ಪುನೀತ್ ರಾಜ್ಕುಮಾರ್ (Puneeth Rajkumar) ಅಭಿಮಾನಿಗಳ (Fans) ಆರಾಧ್ಯ ದೈವ. ಅವರೆಂದರೆ ಇಷ್ಟ ಮಾತ್ರವಲ್ಲ, ಹಲವಾರು ಜನರಿಗೆ ಮಾದರಿ ಕೂಡ ಹೌದು. ಅವರು ಅಭಿಮಾನಿಗಳನ್ನು ಬಿಟ್ಟು ಹೋಗಿರುವುದನ್ನ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವರಿಲ್ಲ ಎಂಬುದನ್ನು ಈಗಲೂ ಯಾರೂ ನಂಬುತ್ತಿಲ್ಲ. ಇದೀಗ ಟಾಲಿವುಡ್ ನಟರೊಬ್ಬರು ಪುನೀತ್ ರಾಜ್ಕುಮಾರ್ ನನಗೆ ಮಾದರಿ ಎಂದಿದ್ದಾರೆ. ಟಾಲಿವುಡ್ ಸೂಪರ್ ಸ್ಟಾರ್ ನಾಗಚೈತನ್ಯ (Naga Chaitanya) ಅವರಿಗೆ ಪುನೀತ್ ರಾಜ್ಕುಮಾರ್ ಮಾದರಿಯಂತೆ.
ನಾನು ಅಪ್ಪು ದೊಡ್ಡ ಫ್ಯಾನ್ ಅಂದ ನಟ
ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿದ್ದ ನಾಗಚೈತನ್ಯ ಕನ್ನಡ ಸಿನಿಮಾ ಬಗ್ಗೆ ಮಾತನಾಡಿದ್ದು, ಹೀರೋಗಳನ್ನು ಹಾಡಿ ಹೊಗಳಿದ್ದಾರೆ. ಅದರಲ್ಲೂ ನಾನು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ದೊಡ್ಡ ಫ್ಯಾನ್, ಅವರೇ ನನಗೆ ಮಾದರಿ ಎಂದಿದ್ದಾರೆ. ಅಲ್ಲದೇ ಕನ್ನಡ ಸಿನಿಮಾಗಳ ಬಗ್ಗೆ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಕ್ಟೋಬರ್ನಲ್ಲಿ ಅಕಾಲಿಕವಾಗಿ ಪುನೀತ್ ರಾಜ್ಕುಮಾರ್ ನಿಧನ ಕರ್ನಾಟಕದ ಜನರನ್ನು ನೋವಿನಲ್ಲಿ ಮುಳುಗಿಸಿತ್ತು. ಪ್ರತಿದಿನ ಅವರನ್ನು ನೆನೆಯದ ದಿನವಿಲ್ಲ. ಸಿನಿಮಾ ರಂಗ ಮಾತ್ರವಲ್ಲದೇ ಎಲ್ಲೆಡೆ ಅವರ ನೆನಪು ಚಿರಕಾಲ ಎಂಬುದು ಅಭಿಮಾನಿಗಳ ಮಾತು.
ಇದನ್ನೂ ಓದಿ: ಆಲಿಯಾ ಭಟ್ ಗರ್ಭಿಣಿ, ಶುಭ ಸುದ್ದಿ ಹಂಚಿಕೊಂಡ ದಂಪತಿ
ಇನ್ನು ನಾಗ ಚೈತನ್ಯ ಸಮಂತಾ ಜೊತೆ ಡೈವೋರ್ಸ್ ಆದ ನಂತರ ಹೆಚ್ಚಾಗಿ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿಲ್ಲ. ಕೇವಲ ಸಿನಿಮಾ ಪ್ರಚಾರ ಎಂದು ಬ್ಯುಸಿ ಇದ್ದಾರೆ. ಆದರೆ ಇತ್ತೀಚೆಗೆ ಸ್ವಲ್ಪ ಸುದ್ದಿಯಲ್ಲಿದ್ದು ಅದು ನಟಿ ಶೋಭಿತಾ ವಿಚಾರಕ್ಕೆ. ನಾಗ ಚೈತನ್ಯ ನಟಿ ಶೋಭಿತಾ ಧುಲಿಪಾಲ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ನಾಗ ಚೈತನ್ಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ನಾಗ ಚೈತನ್ಯ ಮತ್ತು ಸಮಂತಾ ಬೇರ್ಪಟ್ಟಾಗಿನಿಂದಲೂ ಅವರ ಬಗ್ಗೆ ನಾನಾ ರೀತಿಯ ಸುದ್ದಿಗಳು ಹರಿದಾಡುತ್ತಿರುವುದು ಗೊತ್ತೇ ಇದೆ. ನಾಗ ಚೈತನ್ಯ ಹಾಗೂ ನಟಿ ಶೋಭಿತಾ ದುಲ್ಲಿಪಾಲ ನಡುವೆ ಪ್ರೇಮ ಸಂಬಂಧವಿದೆ ಎಂಬ ಮಾತು ಹೊರಬಿದ್ದಿದೆ. ಸದ್ಯ ಇವರಿಬ್ಬರು ಲಿವಿಂಗ್ ರಿಲೇಶನ್ ಶಿಪ್ ನಲ್ಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅಲ್ಲದೇ ವಿಚಾರವನ್ನು ನಾಗ ಚೈತನ್ಯ ಅಭಿಮಾನಿಗಳು ಅಲ್ಲಗೆಳೆದಿದ್ದಾರೆ. ಆದರೆ ಕೆಲ ನೆಟ್ಟಿಗರು ಮಾತ್ರ ಇದು ಸಮಂತಾ ಹರಡಿರುವ ಸುದ್ದಿ ಎಂದು, ಸಮಂತಾ ಮೇಲೆ ಗೂಬೆ ಕೂರಿಸಿದ್ದು, ಇದಕ್ಕೆ ಸ್ಯಾಮ್ ಖಾರವಾಗಿ ಪ್ರತಿಕ್ರಿಯೆ ನೀಡಿದ್ದರು.
ಇದನ್ನೂ ಓದಿ: ಟಾಲಿವುಡ್ನಲ್ಲಿ ಅದೃಷ್ಟ ಪರೀಕ್ಷೆಗಿಳಿದ ಐಶ್ವರ್ಯಾ, ಅರ್ಜುನ್ ಸರ್ಜಾ ಮಗಳಿಗೆ ಶುಭ ಹಾರೈಸಿದ ಪವನ್ ಕಲ್ಯಾಣ್
ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ನಾಗ ಚೈತನ್ಯ
ನಾಗ ಚೈತನ್ಯ ಸಿನಿಮಾ ವಿಚಾರಕ್ಕೆ ಬಂದರೆ ಇತ್ತೀಚೆಗಷ್ಟೇ ಥ್ಯಾಂಕ್ಯೂ ಟೀಸರ್ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಆದರೆ, ಚಿತ್ರದ ಬಿಡುಗಡೆಯನ್ನು ಮತ್ತೊಮ್ಮೆ ಮುಂದೂಡಲಾಗಿದೆ ಎಂದು ಚಿತ್ರತಂಡ ಪ್ರಕಟಿಸಿದೆ. ಈ ಹಿಂದೆ ಚಿತ್ರವು ಜುಲೈ 8 ರಂದು ಬಿಡುಗಡೆಯಾಗಲಿದೆ ಎಂದು ಘೋಷಿಸಲಾಗಿತ್ತು. ರೀ ರೆಕಾರ್ಡಿಂಗ್ ಇನ್ನೂ ಮುಗಿಯದಿರುವುದು ಇದಕ್ಕೆ ಪ್ರಮುಖ ಕಾರಣವಂತೆ. ಇದರಿಂದ ಸಿನಿಮಾ ಮುಂದೂಡಲ್ಪಟ್ಟಿದೆ ಎನ್ನಲಾಗಿದೆ. ತಂಡವು ಹೊಸ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಈ ಸಿನಿಮಾ ಜುಲೈ 22, 2022 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಥಮನ್ ಸಂಗೀತ ನೀಡಿರುವ ಈ ಚಿತ್ರದಲ್ಲಿ ರಾಶಿ ಖನ್ನಾ, ಮಾಳವಿಕಾ ನಾಯರ್ ಮತ್ತು ಅವಿಕಾ ಗೋರ್ ನಾಯಕಿಯರಾಗಿ ನಟಿಸಿದ್ದಾರೆ. ನಾಗ ಚೈತನ್ಯ ಕಳೆದ ವರ್ಷ ‘ಲವ್ ಸ್ಟೋರಿ’ ಸಿನಿಮಾ ಮೂಲಕ ಉತ್ತಮ ಯಶಸ್ಸು ಕಂಡಿದ್ದರು. ಇತ್ತೀಚೆಗಷ್ಟೇ ತಂದೆ ನಾಗಾರ್ಜುನ ಜೊತೆ ಬಂಗಾರರಾಜು ಸಿನಿಮಾ ಮಾಡಿದ್ದರು. ಚಿತ್ರವೂ ಉತ್ತಮ ಯಶಸ್ಸನ್ನು ಕಂಡಿತು. 'ಮಜಿಲಿ' ನಂತರ ಅವರು 'ಲವ್ ಸ್ಟೋರಿ' ಮತ್ತು 'ಬಂಗರಾಜು' ನಂತಹ ಬ್ಯಾಕ್-ಟು-ಬ್ಯಾಕ್ ಯಶಸ್ಸಿನೊಂದಿಗೆ ತಮ್ಮ ವೃತ್ತಿಜೀವನದಲ್ಲಿ ಫುಲ್ ಬ್ಯುಸಿ ಇದ್ದು, ವೈಯಕ್ತಿಕ ಜೀವನದ ಬಗ್ಗೆ ನಾಗಚೈತನ್ಯ ಪ್ರತಿಕ್ರಿಯೆ ನೀಡಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ