ಕಿರಿಕ್​ ಹುಡುಗಿ ಸಂಯುಕ್ತಾ ಸುತ್ತ ಮತ್ತೊಂದು ವಿವಾದ: ಏನಿದು ಹೊಸ ಕಿರಕ್​

news18
Updated:March 13, 2018, 6:03 PM IST
ಕಿರಿಕ್​ ಹುಡುಗಿ ಸಂಯುಕ್ತಾ ಸುತ್ತ ಮತ್ತೊಂದು ವಿವಾದ: ಏನಿದು ಹೊಸ ಕಿರಕ್​
news18
Updated: March 13, 2018, 6:03 PM IST
ನ್ಯೂಸ್ 18 ಕನ್ನಡ

ಕಿರಿಕ್ ಪಾರ್ಟಿ ಅಂತ ಇವರನ್ನ ನೋಡಿನೇ ಬಹುಶಃ ಟೈಟಲ್ ಫಿಕ್ಸ್ ಮಾಡಿದರೇನೋ ಗೊತ್ತಿಲ್ಲ. ಯಾಕಂದರೆ ಈ ಪಾರ್ಟಿ ಯಾವಾಗ್ಲೂ ಮಾಡಿಕೊಳ್ಳೋದೆ ಕಿರಿಕ್ಕು. ಹೌದು ನಾನೀಗ ಯಾರ ಬಗ್ಗೆ ಮಾತನಾಡುತ್ತಿದ್ದೀನಿ ಅಂತ ಈಗಾಗ್ಲೇ ನಿಮಗೆಲ್ಲ ಗೊತ್ತಾಗಿರಬೇಕು. ಹೌದು, ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಸಿನಿಪ್ರಿಯರಿಗೆ ಪರಿಚಯವಾಗಿದ್ದು ಸಂಯುಕ್ತಾ ಹೆಗಡೆ. ಅಲ್ಲಿಂದ ಇದುವರೆಗೂ ಈ ನಟಿ ಹೆಚ್ಚಾಗಿ ಮಾಡಿಕೊಂಡು ಬಂದಿದ್ದು ವಿವಾದಗಳನ್ನೇ ಎಂದರೆ ತಪ್ಪಿಲ್ಲ. ಇದೀಗ ಮತ್ತೆರಡು ಸುದ್ದಿಗಳಿಂದ ಮತ್ತೆ ಟ್ರೋಲ್ ಪೇಜ್‍ಗಳ ಕಣ್ಣರಳಿಸಿದ್ದಾರೆ ಸಂಯುಕ್ತಾ.

ಸಂಯುಕ್ತಾ ಹೆಗಡೆ ಈ ಬೆಡಗಿ ನಿಮಗೆಲ್ಲ ಮುಖ ಪರಿಚಯವಾಗಿದ್ದು ‘ಕಿರಿಕ್ ಪಾರ್ಟಿ’ ಚಿತ್ರದ ಮೂಲಕ. ಪೋರಿ-ಟಪೋರಿ ಪಾತ್ರದ ಮೂಲಕ ಸಂಯುಕ್ತಾ ಮೊದಲ ಎಂಟ್ರಿಯಲ್ಲೇ ಪಡ್ಡೆ ಹುಡುಗರ ನಿದ್ದೆ ಕದ್ದು ಬಿಟ್ಟಿದ್ದರು. ಆನಂತರ ಸಂಯುಕ್ತಾ, ಆಕಾಶವೇ ಅಂಗೈಯಲಿದೆ ಎಂಬಂತೆ ಪೋಸ್ ಕೊಡೋಕೆ ಶುರು ಮಾಡಿದ್ದರು. ಅದಕ್ಕೆ ತಕ್ಕಂತೆ ಅವರನ್ನ ಅರಸಿ ಸಾಲು ಸಾಲು ಚಿತ್ರಗಳ ಆಫರ್‍ಗಳು ಬಂದಿದ್ದವು. ಆದರೆ ಈ ಸಮಯದಲ್ಲಿ ಎಡವಟ್ಟು ಮಾಡಿಕೊಂಡ ಸಂಯುಕ್ತಾ, ತಮಿಳಿನತ್ತ ಮುಖ ಮಾಡುವ ಮನಸ್ಸು ಮಾಡಿದು, ಕನ್ನಡದಲ್ಲಿ ಸಿಕ್ಕ ಅವಕಾಶಗಳನ್ನ ಕೈ ಚೆಲ್ಲಿದ್ದರು.

ಆದರೆ ಸಂಯುಕ್ತಾರ ಎಡವಟ್ಟು ನಿರ್ಧಾರದಿಂದ ಕನ್ನಡ ಚಿತ್ರವೂ ಕೈ ತಪ್ಪಿ ಹೋಯಿತು. ತಮಿಳಿನ ಅವಕಾಶವೂ ಬೇರೆಯವರ ಪಾಲಾಯಿತು. ಹೀಗಾಗಿ ಸಂಯುಕ್ತಾ ಪಾಲಿಗೆ ಬಂದಿದ್ದೇ ಪಂಚಾಮೃತ ಎನ್ನುವಂತಾಯಿತು. ಸದ್ಯ ‘ಕಿರಿಕ್ ಪಾರ್ಟಿ’ ರಿಲೀಸಾಗಿ ಒಂದು ವರ್ಷದ ಮೇಲೆ ಮೂರು ತಿಂಗಳಾಗಿದೆ. ಈ ಗ್ಯಾಪ್‍ನಲ್ಲಿ ಸಂಯುಕ್ತಾ ನಟನೆಯಲ್ಲಿ ಒಂದೇ ಚಿತ್ರ ಬಿಡುಗಡೆಯಾಗಿರೋದು. ಆದರೇನಂತೆ, ಅರ್ಧ ಡಜನ್ ಕಿರಿಕ್‍ಗಳು ಸಂಯುಕ್ತಾ ಹೆಸರ ಜೊತೆ ಸೇರಿಕೊಂಡು ಸಂಯುಕ್ತಾ ಎಂದರೆ ಕಿರಿಕ್ ಬೆಡಗಿ ಎನ್ನುವಂತಾಗಿದೆ.

ಇನ್ನು ಕಿರಿಕ್ ಹುಡುಗಿಯ ಕಿರಿಕ್‍ಗಳ ಕಡೆ ಕಣ್ಣಾಡಿಸೋದಾದರೆ, ‘ಕಾಲೇಜ್‍ಕುಮಾರ’ ಚಿತ್ರದಿಂದ ಇವರ ವಿವಾದದ ಸರಣಿ ಶುರುವಾಗಿದ್ದು. ಈ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದ ಸಂಯುಕ್ತಾ, ಆ ಚಿತ್ರದ ಯಾವುದೇ ಪ್ರಮೋಷನ್ ಹಾಗೂ ಸುದ್ದಿಗೋಷ್ಠಿಗಳಿಗೆ ಭಾಗಿಯಾಗದೇ ನಿರ್ಮಾಪಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದಾದ ಮೇಲೆ ಈ ಕಾಂಟ್ರವರ್ಸಿ ಬೆಡಗಿ ಬಿಗ್‍ಬಾಸ್ ಮನೆಗೂ ಎಂಟ್ರಿ ಕೊಟ್ಟು, ಅಲ್ಲಿಯೂ ಕಿರಿಕ್ ಮಾಡಿ ಕೊಂಡರು. ಸಮೀರ್ ಆಚಾರ್ಯ ಮೇಲೆ ಕೈ ಮಾಡಿ. ವಿವಾದದ ರಾಣಿ ಅಂತಲೇ ಫೇಮ್ ಪಡೆದುಕೊಂಡರು.

ಇದೀಗ ಸಂಯುಕ್ತಾ ಹೆಗಡೆಯ ಲೇಟೆಸ್ಟ್ ಅಪ್​ಡೇಟ್​ ಕೆಳಿದರೆ ನೀವ್ ಶಾಕ್ ಆಗೋದಂತು ಪಕ್ಕಾ. ಸದ್ಯ ಒಂದಲ್ಲಾ ಎರಡೆರಡು ಸುದ್ದಿಯಿಂದ ಟ್ರೋಲ್ ಪೇಜ್‍ಗಳಿಗೆ ಭರ್ಜರಿ ಬಾಡೂಟವಾಗಿದ್ದಾರೆ. ಈ ಹಿಂದೆ ಸಂಯುಕ್ತಾ ರೈಲ್ವೇ ಟ್ರ್ಯಾಕ್ ಬಳಿ ಪೋಸ್ ಕೊಟ್ಟಿದ್ದ ಫೋಟೋ ಸಖತ್ ಟ್ರೋಲ್​ ಆಗಿದ್ದು ಎಲ್ಲರಿಗೂ ಗೊತ್ತು. ಇದೀಗ ಅದೇರೀತಿ ಮತ್ತೊಂದು ಶಾರ್ಟ್ ಡ್ರೆಸ್​ ಅನ್ನು ತೊಟ್ಟು, ಮತ್ತೆ ಟ್ರೋಲ್ ಪೇಜ್‍ಗಳ ಅಡ್ಮಿನ್‍ಗಳನ್ನ ಬ್ಯುಸಿಯಾಗಿಟ್ಟಿದ್ದಾರೆ.

ಸದ್ಯ ಟಾಲಿವುಡ್‍ನ ‘ಕಿರಾಕ್ ಪಾರ್ಟಿ’ ಸಿನಿಮಾದ ಪ್ರಮೋಷನ್‍ನಲ್ಲಿ ಬ್ಯುಸಿಯಾಗಿರೋ ಸಂಯುಕ್ತಾ, ಮತ್ತೊಮ್ಮೆ ತಮ್ಮ ಬೋಲ್ಡ್ ವಿಚಾರದಿಂದ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ.. ಅದೇನಂದರೆ ರೀಸೆಂಟಾಗಿ ಈ ಚಿತ್ರತಂಡದ ಲೈವ್ ಸಂದರ್ಶನವೊಂದು ನಡೆದಿತ್ತು. ಈ ವೇಳೆ ಸಂದರ್ಶಕ ಕೇಳಿದ ಪ್ರಶ್ನೆಗೆ ಸಂಯುಕ್ತಾ ನಾಯಕನನ್ನ ಒಡೆಯೋ ಬದಲು ಕಿಸ್ ಕೊಟ್ಟಿದ್ದಾರೆ. ಇದರ ಝಲಕ್ ಇಲ್ಲಿದೆ ನೋಡಿ.


ಒಟ್ಟಾರೆ ಸಂಯುಕ್ತಾ ಹೆಗ್ಡೆ ವಿವಾದಗಳಿಂದಲೇ ಸಿಕ್ಕಾಪಟ್ಟೆ ಫೇಮ್ ಪಡೆಸುಕೊಳ್ಳುತ್ತಿದ್ದಾರೆ ಅಂದರೆ ತಪ್ಪಾಗೋದಿಲ್ಲ.

 
First published:March 13, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ