ಮೊದಲ ಮದುವೆ ಫೋಟೋ ಲೀಕ್; ಸಖತ್ತಾಗೆ ಟ್ರೋಲ್ ಮಾಡಿದ ನಟಿ ಸಮಂತಾ

zahir | news18
Updated:July 29, 2018, 9:30 PM IST
ಮೊದಲ ಮದುವೆ ಫೋಟೋ ಲೀಕ್; ಸಖತ್ತಾಗೆ ಟ್ರೋಲ್ ಮಾಡಿದ ನಟಿ ಸಮಂತಾ
zahir | news18
Updated: July 29, 2018, 9:30 PM IST
-ನ್ಯೂಸ್ 18 ಕನ್ನಡ

ಟಾಲಿವುಡ್​ನ ಚೆಂದುಳ್ಳಿ ಚೆಲುವೆ ಸಮಂತಾ ಅಕ್ಕಿನೇನಿ ಸ್ಟಾರ್ ಕುಡಿ ನಾಗ ಚೈತನ್ಯನೊಂದಿಗೆ ಕಳೆದ ವರ್ಷ ಹಸೆಮಣೆ ಏರಿದ್ದು ಇನ್ನೂ ಹಚ್ಚ ಹಸಿರಾಗಿದೆ. ಅಂತದರಲ್ಲಿ ಸ್ಯಾಮ್​ನ ಪ್ರಿಯತಮನೊಂದಿಗಿನ ಮದುವೆ ಫೋಟೋ ಲೀಕ್ ಆಗಿದೆ ಎಂದರೆ ಏನು ಗತಿ. ಇದೇನಾಪ್ಪ ಇಂತಹದೊಂದು ಸುದ್ದಿ ಎಂದು ಹುಬ್ಬೇರಿಸಬೇಡಿ. ಏಕೆಂದರೆ ಈ ಫೋಟೋವನ್ನು ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದು ಸ್ವತಃ ಸಮಂತಾ. ವಿಷಯ ಏನಾಪ್ಪಾ ಅಂದರೆ ನಟಿ ಸಮಂತಾ ಜೊತೆಗಿನ ಫೋಟೋವೊಂದನ್ನು ಅಭಿಮಾನಿಯೊಬ್ಬ ಎಡಿಟ್ ಮಾಡಿದ್ದಾನೆ. ಅದು ಅಂತಿಂಥ ಎಡಿಟ್ ಅಲ್ಲ. ತಾನು ಸಮಂತಾ ಅವರನ್ನು ಮದುವೆಯಾಗಿರುವುದಾಗಿ ತೋರಿಸಿಕೊಳ್ಳುವ ಎಡಿಟ್.

ಅಷ್ಟೇ ಆಗಿದ್ದರೆ ಪರವಾಗಿಲ್ಲ ಎನ್ನಬಹುದಿತ್ತು. ಆದರೆ ಈ ಫೋಟೊವನ್ನು ಅಲ್ಲು ಅರ್ಜುನ್ ಅಡಿಕ್ಟ್​ ಎಂಬ ಖಾತೆ ಸಮಂತಾ ಅವರಿಗೆ ಟ್ಯಾಗ್ ಮಾಡಿದೆ. ಇದನ್ನು ನೋಡಿರುವ ಸಮಂತಾ 'ಇದು ಮೊದಲ ನೋಟದಲ್ಲೇ ಉಂಟಾದ ಪ್ರೇಮ, ಈ ಫೋಟೋ ಹೇಗೆ ಲೀಕ್​ ಆಯಿತು ಎಂಬುದು ಗೊತ್ತಿಲ್ಲ' ಎಂದು ಹಾಸ್ಯಾಸ್ಪದವಾಗಿ ಟ್ವೀಟ್ ಮಾಡಿ ಅಭಿಮಾನಿಗಳನ್ನು ನಗೆಗಡಲಲ್ಲಿ ತೇಲಿಸಿದ್ದಾರೆ.


Loading...

ಸ್ವತಃ ಸಮಂತಾ ಟ್ವೀಟ್ ಮಾಡುತ್ತಿದ್ದಂತೆ ಫೋಟೋ ವೈರಲ್ ಆಗಿದೆ. 'ಮಹಾನಟಿ' ಚಿತ್ರದ ಯಶಸ್ಸಿನ ಗುಂಗಿನಲ್ಲಿರುವ ಟಾಲಿವುಟ್ ನಟಿಗೆ ಮದುವೆ ಬಳಿಕ ಲಕ್ ಖುಲಾಯಿಸಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. 'ರಂಗಸ್ಥಳಂ', 'ಅಭಿಮನ್ಯುಡು' ಚಿತ್ರಗಳು ಸೂಪರ್ ಹಿಟ್ ಆದ ಬೆನ್ನಲ್ಲೆ 'ಮಹಾನಟಿ' ಸಿನಿಮಾದ ಸಮಂತಾ ಅಭಿನಯಕ್ಕೆ ಉತ್ತಮ ಪ್ರಶಂಸೆ ವ್ಯಕ್ತವಾಗಿದೆ. ಸದ್ಯ ದ್ವೀಭಾಷಾ ಚಿತ್ರವಾದ 'ಯು ಟರ್ನ್'​ನಲ್ಲಿ ಬಣ್ಣ ಹಚ್ಚಿರುವ ಸಮಂತಾಗೆ ಕೈಯಲ್ಲಿ 'ಸೀಮಾ ರಾಜಾ' ಮತ್ತು 'ಸೂಪರ್ ಡಿಲಕ್ಸ್'​ ಎಂಬ ಇನ್ನೆರೆಡು ಚಿತ್ರಗಳಿವೆ.

ಅಕ್ಕಿನೇನಿ ಕುಟುಂಬಕ್ಕೆ ಬಲಗಾಲಿಡುತ್ತಿದ್ದಂತೆ ಅಭಿಮಾನಿಗಳ ಪಡೆಯನ್ನು ಹೆಚ್ಚಿಸಿಕೊಂಡಿರುವ ಸಮಂತಾ ಸದ್ಯ ಚಿತ್ರೀಕರಣದಿಂದ ಕೆಲ ಕಾಲ ಬಿಡುವು ಮಾಡಿಕೊಂಡು ಕುಟುಂಬದೊಂದಿಗೆ ಕಾಲ ಕಳೆಯುವ ಯೋಚನೆಯಲ್ಲಿದ್ದಾರಂತೆ. ಅತ್ತ ಕಡೆ ಪತಿ ನಾಗಚೈತನ್ಯ ಕೂಡ ಸಿನಿಮಾ ಶೂಟಿಂಗಾಗಿ ದೇಶ ವಿದೇಶ ಸುತ್ತಿದ್ದು, ಸ್ಯಾಮ್ ಸಹ ಚಿತ್ರೀಕರಣದಲ್ಲಿ ಬಿಝಿಯಾಗುತ್ತಿದ್ದಾರೆ. ಇದರಿಂದ ಟಾಲಿವುಡ್​ನ ಮುದ್ದಾದ ಜೋಡಿ 'ನಾನೊಂದು ತೀರ...ನೀನೊಂದು ತೀರ' ಎಂಬ ವಿರಹ ಗೀತೆ ಹಾಡುತ್ತಿರುವುದಂತು ಸುಳ್ಳಲ್ಲ.
First published:July 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ