ಅಬಾರ್ಷನ್​ ಮಾಡಿಸಿಕೊಂಡಿದ್ರಾ ಸಮಂತಾ..? ಈ ಪ್ರಶ್ನೆಗೆ ಉತ್ತರ ಇಲ್ಲಿದೆ ..!

ಹರಿದಾಡುತ್ತಿರುವ ವದಂತಿಗಳ ಕುರಿತಾಗಿ ಸಮಂತಾ ಅವರು ಸಾಮಾಜಿಕ ಜಾಲತಾಣದ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ. ಅಲ್ಲದೆ ಯಾರು ಈ ಗಾಳಿ ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೋ ಅವರಿಗೆ ಸರಿಯಾಗಿ ಮುಟ್ಟಿ ನೋಡಿಕೊಳ್ಳುವಂತೆ ಪ್ರತಿಕ್ರಿಯಿಸಿದ್ದಾರೆ.

ಸುಳ್ಳು ಸುದ್ದಿ ಹಬ್ಬಿಸಿದವರಿಗೆ ಎಚ್ಚರಿಕೆ ಕೊಟ್ಟ ಸಮಂತಾ

ಸುಳ್ಳು ಸುದ್ದಿ ಹಬ್ಬಿಸಿದವರಿಗೆ ಎಚ್ಚರಿಕೆ ಕೊಟ್ಟ ಸಮಂತಾ

  • Share this:
ನಾಗ ಚೈತನ್ಯ ಹಾಗೂಸಮಂತಾ ಅವರ ವಿಚ್ಛೇದನದ ವಿಚಾರ ಬಹಿರಂಗವಾಗ ಆಗುತ್ತಿದ್ದಂತೆಯೇ ಸಾಕಷ್ಟು ಗಾಳಿ ಸುದ್ದಿಗಳು ಹರಿದಾಡಲಾರಂಭಿಸಿವೆ. ಅದರಲ್ಲೂ ಸಮಂತಾ ಅವರ  ನಡತೆ ಬಗ್ಗೆ ವೈಯಕ್ತಿಕವಾಗಿ ದಾಳಿ ಮಾಡುವ ವದಂತಿಗಳು ಹರಿದಾಡುತ್ತಿವೆ. ಇದು ನಿಜಕ್ಕೂ ನಟಿಯ ಮನಸ್ಸಿಗೆ ನೋವು ಉಂಟು ಮಾಡಿದೆ. ಸಮಂತಾ ಅವರು ನಾಗ ಚೈತನ್ಯ ಅವರಿಂದ ದೂರಾಗುತ್ತಿರುವ ವಿಷಯದಿಂದಾಗಿ ಅವರು  ತುಂಬಾ ನೋವಿನಲ್ಲಿದ್ದಾರೆ. ಹೌದು, ಸಮಂತಾ ಅವರಿಗೆ ತಮ್ಮ ವೈವಾಹಿಕ ಜೀವನದಲ್ಲಿ ಎದುರಾಗಿರುವ ಈ ಸಂಕಷ್ಟದ ಸಮಯವನ್ನು ಎದುರಿಸುವುದು ದೊಡ್ಡ ಸವಾಲಾಗಿದೆ. ಇನ್ನು ಈ ಜೋಡಿಯ ವಿಚ್ಛೇದನದ ವಿಷಯ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಸಾಲದಕ್ಕೆ ನಾಗ ಚೈತನ್ಯ ಹಾಗೂ ಸಮಂತಾ ಅವರ ವೈಯಕ್ತಿಕ ಜೀವನದ ಕುರಿತಾಗಿ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದೆ. ಈ ಕುರಿತಾಗಿದೆ ಈಗ ನಟಿ ಸಮಂತಾ ಅವರು ತಮ್ಮ ಇನ್​ಸ್ಟಾಗ್ರಾಂ ಸ್ಟೋರೀಸ್​ನಲ್ಲಿ ಒಂದು ಪೋಸ್ಟ್​ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ. 

ಅಕ್ಟೋಬರ್ 2 ರಂದು ಸಮಂತಾ ಹಾಗೂ ನಾಗ ಚೈತನ್ಯ ಅವರು ತಮ್ಮ ವಿಚ್ಛೇದನದ ವಿಷಯ ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗಪಡಿಸಿದ್ದರು. ಈ ಸುದ್ದಿ ಅಕ್ಕಿನೇನಿ ಕುಟುಂಬ ಹಾಗೂ ಸಮಂತಾ ಅಭಿಮಾನಿಗಳಿಗೆ ಬರ ಸಿಡಿಲಿನಂತೆ ಬಡಿದಿತ್ತು. ಇದರ ನಡುವೆ ಈಗ ಈ ವಿಚ್ಛೇದನಕ್ಕೆ ಕಾರಣ ಸಮಂತಾ ಅವರೇ ಎನ್ನುವಂತಹ ಗಾಳಿ ಸುದ್ದಿಗಳು ಹರಿದಾಡುತ್ತಿವೆ.

samantha slams rumours of affairs abortion, ಸಮಂತಾ, ನಾಗ ಚೈತನ್ಯ, samantha ruth prabhu and naga chaitanya, samantha ruth prabhu, samantha divorce, samantha akkineni, samantha, nagarjuna, ನಾಗ ಚೈತನ್ಯ ಮತ್ತು ಸಮಂತಾ ವಿಚ್ಛೇದನ, naga chaitanya samantha divorce, kangana ranaut, Samntha Slams who is spreading rumours of affairs and abortion ae,
ಸಮಂತಾ ಅವರ ಇನ್​ಸ್ಟಾಗ್ರಾಂ ಸ್ಟೋರೀಸ್​


ಹರಿದಾಡುತ್ತಿರುವ ವದಂತಿಗಳ ಕುರಿತಾಗಿ ಸಮಂತಾ ಅವರು ಸಾಮಾಜಿಕ ಜಾಲತಾಣದ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ. ಅಲ್ಲದೆ ಯಾರು ಈ ಗಾಳಿ ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೋ ಅವರಿಗೆ ಸರಿಯಾಗಿ ಮುಟ್ಟಿ ನೋಡಿಕೊಳ್ಳುವಂತೆ ಪ್ರತಿಕ್ರಿಯಿಸಿದ್ದಾರೆ. ತಮ್ಮ ಇನ್​ಸ್ಟಾಗ್ರಾಂ ಸ್ಟೋರೀಸ್​ನಲ್ಲಿ ಒಂದು ಪುಟ್ಟ ನೋಟ್​ ಹಂಚಿಕೊಂಡಿರುವ ಸಮಂತಾ, ತನ್ನ ಕಷ್ಟದ ದಿನಗಳಲ್ಲಿ ನೈತಿಕವಾಗಿ ಬೆಂಬಲ ಕೊಟ್ಟು ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

ಇದನ್ನೂ ಓದಿ: ಪುರುಷರು ತಪ್ಪು ಮಾಡಿದರೆ ಏಕೆ ಪ್ರಶ್ನಿಸೋದಿಲ್ಲ ಎಂದ Samantha: ಹೊಸ ಪೋಸ್ಟ್​ ವೈರಲ್​..!

ಇದರ ಜೊತೆಗೆ ತಮ್ಮ ಕುರಿತಾಗಿ ಹಬ್ಬಿಸುತ್ತಿರುವ ವದಂತಿಗಳ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ. ನನಗೆ ಅಫೇರ್ಸ್​ ಇವೆ. ನನಗೆ ಮಕ್ಕಳು ಮಾಡಿಕೊಳ್ಳಲು ಇಷ್ಟವಿರಲಿಲ್ಲ. ನಾನು ಅವಕಾಶವಾದಿ ಎಂಬ ಸುದ್ದಿಗಳು ಹರಿದಾಡುತ್ತಿವೆ. ಇದರ ಜೊತೆಗೆ ಈಗ ಅಬಾರ್ಷನ್​ ಸುದ್ದಿ ಸಹ ಸೇರಿಕೊಂಡಿದೆ. ಇವೆಲ್ಲ ಸುಳ್ಳು ಸುದ್ದಿಗಳು. ಇದರಲ್ಲಿ ಯಾವುದೇ ಹುರುಳಿಲ್ಲ. ಇನ್ನು ಯಾರ ಜೀವನದಲ್ಲಾದರೂ ವಿಚ್ಛೇದನ ಅನ್ನೋದು ನೋವಿನಿಂದ ಕೂಡಿದ ಪ್ರಕ್ರಿಯೆ. ಇಂತಹ ಸಮಯದಲ್ಲಿ ಹೀಗೆಲ್ಲ ವೈಯಕ್ತಿಕವಾಗಿ ನಡತೆ ಬಗ್ಗೆ ದಾಳಿ ಮಾಡುವುದು ಸರಿಯಲ್ಲ. ನಾನು ನಿಮಗೆ ಮಾತು ನೀಡುತ್ತೇನೆ. ಹೀಗೆಲ್ಲ ಸುದ್ದಿ ಹಬ್ಬಿಸಿ ನನ್ನನ್ನು ಒಳಗಿನಿಂದ ಮುರಿಯಬಹುದು ಎಂದು ನೀವು ತಿಳಿಯಬೇಡಿ ಎಂದು ಎಚ್ಚರಿಕೆ ಕೊಟ್ಟಿದ್ದಾರೆ ಸಮಂತಾ.

ಇದನ್ನೂ ಓದಿ: Samantha Akkineni: ಹೊಸ ಅವತಾರದಲ್ಲಿ ಸಮಂತಾ ಅಕ್ಕಿನೇನಿ: ಇಲ್ಲಿವೆ ಸ್ಟನ್ನಿಂಗ್ ಫೋಟೋಗಳು..!

ಸಮಂತಾ ಅವರು ವಿಚ್ಛೇದನದ ವಿಷಯ ಪ್ರಕಟಿಸಿದಾಗಿನಿಂದ ಅವರು ಮಾಡುತ್ತಿರುವ ಪೋಸ್ಟ್​ಗಳು ವೈರಲ್​ ಆಗುತ್ತಿವೆ. ಸಮಂತಾ ಯಾವಾಗ ಏನು ಪೋಸ್ಟ್ ಮಾಡುತ್ತಾರೆ ಅಂತ ನೆಟ್ಟಿಗರು ಕಾಯುತ್ತಿದ್ದಾರೆ. ಮೊನ್ನೆ ರಾತ್ರಿಯಷ್ಟೆ ಸಮಂತಾ ಮಾಡಿರುವ ಪೋಸ್ಟ್​ ಪುರುಷರು ತಪ್ಪು ಮಾಡಿದಾಗ ಏಕೆ ಪ್ರಶ್ನಿಸಬಾರದೆಂಬ ಪೋಸ್ಟ್ ನಿನ್ನೆ ವೈರಲ್​ ಆಗಿತ್ತು. ಇದು ಸಮಂತಾ ಅವರು ನಾಗ ಚೈತನ್ಯ ಅವರನ್ನೇ ಗುರಿಯನ್ನಾಗಿಸಿಕೊಂಡು ಬರೆದಂತೆಯೇ ಇತ್ತು. ಇನ್ನು ವೈವಾಹಿಕ ಜೀವನದಲ್ಲಿ ಬಿರುಕುಂಟಾಗಲು ನಾಗ ಚೈತನ್ಯ ಅವರೇ ಕಾರಣ ಅನ್ನೋ ಮಾತುಗಳು ಕೇಳಿ ಬರುತ್ತಿದ್ದು, ನಾಗ್ ಅವರ ಜೀವನದಲ್ಲಿ ಮತ್ತೋರ್ವ ಮಹಿಳೆ ಇದ್ದಾರೆ ಅನ್ನೋ ಸುದ್ದಿಗಳೂ ಕೇಳಿ ಬರುತ್ತಿವೆ.
Published by:Anitha E
First published: