ರಿವೀಲ್​ ಆಯ್ತು Kaathu Vaakula Rendu Kaadhal ಚಿತ್ರದಲ್ಲಿ Samantha ಅಭಿನಯದ ಪಾತ್ರದ ಫಸ್ಟ್​ ಲುಕ್

ಕಾತು ವಾಕುಲ ರೆಂಡು ಕಾದಲ್ ಸಿನಿಮಾವು ತಮಿಳು ಮತ್ತು ತೆಲುಗು ಎರಡೂ ಭಾಷೆಗಳಲ್ಲೂ ಬಿಡುಗಡೆ ಆಗಲಿದೆ. ವರದಿಗಳ ಪ್ರಕಾರ, ಸಿನಿಮಾದ ಚಿತ್ರೀಕರಣವು ಈಗಾಗಲೇ ಪೂರ್ಣಗೊಂಡಿದೆ ಮತ್ತು ನಿರ್ಮಾಪಕರು ಅದಕ್ಕೆ ಸಂಬಂಧಿಸಿದ ಇನ್ನುಳಿದ ಕೆಲಸಗಳಲ್ಲಿ ನಿರತರಾಗಿದ್ದಾರೆ.

ಕಾತು ವಾಕುಲ ರೆಂಡು ಕಾದಲ್ ಸಿನಿಮಾದಲ್ಲಿ ನಟಿ ಸಮಂತಾರ ಲುಕ್​

ಕಾತು ವಾಕುಲ ರೆಂಡು ಕಾದಲ್ ಸಿನಿಮಾದಲ್ಲಿ ನಟಿ ಸಮಂತಾರ ಲುಕ್​

  • Share this:
ಸಮಂತಾ  (Samantha) ಅವರು ಕಾತು ವಾಕುಲ ರೆಂಡು ಕಾದಲ್  (Kaathu Vaakula Rendu Kaadhal) ಎಂಬ ತಮಿಳು ಸಿನಿಮಾದಲ್ಲಿ ನಟಿಸುತ್ತಿದ್ದು, ಅವರ ಪಾತ್ರವಾದ ಖತೀಜಾದ ಫಸ್ಟ್‌ ಲುಕ್ ರಿವೀಲ್​ ಆಗಿದೆ. ಪೋಸ್ಟರ್​ನಲ್ಲಿ ಅತ್ಯಂತ ಸುಂದರವಾಗಿ ಕಾಣಿಸುತ್ತಿರುವ ಸಮಂತಾರನ್ನು ಕಂಡು ಅಭಿಮಾನಿಗಳು ವಾಹ್ ವಾಹ್ ಎನ್ನುತ್ತಿದ್ದಾರೆ. ಈ ಸಿನಿಮಾದಲ್ಲಿ ವಿಜಯ್ ಸೇತುಪತಿ  (Vijay Sethupathi) ಮತ್ತು ನಯನತಾರಾ  (Nayanthara) ಕೂಡ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ತಮ್ಮ ಪತಿ, ನಟ ನಾಗ ಚೈತನ್ಯ (Naga Chaitanya) ಅವರಿಂದ ಬೇರೆಯಾದ ನಂತರ ಸಮಂತಾ ಸಂಪೂರ್ಣವಾಗಿ ವೃತ್ತಿ ಜೀವನದಲ್ಲಿ ಮುಳುಗಿ ಹೋಗಿದ್ದಾರೆ. ಅದರಿಂದ ಸ್ವಲ್ಪವೂ ವಿರಾಮ ಪಡೆಯುವ ಇಚ್ಚೆ ಆಕೆಗೆ ಇದ್ದಂತೆ ಕಾಣಿಸುತ್ತಿಲ್ಲ.

ಇತ್ತೀಚೆಗೆ ಅವರ ತಮಿಳು ಸಿನಿಮಾ (Tamil Movie) ಕಾತು ವಾಕುಲ ರೆಂಡು ಕಾದಲ್ ಸಿನಿಮಾದಲ್ಲಿನ ಅವರು ಅಭಿನಯಿಸಿರುವ ಪಾತ್ರದ ಮೊದಲ ಲುಕ್ ಬಿಡುಗಡೆ ಆಗಿದೆ. ರೌಡಿ ಪಿಕ್ಚರ್ಸ್ ಪ್ರೈವೆಟ್ ಲಿಮಿಟೆಡ್ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ಪೋಸ್ಟರ್ ಹಂಚಿಕೊಂಡಿದೆ. ಸಮಂತಾ ಸಹ ತಮ್ಮ ಫಸ್ಟ್​ ಲುಕ್​ ಪೋಸ್ಟರ್​ ಅನ್ನು ಟ್ವೀಟ್​ ಮಾಡಿದ್ದಾರೆ.ಸಮಂತಾ ಈ ಸಿನಿಮಾದಲ್ಲಿ ಖತೀಜಾ ಎಂಬ ಹೆಸರಿನ ಪಾತ್ರದಲ್ಲಿ ನಟಿಸುತ್ತಿದ್ದು, ಅದಕ್ಕಾಗಿ ಸಿಕ್ಕಾಪಟ್ಟೆ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಕಾತು ವಾಕುಲ ರೆಂಡು ಕಾದಲ್ ಸಿನಿಮಾವನ್ನು ವಿಘ್ನೇಶ್ ಶಿವನ್ ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾ 2022 ಡಿಸೆಂಬರ್ ತಿಂಗಳಲ್ಲಿ ತೆರೆ ಕಾಣಲಿದೆ ಎಂಬ ನಿರೀಕ್ಷೆ ಇದೆ. ವಿಘ್ನೇಶ್ ಶಿವನ್ ಅವರ ಜೊತೆ ವಿಜಯ್ ಸೇತುಪತಿ ಮತ್ತು ನಯನತಾರಾಗೆ ಇದು ಎರಡನೇ ಸಿನಿಮಾ.

ಇದನ್ನೂ ಓದಿ: ಮೊನೊಕಿನಿಯಲ್ಲಿ ಮಿಂಚಿದ Pooja Hegde: ಬೋಲ್ಡ್​ ಲುಕ್​ಗೆ ಮನಸೋತ ಅಭಿಮಾನಿಗಳು

ಕಾತು ವಾಕುಲ ರೆಂಡು ಕಾದಲ್ ಸಿನಿಮಾವು ತಮಿಳು ಮತ್ತು ತೆಲುಗು ಎರಡೂ ಭಾಷೆಗಳಲ್ಲೂ ಬಿಡುಗಡೆ ಆಗಲಿದೆ. ವರದಿಗಳ ಪ್ರಕಾರ, ಸಿನಿಮಾದ ಚಿತ್ರೀಕರಣವು ಈಗಾಗಲೇ ಪೂರ್ಣಗೊಂಡಿದೆ ಮತ್ತು ನಿರ್ಮಾಪಕರು ಅದಕ್ಕೆ ಸಂಬಂಧಿಸಿದ ಇನ್ನುಳಿದ ಕೆಲಸಗಳಲ್ಲಿ ನಿರತರಾಗಿದ್ದಾರೆ.

ಚಿತ್ರದ ನಿರ್ಮಾಪಕರು ಸಮಂತಾರ ಪೋಸ್ಟರ್​ ಜತೆಗೆ ವಿಜಯ್ ಸೇತುಪತಿ ಅವರ ರ‍್ಯಾಂಬೋ ಪಾತ್ರದ ಮೊದಲ ಲುಕ್ ಮತ್ತು ನಯನ ತಾರಾ ಅವರ ಪಾತ್ರದ ಲುಕ್ ಅನ್ನು ಕೂಡ ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದ್ದಾರೆ.

ಈ ಮಧ್ಯೆ ಅವರು, ಪತಿ ನಾಗ ಚೈತನ್ಯ ಅವರಿಂದ ಬೇರೆಯಾದ ಬಳಿಕ, ಕೆಲವು ಪ್ರವಾಸಗಳನ್ನು ಕೂಡ ಕೈಗೊಂಡಿದ್ದರು. ಋಷಿಕೇಶದಲ್ಲಿ ತಮ್ಮ ಪ್ರಯಾಣ ಆರಂಭಿಸಿ, ಚಾರ್‌ ಧಾಮ್‌ ಯಾತ್ರೆ ಕೈಗೊಂಡರು. ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಮತ್ತು ಬದ್ರಿನಾಥಕ್ಕೆ ಭೇಟಿ ನೀಡಿದರು. ಅವರು ತಮ್ಮ ಸಿಬ್ಬಂದಿಯೊಂದಿಗೆ ದುಬೈಗೆ ಕೂಡ ಪ್ರವಾಸ ಹೋಗಿದ್ದರು. ಸಮಂತಾ, ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಪ್ರವಾಸದಲ್ಲಿ ಸವಿದ ಖಾದ್ಯಗಳ ಫೋಟೋಗಳು ಮತ್ತು ತಾವು ಉಳಿದುಕೊಂಡಿದ್ದ ಹೋಟೆಲ್‌ ಕೋಣೆಯಿಂದ ಹೊರಗೆ ಕಾಣುವ ದೃಶ್ಯ ತೋರಿಸುವ ಫೋಟೋಗಳನ್ನು ಹಂಚಿಕೊಂಡಿದ್ದರು.

ಇದನ್ನೂ ಓದಿ: ಕಣ್ಸನ್ನೆ ಹುಡುಗಿ Priya Prakash Varrier ಲುಕ್ಸ್​ಗೆ ನೆಟ್ಟಿಗರು ಮತ್ತೊಮ್ಮೆ ಫಿದಾ..!

ಆಂಧ್ರದ ಮಾಧ್ಯಮ ವರದಿಯೊಂದರ ಪ್ರಕಾರ, ಸಮಂತಾ ದೊಡ್ಡ ನಿರ್ಮಾಪಕರು ಮತ್ತು ತಾರೆಯರ ಸಂಪರ್ಕದಲ್ಲಿ ಇದ್ದು, ತನಗೆ ಸ್ಕೋಪ್ ಇರುವ ದೊಡ್ಡ ದೊಡ್ಡ ಪ್ರಾಜೆಕ್ಟ್‌ಗಳ ಮೇಲೆ ಆಸಕ್ತಿ ತೋರಿಸುತ್ತಿದ್ದಾರೆ. ಸಮಂತಾ ಕೆಲವು ಸಣ್ಣ ಬಜೆಟ್‍ನ ಸಿನಿಮಾಗಳಿಗೆ ಸಹಿ ಹಾಕಿದ್ದಾರೆ. ಆಕೆ ಆದಷ್ಟು ಬೇಗ ಕೆಲವು ದೊಡ್ಡ ಬಜೆಟ್‍ನ ಸಿನಿಮಾಗಳನ್ನು ತಮ್ಮದಾಗಿಸಿಕೊಳ್ಳಲು ಬಯಸಿದ್ದಾರೆ ಎಂದು ವರದಿಗಳು ತಿಳಿಸಿವೆ.
First published: