ಮಗು ಮಾಡಿಕೊಳ್ಳುವ ಕಾರಣಕ್ಕೆ Shah Ruk Khan ಸಿನಿಮಾಗೆ ನೋ ಎಂದಿದ್ದ Samantha!

ಶಾರುಕ್ ಖಾನ್ ನಾಯಕನಾಗಿ ಅಭಿನಯಿಸುತ್ತಿರುವ ಲಯನ್ ಎಂಬ ಸಾಹಸ ಪ್ರಧಾನ ಸಿನಿಮಾಕ್ಕೆ ಸಮಂತಾ ಅವರನ್ನು ನಾಯಕಿ ಆಗುವಂತೆ ಕೇಳಲಾಗಿತ್ತು. ಆದರೆ, ನಾಗ ಚೈತನ್ಯ ಅವರ ಮಗುವಿನ ತಾಯಿ ಆಗಬೇಕು ಎಂಬ ಕಾರಣಕ್ಕಾಗಿ ಸಮಂತಾ ಆ ಅವಕಾಶವನ್ನು ನಿರಾಕರಿಸಿದ್ದರು.

ನಟಿ ಸಮಂತಾ ಹಾಗೂ ಶಾರುಖ್ ಖಾನ್​

ನಟಿ ಸಮಂತಾ ಹಾಗೂ ಶಾರುಖ್ ಖಾನ್​

  • Share this:
ಬಹುಭಾಷಾ ನಟಿ ಸಮಂತಾ ಇತ್ತೀಚೆಗಷ್ಟೆ, ನಟ ನಾಗ ಚೈತನ್ಯ ಜೊತೆಗಿನ 4 ವರ್ಷಗಳ ದಾಂಪತ್ಯಕ್ಕೆ ವಿದಾಯ ಹೇಳುತ್ತಿರುವುದಾಗಿ ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಅವರಿಬ್ಬರು ತಮ್ಮ ವಿಚ್ಛೇದನದ ಕುರಿತು ಘೋಷಿಸಿದ ದಿನದಿಂದಲೂ  ಸಿನಿಮಾ ಪ್ರಿಯರ ಈ ನೆಚ್ಚಿನ ತಾರಾ ದಂಪತಿಯ ಮದುವೆ ಮುರಿದು ಬೀಳಲು ಏನು ಕಾರಣ ಎಂಬ ಕುರಿತ ಊಹಾಪೋಹಗಳು ಹರಿದಾಡುತ್ತಲೇ ಇವೆ. ಕೆಲವು ವರದಿಗಳ ಪ್ರಕಾರ, ಸಮಂತಾ ಸಿನಿಮಾಗಳಲ್ಲಿ ಮಾಡುತ್ತಿರುವ ಬೋಲ್ಡ್ ದೃಶ್ಯಗಳು ಅಕ್ಕಿನೇನಿ ಕುಟುಂಬಕ್ಕೆ ಇಷ್ಟವಾಗದೇ ಇರುವುದೇ ಅವರ ನಡುವಿನ ಬಿರುಕಿಗೆ ಕಾರಣವಾದರೆ, ಇನ್ನು ಕೆಲವು ವರದಿಗಳ ಪ್ರಕಾರ, ಮಗು ಮಾಡಿಕೊಳ್ಳುವ ವಿಷಯಕ್ಕೆ ಸಂಬಂಧಿಸಿದಂತೆ ದಂಪತಿ ನಡುವೆ ಜಗಳವಾಗಿದೆ ಎನ್ನಲಾಗುತ್ತಿದೆ. ಆದರೆ, ಸಮಂತಾ ಮತ್ತು ನಾಗಚೈತನ್ಯ ಅಕ್ಕಿನೇನಿ ಇಬ್ಬರೂ ಕೂಡ ಈ ಊಹಾಪೋಹಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಮತ್ತು ವಿಚ್ಚೇದನಕ್ಕೆ ಕಾರಣವನ್ನು ಕೂಡ ಬಹಿರಂಗವಾಗಿ ತಿಳಿಸಿಲ್ಲ.

ಇದೇ ಸಂದರ್ಭದಲ್ಲಿ ನಟಿ ಸಮಂತಾ ಅವರ ಸಿನಿ ಹಾಗೂ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ನಿರ್ದೇಶಕ ಅಟ್ಲಿ ಅವರ ಸಿನಿಮಾದಲ್ಲಿ ಶಾರುಖ್ ಖಾನ್ ನಾಯಕನಾಗಿ ಅಭಿನಯಿಸುತ್ತಿದ್ದು, ಆ ಚಿತ್ರಕ್ಕೆ ಲಯನ್ ಎಂದು ಟೈಟಲ್​ ಕೊಡಲಾಗಿದೆ. ಈ ಸಾಹಸ ಪ್ರಧಾನ ಸಿನಿಮಾಕ್ಕೆ ಸಮಂತಾ ಅವರನ್ನು ನಾಯಕಿ ಆಗುವಂತೆ ಕೇಳಲಾಗಿತ್ತು. ಆದರೆ, ನಾಗ ಚೈತನ್ಯ ಅವರ ಮಗುವಿನ ತಾಯಿ ಆಗಬೇಕು ಎಂಬ ಕಾರಣಕ್ಕಾಗಿ, ಸಮಂತಾ ಆ ಅವಕಾಶವನ್ನು ನಿರಾಕರಿಸಿದ್ದರಂತೆ. ಬಳಿಕ ಆ ಪಾತ್ರ ನಟಿ ನಯನತಾರಾ ಅವರ ಪಾಲಾಯಿತು ಎಂದು ಹೇಳಲಾಗುತ್ತಿದೆ. ಈಗಾಗಲೇ ಆಕೆ ಆ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

Samantha announced her new movie, Samantha new movie details, Samantha New Kollywood Movie, Samanth's New flat in Gachibowli, ಗಚ್ಚಿಬೌಲಿಯಲ್ಲಿ ಹೊಸ ಮನೆ ಖರೀದಿಸಿದ ಸಮಂತಾ, Samantha bought new home in Gachi bowli, Samanth will shift to her new home, Samantha given official statement, Samantha Officially separated form Naga Chaitanya, Here is Samntha's official statement about divorce, ದೂರಾದ ಸಮಂತಾ-ನಾಗ ಚೈತನ್ಯ, Naga Chaitanya and Sam split as husband and wife, Samantha Naga Chaitanya Divorce: Samantha Akkineni, Samantha Ruth Prabhu, Samantha Nagachaitanya divorce, Samantha Akkineni latest pics, Samantha New Movie, Samantha Akkineni age, Samantha Akkineni cute, Samantha Akkineni Husband, ಸಮಂತಾ ಅಕ್ಕಿನೇನಿ, ತೆಲುಗು ನಟಿ, Family Man 2
ನಟಿ ಸಮಂತಾ


ವರದಿಗಳ ಪ್ರಕಾರ, ಶಾರುಖ್ ಖಾನ್ ಮತ್ತು ಅಟ್ಲಿ ಸಿನಿಮಾಕ್ಕೆ ಸಮಂತಾ ಮೊದಲ ಆಯ್ಕೆ ಆಗಿದ್ದರು. ಸಮಂತಾಗೆ ಅಟ್ಲಿ ಅವರ ಜೊತೆ ಒಳ್ಳೆಯ ಸಂಬಂಧವಿದ್ದು, ಅವರು ಈ ಮೊದಲು ಅಟಲ್ಇ ಜೊತೆ ತೇರಿ ಮತ್ತು ಮೆರ್ಸಲ್ ಸಿನಿಮಾದಲ್ಲಿ ಕೆಲಸ ಮಾಡಿದ್ದರು. ಸಮಂತಾ ಮಗುವಿನ ತಾಯಿ ಆಗಬೇಕು ಎಂಬ ಹಂಬಲದಿಂದ ಈ ಪಾತ್ರವನ್ನು ನಿರಾಕರಿಸಿದ್ದರಂತೆ.

ಇದನ್ನೂ ಓದಿ: ಪತಿಯಿಂದ ದೂರಾದ ನಂತರ ಹೊಸ ಸಿನಿಮಾ ಪ್ರಕಟಿಸಿದ Samantha

ಸಮಂತಾ ಆಗಲಿ ಅಥವಾ ಲಯನ್ ಚಿತ್ರದ ನಿರ್ಮಾಪಕರಾಗಲಿ ಈ ಕುರಿತು ಯಾವುದೇ ಪ್ರಕಟಣೆಯನ್ನು ಬಿಡುಗಡೆ ಮಾಡಿಲ್ಲ. ಆ ನಂತರ ಸಮಂತಾ ಮಾಡಬೇಕಿದ್ದ ಪಾತ್ರವನ್ನು ನಯಂತಾ ಅವರಿಗೆ ನೀಡಲಾಗಿದ್ದು, ಮುಂಬೈನಲ್ಲಿ ಈಗಾಗಲೇ ಚಿತ್ರೀಕರಣ ಆರಂಭವಾಗಿದೆ.

ನಟಿ ಸಮಂತಾ ಮತ್ತು ನಟ ನಾಗಚೈತನ್ಯ 2017 ರ ಅಕ್ಟೋಬರ್‌ನಲ್ಲಿ ವಿವಾಹವಾಗಿದ್ದರು, ಅದಾಗಿ ಸರಿಯಾಗಿ ನಾಲ್ಕು ವರ್ಷಗಳ ನಂತರ ಅಂದರೆ ಅಕ್ಟೋಬರ್ 2 ರಂದು ಅವರಿಬ್ಬರು ವಿಚ್ಛೇದನ ಪಡೆಯುತ್ತಿರುವ ಬಗ್ಗೆ ಸಾರ್ವಾಜನಿಕವಾಗಿ ಘೋಷಿಸಿಕೊಂಡಿದ್ದರು. ಇದೀಗ ಶಾರುಖ್ ಖಾನ್ ಕೂಡ, ತಮ್ಮ ಮಗ ಮಾದಕ ದೃವ್ಯ ಪ್ರಕರಣದಲ್ಲಿ ಬಂಧಿತನಾಗಿರುವ ಕಾರಣದಿಂದಾಗಿ, ಈ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸುವುದು ವಿಳಂಬವಾಗುತ್ತಿದೆ.

ಇದನ್ನೂ ಓದಿ: ಪುರುಷರು ತಪ್ಪು ಮಾಡಿದರೆ ಏಕೆ ಪ್ರಶ್ನಿಸೋದಿಲ್ಲ ಎಂದ Samantha: ಹೊಸ ಪೋಸ್ಟ್​ ವೈರಲ್​..!

ವರದಿಗಳ ಪ್ರಕಾರ, ಶಾರುಖ್ ಖಾನ್ ಈ ಚಿತ್ರದಲ್ಲಿ ದ್ವಿಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಶಾರುಖ್ ಖಾನ್ ಈಗಾಗಲೇ ಪುಣೆಯಲ್ಲಿ ಚಿತ್ರೀಕರಣವನ್ನು ಮುಗಿಸಿದ್ದು, ಮುಂಬೈ ಫಿಲ್ಮ್ ಸಿಟಿಯಲ್ಲೂ ಕೆಲವು ಸಾಹಸ ದೃಶ್ಯಗಳನ್ನು ಮುಗಿಸಿಕೊಟ್ಟಿದ್ದಾರೆ. ಅಕ್ಟೋಬರ್ 3 ರಿಂದ ಅವರು ದಕ್ಷಿಣ ಮುಂಬೈಯಲ್ಲಿ ಒಂದು ವಾರಗಳ ಕಾಲ ನಡೆಯಲಿದ್ದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ, ಮಗನ ಬಂಧನ ಪ್ರಕರಣದ ಕಾರಣದಿಂದಾಗಿ ಆ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವುದನ್ನು ಅವರು ಮುಂದೂಡಿದ್ದಾರೆ.
Published by:Anitha E
First published: