ಮೊದಲೆಲ್ಲಾ ಕನ್ನಡ ಚಿತ್ರ ಎಂದರೆ ಮೂಗು ಮುರಿಯುತ್ತಿದ್ದವರು ಇದೀಗ ಸ್ಯಾಂಡಲ್ ವುಡ್ ನತ್ತ ತಿರುಗಿ ನೋಡುವಂತಾಗಿದೆ. ಅದರಲ್ಲಿಯೂ ಕಳೆದ ತಿಂಗಳು ತೆರೆಕಂಡ ಕನ್ನಡದ ಕೆಜಿಎಫ್ 2 (KGF 2) ಚಿತ್ರ ಪ್ರಪಂಚದಾದ್ಯಂತ ಸದ್ದು ಮಾಡುವ ಮೂಲಕ ಕನ್ನಡದತ್ತ ಎಲ್ಲರ ಗಮನ ಸೆಳೆದಿದೆ. ಇದೀಗ ಅದೇ ರೀತಿಯಲ್ಲಿ ಎಲ್ಲರ ಗಮನವನ್ನು ಸೆಳೆಯಲು ಮುದ್ದು ಮುದ್ದು ನಾಯಿ ಮರಿಯೊಂದು ಚಾರ್ಲಿ (777 Charlie) ಅವತಾರ ತಾಳಿ ಬರುತ್ತಿದೆ. ಹೌದು. ರಕ್ಷಿತ್ ಶೆಟ್ಟಿ (Rakshit Shetty) ನಟನೆ ಜೊತೆ ನಿರ್ದೇಶನದಲ್ಲೂ ಸೈ ಎನಿಸಿಕೊಂಡವರು. ಸ್ಯಾಂಡಲ್ ವುಡ್(Sandalwood) ನಲ್ಲಿ ತಮ್ಮದೇ ಆದ ಟ್ರೆಂಡ್ (Trend) ಸೃಷ್ಟಿ ಮಾಡಿದವರು ಎಂದರೆ ತಪ್ಪಾಗಲಾರದು.
ಇದೀಗ '777 ಚಾರ್ಲಿ'(777 Charlie)ಗ ಬಂದು ನಿಂತಿದ್ದಾರೆ. ಅವರ ಪ್ರತಿ ಸಿನಿಮಾವೂ ಡಿಫ್ರೆಂಟ್. ಇದೀಗ ಭಾರಿ ನಿರೀಕ್ಷೆ ಮೂಡಿಸಿರುವ ಸಿನಿಮಾ ‘777 ಚಾರ್ಲಿ’ ಜೂನ್ 10ರಂದು ಬಿಡುಗಡೆಯಾಗಲಿದೆ. ಆದರೆ 777 ಚಾರ್ಲಿಗೆ ಟಕ್ಕರ್ ನೀಡಲು ಹಾಲಿವುಡ್ನ ಜುರಾಸಿಕ್ ವರ್ಲ್ಡ್ ಡೊಮೇನಿಯನ್ ಚಿತ್ರವು ಬಿಡುಗಡೆಯಾಗುತ್ತಿದೆ.
ಚಾರ್ಲಿಗೆ ಹಾಲಿವುಡ್ ಟಕ್ಕರ್:
ಹೌದು, ಕನ್ನಡದ 77 ಚಾರ್ಲಿ ಚಿತ್ರವು ಜೂನ್ 10ರಂದು ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಇದರ ನಡುವೆ ಹಾಲಿವುಡ್ನ ಜುರಾಸಿಕ್ ವರ್ಲ್ಡ್ ಡೊಮೇನಿಯನ್ ಚಿತ್ರವು ಬಿಡುಗಡೆಯಾಗುತ್ತಿದೆ. ಈ ಮೂಲಕ ಕನ್ನಡ ಚಿತ್ರಕ್ಕೆ ಹಾಲಿವುಡ್ ಚಿತ್ರ ಟಕ್ಕರ್ ನೀಡುತ್ತಿದೆ. ಈಗಾಗಲೇ 77 ಚಾರ್ಲಿ ಮತ್ತು ಜುರಾಸಿಕ್ ವರ್ಲ್ಡ್ ಡೊಮೇನಿಯನ್ ಚಿತ್ರದ ಟ್ರೈಲರ್ ಗಳು ಬಿಡುಗಡೆ ಆಗಿದ್ದು, ಎರಡೂ ಚಿತ್ರಗಳ ಟ್ರೈಲರ್ ಗೆ ಉತ್ತಮ ಪ್ರತಿಕ್ರೀಯೆ ವ್ಯಕ್ತವಾಗಿದ್ದು, ಡೈನೋಸಾರ್ಗೆ ಕನ್ನಡದ ಮುದ್ದು ಚಾರ್ಲಿ ಫೈಟ್ ನೀಡುತ್ತದೆಯಾ ಎಂದು ಕಾದುನೋಡಬೇಕಿದೆ.
ಇದನ್ನೂ ಓದಿ: Nabha Natesh: ವಜ್ರಕಾಯ ಬೆಡಗಿಯ ಹೊಸ ಲುಕ್, ಸೀರೆಯಲ್ಲಿ ಮಿಂಚಿದ ನಭಾ ನಟೇಶ್
ಜುರಾಸಿಕ್ ವರ್ಲ್ಡ್ ಗೆ ಅಡ್ವಾನ್ಸ್ ಬುಕಿಂಗ್ ಓಪನ್:
ಇನ್ನು, ಜುರಾಸಿಕ್ ವರ್ಲ್ಡ್ ಡೊಮೇನಿಯನ್ ಚಿತ್ರದ ಅಡ್ವಾನ್ಸ್ ಬುಕಿಂಗ್ ಒಂದು ತಿಂಗಳ ಹಿಂದೆಯೇ ಓಪನ್ ಆಗಿದೆ. ಇನರಿಗೂ ಈ ಚಿತ್ರದ ಮೇಲೆ ಹೆಚ್ಚು ನಿರೀಕ್ಷೆಯಿದ್ದ, ಚಾರ್ಲಿಗೆ ಸಖತ್ ಪೈಪೋಟಿ ನೀಡುವಂತೆ ಕಾಣುತ್ತಿದೆ. ಇದಲ್ಲದೇ ಬೆಂಗಳೂರು, ಚೆನ್ನೈ, ಮುಂಬೈ ಸೇರಿದಂತೆ ದೊಡ್ಡ ನಗರಗಳಲ್ಲಿ ಈಗಾಗಲೇ ಅಡ್ವಾನ್ಸ್ ಬುಕಿಂಗ್ ಪ್ರಾರಂಭವಾಗಿದ್ದು, ಈ ಚಿತ್ರವು ಹಿಂದಿ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ.
777 ಚಾರ್ಲಿ ಚಿತ್ರದ ಟ್ರೈಲರ್ ಬಿಡುಗಡೆ:
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ ಈ ಚಿತ್ರದ ಮೇಲೆ ಜನರ ನಿರೀಕ್ಷೆ ಹೆಚ್ಚಿದೆ. ಅದಕ್ಕೆ ಸೂಕ್ತವಾಗುವಂತೆ ಈ ಟ್ರೇಲರ್ ಇದೆ. ಟ್ರೈಲರ್ ಬಿಡುಗಡೆಯಾಗಿ ಭಾರೀ ಸದ್ದು ಮಾಡುತ್ತಿದೆ. ಈಗಾಗಲೇ ಪರಭಾಷ ನಟ, ನಟಿಯರು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ 777 ಚಾರ್ಲಿ ಚಿತ್ರದ ಟ್ರೇಲರ್ ಅನ್ನು ಹಂಚಿಕೊಂಡಿದ್ದು, ರಕ್ಷಿತ್ ಶೆಟ್ಟಿ ಹಾಗೂ ತಂಡಕ್ಕೆ ಶುಭಕೋರಿದ್ದಾರೆ. ಹೀಗಾಗಿ ಹಾಲಿವುಡ್ನ ಡೈನೋಸರ್ ಎದುರು 777 ಚಾರ್ಲಿ ಪೈಪೋಟಿ ನೀಡುವ ಎಲ್ಲಾ ಲಕ್ಷಣಗಳು ದಟ್ಟವಾಗಿದೆ.
ಇದನ್ನೂ ಓದಿ: 777 Charlie Trailer: ಭಾವನೆಗಳೇ ಬದುಕು ಎನ್ನುವ 'ಚಾರ್ಲಿ' - ರಕ್ಷಿತ್ ಸಿನೆಮಾದ ಟ್ರೇಲರ್ ನೋಡಿ ಎಮೋಷನಲ್ ಆದ ಅಭಿಮಾನಿಗಳು
ಜೂನ್ 10ಕ್ಕೆ ಚಿತ್ರ ಬಿಡುಗಡೆ:
ಜೂನ್ 10ಕ್ಕೆ ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಳಂ ಭಾಷೆಯಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ. ಸಂಗೀತ ಶೃಂಗೇರಿ ನಾಯಕಿಯಾಗಿ ನಟಿಸಿದ್ದಾರೆ. ತಮಿಳಿನ ಬಾಬಿ ಸಿಂಹ, ಡ್ಯಾನಿಶ್ ಸೇಠ್ ಸೇರಿದಂತೆ ಹಲವರು ಚಿತ್ರದಲ್ಲಿ ನಟಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ