• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Samantha-Vijay Devarakonda Injured: ಹಗ್ಗದ ಮೇಲೆ ಕಾರು ಓಡಿಸುವಾಗ ಸಮಂತಾ-ವಿಜಯ್ ದೇವರಕೊಂಡಗೆ ಗಾಯ, ಈಗ ಪರಿಸ್ಥಿತಿ ಹೇಗಿದೆ?

Samantha-Vijay Devarakonda Injured: ಹಗ್ಗದ ಮೇಲೆ ಕಾರು ಓಡಿಸುವಾಗ ಸಮಂತಾ-ವಿಜಯ್ ದೇವರಕೊಂಡಗೆ ಗಾಯ, ಈಗ ಪರಿಸ್ಥಿತಿ ಹೇಗಿದೆ?

ಸಮಂತಾ-ವಿಜಯ್ ದೇವರಕೊಂಡ (ಸಂಗ್ರಹ ಚಿತ್ರ)

ಸಮಂತಾ-ವಿಜಯ್ ದೇವರಕೊಂಡ (ಸಂಗ್ರಹ ಚಿತ್ರ)

ವಾಹನವು ಆಳವಾದ ನೀರಿನಲ್ಲಿ ಬಿದ್ದು ಇಬ್ಬರ ಬೆನ್ನಿಗೆ ಗಾಯವಾಗಿದೆ. ಆ ದಿನವೇ ಅವರಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದೆ ಎಂದು ವರದಿಯಾಗಿದೆ. ಆದರೆ ಈ ಘಟನೆಯ ಕುರಿತು ಚಿತ್ರತಂಡ ಇನ್ನೂ ಅಧಿಕೃತ ಮಾಹಿತಿಯನ್ನು ಬಿಡುಗಡೆ ಮಾಡಿಲ್ಲ.

  • Share this:

ದಕ್ಷಿಣ ನಟರಾದ ಸಮಂತಾ (Samantha) ಮತ್ತು ವಿಜಯ್ ದೇವರಕೊಂಡ  (Vijay Devarakonda) ಕಾಶ್ಮೀರದಲ್ಲಿ ತಮ್ಮ 'ಖುಶಿ' ಚಿತ್ರದ (Kushi Film Shooting) ಚಿತ್ರೀಕರಣದಲ್ಲಿದ್ದಾರೆ. ಈ ಇಬ್ಬರ ಜೋಡಿಯನ್ನು ಅಭಿಮಾನಿಗಳು ತುಂಬಾ ಇಷ್ಟಪಡುತ್ತಾರೆ. ಅಷ್ಟೇ ಅಲ್ಲ ಸಮಂತಾ ಮತ್ತು ವಿಜಯ್ ದೇವರಕೊಂಡ ತುಂಬಾ ಒಳ್ಳೆಯ ಸ್ನೇಹಿತರು. ಮೊನ್ನೆಯಷ್ಟೇ ವಿಜಯ್ ತಮ್ಮ ಹುಟ್ಟುಹಬ್ಬದಂದು ಸಮಂತಾಗೆ ವಿಶಿಷ್ಟವಾದ ಸರ್ಪ್ರೈಸ್ ನೀಡಿದ್ದರು. ಇದನ್ನು ಸ್ವೀಕರಿಸಲು ಸಮಂತಾ ಸಹ ಉತ್ಸುಕರಾಗಿದ್ದರು. ಇತ್ತೀಚೆಗೆ ಖುಷಿ ಚಿತ್ರದ ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ಸಮಂತಾ ಮತ್ತು ವಿಜಯ್ ದೇವರಕೊಂಡ ಇಬ್ಬರೂ ಗಾಯಗೊಂಡಿದ್ದಾರೆ (Samantha Vijay Devarakonda Injured) ಎಂದು ವರದಿಯಾಗಿದೆ. ವಿಜಯ್ ದೇವರಕೊಂಡ ತಂಡದ ಸದಸ್ಯರೊಬ್ಬರು ಇದನ್ನು ಖಚಿತಪಡಿಸಿದ್ದಾರೆ ಎಂದು ಕೆಲವು ಜಾಲತಾಣಗಳು ವರದಿ ಮಾಡಿವೆ.


ವಿಜಯ್ ದೇವರಕೊಂಡ ಅವರ ಆಪ್ತ ಮೂಲವೊಂದು ಹೇಳುವಂತೆ, 'ಸಮಂತಾ ಮತ್ತು ವಿಜಯ್ ಕಾಶ್ಮೀರದ ಪಹಲ್ಗಾಮ್ ಪ್ರದೇಶದಲ್ಲಿ ಸ್ಟಂಟ್ ಸೀಕ್ವೆನ್ಸ್ ಮಾಡುತ್ತಿದ್ದಾಗ ಗಾಯಗೊಂಡಿದ್ದಾರೆ. ಆ ದೃಶ್ಯದ ಚಿತ್ರೀಕರಣ ತುಂಬಾ ಕಷ್ಟಕರವಾಗಿತ್ತು. ಲಿಡ್ಡರ್ ನದಿಯ ಎರಡೂ ಬದಿಗಳಲ್ಲಿ ಕಟ್ಟಲಾದ ಹಗ್ಗದ ಮೇಲೆ ಇಬ್ಬರೂ ಕಾರನ್ನು ಓಡಿಸಬೇಕಾಗಿತ್ತು.


ಪ್ರಥಮ ಚಿಕಿತ್ಸೆ ನೀಡಲಾಗಿದೆ
ಆದರೆ ದುರದೃಷ್ಟವಶಾತ್, ವಾಹನವು ಆಳವಾದ ನೀರಿನಲ್ಲಿ ಬಿದ್ದು ಇಬ್ಬರ ಬೆನ್ನಿಗೆ ಗಾಯವಾಗಿದೆ. ಆ ದಿನವೇ ಅವರಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದೆ ಎಂದು ವರದಿಯಾಗಿದೆ. ಆದರೆ ಈ ಘಟನೆಯ ಕುರಿತು ಚಿತ್ರತಂಡ ಇನ್ನೂ ಅಧಿಕೃತ ಮಾಹಿತಿಯನ್ನು ಬಿಡುಗಡೆ ಮಾಡಿಲ್ಲ.


ಇದನ್ನೂ ಓದಿ: Kamali Serial: 'ಕಮಲಿ' ಪಾತ್ರಧಾರಿ ಅಮೂಲ್ಯ ಓಂಕಾರ್ ಗೌಡ ನಿಜ ಜೀವನದಲ್ಲಿ ಹೀಗಿದ್ದಾರೆ ಅಂದ್ರೆ ನೀವು ನಂಬಲಿಕ್ಕಿಲ್ಲ!


ಭಾನುವಾರ ಸಮಂತಾ ಮತ್ತು ವಿಜಯ್ ಮತ್ತೆ ಶೂಟಿಂಗ್ ಆರಂಭಿಸಿದರು. ಈ ವೇಳೆ ಶ್ರೀನಗರದ ದಾಲ್ ಲೇಕ್ ಭಾಗದಲ್ಲಿ ಹಲವು ದೃಶ್ಯಗಳನ್ನು ಚಿತ್ರೀಕರಿಸಿದ್ದಾರೆ. ಚಿತ್ರತಂಡದ ಸದಸ್ಯರೊಬ್ಬರ ಬಳಿ ಚಿತ್ರೀಕರಣದ ಸಮಯದಲ್ಲಿ ಅವರು ಬೆನ್ನುನೋವಿನ ಬಗ್ಗೆ ದೂರು ನೀಡಿದರು.


ಬಿಗಿ ಭದ್ರತೆಯ ನಡುವೆ ಶೂಟಿಂಗ್
ತಕ್ಷಣ ಇಬ್ಬರನ್ನೂ ದಾಲ್ ಸರೋವರದ ದಡದಲ್ಲಿರುವ ಹೋಟೆಲ್‌ಗೆ ಕರೆದೊಯ್ಯಲಾಯಿತು. ಫಿಸಿಯೋಥೆರಪಿಸ್ಟ್ ಅವರನ್ನು ಕರೆಸಲಾಗಿದ್ದು, ಇಬ್ಬರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಬಿಗಿ ಭದ್ರತೆಯ ನಡುವೆ ಇಬ್ಬರೂ ಶೂಟಿಂಗ್ ಮಾಡುತ್ತಿದ್ದು, ಅವರ ಹತ್ತಿರ ಯಾರೂ ಬರಲು ಬಿಡುತ್ತಿಲ್ಲ. ಶೂಟಿಂಗ್ ಮುಗಿಸಿ ಸೋಮವಾರ ಮಧ್ಯಾಹ್ನ ತಂಡ ಕಾಶ್ಮೀರದಿಂದ ಹೊರಟಿದೆ ಎಂದು ಕೆಲವು ಜಾಲತಾಣಗಳು ವರದಿ ಮಾಡಿವೆ.


ಇದನ್ನೂ ಓದಿ: Vikrant Rona: ರಾ, ರಾ ರಕ್ಕಮ್ಮ ಎಂದ ಕಿಚ್ಚ - ರಿಲೀಸ್​ ಆದ ಕೆಲವೇ ಗಂಟೆಗಳಲ್ಲಿ ಲಕ್ಷ ಲಕ್ಷ ವೀಕ್ಷಣೆ


ಖುಷಿ ಚಿತ್ರದ ಕುತೂಹಲಕರ ವಿವರ
ಈ ವರ್ಷ ಡಿಸೆಂಬರ್ 23 ರಂದು ಖುಷಿ ಚಿತ್ರ ಥಿಯೇಟರ್‌ಗೆ ಬರಲಿದೆ. ಇದು ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂನಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರವು ಮಹಾನಟಿ (2018) ನಂತರ ಸಮಂತಾ ಮತ್ತು ವಿಜಯ್ ಅವರ ಎರಡನೇ ಚಿತ್ರವಾಗಿದೆ. ಇದರ ನಡುವೆಯೇ ಸಮಂತಾ ತಮ್ಮ ಪ್ರಯಾಣದ ಸಮಯದಲ್ಲಿ ಅನೇಕ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ.


ಗ್ರ್ಯಾಂಡ್ ಫ್ಯಾಮಿಲಿ ಅನುಭವದ ಚಿತ್ರ ಖುಷಿ!
ಸಮಂತಾ ರುತ್ ಪ್ರಭು ಮತ್ತು ವಿಜಯ್ ದೇವರಕೊಂಡ ಅವರ ಮುಂಬರುವ ಬಹುಭಾಷಾ ಪ್ರಾಜೆಕ್ಟ್‌ಗೆ ಖುಶಿ ಎಂದು ಹೆಸರಿಡಲಾಗಿದೆ. ಇತ್ತೀಚಿಗೆ ಪೋಸ್ಟರ್ ಜೊತೆಗೆ ಚಿತ್ರದ ಶೀರ್ಷಿಕೆಯನ್ನು ಸಮಂತಾ ಇನ್ಸ್ಟಾಗ್ರಾಮ್​ನಲ್ಲಿ ಅನಾವರಣಗೊಳಿಸಿದ್ದಾರೆ. ಮಹಾನಟಿ ನಂತರ ಸಮಂತಾ ಮತ್ತು ವಿಜಯ್ ಅವರು ಎರಡನೇ ಬಾರಿ ಒಟ್ಟಿಗೆ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪೋಸ್ಟರ್ ಜೊತೆಗೆ ಚಿತ್ರದ ಶೀರ್ಷಿಕೆಯನ್ನು ಅನಾವರಣಗೊಳಿಸಿದ ಸಮಂತಾ, ಇದೊಂದು ಗ್ರ್ಯಾಂಡ್ ಫ್ಯಾಮಿಲಿ ಅನುಭವದ ಚಿತ್ರ ಎಂದು ಬಣ್ಣಿಸಿದ್ದಾರೆ.

First published: