ಕಿಚ್ಚನ ಅಭಿಮಾನಿಗಳಿಗೆ ಸಿಹಿಸುದ್ದಿ; ಕೋಟಿಗೊಬ್ಬ-3 ಸಿನಿಮಾದ ಬಗ್ಗೆ ಹೊಸ ಸುದ್ದಿ ಕೊಟ್ಟ ನಟ ಸುದೀಪ್

Kotigobba 3: ‘ಕೋಟಿಗೊಬ್ಬ-3‘ ಸಿನಿಮಾದ ಕ್ಲೈಮ್ಯಾಕ್ಸ್​​ ಚಿತ್ರೀಕರಣ ಬೆಂಗಳೂರಿನಲ್ಲಿ ಮುಗಿದಿದೆ. ಸಿನಿಮಾದ ಸಂಭಾಷಣೆ ಸೀನ್​ ಕೂಡ ಮುಗಿದಿದೆಯಂತೆ. ಇನ್ನು ಚಿತ್ರದಲ್ಲಿ ಮೂರು ಹಾಡುಗಳ ಶೂಟಿಂಗ್​ ಬಾಕಿ ಉಳಿದಿದೆ.

news18-kannada
Updated:December 3, 2019, 9:22 PM IST
ಕಿಚ್ಚನ ಅಭಿಮಾನಿಗಳಿಗೆ ಸಿಹಿಸುದ್ದಿ; ಕೋಟಿಗೊಬ್ಬ-3 ಸಿನಿಮಾದ ಬಗ್ಗೆ ಹೊಸ ಸುದ್ದಿ ಕೊಟ್ಟ ನಟ ಸುದೀಪ್
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಮೋಸ್ಟ್​ ಎಕ್ಸ್​ಪೆಕ್ಟೆಡ್ ಚಿತ್ರ ಕೋಟಿಗೊಬ್ಬ-3 ಸಿನಿಮಾ ಏಪ್ರಿಲ್​ನಲ್ಲಿ ತೆರೆಕಾಣಲಿದೆ ಎನ್ನಲಾಗಿದೆ. ಈಗಾಗಲೇ ಕೋಟಿಗೊಬ್ಬ2 ಮೂಲಕ ಕಮಾಲ್ ಮಾಡಿರುವ ಕಿಚ್ಚ ಈ ಬಾರಿ ಏಪ್ರಿಲ್ 10 ರಂದು ಬಾಕ್ಸಾಫೀಸ್ ಬೇಟೆಗೆ ಇಳಿಯಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.
  • Share this:
ಬಾಲಿವುಡ್​ನಲ್ಲಿ ನಟ ಸಲ್ಮಾನ್​ ಖಾನ್​ ಜೊತೆ ‘ದಬಾಂಗ್​-3‘ ಚಿತ್ರದಲ್ಲಿ ತೆರೆ ಹಂಚಿಕೊಳ್ಳುತ್ತಿರುವ ಕಿಚ್ಚ ಸುದೀಪ್​, ಇತ್ತ ‘ಕೋಟಿಗೊಬ್ಬ 3‘ ಸಿನಿಮಾದಲ್ಲೂ ಬ್ಯುಸಿಯಾಗಿದ್ದಾರೆ. ಈ ನಡುವೆ ‘ಕೋಟಿಗೊಬ್ಬ-3‘  ಸಿನಿಮಾದಿಂದ ಹೊಸ ಸುದ್ದಿಯೊಂದು ಹೊರಬಿದ್ದಿದೆ. ಏನದು ಗೊತ್ತಾ?

‘ಕೋಟಿಗೊಬ್ಬ-3‘ ಸಿನಿಮಾದ ಕ್ಲೈಮ್ಯಾಕ್ಸ್​​ ಚಿತ್ರೀಕರಣ ಬೆಂಗಳೂರಿನಲ್ಲಿ ಮುಗಿದಿದೆ. ಸಿನಿಮಾದ ಸಂಭಾಷಣೆ ಸೀನ್​ ಕೂಡ ಮುಗಿದಿದೆಯಂತೆ. ಇನ್ನು ಚಿತ್ರದಲ್ಲಿ ಮೂರು ಹಾಡುಗಳ ಶೂಟಿಂಗ್​ ಬಾಕಿ ಉಳಿದಿದೆ. ಇದರ ಮೊದಲ ಚಿತ್ರೀಕರಣಕ್ಕಾಗಿ ಫಸ್ಟ್​​ ಶೆಡ್ಯೂಲ್​​ಗಾಗಿ ಚಿತ್ರತಂಡ ಈ ವಾರವೇ ಪಾಂಡಿಚೇರಿಯತ್ತ ತೆರಳಲಿದೆ. ಉಳಿದೆರಡು ಹಾಡುಗಳಿಗಾಗಿ ಬೆಂಗಳೂರು ಮತ್ತು ಮುಂಬೈನಲ್ಲಿ ಶೂಟಿಂಗ್​​ ನಡೆಯಲಿದೆ.

ಇನ್ನು ಈ ಚಿತ್ರದ ಕಥೆಯನ್ನು ಸುದೀಪ್​ ಬರೆದಿದ್ದು, ಶಿವ ಕಾರ್ತಿಕ್​ ನಿರ್ದೇಶನ ಮಾಡಿದ್ದಾರೆ. ಶಿವ ಕಾರ್ತಿಕ್ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ.

ನಟ ಸುದೀಪ್​ ನಟನೆಯ ‘ಕೋಟಿಗೊಬ್ಬ-2‘ ಸಿನಿಮಾ 2016ರಲ್ಲಿ ತೆರೆ ಕಂಡು ಹಿಟ್​ ಆಗಿತ್ತು. ಕೆ. ಎಸ್​ ರವಿಕುಮಾರ್​ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ರಾಕ್​ಲೈನ್​ ವೆಂಕಟೇಶ್​​ ಮತ್ತು ಎಂ.ಬಿ ಬಾಬು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದರು. ಇದೀಗ ಕಿಚ್ಚ ಸುಧೀಪ್​ ‘ಕೋಟಿಗೊಬ್ಬ 3‘ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಚಿತ್ರದ ಮೇಲೆ ಬಾರೀ ನಿರೀಕ್ಷೆಯಿದೆ.

ಇದನ್ನೂ ಓದಿ: ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದ ‘ಮರಿ ಟೈಗರ್‘​​ಗೆ ಡಿಬಾಸ್ ಕೊಟ್ಟರು ಭರ್ಜರಿ ಗಿಫ್ಟ್​!

ಇದನ್ನೂ ಓದಿ: ಅಬ್ಬಾ..! ನಟಿ ಮಲೈಕಾ ಅರೋರಾ ಧರಿಸಿರುವ ಬಳೆಯ ಬೆಲೆಯೆಷ್ಟು ಗೊತ್ತಾ?

ಇದನ್ನೂ ಓದಿ:  ಗ್ಯಾಲಕ್ಸಿ ಎಸ್10 ಸ್ಮಾರ್ಟ್​ಫೋನಿಗೆ ಸೆಡ್ಡು ಹೊಡೆಯಲು ಸಿದ್ಧವಾಗಿದೆ ವಿವೋ ‘ವಿ17‘ ಸ್ಮಾರ್ಟ್​ಫೋನ್​​!
First published:December 3, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading