ಕಿರಿಕ್ ಪಾರ್ಟಿ ಚೆಲುವೆ ಸಂಯುಕ್ತಾ ಹೆಗ್ಡೆ (Samyuktha Hegde) ಮಾಲ್ಡೀವ್ಸ್ನಲ್ಲಿದ್ದಾರೆ (Maldives). ಸ್ಯಾಂಡಲ್ವುಡ್ (Sandalwood) ನಟಿ ದ್ವೀಪರಾಷ್ಟ್ರದಲ್ಲಿ ವೆಕೇಷನ್ (Vacation) ಎಂಜಾಯ್ ಮಾಡುತ್ತಿದ್ದಾರೆ. ನಟಿ ಅಲ್ಲಿಂದಲೇ ಫೋಟೋ (Photo) ಹಾಗೂ ವಿಡಿಯೋಗಳನ್ನು ಕೂಡಾ ಶೇರ್ ಮಾಡಿದ್ದಾರೆ. ಸಾಮಾನ್ಯವಾಗಿ ಸಂಯುಕ್ತಾ ಹೆಗ್ಡೆ ಏನು ಮಾಡಿದರೂ ಟ್ರೋಲ್ ಆಗುತ್ತಾರೆ. ಆರಂಭದಲ್ಲಿ ಅವರ ಬೋಲ್ಡ್ ಡ್ರೆಸ್ಸಿಂಗ್ ಸ್ಟೈಲ್ನಿಂದಾಗಿ (Dressing Style) ಟ್ರೋಲ್ ಆದ ನಟಿ ಈಗ ಮತ್ತೊಂದು ವಿಚಾರಕ್ಕಾಗಿ ಟ್ರೋಲ್ ಆಗಿದ್ದಾರೆ. ನಟಿ ಮಾಲ್ಡೀವ್ಸ್ನಲ್ಲಿ (Maldives) ತಮಿಳಿನ ವಸೀಗರ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ.
ಬ್ಲ್ಯಾಕ್ ಶಾರ್ಟ್ಸ್ ಹಾಗೂ ಬ್ಲೂ ಟಾಪ್ ವೇರ್ನಲ್ಲಿ ಸಂಯುಕ್ತಾ ಹೆಗ್ಡೆ ಸೂಪರ್ ಕ್ಯೂಟ್ ಆಗಿ ಕಾಣಿಸಿದ್ದರೂ ಅವರ ಡ್ಯಾನ್ಸ್ ಮಾತ್ರ ನೆಟ್ಟಿಗರಿಗೆ ಇಷ್ಟವಾಗಿಲ್ಲ. ನಟಿ ತಮಿಳಿನಿ ಫೇಮಸ್ ಸಾಂಗ್ ವಸೀಗರ ಹಾಡಿಗೆ ಕಡಲ ತೀರದಲ್ಲಿ ಡ್ಯಾನ್ಸ್ ಮಾಡಿದ್ದಾರೆ. ನಟಿಯ ಡ್ಯಾನ್ಸ್ ನೋಡಿದ ಜನ ಟ್ರೋಲ್ ಮಾಡಿ ಕಮೆಂಟ್ ಮಾಡುತ್ತಿದ್ದಾರೆ.
ವೈರಲ್ ಆಗಿದೆ ವಿಡಿಯೋ
ನಟಿಯ ವೆಕೇಷನ್ ಫೋಟೋಸ್ ಪೋಸ್ಟ್ ವೈರಲ್ ಆಗಿದೆ. ನಟಿಯ ಪೋಸ್ಟ್ಗೆ 82 ಸಾವಿರ ಲೈಕ್ಸ್ ಬಂದಿದೆ. ನಟಿಯ ಡ್ಯಾನ್ಸ್ ನೋಡಿದ ನೆಟ್ಟಿಗರೊಬ್ಬರು ಸೊಳ್ಳೆ ತುಂಬಾ ಕಚ್ಚಿದೆ ಅಂತ ಕಾಣ್ಸುತ್ತೆ ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವು ಡ್ಯಾನ್ಸ್ ಚೆನ್ನಾಗಿದ ಎಂದಿದ್ದಾರೆ. ಇನ್ನೂ ಕೆಲವರು ಫ್ರೇಮ್ ಬಿಟ್ಟು ಹೊರಗೆ ಹೋಗಿದ್ದೀರಿ ಮೇಡಂ, ಫ್ರೇಮ್ ಒಳಗೆ ಬಂದು ಡ್ಯಾನ್ಸ್ ಮಾಡಿ, ಫ್ರೇಮ್ ತುಂಬಾ ಚಿಕ್ಕದಿದೆ ಎಂದಿದ್ದಾರೆ.
ಇನ್ನೂ ಕೆಲವರು ನಾನು ನಿಮ್ಮ ದೊಡ್ಡ ಅಭಿಮಾನಿ. ಚೆನ್ನಾಗಿ ಡ್ಯಾನ್ಸ್ ಮಾಡಿದ್ದೀರಿ ಎಂದು ಕಮೆಂಟ್ ಮಾಡಿದ್ದಾರೆ. ಅಂತೂ ಇಂತೂ ಸಂಯುಕ್ತಾ ತಮ್ಮ ಮಾಲ್ಡೀವ್ಸ್ ಫೋಟೋ ಶೇರ್ ಮಾಡಲು ಹೋಗಿ ಡ್ಯಾನ್ಸ್ನಿಂದ ಟ್ರೋಲ್ ಆಗಿದ್ದಾರೆ.
ಇದನ್ನೂ ಓದಿ: Alia Bhatt: ಮೆಟ್ ಗಾಲಾದಲ್ಲಿ ಹೆಜ್ಜೆ ಹಾಕಲು ಬೆಕ್ಕಿನೊಂದಿಗೆ ತಯಾರಿ ನಡೆಸ್ತಿರೋ ಆಲಿಯಾ
ಸಂಯಕ್ತಾ ತಮ್ಮ ಸಿನಿಮಾ ಜೀವನದಲ್ಲಿ ಕಿರಿಕ್ ಪಾರ್ಟಿ ಮೊದಲ ಸಿನಿಮಾ ಅನ್ನೋದು ಎಲ್ಲರಿಗೂ ಗೊತ್ತಿದೆ. ಈ ಸಿನಿಮಾದಲ್ಲಿ ನಿಜವಾಗ್ಲೂ ಹೀರೋಯಿನ್ ಯಾರೂ ಅಂತ ಏನಾದರೂ ಪ್ರಶ್ನೆ ಬಂದ್ರೆ, ಅಲ್ಲಿ ಸಂಯುಕ್ತಾ ಹೆಗಡೆ ಹೆಸರೇ ಬರುತ್ತದೆ. ಕಿರಿಕ್ ಪಾರ್ಟಿ ಚಿತ್ರದಲ್ಲಿ ಸಂಯುಕ್ತಾನೇ ಹೀರೋಯಿನ್!
ಕಿರಿಕ್ ಪಾರ್ಟಿ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ಹೀರೋಯಿನ್ ಆಗಿಯೇ ಮೆರೆದರು. ಆದರೆ ರಶ್ಮಿಕಾ ಪಾತ್ರದಷ್ಟೇ ಸಂಯುಕ್ತಾ ಪಾತ್ರ ಕೂಡಾ ಹೈಲೈಟ್ ಆಗಿತ್ತು. ಸಿನಿಮಾದಲ್ಲಿ ಆ ಪಾತ್ರ ಕೂಡಾ ಪ್ರಮುಖವಾಗಿತ್ತು.
ಕಿರಿಕ್ ಹುಡುಗಿ ಸಂಯುಕ್ತಾ ಕಿರಿಕ್ ಪಾರ್ಟಿ-2 ದಲ್ಲಿ ಇರ್ತಾರಾ?
ಹಿಂಗಿರೋವಾಗ ಕಿರಿಕ್ ಪಾರ್ಟಿ-2 ಚಿತ್ರದಲ್ಲಿ ಸಂಯುಕ್ತಾ ಹೆಗಡೆ ಇರ್ತಾರಾ? ಅಥವಾ ಇಡೀ ಚಿತ್ರದ ಕಥೆ ಸಂಯುಕ್ತಾ ಹೆಗಡೆ ಮೇಲೆ ಹೋಗುತ್ತದೆಯೆ? ಈ ಎಲ್ಲ ಕುತೂಹಲ ಕೂಡ ಈಗ ಮೂಡಿವೆ.
ಕಿರಿಕ್ ಪಾರ್ಟಿ ಹೀರೋ ರಕ್ಷಿತ್ ಶೆಟ್ಟಿ ತಮ್ಮ ಈ ಕಿರಿಕ್ ಪಾರ್ಟಿ-2 ಚಿತ್ರವನ್ನ ಬೇರೆ ರೀತಿ ತೆಗೆಯೋ ಪ್ಲಾನ್ ಹಾಕಿದ್ದಾರೆ. ಅದರಲ್ಲಿ ಸಂಯುಕ್ತಾ ಹೆಗಡೆ ಇದ್ದರೂ ಇರಬಹುದು ಅನ್ನೋ ಗೆಸ್ಸಿಂಗ್ ಕೂಡ ಇದೆ. ಸದ್ಯ ನಟಿ ಜಾಲಿಯಾಗಿ ಮಾಲ್ಡೀವ್ಸ್ ಸುತ್ತಾಡುತ್ತಾ ಮೇಜರ್ ವೆಕೇಷನ್ ಗೋಲ್ಸ್ ಕೊಡುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ