ಬೇಸಿಗೆಯಲ್ಲಿ ದಚ್ಚು-ಕಿಚ್ಚ-ಅಪ್ಪು-ಧ್ರುವ ಸಿನಿಮಾಗಳದ್ದೇ ಕಾರುಬಾರು; ಬಿಡುಗಡೆಗೆ ಸಜ್ಜಾಗಿ ನಿಂತಿವೆ ಸ್ಟಾರ್​ಗಳ​​ ಸಿನಿಮಾ!

ಉರಿ ಉರಿ ಬಿಸಿಲಿಗೂ ಸೆಡ್ಡು ಹೊಡೆಯುವಂತಹ ಹೀಟ್ ಕ್ರಿಯೇಟ್ ಮಾಡೋಕೆ ನಾಲ್ಕು ಬಿಗ್ ಸಿನಿಮಾಗಳು ರೆಡಿಯಾಗಿವೆ.

news18-kannada
Updated:February 23, 2020, 7:56 PM IST
ಬೇಸಿಗೆಯಲ್ಲಿ ದಚ್ಚು-ಕಿಚ್ಚ-ಅಪ್ಪು-ಧ್ರುವ ಸಿನಿಮಾಗಳದ್ದೇ ಕಾರುಬಾರು; ಬಿಡುಗಡೆಗೆ ಸಜ್ಜಾಗಿ ನಿಂತಿವೆ ಸ್ಟಾರ್​ಗಳ​​ ಸಿನಿಮಾ!
ದಚ್ಚು-ಕಿಚ್ಚ-ಅಪ್ಪು-ಧ್ರುವ
  • Share this:
ಈ ಬಾರಿಯ ಸಮ್ಮರ್ ಸ್ಯಾಂಡಲ್‌ವುಡ್ ಪಾಲಿಗೆ ಸ್ಪೆಷಲ್ ಆಗಿರಲಿದೆ. ಅದರಲ್ಲೂ ಸ್ಟಾರ್ ನಟರ ಅಭಿಮಾನಿಗಳಿಗಂತೂ ಹಬ್ಬವೇ ಹಬ್ಬ. ಇನ್ನು ಥಿಯೇಟರ್‌ಗಳಂತೂ ಹಬ್ಬಕ್ಕೆ ವಿಭಿನ್ನವಾಗಿ ಸಿಂಗಾರಗೊಳ್ಳಲಿದೆ. ಹಾಗೆಯೇ ಮೂಲೆ ಸೇರಿದ್ದ ಹೌಸ್‌ಫುಲ್ ಬೋರ್ಡ್​ಗಳು ದೂಳು ಕೊಡವಿ ಎದ್ದು ನಿಲ್ಲಲಿವೆ. ಉರಿ ಉರಿ ಬಿಸಿಲಿಗೂ ಸೆಡ್ಡು ಹೊಡೆಯುವಂತಹ ಹೀಟ್ ಕ್ರಿಯೇಟ್ ಮಾಡೋಕೆ ನಾಲ್ಕು ಬಿಗ್ ಸಿನಿಮಾಗಳು ರೆಡಿಯಾಗಿವೆ. ಒಂದು ಕಡೆ ದರ್ಶನ್. ಇನ್ನೊಂದು ಕಡೆ ಸುದೀಪ್. ಪವರ್‌ಸ್ಟಾರ್ ಪುನೀತ್ ರಾಜ್​ ಕುಮಾರ್​. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಇವರ ಅಬ್ಬರ ಆರ್ಭಟಕ್ಕೆ ಬಾಕ್ಸಾಫೀಸ್‌ಗೆ ನಿಜಕ್ಕೂ ಚಳಿ ಜ್ವರ ಬರಲಿದೆ.

ಸ್ಟಾರ್‌ಗಳ ಸಿನಿಮಾ ಬಂತು ಅಂದರೆ ಅಭಿಮಾನಿಗಳ ನಿರೀಕ್ಷೆಗಳು ಬೇರೆಯೇ ಇರುತ್ತದೆ. ಹಳೇ ರೆಕಾರ್ಡ್​ಗಳಿಗೆ ಕುತ್ತು ಬರಲಿವೆ. ಹೊಸ ರೆಕಾರ್ಡ್​ಗಳು ಹೊಸ ಬಟ್ಟೆ ಹೊಲಿಸಿಕೊಂಡು ಹಾಜರಾಗ್ತಾವೆ. ಈಗಲೂ ಅದೇ ಟ್ರೆಂಡ್ ಇದೆ. ಯಾವ ಸಿನಿಮಾ ಯಾವ ಸಮಯದಲ್ಲಾದರು ಹಳೆಯ ರೆಕಾರ್ಡ್​ಗಳನ್ನು ಮುರಿಯಬಹುದು. ಬೇಸಿಗೆಯಲ್ಲಿ ಧಗ ಧಗಿಸಲು ಮೊದಲಿಗೆ ಸಜ್ಜಾಗಿರೋದು  ಚಾಲೆಂಜಿಂಗ್​ ಸ್ಟಾರ್ ದರ್ಶನ್ ನಟನೆಯ ರಾಬರ್ಟ್.

ತರುಣ್ ಸುಧೀರ್ ನಿರ್ದೇಶನದ ಈ ಸಿನಿಮಾ ಅನೌನ್ಸ್ ಆದಾಗಿನಿಂದ ಸಿಕ್ಕಾಪಟ್ಟೆ ನಿರೀಕ್ಷೆ ಕ್ರಿಯೇಟ್ ಮಾಡಿದೆ. ಕನ್ನಡ ಚಿತ್ರರಂಗದ ಈವರೆಗಿನ ಎಲ್ಲಾ ದಾಖಲೆಗಳನ್ನ ಚಿಂದಿ ಉಡಾಯಿಸಿ, ಹೊಸದೊಂದು ಚರಿತ್ರೆ ಸೃಷ್ಟಿಸೋದು ಖಂಡಿತ ಅನ್ನೋದು ರಾಬರ್ಟ್ ಬಗ್ಗೆ ಎದ್ದಿರೋ ಟಾಕ್.

ಉಮಾಪತಿ ನಿರ್ಮಾಣದಲ್ಲಿ ರಾಬರ್ಟ್ ಸಿನಿಮಾ ದೃಶ್ಯರೂಪ ಪಡ್ಕೊಂಡಿದೆ..50 ಕೋಟಿಗೂ ಅಧಿಕ ಬಜೆಟ್ ಈ ಸಿನಿಮಾಗೆ ವೆಚ್ಚ ಮಾಡಲಾಗಿದೆ ಎನ್ನಲಾಗುತ್ತಿದೆ. ಕ್ವಾಲಿಟಿಯಲ್ಲಿ ತೆಲುಗು, ತಮಿಳು ಚಿತ್ರಗಳಿಗೂ ಸೆಡ್ಡು ಹೊಡೆಯಲಿದೆ ಅನ್ನೋದು ಟೀಸರ್‌ನಲ್ಲಿಯೇ ಜಗಜ್ಜಾಹೀರಾಗಿದೆ.ಅಭಿಮಾನಿಗಳ ಪ್ರೀತಿಯ ಡಿಬಾಸ್​ ಈವರೆಗೂ 52 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಆ ಎಲ್ಲಾ ಸಿನಿಮಾಗಳಿಗಿಂತಲೂ ಈ ಸಿನಿಮಾ ಭಿನ್ನ ವಿಭಿನ್ನವಾಗಿರಲಿದೆಯಂತೆ. ರಾಬರ್ಟ್​ ಸಿನಿಮಾದಲ್ಲಿ  ದರ್ಶನ್ ಲುಕ್​, ಗೆಟಪ್​ ಅಭಿಮಾನಿಗಳಿಗೆ ಹೊಸ ಕಿಕ್ ಕೊಡಲಿದೆಯಂತೆ. ಈ ಸಮ್ಮರ್ ಸೀಸನ್‌ಗೆ ನಿಜವಾದ ಕಿಕ್ ಕೊಡೋದೆ ರಾಬರ್ಟ್ ಸಿದ್ಧವಾಗಿದೆ  ಏಪ್ರಿಲ್ 9 ರಂದು ಅದ್ಧೂರಿಯಾಗಿ ತೆರೆಮೇಲೆ ಎಂಟ್ರಿ ಕೊಡಲಿದೆ.

ರಾಬರ್ಟ್ ಪ್ರಾರಂಭದಿಂದಲೆ ಮೆಗಾ ಸಿನಿಮಾವಾಗಿ ರೂಪುಗೊಲ್ತಿದೆ. ಹೀಗಾಗಿ ಈ ಸಿನಿಮಾ ಮೇಲೆ ಕನ್ನಡಿಗರಿಗೆ ಮಾತ್ರವಲ್ಲ. ಬೇರೆ ಭಾಷೆಯವರಿಗೂ ಒಂದು ಮಟ್ಟದ ನಿರೀಕ್ಷೆ ಹುಟ್ಟಿಕೊಂಡಿದೆ.ಹಾಗೆಯೇ ದರ್ಶನ್ ನಟನೆಯ 50ನೇ ಸಿನಿಮಾ ಕುರುಕ್ಷೇತ್ರ. ಕರ್ನಾಟಕದಾಚೆಗೂ ಈ ಸಿನಿಮಾ ಅಬ್ಬರಿಸಿತ್ತು, ಬೊಬ್ಬಿರಿದಿತ್ತು. ದಾಸ ದರ್ಶನ್ ಹವಾ ಕೇವಲ ಕನ್ನಡ ನೆಲಕ್ಕೆ ಮಾತ್ರವಲ್ಲ. ಕನ್ನಡ ಗಡಿ ಮೀರಿ ಡಿಬಾಸ್ ಹೆಸರು ಸೌಂಡ್ ಮಾಡಬಲ್ಲದು ಅನ್ನೋದನ್ನ ಪ್ರೂವ್ ಮಾಡಿತ್ತು.

ಕುರುಕ್ಷೇತ್ರ ಸಿನಿಮಾ ತೆಲುಗು, ತಮಿಳು, ಮಲಯಾಳಂನಲ್ಲೂ ರಿಲೀಸ್ ಆಗಿತ್ತು. ಎಲ್ಲಾ ಕಡೆ ಅದ್ಭುತ ಪ್ರತಿಕ್ರಿಯೆಯನ್ನೇ ಪಡೆದುಕೊಂಡಿತ್ತು. ಈಗ ಇದೇ ಹಾದಿಯಲ್ಲಿ ರಾಬರ್ಟ್ ಸಾಗಿದ್ದಾನೆ. ಕುರುಕ್ಷೇತ್ರದಲ್ಲಿ ಸಿಕ್ಕ ಯಶಸ್ಸನ್ನೇ ಬಂಡವಾಳ ಮಾಡಿಕೊಂಡು. ಪರಭಾಷೆ ನೆಲದಲ್ಲೂ ಅಬ್ಬರಿಸಲಿದ್ದಾನೆ. ಅದರಂತೆ ಏಪ್ರಿಲ್ 9 ರಂದು ರಾಬರ್ಟ್ ಸಿನಿಮಾ ಕನ್ನಡ ಮಾತ್ರವಲ್ಲದೆ ತೆಲುಗು ಭಾಷೆಯಲ್ಲಿ ಸಹ ಬಿಡುಗಡೆಯಾಗಲಿದೆಯಂತೆ.

ಈ ಸಿನಿಮಾ ಥಿಯೇಟರ್​ನಲ್ಲಿ ಧೂಳೆಬ್ಬಿಸುವ ಹೊತ್ತಿಗೆ  ಮತ್ತೊಂದು ಬಿಗ್ ಸಿನಿಮಾ ಲೈನ್‌ಗೆ ಬರಲಿದೆ. ಅದುವೇ ಕಿಚ್ಚನ ಕೋಟಿಗೊಬ್ಬ-3. ಕೋಟಿಗೊಬ್ಬ-2 ಸಿನಿಮಾದಲ್ಲಿ ಲೋಕಲ್ ಕಿಲಾಡಿಯಾಗಿ ಕಮಾಲ್ ಮಾಡಿದ್ದ ಕಿಚ್ಚ ಸುದೀಪ್. ಒಬ್ರಾ ಇಬ್ರಾ ಅಂತ ಪೊಲೀಸರಿಗೆ ಕಂಫ್ಯೂಸ್ ಮಾಡಿ ಚಳ್ಳೆ ಹಣ್ಣು ತಿನಿಸಿದ್ದರು. ಆ ಮೂಲಕ ನೋಡುಗರಿಗೆ ಕಿಕ್ ಕೊಟ್ಟಿದ್ದರು.ಈಗ ಇಂಟರ್‌ನ್ಯಾಷನಲ್ ಕಿಲಾಡಿಯಾಗಿ ಕರಾಮತ್ತು ತೋರಿಸಲು ಬರಲು ಸಜ್ಜಾಗಿದ್ದಾರೆ. ಏಪ್ರಿಲ್ ಎರಡನೇ ವಾರ ಅಥವಾ ಮೂರನೇ ವಾರ ಕೋಟಿಗೊಬ್ಬನ ಆಗಮನವಾಗೋ ಸಾಧ್ಯತೆ ಇದೆ.

ಈಗಾಗಲೇ ಕೋಟಿಗೊಬ್ಬ-3 ಟೀಸರ್ ರಿಲೀಸಾಗಿದೆ. ಯೂಟ್ಯೂಬ್‌ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಟೀಸರ್ ನೋಡಿದ ವೀಕ್ಷಕರು ಇದು ಮತ್ತೊಂದು ಹಿಟ್ ಸಿನಿಮಾವಾಗೋದರಲ್ಲಿ ಡೌಟೇ ಇಲ್ಲ ಎನ್ನುತ್ತಿದ್ದಾರೆ. ಸೂರಪ್ಪ ಬಾಬು 25 ಕೋಟಿಗೂ ಅಧಿಕ ಮೊತ್ತವನ್ನ ಖರ್ಚು ಮಾಡಿ ಗ್ರಾಂಡ್​ ಆಗಿ ನಿರ್ಮಾಣ ಮಾಡಿದ್ದಾರೆ. ಶಿವಕಾರ್ತಿಕ್ ಎಂಬ ತಮಿಳು ಮೂಲದ ನಿರ್ದೇಶಕ ಆಕ್ಷನ್ ಕಟ್ ಹೇಳಿರೋ ಕೋಟಿಗೊಬ್ಬ-3 ಸ್ಟೈಲೀಶ್​ ಆಗಿ ಮೂಡಿಬಂದಿದೆ ಎನ್ನಲಾಗುತ್ತಿದೆ.

ಕೋಟಿಗೊಬ್ಬನ ಸಿನಿಮಾದ ನಂತರ ನಟೋರಿಯಸ್ ಅವತಾರದಲ್ಲಿ ಧ್ರುವ ಸರ್ಜಾ ಬರೋದು ಸಹ ಫಿಕ್ಸ್ ಆಗಿದೆ. ದಚ್ಚು-ಕಿಚ್ಚನ ಅಬ್ಬರ ಕಮ್ಮಿಯಾಗೋ ಮೊದಲೇ ಆಕ್ಷನ್ ಪ್ರಿನ್ಸ್ ಘರ್ಜಿಸಲಿದ್ದಾರೆ.
ಬ್ಯಾಕ್ ಟು ಬ್ಯಾಕ್ 3 ಹಿಟ್ ಸಿನಿಮಾ ಕೊಟ್ಟು ತನ್ನದೇ ಆದ ಅಭಿಮಾನಿ ವರ್ಗವನ್ನ ಸೃಷ್ಟಿಸಿಕೊಂಡಿರೋ ಧ್ರುವ ಸರ್ಜಾ ‘ಪೊಗರು‘ ಸಿನಿಮಾದಲ್ಲಿ ನಟೋರಿಯಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಪೊಗರು  ಡೈಲಾಗ್ ಟ್ರೇಲರ್‌ನಿಂದ ಕಮಾಲ್ ಮಾಡುತ್ತಿದೆ . ಪ್ರಶಾಂತ್ ರಾಜಪ್ಪ ಬರೆದಿರೋ ಪಂಚಿಗ್​ ಡೈಲಾಗ್​ಗೆ ಧ್ರುವ ಫ್ಯಾನ್ಸ್ ಫಿದಾ ಆಗಿದ್ದಾರೆ.

ಹಿಟ್ ಸಿನಿಮಾಗಳ ಸರದಾರ ನಂದಕಿಶೋರ್ ಪೊಗರುಗೆ ಆಕ್ಷನ್ ಕಟ್ ಹೇಳಿದ್ದಾರೆ. ಧ್ರುವ ಕೆರಿಯರ್‌ನ ಮತ್ತೊಂದು ಬಿಗ್ ಸಿನಿಮಾ ಇದಾಗಲಿದೆ ಎಂಬುದು ಗಾಂಧಿನಗರದಲ್ಲಿ ಎದ್ದಿರೋ ಟಾಕ್.ಬೇಸಿಗೆಯಲ್ಲಿ  ರಿಲೀಸ್ ಆಗಲಿರೋ ಮತ್ತೊಂದು ಬಿಗ್ ಸಿನಿಮಾ ಅಂದರೆ? ಅದು ಯುವರತ್ನ ಸಿನಿಮಾ. ಮೆಗಾ ಕಾಂಬಿನೇಷನ್‌ನ ಈ ಸಿನಿಮಾ ಬಗ್ಗೆ ಸಿಕ್ಕಾಪಟ್ಟೆ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಕೊಂಡಿದೆ.

ಪವರ್‌ಸ್ಟಾರ್ ಪುನೀತ್  ಸಖತ್ ಯಂಗ್ ಆಗಿ ಕಾಣಿಸಿಕೊಂಡಿರುವುದು ಈ ಸಿನಿಮಾದ ಮತ್ತೊಂದು ಹೈಲೈಟ್.  ಯಾವ ಭಾಷೆಗೂ ಡಬ್ ಮಾಡದೆ. ಕನ್ನಡದ ಸಿನಿಮಾವಾಗಿಯೇ ‘ಯುವರತ್ನ‘ ಸಿನಿಮಾವನ್ನ ಜನರಿಗೆ ದರ್ಶನ ಮಾಡಿಸೋಕೆ ಚಿತ್ರತಂಡದ ಯೋಜನೆ ಹಾಕಿದೆ.ಹೀಗಾಗಿ ಕನ್ನಡ ನೆಲದಾಚೆಗೂ ಕನ್ನಡ ಕಹಳೆ ಊದಲಿದ್ದಾನೆ ಯುವರತ್ನ. ರಾಜಕುಮಾರ ಸಿನಿಮಾ 75 ಕೋಟಿಗೂ ಅಧಿಕ ಮೊತ್ತವನ್ನ ಬಾಚಿತ್ತು. ಸ್ಯಾಂಡಲ್​ವುಡ್​ ಇಂಡಸ್ಟ್ರಿಯ  ಎಲ್ಲಾ ದಾಖಲೆಗಳನ್ನ ಪುಡಿ ಮಾಡಿತ್ತು. ‘ಯುವರತ್ನ‘ ಸಹ ಅದೇ ಮ್ಯಾಜಿಕ್ ರಿಪೀಟ್ ಮಾಡೋ ಭರವಸೆಯೊಂದಿಗೆ ಈ ಸಮ್ಮರ್‌ನಲ್ಲಿ ಥಿಯೇಟರ್‌ಗೆ ಬರಲಿದೆ.

ಒಟ್ಟಾರೆ ವರ್ಷದ ಆರಂಭದಲ್ಲಿಯೇ ದಿಯಾ, ಲವ್ ಮಾಕ್‌ಟೇಲ್, ಜೆಂಟಲ್‌ಮನ್‌ನಂತಹ ಅದ್ಭುತ ಸಿನಿಮಾಗಳನ್ನ ಕೊಟ್ಟಿರೋ ಸ್ಯಾಂಡಲ್‌ವುಡ್. ಏಪ್ರಿಕ್​ ಮತ್ತು ಮೇ ತಿಂಗಳಿನಲ್ಲಿ ಧಮಾಕೆಧಾರ್ ಸಿನಿಮಾಗಳನ್ನೇ ಕೊಡಲಿದೆ ಅಂದರೆ ತಪ್ಪಾಗದು
First published:February 23, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading