ಕನ್ನಡದ ಪ್ರತಿಭಾನ್ವಿತ ನಟ ಸಂಚಾರಿ ವಿಜಯ್ ಶನಿವಾರ ರಾತ್ರಿ ಸಂಭವಿಸಿದ ಅಪಘಾತದಿಂದ ಬ್ರೈನ್ ಸ್ಟ್ರೋಕ್ಗೆ ಒಳಗಾಗಿದ್ದಾರೆ. ಮೊತ್ತೊಬ್ಬ ನಟನನ್ನು ರಸ್ತೆ ಅಪಘಾತದಲ್ಲಿ ಕಳೆದುಕೊಳ್ಳುವ ದೌರ್ಭಾಗ್ಯ ಸ್ಯಾಂಡಲ್ವುಡ್ಗೆ ಎದುರಾಗಿದೆ. ಶನಿವಾರ ರಾತ್ರಿ ಜೆಪಿ ನಗರದ ಸ್ನೇಹಿತರ ಮನೆಯಿಂದ ದ್ವಿಚಕ್ರ ವಾಹನದಲ್ಲಿ ಹೊರಟ್ಟಿದ್ದ ಸಂಚಾರಿ ವಿಜಯ್ ಅಪಘಾತಕ್ಕೆ ತುತ್ತಾಗಿದ್ದರು. ಸ್ನೇಹಿತ ಬೈಕ್ ಓಡಿಸುತ್ತಿದ್ದರೆ, ವಿಜಯ್ ಹಿಂಬದಿ ಕುಳಿತು ಸಂಚರಿಸುತ್ತಿದ್ದರು. ತುಂತುರು ಮಳೆ ಕಾರಣ ರಸ್ತೆಯಲ್ಲಿ ಬೈಕ್ ಸ್ಕಿಡ್ ಆಗಿದೆ. ರಸ್ತೆ ಮೇಲೆ ಒಂದಷ್ಟು ದೂರ ಜಾರಿಕೊಂಡ ಹೋದ ಬೈಕ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದುಕೊಂಡಿದೆ.
ಈ ವೇಳೆ ಸಂಚಾರಿ ವಿಜಯ್ ತಲೆಗೆ ಹಾಗೂ ತೊಡೆಗೆ ಗಂಭೀರ ಗಾಯಗಳಾಗಿವೆ. ಮೆದುಳಿನಲ್ಲಿ ರಕ್ತಸ್ರಾವ ಉಂಟಾಗಿ ಪ್ರಾಣಕ್ಕೆ ಕುತ್ತು ತಂದಿದೆ. ಅಪಘಾತದ ಈ ಮಾಹಿತಿ ಕೇಳಿದ ಎಲ್ಲರಿಗೂ ಕಾಡುವ ಪ್ರಶ್ನೆ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ಸಂಚಾರಿ ವಿಜಯ್ ಏಕೆ ಹೆಲ್ಮೆಟ್ ಧರಿಸಿರಲಿಲ್ಲವೆಂದು. ಹೆಲ್ಮೆಟ್ ಧರಿಸಿದ್ದರೆ ಗಾಯದ ತೀವ್ರತೆ ತಗ್ಗುತ್ತಿತ್ತು. ಅಪಘಾತದಿಂದ ತಲೆಗೆ ಪೆಟ್ಟಾಗುವುದು ತಪ್ಪುತ್ತಿತ್ತು. ಬೈಕ್ ಏರುವ ಕೊನೆ ಘಳಿಗೆಯಲ್ಲಿ ವಿಜಯ್ ಮಾಡಿದ ಒಂದು ತಪ್ಪು ಇಂದು ಅವರನ್ನು ದುಸ್ಥಿತಿಗೆ ತಂದು ನಿಲ್ಲಿಸಿದೆ. ರಸ್ತೆ ಅಪಘಾತಗಳ ಬಗ್ಗೆ ಅರಿವು ಮೂಡಿಸುವ ಸೆಲೆಬ್ರೆಟಿಗಳೇ ಸಂಚಾರಿ ನಿಯಮಗಳನ್ನು ಕಡೆಗಣಿಸಿದರಾ ಎಂಬ ಪ್ರಶ್ನೆ ಕಾಡುತ್ತೆ.
ಇನ್ನು ಸಂಚಾರಿ ವಿಜಯ್ಗೆ ಸ್ಟಾರ್ಗಿರಿ ಸಿಕ್ಕಿಲ್ಲವಾದರೂ ಅವರೊಬ್ಬ ರಾಷ್ಟ್ರ ಪ್ರಶಸ್ತಿ ವಿಜೇಯ ನಟ, ಸೆಲೆಬ್ರೆಟಿ. ಕಾರಿನಲ್ಲಿ ಏಕೆ ಸಂಚರಿಸುತ್ತಿರಲಿಲ್ಲ ಎಂಬ ಅನುಮಾನ ಕಾಡುತ್ತೆ. ಇನ್ನು ಲಾಕ್ಡೌನ್ ಮಧ್ಯೆಯೂ ಯಾವ ತುರ್ತು ಕಾರಣಕ್ಕೆ ಹೊರ ಹೋಗಿದ್ದರು ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. ಲಾಕ್ಡೌನ್ ಇದ್ದಿರಿಂದ ಹೆಚ್ಚಾಗಿ ವಾಹನ ಸಂಚಾರವೂ ಇರಲಿಲ್ಲ, ಬೇರೆ ಯಾವ ಗಾಡಿಯಿಂದಲೂ ಇವರ ಸಂಚಾರಕ್ಕೆ ಅಡ್ಡಿಯಾಗಿಲ್ಲ. ಕೇವಲ ಮಳೆಯಿಂದಲೇ ವಾಹನ ಸ್ಕಿಡ್ ಆಯಿತೇ ಎಂದು ಚರ್ಚಿಸಲಾಗುತ್ತಿದೆ. ಜೊತೆಗೆ ಸಂಚಾರಿ ವಿಜಯ್ ಹಾಗೂ ಬೈಕ್ ಚಲಾಯಿಸುತ್ತಿದ್ದ ಸ್ನೇಹಿತ ಮದ್ಯಪಾನ ಮಾಡಿದ್ದರೆ ಎಂಬ ಗುಮಾನಿಯೂ ಅಪಘಾತ ಪ್ರಕರಣದ ಸುತ್ತ ಗಿರಕಿ ಹೊಡೆಯುತ್ತಿದೆ.
ಇದನ್ನೂ ಓದಿ: RIP Sanchari Vijay: ಸಂಚಾರ ನಿಲ್ಲಿಸಿದ ಸ್ಯಾಂಡಲ್ವುಡ್ ನಟ ವಿಜಯ್: ಕಂಬನಿ ಮಿಡಿದ ಕಿಚ್ಚ ಸುದೀಪ್..!
ಅದೇನೇ ಇರಲಿ, ಅಪಘಾತ ಸಂಭವಿಸಿದಾಗ ನಟ ಸಂಚಾರಿ ವಿಜಯ್ ಹೆಲ್ಮೆಟ್ ಧರಿಸದೆ ಇದ್ದಿದ್ದು ಸ್ಪಷ್ಟ. ಒಂದೇ ಒಂದು ನಿರ್ಲಕ್ಷ್ಯ ಮತ್ತೆಂದೂ ತಿದ್ದಿಕೊಳ್ಳಲು ಸಾಧ್ಯವಾಗದಂತ ದೊಡ್ಡ ತಪ್ಪಾಗಿದೆ. ಇದಕ್ಕಾಗಿಯೇ ಸರ್ಕಾರ ಬೈಕ್ ಸವಾರರಿಗೆ, ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಮಾಡಿರುವುದು. ಇಷ್ಟೊಂದು ಸಾವುಗಳ ಬಳಿಕವಾದರೂ ಎಲ್ಲರೂ ಸಂಚಾರಿ ನಿಯಮಗಳನ್ನು ಪಾಲಿಸಬೇಕಿದೆ. ಇದು ಪ್ರತಿಯೊಬ್ಬರಿಗೂ ಮತ್ತೊಂದು ಎಚ್ಚರಿಕೆಯ ಗಂಟೆ ಎಂದರೆ ತಪ್ಪಾಗಲಾರದು.
ಸಂಚಾರಿ ನಾಟಕ ತಂಡದಿಂದ ಗುರುತ್ತಿಸಿಕೊಂಡಿದ್ದ ವಿಜಯ್ ಅವರ ಹೆಸರೊಂದಿಗೆ ಸಂಚಾರಿ ಕೂಡ ಸೇರಿಕೊಂಡಿತ್ತು. ಸಂಚಾರಿ ವಿಜಯ್ ಅವರ ಸಾವಿನ ಗುಟ್ಟು ಅವರ ಹೆಸರಲ್ಲೇ ಇತ್ತು ಎಂದು ಇಂದು ವಿಶ್ಲೇಷಿದರೆ ಎಂಥವರನ್ನು ವಿಷಾದ ಕಾಡುತ್ತದೆ. ಸಂಚಾರಿ ವಿಜಯ್ ಸಂಚಾರಿ ನಿಯಮಗಳನ್ನು ಕಡೆಗಡಿಸದೇ ಇದ್ದಿದ್ದರೆ ಇಂದು ಅವರಿಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ