news18-kannada Updated:September 6, 2020, 2:32 PM IST
ಸಂಯುಕ್ತಾ ಹೆಗಡೆ
ಬೆಂಗಳೂರು (ಸೆಪ್ಟೆಂಬರ್ 6): ನಟಿ ಸಂಯುಕ್ತಾ ಹೆಗಡೆ ಬೆಂಗಳೂರಿನ ಅಗರ ಉದ್ಯಾನದಲ್ಲಿ ಸಂಯುಕ್ತಾ ತಮ್ಮ ಸ್ನೇಹಿತೆಯರೊಂದಿಗೆ ಸ್ಪೋರ್ಟ್ಸ್ ಉಡುಗೆಯಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ ಕಾಂಗ್ರೆಸ್ ನಾಯಕಿ ಕವಿತಾ ರೆಡ್ಡಿ ಅಸಭ್ಯವಾಗಿ ನಡೆದುಕೊಂಡಿದ್ದರು. ಈ ಬಗ್ಗೆ ಅನೇಕರು ಆಕ್ರೋಶ ಕೂಡ ಹೊರ ಹಾಕಿದ್ದರು. ಅಲ್ಲದೆ, ಕವಿತಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹ ಕೇಳಿ ಬರುತ್ತಿದೆ. ಈ ಬೆನ್ನಲ್ಲೇ ನಟಿ ಸಂಯುಕ್ತಾ ಹೆಗಡೆ ದೂರು ದಾಖಲಿಸಿದ್ದು, ಇದನ್ನು ಆಧರಿಸಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಸ್ಟೋರ್ಟ್ಸ್ವೇರ್ ತೊಟ್ಟು ಸಂಯುಕ್ತಾ ಹೆಗಡೆ ಹಾಗೂ ಅವರ ಮಿತ್ರರು ಅಗರ ಉದ್ಯಾನದಲ್ಲಿ ಡಾನ್ಸ್ ಪ್ರಾಕ್ಟಿಸ್ ಮಾಡುತ್ತಿದ್ದರು. ಈ ವೇಳೆ ಪಾರ್ಕ್ ಒಳಗೆ ಬಂದ ಕವಿತಾ ರೆಡ್ಡಿ, ನೀವು ಅಸಭ್ಯ ಉಡುಗೆ ತೊಟ್ಟಿದ್ದೀರಾ ಎಂದು ಆರೋಪಿಸಿ, ನೈತಿಕ ಪೊಲೀಸ್ ಗಿರಿ ತೋರಿಸಿದ್ದರು. ಈ ವೇಳೆ ಸಂಯುಕ್ತಾ ಇನ್ಸ್ಟಾ ಗ್ರಾಂನಲ್ಲಿ ಲೈವ್ ಬರುವ ಮೂಲಕ ತಮ್ಮದೇನು ತಪ್ಪಿಲ್ಲ ಎಂದು ಹೇಳಿಕೊಂಡಿದ್ದರು. ಈ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು, ಕವಿತಾ ರೆಡ್ಡಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿತ್ತು.
ಇದನ್ನೂ ಓದಿ: ಪಾರ್ಕ್ನಲ್ಲಿ ಗಲಾಟೆ ವಿಚಾರ; ನಟಿ ಸಂಯುಕ್ತಾ ಹೆಗಡೆಗೆ ಭಾರೀ ಬೆಂಬಲ
ಈ ಬೆನ್ನಲ್ಲೇ ಸಂಯುಕ್ತಾ ಹೆಗಡೆ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ದೂರನ್ನು ಆಧರಿಸಿ ಪೊಲೀಸರು ಎಫ್ಐಆರ್ ದಾಖಲು ಮಾಡಿಕೊಂರುವುದಾಗಿ ಸಂಯುಕ್ತಾ ತಳಿಸಿದ್ದಾರೆ. ಮಹಿಳೆ ಏನನ್ನು ಧರಿಸುತ್ತಾಳೆ, ಏನು ಮಾಡುತ್ತಾಳೆ, ಎಲ್ಲಿಗೆ ಹೋಗುತ್ತಾಳೆ ಎನ್ನುವುದನ್ನು ಆಧರಿಸಿ ಕಿರುಕುಳ ನೀಡುವುದನ್ನು ನಿಲ್ಲಿಸಬೇಕಾದ ಸಮಯ ಇದು. ನಾನು ದೂರು ದಾಖಲಿಸಿದ್ದು, ಪೊಲೀಸರು ಎಫ್ಐಆರ್ ದಾಖಲು ಮಾಡಿಕೊಂಡಿದ್ದಾರೆ. ಪಾರದರ್ಶಕ ತನಿಖೆ ನಡೆಯಲಿದೆ ಎಂದು ನಾನು ನಂಬಿದ್ದೇನೆ, ಎಂದಿದ್ದಾರೆ ಸಂಯುಕ್ತಾ.
Published by:
Rajesh Duggumane
First published:
September 6, 2020, 2:32 PM IST