Samantha: ನಾಗಚೈತನ್ಯ ಜೊತೆ ವಿಚ್ಚೇದನದ ಬಳಿಕ ಮಾಜಿ ಮಾವನ ಸ್ಟುಡಿಯೋಗೆ ಸಮಂತಾ ಭೇಟಿ

Samantha visits Nagarjuna studio: ಕಳೆದ ಅಕ್ಟೋಬರ್ ತಿಂಗಳ ಆರಂಭದಲ್ಲಿ ನಾಗಚೈತನ್ಯ ಹಾಗೂ ಸಮಂತಾ ವಿಚ್ಛೇದನದ ಬಳಿಕ ಸಮಾಂತರವಾಗಿ ನಾಗಾರ್ಜುನ ಉತ್ತಮ ಮಾತುಗಳನ್ನಾಡಿದ್ರು.ಹೀಗಾಗಿ ಮಾಜಿ ಮಾವನ ಜೊತೆ ಸಂಬಂಧ ಉತ್ತಮ ಸಂಬಂಧ ಇಟ್ಟುಕೊಂಡಿದ್ದಾರೆ.. ಇದರ ನಡುವೆಯೇ ನಾಗಾರ್ಜುನ ಅವರ ಅನ್ನಪೂರ್ಣ ಸ್ಟುಡಿಯೋಗೆ ಸಮಂತಾ ಭೇಟಿ ನೀಡಿದ್ದಾರೆ

 ಸಮಂತಾ

ಸಮಂತಾ

  • Share this:
    ನಾಗಚೈತನ್ಯ(Naga Chaitanya) ಹಾಗೂ ಸಮಂತಾ(Samantha) ವಿಚ್ಛೇದನ(Divorce) ಪಡೆದು ದೂರವಾದ ಬಳಿಕ ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇದ್ದಾರೆ. ತಮ್ಮ ವೃತ್ತಿಜೀವನ ಗಳಲ್ಲಿ ಬ್ಯುಸಿಯಾಗಿರುವ ನಾಗಚೈತನ್ಯ ಹಾಗೂ ಸಮಂತಾ ಮತ್ತೆ ಒಂದಾಗಬಹುದು ಎಂಬ ಆಸೆ ಅಭಿಮಾನಿಗಳಲ್ಲಿ(Fans) ಜೀವಂತವಾಗಿದೆ.. ಇದಕ್ಕೆ ಪುಷ್ಟಿ ನೀಡುವಂತೆ ಸಮಂತಾ ನಡೆ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ..

    ಮಾಜಿ ಮಾವನ ಸ್ಟುಡಿಯೋಗೆ ಸಮಂತಾ ಭೇಟಿ

    ಕಳೆದ ಅಕ್ಟೋಬರ್ ತಿಂಗಳ ಆರಂಭದಲ್ಲಿ ನಾಗಚೈತನ್ಯ ಹಾಗೂ ಸಮಂತಾ ವಿಚ್ಛೇದನದ ಬಳಿಕ ಸಮಾಂತರವಾಗಿ ನಾಗಾರ್ಜುನ ಉತ್ತಮ ಮಾತುಗಳನ್ನಾಡಿದ್ರು.ಹೀಗಾಗಿ ಮಾಜಿ ಮಾವನ ಜೊತೆ ಸಂಬಂಧ ಉತ್ತಮ ಸಂಬಂಧ ಇಟ್ಟುಕೊಂಡಿದ್ದಾರೆ.. ಇದರ ನಡುವೆಯೇ ನಾಗಾರ್ಜುನ ಅವರ ಅನ್ನಪೂರ್ಣ ಸ್ಟುಡಿಯೋಗೆ ಸಮಂತಾ ಭೇಟಿ ನೀಡಿದ್ದಾರೆ.. ಹೀಗಾಗಿ ನಾಗಚೈತನ್ಯ ಹಾಗೂ ಸಮಂತ ಮತ್ತೆ ಒಂದಾಗಬಹುದು ಎಂದು ಅಭಿಮಾನಿಗಳು ಅಭಿಮಾನಿಗಳು ಲೆಕ್ಕಾಚಾರ ಹಾಕುತ್ತಿದ್ದಾರೆ..

    ಇದನ್ನೂ ಓದಿ :ರಿವೀಲ್​ ಆಯ್ತು Kaathu Vaakula Rendu Kaadhal ಚಿತ್ರದಲ್ಲಿ Samantha ಅಭಿನಯದ ಪಾತ್ರದ ಫಸ್ಟ್​ ಲುಕ್

    ಶಾಕುಂತಲಂ ಸಿನಿಮಾ ಡಬ್ಬಿಂಗ್ ಗಾಗಿ ಭೇಟಿ

    ಸಮಂತಾ ಅವರು ಅನುಪಮಾ ಸ್ಟುಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಮಾಜಿ ಮಾವನ ಸ್ಟುಡಿಯೋದಲ್ಲಿ ಸಮಂತಾ ಕಾಣಿಸಿಕೊಂಡಿದ್ದೇಕೆ ಎನ್ನುವ ಪ್ರಶ್ನೆಯನ್ನು ಅಭಿಮಾನಿಗಳು ಎತ್ತಿದ್ದರು. ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ದೊಡ್ಡ ಚರ್ಚೆ ನಡೆಯುತ್ತಿದೆ. ಇದಕ್ಕೆ ಈಗ ಉತ್ತರ ಸಿಕ್ಕಿದೆ. ಮೂಲಗಳ ಪ್ರಕಾರ ಸಮಂತಾ ಅವರು ಶಾಕುಂತಲಂ ಸಿನಿಮಾ ಚಿತ್ರದ ಡಬ್ಬಿಂಗ್​ಗಾಗಿ ಅನ್ನಪೂರ್ಣ ಸ್ಟುಡಿಯೋಗೆ ಭೇಟಿ ನೀಡಿದ್ದರು ಎನ್ನಲಾಗಿದೆ..

    ಸಮಂತಾ-ನಾಗಚೈತನ್ಯ ವಿಚ್ಛೇದನದ ವೇಳೆ ಬೇಸರ ಹೊರಹಾಕಿದ್ದ ನಾಗರ್ಜುನ

    ಅಕ್ಟೋಬರ್ ಮೊದಲ ವಾರದಲ್ಲಿ ನಾಗಚೈತನ್ಯ ಹಾಗೂ ಸಂಬಂಧ ವಿಚ್ಛೇದನ ಪಡೆದುಕೊಳ್ಳುತ್ತಿರುವುದು ಆಗಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳ ಮೂಲಕ ಅನೌನ್ಸ್ ಮಾಡಿದ್ರು. ಈ ವೇಳೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಇಬ್ಬರ ವಿಚ್ಛೇದನದ ಬಗ್ಗೆ ನಾಗಾರ್ಜುನ ಬೇಸರದ ಮಾತುಗಳನ್ನು ಆಡಿದರು.ಬಹಳ ಬೇಸರದಿಂದ ಇದನ್ನು ಹೇಳುತ್ತಿದ್ದೇನೆ. ಸಮಂತಾ ಮತ್ತು ನಾಗ ಚೈತನ್ಯ ನಡುವೆ ನಡೆದಿರುವುದು ನಿಜಕ್ಕೂ ಬೇಸರದ ವಿಚಾರ. ಪತಿ ಮತ್ತು ಪತ್ನಿ ನಡುವೆ ಏನು ನಡೆದಿದೆ ಅನ್ನೋದು ತುಂಬಾನೇ ಖಾಸಗಿಯಾದುದ್ದು. ಸ್ಯಾಮ್​ ಮತ್ತು ಚಾಯ್​ ನನಗೆ ತುಂಬಾನೇ ಹತ್ತಿರವಾಗಿದ್ದಾರೆ. ಸಮಂತಾ ಜತೆ ಕಳೆದ ಕ್ಷಣಗಳನ್ನು ಯಾವಾಗಲೂ ನೆನಪಿಸಿಕೊಳ್ಳುತ್ತೇವೆ. ಸಮಂತಾ ಯವಾಗಲೂ ನನಗೆ ಪ್ರೀತಿಪಾತ್ರಳು. ಇಬ್ಬರಿಗೂ ದೇವರು ಆಶೀರ್ವಾದ ಮಾಡಲಿ' ಎಂದು ಹೇಳಿದ್ರು.

    ಇದನ್ನೂ ಓದಿ :ಮಗು ಮಾಡಿಕೊಳ್ಳುವ ಕಾರಣಕ್ಕೆ Shah Ruk Khan ಸಿನಿಮಾಗೆ ನೋ ಎಂದಿದ್ದ Samantha!

    ನಾಗಚೈತನ್ಯ ಬರ್ತ್ ಡೇಗೆ ವಿಶ್ ಮಾಡದ ಸಮಂತಾ

    ಇತ್ತೀಚಿಗೆ ಸಮಂತಾ ಮಾಜಿ ಪತಿ ನಾಗಚೈತನ್ಯ ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಂಡಿದ್ದರು.. ಈ ವೇಳೆ ಸಮಂತ ವಿಶ್ ಮಾಡಬಹುದು ಅಭಿಮಾನಿಗಳು ಕಾಯ್ತಾ ಇದ್ರು.. ಆದರೆ ಸಮಂತಾ ನಾಗಚೈತನ್ಯ ಬರ್ತಡೆಗೆ ವಿಶ್ ಮಾಡದೇ ಸುಮ್ಮನೆ ಇದ್ದರೂ.. ಆದ್ರೆ ಮರುದಿನ ಬೆಳಗ್ಗೆ ತಮ್ಮ ನಾಯಿಯ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಿದ್ರು. ಹೀಗಾಗಿ ಇದು ನಾಗಚೈತನ್ಯ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು .

    ಇನ್ನು ನಾಗ ಚೈನತ್ಯರೊಂದಿಗೆ ವಿಚ್ಛೇದನ ಪಡೆದುಕೊಂಡ ಬಳಿಕ ನಟಿ ಸಮಂತಾ ಸಂಪೂರ್ಣವಾಗಿ ತಮ್ಮ ದೃಷ್ಟಿಯನ್ನು ಸಿನಿಮಾ ಕಡೆ ಹರಿಸಿದ್ದಾರೆ. ಈಗಾಗಲೇ ಎರಡು ಸಿನಿಮಾಗಳಿಗೆ ಓಕೆ ಎಂದಿರೋ ಸಮಂತಾ, ಟಾಲಿವುಡ್​ ಐಕಾನ್​ ಸ್ಟಾರ್ ಅಲ್ಲು ಅರ್ಜುನ್​​​ರ ಪುಷ್ಪ ಸಿನಿಮಾದ ಹಾಡಿನಲ್ಲಿ ಸೊಂಟ ಬಳುಕಿಸಲಿದ್ದಾರೆ. ಜೊತೆಗೆ ಹಾಲಿವುಡ್​ ಸಿನಿಮಾ ನಿರ್ದೇಶಕ ಫಿಲಿಪ್​ ಜಾನ್​​​​ ನಿರ್ದೇಶನದಲ್ಲಿ ಮೂಡಿ ಬರುತ್ತಿರೋ 'ದಿ ಅರೇಂಜ್​​​ ಮೆಂಟ್ಸ್ ಆಫ್​ ಲವ್​​' ಎಂಬ ಸಿನಿಮಾದಲ್ಲಿ ತಮಿಳು ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ..
    Published by:ranjumbkgowda1 ranjumbkgowda1
    First published: