಕ್ ಲವ್ ಯಾ’ ರಿಲೀಸ್ ಆಗುತ್ತಿದ್ದಂತೆ ಕನ್ನಡ ಸಿನಿಮಾಗಳ ಹೆಡ್ ಆಫೀಸ್ ಗಾಂಧಿನಗರದಲ್ಲಿ ಮತ್ತೊಂದು ಸುದ್ದಿ ಹರಿದಾಡುತ್ತಿದೆ. ಧ್ರುವ ಸರ್ಜಾ ಹಾಗೂ ಪ್ರೇಮ್ ಕಾಂಬಿನೇಷನ್‌ನಲ್ಲಿ ಶೀಘ್ರದಲ್ಲಿಯೇ ಆರಂಭ ಆಗಲಿದೆ. ಅದಕ್ಕೆ ಪ್ರೇಮ್ 70ರ ದಶಕದ ನಗರವನ್ನೇ ಸೃಷ್ಟಿ ಮಾಡುತ್ತಿದ್ದಾರಂತೆ. ಈ ಹಿಂದೆ ಭೂಗತ ಲೋಕದ ಕಥೆ ಹೇಳಿದ್ದರು. ಕರಿಯಾ, ಜೋಗಿ, ಜೋಗಯ್ಯದಲ್ಲಿ ಭೂಗತ ಲೋಕವನ್ನು ಅನಾವರಣ ಮಾಡಿದ್ದ ಪ್ರೇಮ್​ ಮತ್ತೆ ಅಂಥಹದ್ದೇ ಸಿನಿಮಾ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅದರಲ್ಲೂ ಸ್ಯಾಂಡಲ್​ವುಡ್​ ಆ್ಯಕ್ಷನ್​ ಪ್ರಿನ್ಸ್​ ಧ್ರುವ ಸರ್ಜಾ, ಪ್ರೇಮ್ ಸಿನಿಮಾದಲ್ಲಿ ನಟಿಸುತ್ತಿರುವುದು ಮತ್ತಷ್ಟು ಕುತೂಹಲ ಹೆಚ್ಚಿಸಿದೆ.

Published by:ವಾಸುದೇವ್ ಎಂ
First published: