Sameera Reddy: ಮಕ್ಕಳ ಜೊತೆ ಸೇರಿ ಮನೆಯಲ್ಲೇ ರಾಖಿ ಮಾಡುವ ವಿಡಿಯೋ ಪೋಸ್ಟ್​ ಮಾಡಿದ ಸಮೀರಾ ರೆಡ್ಡಿ..!

ಮಕ್ಕಳ ತುಂಟಾಟದ ವಿಡಿಯೋಗಳ ಜೊತೆಗೆ ತಮ್ಮ ಫೋಟೋಶೂಟ್​ಗಳ ಫೋಟೋಗಳನ್ನೂ ಹಂಚಿಕೊಳ್ಳುತ್ತಿರುತ್ತಾರೆ ಸಮೀರಾ ರೆಡ್ಡಿ. ಈಗಲೂ ಸಹ ಒಂದು ಉಪಯುಕ್ತ ವಿಡಿಯೋ ಪೋಸ್ಟ್​ ಮಾಡಿದ್ದಾರೆ ಈ ನಟಿ.

Anitha E | news18-kannada
Updated:July 31, 2020, 7:19 AM IST
Sameera Reddy: ಮಕ್ಕಳ ಜೊತೆ ಸೇರಿ ಮನೆಯಲ್ಲೇ ರಾಖಿ ಮಾಡುವ ವಿಡಿಯೋ ಪೋಸ್ಟ್​ ಮಾಡಿದ ಸಮೀರಾ ರೆಡ್ಡಿ..!
ಮಕ್ಕಳೊಂದಿಗೆ ಸಮೀರಾ ರೆಡ್ಡಿ
  • Share this:
ಟಾಲಿವುಡ್ ಹಾಗೂ ಬಾಲಿವುಡ್​ನಲ್ಲಿ ಗ್ಲಾಮರಸ್​ ಪಾತ್ರಗಳ ಜೊತೆಗೆ ಅಭಿನಯದಿಂದಲೂ ಸಿನಿಪ್ರಿಯರ ಮನಸ್ಸು ಗೆದ್ದಿದ್ದಾರೆ ನಟಿ ಸಮೀರಾ ರೆಡ್ಡಿ. ಸದ್ಯ ಮನೆ... ಮಕ್ಕಳು... ಸಂಸಾರ ಅಂತ ಕುಟುಂಬಕ್ಕೆ ಸಮಯ ಕೊಡುತ್ತಿದ್ದಾರೆ.  ಇಬ್ಬರು ಮಕ್ಕಳ ಲಾಲನೆ ಪಾಲನೆ ಮಾಡುತ್ತಾ ತಾಯ್ತನದ ಸುಖ ಅನುಭವಿಸುತ್ತಿದ್ದಾರೆ.

ಮನೆಯಲ್ಲಿ ಮಕ್ಕಳೊಂದಿಗೆ ಆಡುತ್ತಾ ಕಾಲ ಕಳೆಯುತ್ತಿರುವ ಸಮೀರಾ, ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಸಖತ್​ ಸಕ್ರಿಯರಾಗಿರುತ್ತಾರೆ. ತಮ್ಮ ಹಾಗೂ ಮಕ್ಕಳ ವಿಡಿಯೋ ಮತ್ತು ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಮಕ್ಕಳ ತುಂಟಾಟದ ವಿಡಿಯೋಗಳ ಜೊತೆಗೆ ತಮ್ಮ ಫೋಟೋಶೂಟ್​ಗಳ ಫೋಟೋಗಳನ್ನೂ ಹಂಚಿಕೊಳ್ಳುತ್ತಿರುತ್ತಾರೆ ಸಮೀರಾ ರೆಡ್ಡಿ. ಈಗಲೂ ಸಹ ಒಂದು ಉಪಯುಕ್ತ ವಿಡಿಯೋ ಪೋಸ್ಟ್​ ಮಾಡಿದ್ದಾರೆ ಈ ನಟಿ.ಇನ್ನೇನು ರಕ್ಷಾ ಬಂಧನ ಹಬ್ಬ ಬಂತು. ಎಲ್ಲ ಸರಿಯಾಗಿದ್ದರೆ, ಇಷ್ಟೊತ್ತಿಗೆ ನಾನಾ ರೀತಿಯ ರಾಖಿಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದವು. ಆದರೆ ಲಾಕ್​ಡೌನ್​ನಿಂದಾಗಿ ಎಲ್ಲದಕ್ಕೂ ಬ್ರೇಕ್​ ಬಿದ್ದಿದೆ. ಈ ಸಲ ರಾಖಿ ಹಬ್ಬಕ್ಕೆ ಮನೆಯಲ್ಲೇ ಕುಳಿತು ಹೇಗೆ ರಾಖಿ ಸಿದ್ಧಪಡಿಸಬಹುದು ಎಂದು ವಿಡಿಯೋ ಮಾಡಿ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಸಮೀರಾ ಅವರ ಸಂಬಂಧಿಯೊಬ್ಬರು ಮನೆಯಲ್ಲಿ ಸುಲಭವಾಗಿ ಹೇಗೆ ರಾಖಿ ಮಾಡಬಹುದು ಎಂದು ತೋರಿಸಿದ್ದಾರೆ. ಈ ಕೆಲಸ ಮಾಡುವಾಗ ಸಮೀರಾ ರೆಡ್ಡಿ ಅವರ ಮಕ್ಕಳೂ ಸಹಾಯ ಮಾಡಿದ್ದಾರೆ.
Published by: Anitha E
First published: July 31, 2020, 7:16 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading