ನನ್ನ ಬಾಳ ಸಂಗಾತಿಯಾಗುವಿರಾ ಎಂದ ಅಭಿಮಾನಿಗೆ ಸ್ಯಾಂಡಲ್​ವುಡ್​ ನಟಿ ಕೊಟ್ಟ ಉತ್ತರವೇನು ಗೊತ್ತಾ?

ನಟಿ ಅನು ಪ್ರಭಾಕರ್​ ‘ಸಾರಾವಜ್ರ‘ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವು ಲೇಖಕಿ ಸಾರಾ ಅಬೂಬಕ್ಕರ್​ ಅವರ ‘ವಜ್ರಗಳು‘ ಕಾದಂಬರಿ ಆಧಾರಿತ ಸಿನಿಮಾ. ಶ್ವೇತಾ ಶೆಟ್ಟಿ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ.

ನಟಿ ಅನು ಪ್ರಭಾಕರ್

ನಟಿ ಅನು ಪ್ರಭಾಕರ್

 • Share this:
  ನಟಿ ಅನು ಪ್ರಭಾಕರ್​ ಅವರಿಗೆ ಅಭಿಮಾನಿಯೊಬ್ಬ ಮುಂದಿನ ಜನ್ಮದಲ್ಲಿ ನನ್ನ ಬಾಳ ಸಂಗಾತಿಯಾಗುವಿರಾ? ಎಂಬ ಪ್ರಶ್ನೆ ಕೇಳಿದ್ದಾನೆ. ಇದಕ್ಕೆ ಅನು ಪ್ರಭಾಕರ್​ ಒಳ್ಳೆಯ ಸಲಹೆ ನೀಡಿದ್ದಾರೆ. ಏನದು ಗೊತ್ತಾ?.

  ಇತ್ತೀಚೆಗೆ ನಟಿ ಅನು ಪ್ರಭಾಕರ್​ ಸಾಮಾಜಿಕ ತಾಣದಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಿದ್ದಾರೆ. ಅಭಿಮಾನಿಗಳ ಮಾಡಿರುವ ಟ್ವೀಟ್​ಗಳಿಗೆ ಪತ್ರಿಕ್ರಿಯೆ ನೀಡುತ್ತಿರುತ್ತಾರೆ. ಕೆಲವು ದಿನಗಳ ಹಿಂದೆ ಅನು ಪ್ರಭಾಕರ್​ ಬರಹಗಾರ್ತಿ ಸಾರಾ ಅಬೂಬಕ್ಕರ್​  ಜೊತೆಗಿನ ಫೋಟೋ ಅನ್ನು ಟ್ವೀಟ್ಟರ್​ನಲ್ಲಿ ಶೇರ್​ ಮಾಡಿದ್ದರು. ಇದಕ್ಕೆ ಅಭಿಮಾನಿಯೊಬ್ಬ ರಿಟ್ವೀಟ್​ ಮಾಡಿದ್ದಾರೆ.

  ಅಭಿಮಾನಿ ನವೀನ್​ ರಾಜ್​ ಎಂಬಾತ ಮಾಡಿರುವ ರಿಟ್ವೀಟ್​ನಲ್ಲಿ, ಸೂಪರ್​ ಲುಕ್​ ಅನು ನಿಮ್ಮನ್ನ ನೋಡ್ತಾ ಇದ್ರೆ ನನ್ನ ಹಳೇ 1999 ಲವ್​ ಸ್ಟೋರಿ ಮತ್ತೆ ಓಪನ್​ ಆಗುತ್ತೆ.. ಮುಂದಿನ ಜನ್ಮದಲ್ಲಿ ನೀವೆ ನನ್ನ ಬಾಳ ಸಂಗಾತಿಯಾಗಬೇಕು ಅಂತ ನನ್ನ ಆಸೆ ಅದಕ್ಕೆ ನೀವೆನಂತೀರಾ? ಎಂದು ಬರೆದುಕೊಂಡಿದ್ದಾರೆ.

  ಇದಕ್ಕೆ ಉತ್ತರಿಸಿದ ನಟಿ ಅನು ಪ್ರಭಾಕರ್​ ಮೊದಲು ಈ ಲೈಫ್​ನಲ್ಲಿ ಸಂತೋಷವಾಗಿರಿ. ಮುಂದಿನ ಜನ್ಮ ಆಮೇಲೆ ನೋಡೋಣ ಎಂದಿದ್ದಾರೆ.

  ನಟಿ ಅನು ಪ್ರಭಾಕರ್​ ‘ಸಾರಾವಜ್ರ‘ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವು ಲೇಖಕಿ ಸಾರಾ ಅಬೂಬಕ್ಕರ್​ ಅವರ ‘ವಜ್ರಗಳು‘ ಕಾದಂಬರಿ ಆಧಾರಿತ ಸಿನಿಮಾ. ಶ್ವೇತಾ ಶೆಟ್ಟಿ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ.

  ಇದನ್ನೂ ಓದಿ: BSNL: ಪ್ರತಿದಿನ 5GB ಡೇಟಾ ಜೊತೆಗೆ ಅನಿಯಮಿತ ಕರೆ ಸೌಲಭ್ಯ!
  First published: