ಸಾಮಾಜಿಕ ಜಾಲತಾಣದ ಖಾತೆಯ ಹೆಸರು ಬದಲಾಯಿಸಿಕೊಂಡ ಸಮಂತಾ ಅಕ್ಕಿನೇನಿ

ಈಗ ಸಮಂತಾ ಅಕ್ಕಿನೇನಿ ಸಹ ತಮ್ಮ ಟ್ವಿಟರ್​ ಖಾತೆಯ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಮಜಿಲಿ ಸಿನಿಮಾದಲ್ಲಿನ ಅಭಿನಯದಿಂದಾಗಿ ಸದ್ದು ಮಾಡುತ್ತಿದ್ದ ನಟಿ ಸಮಂತಾ ಈಗ ಟ್ವಿಟರ್ ಖಾತೆಯ ಹೆಸರು ಬದಲಾಯಿಸಿಕೊಳ್ಳುವ ಮೂಲಕ ಮತ್ತೊಮ್ಮೆ ಸದ್ದು ಮಾಡುತ್ತಿದ್ದಾರೆ.

Anitha E | news18
Updated:June 1, 2019, 4:38 PM IST
ಸಾಮಾಜಿಕ ಜಾಲತಾಣದ ಖಾತೆಯ ಹೆಸರು ಬದಲಾಯಿಸಿಕೊಂಡ ಸಮಂತಾ ಅಕ್ಕಿನೇನಿ
ನಟಿ ಬೇಬಿ ಸಮಂತಾ ಪ್ರಭು
  • News18
  • Last Updated: June 1, 2019, 4:38 PM IST
  • Share this:
ಸಿನಿಮಾಗಾಗಿ ಸ್ಟಾರ್​ಗಳು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳ ಹೆಸರುಗಳನ್ನು ಬದಲಾಯಿಸಿಕೊಳ್ಳುವುದು ಟ್ರೆಂಡ್​ ಆಗಿತ್ತು. ಆಗ ಕರೀನಾ ಕಪೂರ್​, ವರುಣ್​ ಧವನ್​ ಸೇರಿದಂತೆ ಸಾಕಷ್ಟು ಮಂದಿ ಸಿನಿಮಾ ಪ್ರಚಾರಕ್ಕಾಗಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳ ಹೆಸರನ್ನು ಬದಲಾಯಿಸಿಕೊಳ್ಳುವ ಮೂಲಕ ಟ್ರೆಂಡ್​ ಹುಟ್ಟು ಹಾಕಿದ್ದರು.

ಈಗ ಸಮಂತಾ ಅಕ್ಕಿನೇನಿ ಸಹ ತಮ್ಮ ಟ್ವಿಟರ್​ ಖಾತೆಯ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಅವರೂ ಸಹ ತಮ್ಮ ಹೊಸ ಸಿನಿಮಾ 'ಓಹ್​ ಬೇಬಿ'ಗಾಗಿ ಟ್ವಿಟರ್​ ಖಾತೆಯ ಹೆಸರನ್ನು ಬೇಬಿ ಅಕ್ಕಿನೇನಿ ಎಂದು ಬದಲಾಯಿಸಿಕೊಂಡಿದ್ದಾರೆ.ಇದನ್ನೂ ಓದಿ: ರಶ್ಮಿಕಾ ಮಂದಣ್ಣ ವಿರುದ್ಧ ಪ್ರಿನ್ಸ್​ ಮಹೇಶ್​ ಬಾಬು ಅಭಿಮಾನಿಗಳು ಗರಂ

ನಿನ್ನೆಯಷ್ಟೆ 'ಓಹ್​ ಬೇಬಿ' ಚಿತ್ರದ ಲಿರಿಕಲ್​ ಹಾಡು ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ಗಿಟ್ಟಿಸಿಕೊಳ್ಳುತ್ತಿದೆ.ಹಾಡನ್ನ ನೋಡಿದರೆ ಇದೊಂದು ಕಾಮಿಡಿ ಜಾನರ್​ ಇರುವ ಸಿನಿಮಾ ಆಗಿದ್ದು, ಇದರಲ್ಲಿ ಸಮಂತಾ ಸಖತ್ತಾಗಿ ಕಾಣಿಸಿಕೊಂಡಿದ್ದಾರೆ. ನಂದಿನಿ ರೆಡ್ಡಿ ನಿರ್ದೇಶನದ ಈ ಚಿತ್ರದಲ್ಲಿ ನಾಗ ಶೌರ್ಯ ನಾಯಕನಾಗಿ ಅಭಿನಯಿಸಿದ್ದಾರೆ.

Photos: 'ಡ್ರಾಮಾ' ಸಿನಿಮಾದಲ್ಲಿ ಅಂಬಿ-ಯೋಗರಾಜ್​ ಭಟ್​ ಜೋಡಿಯ ಮೋಡಿ..!


First published:June 1, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading