Dhruva Sarja: ಭೂಗತಲೋಕದ ದೊರೆಯಾಗ್ತಿದ್ದಾರೆ ಧ್ರುವ ಸರ್ಜಾ, ಜಿಮ್​ನಲ್ಲಿ ಬಹದ್ದೂರ್​ ಗಂಡು `ಭರ್ಜರಿ’ ವರ್ಕೌಟ್​!

ಈ ಸಿನಿಮಾದಲ್ಲಿ ಭೂಗತಲೋಕದ ದೊರೆ ಪಾತ್ರದಲ್ಲಿ ಧ್ರುವ ಸರ್ಜಾ ನಟಿಸುತ್ತಾರೆ ಅಂತ ಹೇಳಲಾಗುತ್ತಿದೆ. ಇದಕ್ಕಾಗಿ ಆ್ಯಕ್ಷನ್​ ಪ್ರಿನ್ಸ್​ ಜಿಮ್​ನಲ್ಲಿ ಸಖತ್​ ವರ್ಕೌಟ್​ ಮಾಡುತ್ತಿದ್ದಾರೆ. ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ.

ಜಿಮ್​ನಲ್ಲಿ ಧ್ರುವ ಸರ್ಜಾ ಸಖತ್​ ವರ್ಕೌಟ್​

ಜಿಮ್​ನಲ್ಲಿ ಧ್ರುವ ಸರ್ಜಾ ಸಖತ್​ ವರ್ಕೌಟ್​

  • Share this:
ಧ್ರುವ ಸರ್ಜಾ (Dhruva Sarja).. ಕಡಿಮೆ ಸಮಯದಲ್ಲಿ ಹೆಚ್ಚು ಹೆಸರು ಮಾಡಿದ ಯುವ ನಾಯಕ ನಟ. ಬ್ಯಾಗ್ರೌಂಡ್​ ಇದ್ದರೂ ಬಳಸಿಕೊಳ್ಳದೇ ಚಿತ್ರರಂಗಕ್ಕೆ ಕಾಲಿಟ್ಟ ಧ್ರುವ ಸರ್ಜಾ, ‘ಅದ್ಧೂರಿ’ (Addhuri) ಮೂಲಕ ಸ್ಯಾಂಡಲ್​ವುಡ್(Sandalwood)​ನಲ್ಲಿ ನೆಲೆ ಕಂಡುಕೊಂಡರು. ಇದಾದ ಬಳಿಕ ‘ಬಹದ್ದೂರ್’​(Bahaddur), ನಂತರ ‘ಭರ್ಜರಿ’ (Bharjari), ಕೊನೆಯದಾಗಿ ‘ಪೊಗರು’(Pogaru) ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಧ್ರುವ ಸರ್ಜಾ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರ ಡೈಲಾಗ್​ ಡೆಲಿವರಿ, ಮ್ಯಾನರಿಸಂ ಎಲ್ಲವೂ ಫ್ಯಾನ್ಸ್​ಗೆ ಸಖತ್​ ಇಷ್ಟ. ಮಾಡಿದ ನಾಲ್ಕು ಸಿನಿಮಾಗಳು ಸೂಪರ್​ ಹಿಟ್ (Super Hit) ಲಿಸ್ಟ್​ ಸೇರಿವೆ. ನಾಲ್ಕು ಸಿನಿಮಾಗೆ ಧ್ರುವ ಸರ್ಜಾ ಸ್ಟಾರ್​ ಆಗಿ ನೆಲೆಯೂರಿದ್ದಾರೆ. ಇದೀಗ ಅವರ ಮುಂದಿನ ಸಿನಿಮಾ ನಿರ್ದೇಶಕ ಜೋಗಿ ಪ್ರೇಮ್ ​(Jogi Prem) ಜೊತೆ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ.

ಜಿಮ್​ನಲ್ಲಿ ಸಖತ್​ ವರ್ಕೌಟ್​ ಮಾಡ್ತಿದ್ದಾರೆ ಆ್ಯಕ್ಷನ್​ ಪ್ರಿನ್ಸ್​!

ಈ ಸಿನಿಮಾದಲ್ಲಿ ಭೂಗತಲೋಕದ ದೊರೆ ಪಾತ್ರದಲ್ಲಿ ಧ್ರುವ ಸರ್ಜಾ ನಟಿಸುತ್ತಾರೆ ಅಂತ ಹೇಳಲಾಗುತ್ತಿದೆ. ಇದಕ್ಕಾಗಿ ಆ್ಯಕ್ಷನ್​ ಪ್ರಿನ್ಸ್​ ಜಿಮ್​ನಲ್ಲಿ ಸಖತ್​ ವರ್ಕೌಟ್​ ಮಾಡುತ್ತಿದ್ದಾರೆ. ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ. ಮೊದಲಿನಿಂದಲೂ ಧ್ರುವ ಸರ್ಜಾ ಜಿಮ್​ ಫ್ರಿಕ್​. ಅದ್ದೂರಿ ಸಿನಿಮಾದಲ್ಲೇ ಕಟ್ಟುಮಸ್ತಾದ ದೇಹದ ಮೂಲಕವೇ ಸೌಂಡ್ ಮಾಡಿದ್ದರು. ಸಿನಿಮಾ ರಂಗಕ್ಕೂ ಬರುವ ಮುನ್ನ ಧ್ರುವ ಸರ್ಜಾ ಅವರ ಸಿಕ್ಸ್​​ ಪ್ಯಾಕ್​ ಫೋಟೋಗಳು ಸಿಕ್ಕಾಪಟ್ಟೆ ವೈರಲ್​ ಆಗಿದ್ದವು. ಧ್ರುವ ಸರ್ಜಾ ಅವರ ತೋಳುಗಳಿಗೆ ಅನೇಕರು ಫಿದಾ ಆಗಿದ್ದಾರೆ. ಪ್ರತಿದಿನ ಮಿಸ್​ ಮಾಡದೇ ಧ್ರುವ ಸರ್ಜಾ ಜಿಮ್​ಗೆ ತೆರಳಿ ವರ್ಕೌಟ್​ ಮಾಡುತ್ತಾರೆ.ಇದನ್ನೂ ಓದಿ: ಮತ್ತೆ `ಅಂಡರ್​ವರ್ಲ್ಡ್’​​ಗೆ ಹೊರಟ ಜೋಗಿ ಪ್ರೇಮ್​.. 70ರ ದಶಕದ ರಕ್ತಸಿಕ್ತ ಕಥೆಯಲ್ಲಿ ಧ್ರುವ!

150 ಕೆಜಿ ತೂಕದಲ್ಲಿ ಲ್ಯಾಟ್ಸ್​ ವರ್ಕೌಟ್ ಮಾಡಿದ ಧ್ರುವ!

ಈ ಹಿಂದೆಯೂ ಧ್ರುವ ಸರ್ಜಾ ಅವರ ಜಿಮ್​ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಪೊಗರು ಸಿನಿಮಾದ ಚಿತ್ರೀಕರಣದ ವೇಳೆ ಧ್ರುವ ಸಖತ್​ ವರ್ಕೌಟ್​ ಮಾಡುತ್ತಿದ್ದರು. ಅಲ್ಲದೇ ಈ ಸಿನಿಮಾದಲ್ಲಿ ಅಂತಾರಾಷ್ಟ್ರೀಯ ಬಾಡಿ ಬಿಲ್ಡ್​ರ್​ಗಳನ್ನು ಸಿನಿಮಾದಲ್ಲಿ ಬಳಸಿಕೊಂಡಿದ್ದರು. ಅದರಲ್ಲಿ ಕಾಯ್​ ಗ್ರೀನ್​ ಅವರ ಜೊತೆ ಧ್ರುವ ಸರ್ಜಾ ವರ್ಕೌಟ್​ ಮಾಡುವ ವಿಡಿಯೋಗಳು ವೈರಲ್ ಆಗಿದ್ದವು. ಇದೀಗ ಧ್ರುವ ಸರ್ಜಾ ಜಿಮ್​ನಲ್ಲಿ 330 ಎಲ್​ಬಿಎಸ್​ ಅಂದರೆ 150 ಕೆಜೆ ತೂಕವನ್ನು ಲಿಫ್ಟ್ ಮಾಡಿ ಲ್ಯಾಟ್ಸ್​ ವರ್ಕೌಟ್​ ಮಾಡಿದ್ದಾರೆ. ಹೀಗೆ ಧ್ರುವ ಇಷ್ಟೊಂದು ಬೆವರು ಹರಿಸುತ್ತಿರುವ ಅವರ ಮುಂದಿನ ಸಿನಿಮಾಗಾಗಿ ಎಂಬ ಟಾಕ್​ ಕೂಡ ಶುರುವಾಗಿದೆ.

ಇದನ್ನೂ ಓದಿ: ಇಂದಿನಿಂದ ಅಸಲಿ ಆಟ ಶುರು ಅಂದಿದ್ಯಾಕೆ ಕಿಚ್ಚ? ಹಿಂಗ್​​ ಹೇಳಿದ್ದು ಅವ್ರಲ್ಲ.. `ವಿಕ್ರಾಂತ್​ ರೋಣ’!

70ರ ದಶಕದ ಕಥೆಯಲ್ಲಿ ಧ್ರುವ ಸರ್ಜಾ!

‘ಏಕ್ ಲವ್ ಯಾ’ ರಿಲೀಸ್ ಆಗುತ್ತಿದ್ದಂತೆ ಕನ್ನಡ ಸಿನಿಮಾಗಳ ಹೆಡ್ ಆಫೀಸ್ ಗಾಂಧಿನಗರದಲ್ಲಿ ಮತ್ತೊಂದು ಸುದ್ದಿ ಹರಿದಾಡುತ್ತಿದೆ. ಧ್ರುವ ಸರ್ಜಾ ಹಾಗೂ ಪ್ರೇಮ್ ಕಾಂಬಿನೇಷನ್‌ನಲ್ಲಿ ಶೀಘ್ರದಲ್ಲಿಯೇ ಆರಂಭ ಆಗಲಿದೆ. ಅದಕ್ಕೆ ಪ್ರೇಮ್ 70ರ ದಶಕದ ನಗರವನ್ನೇ ಸೃಷ್ಟಿ ಮಾಡುತ್ತಿದ್ದಾರಂತೆ. ಈ ಹಿಂದೆ ಭೂಗತ ಲೋಕದ ಕಥೆ ಹೇಳಿದ್ದರು. ಕರಿಯಾ, ಜೋಗಿ, ಜೋಗಯ್ಯದಲ್ಲಿ ಭೂಗತ ಲೋಕವನ್ನು ಅನಾವರಣ ಮಾಡಿದ್ದ ಪ್ರೇಮ್​ ಮತ್ತೆ ಅಂಥಹದ್ದೇ ಸಿನಿಮಾ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅದರಲ್ಲೂ ಸ್ಯಾಂಡಲ್​ವುಡ್​ ಆ್ಯಕ್ಷನ್​ ಪ್ರಿನ್ಸ್​ ಧ್ರುವ ಸರ್ಜಾ, ಪ್ರೇಮ್ ಸಿನಿಮಾದಲ್ಲಿ ನಟಿಸುತ್ತಿರುವುದು ಮತ್ತಷ್ಟು ಕುತೂಹಲ ಹೆಚ್ಚಿಸಿದೆ.​
Published by:Vasudeva M
First published: