ಸಮಂತಾ (Samantha) ಭಾರತೀಯ ಚಿತ್ರರಂಗದ ಬ್ಯೂಟಿ ಕ್ವೀನ್. ಆಕೆಯ ಸೌಂದರ್ಯಕ್ಕೆ ಆಕೆಯೆ ಸಾಟಿ. ಇತ್ತೀಚೆಗೆ ವಯಕ್ತಿಕ ಲೈಫ್ ಬಗ್ಗೆ ಹೆಚ್ಚು ಸುದ್ದಿಯಾದರು. ನಾಗಚೈತನ್ಯ (Naga Chaitanya) ಜೊತೆ ಡಿವೋರ್ಸ್ ಪಡೆದ ವಿಚಾರ ಟಾಲಿವುಡ್ (Tollywood) ಅಂಗಳದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿತ್ತು. ಇದಾದ ಬಳಿಕ ಸಮಂತಾ ಪುಷ್ಪ (Pushpa) ಸಿನಿಮಾದಲ್ಲಿ ಮೊದಲ ಬಾರಿಗೆ ಐಟಂ ಸಾಂಗ್ನಲ್ಲಿ ಕಾಣಿಸಿಕೊಂಡು ಮತ್ತಷ್ಟು ಸುದ್ದಿಯಲ್ಲಿದ್ದಾರೆ. ಈಕೆಯ ಐಟಂ ಸಾಂಗ್ (Item Song) ನೋಡಲೇಂದೆ ಜನ ಚಿತ್ರಮಂದಿರಗಳಿಗೆ ಬರುತ್ತಿದ್ದಾರೆ. ಥಿಯೇಟರ್ಗಳಲ್ಲೇ ಸಮಂತಾ ಅವರ ಐಟಂ ಸಾಂಗ್ ಕಂಡು ಮತ್ತೊಮ್ಮೆ ರಿಪೀಟ್ ಹಾಕುವಂತೆ ಗಲಾಟೆ ಮಾಡಿರುವ ಪ್ರಕರಣಗಳು ನಡೆದಿವೆ. ಸದ್ಯ ಸಮಂತಾ ಟಾಕ್ ಆಫ್ ದಿ ಟೌನ್ (Talk of The Town) ಆಗಿದ್ದಾರೆ. ಇನ್ನೂ ಈಕೆಯ ಈ ಐಟಂ ಸಾಂಗ್ ಕೂಡ ವಿವಾದಕ್ಕೆ ಒಳಗಾಗಿದೆ. ಈ ಹಾಡಿನ ಸಾಹಿತ್ಯದ ಬಗ್ಗೆ ಕೆಲ ಸಮುದಾಯದವರು ವಿರೋಧ ಕೂಡ ವ್ಯಕ್ತಪಡಿಸಿದ್ದರು. ಈ ಸಾಂಗ್ ಬಗ್ಗೆ ಕಿಡಿಗೇಡಿಯೊಬ್ಬ ಸಮಂತಾ ಅವರನ್ನು ಟೀಕೆ ಮಾಡಿದ್ದಾನೆ. ಆ ಟೀಕೆಗೆ ನಟಿ ಸಮಂತಾ ಸರಿಯಾದ ಉತ್ತರವನ್ನೇ ನೀಡಿದ್ದಾರೆ. ಈ ವಿಚಾರ ಇದೀಗ ಸಾಮಾಜಿಕ ಜಾಲತಾಣ (Social Media)ದಲ್ಲಿ ಸಖತ್ ವೈರಲ್ ಆಗುತ್ತಿದೆ. ಸಮಂತಾ ನೀಡಿದ ಉತ್ತರ ಕಂಡು ಎಲ್ಲರೂ ಶಹಬ್ಬಾಸ್ ಹೇಳುತ್ತಿದ್ದಾರೆ.
ಸೆಕೆಂಡ್ ಹ್ಯಾಂಡ್ ಐಟಂ ಎಂದ ಕಿಡಿಗೇಡಿ!
ಪ್ಯಾನ್ ಇಂಡಿಯಾ ಸಿನಿಮಾ 'ಪುಷ್ಪ' ಸಿನಿಮಾ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಸಮಂತಾ ಐಟಂ ಸಾಂಗ್ಅಭಿಮಾನಿಗಳಿಗೆ ಕಿಕ್ ಮೇಲೆ ಕಿಕ್ ಕೊಟ್ಟಿದೆ. ಥಿಯೇಟರ್‌ನಲ್ಲಿ ಈ ಸಾಂಗ್ಬಂದ ಕೂಡಲೇ ಫ್ಯಾನ್ಸ್ ಹುಚ್ಚೆ್ದ್ದು ಕುಣಿಯುತ್ತಿದ್ದಾರೆ. ಸಿನಿಮಾ ಬಗ್ಗೆ ನೆಗೆಟಿವ್ ಕಮೆಂಟ್ಸ್ ಇದ್ದರೂ, ಈ ಹಾಡಿಗಾಗಿ ಪುಷ್ಪ ಸಿನಿಮಾ ನೋಡುತ್ತಿದ್ದಾರೆ. ಈ ನಡುವೆ ಇಲ್ಲೊಬ್ಬ ವ್ಯಕ್ತಿ ಸಮಂತಾರನ್ನು ಅವಮಾನ ಮಾಡುವಂತೆ ಟ್ವೀಟ್ ಮಾಡಿದ್ದಾನೆ. ಸಮಂತಾಗೆ 'ಸೆಕೆಂಡ್ ಹ್ಯಾಂಡ್ ಐಟಂ' ಎಂದು ಕರೆದಿದ್ದಾನೆ. ಇದನ್ನು ಕಂಡ ಸಮಂತಾ ಫ್ಯಾನ್ಸ್ ಗರಂ ಆಗಿದ್ದಾರೆ.
ಇದನ್ನು ಓದಿ: ಅಯ್ಯೋ.. ಇದೇನ್ ಹಿಂಗಿದೆ ಬಟ್ಟೆ.. ಅದನ್ನೂ ಹಾಕ್ಬೇಡಿ ಹಂಗೇ ಓಡಾಡಿ ಎಂದ ನೆಟ್ಟಿಗರು!
ಸರಿಯಾಗಿ ಉತ್ತರ ಕೊಟ್ಟ ಸಮಂತಾ!
ಅವಮಾನ ಮಾಡಿದ ವ್ಯಕ್ತಿಗೆ ಸಮಂತಾ ರಿಪ್ಲೈ ಮಾಡಿದ್ದಾರೆ. ಟ್ವಿಟರ್‌ನಲ್ಲಿ ಕಮರಲ್ಲಿ ದುಕಾನ್ದಾರ್ ಎಂಬ ವ್ಯಕ್ತಿ ‘ಸಮಂತಾ ಪಾಳುಬಿದ್ದ ವಿಚ್ಛೇದಿತ ಸೆಕೆಂಡ್ ಹ್ಯಾಂಡ್ ಐಟಂ. ಸಂಭಾವಿತ ವ್ಯಕ್ತಿಯಿಂದ ತೆರಿಗೆ ಮುಕ್ತ 50 ಕೋಟಿ ಹಣವನ್ನು ಲೂಟಿ ಮಾಡಿರುವವಳು’ ಎಂದು ಕಮೆಂಟ್ ಮಾಡಿದ್ದ. ಸಾಲದ್ದಕ್ಕೆ ಸಮಂತಾಗೆ ಟ್ಯಾಗ್ ಕೂಡ ಮಾಡಿದ್ದನು. ಇದಕ್ಕೆ ಸಮಂತಾ ಕೂಡ ಸುಮ್ಮನೆ ಕೂತಿಲ್ಲ. ಅವಮಾನ ಮಾಡಿದ ವ್ಯಕ್ತಿಗೆ ಸರಿಯಾದ ಪ್ರತಿಕ್ರಿಯೆ ನೀಡಿದ್ದು, "ನಿಮ್ಮ ಆತ್ಮಕ್ಕೆ ಆ ದೇವರು ಒಳ್ಳೆಯದು ಮಾಡಲಿ" ಎಂದು ಕಮೆಂಟ್ ಮಾಡಿದ್ದಾರೆ. ಈ ಪೋಸ್ಟ್ಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
Kamarali Dukandar God bless your soul . https://t.co/IqA1feO9K1
— Samantha (@Samanthaprabhu2) December 21, 2021
ಇದನ್ನು ಓದಿ : ನಿನ್ನ ಕಂಡ ಕ್ಷಣದಿಂದ ನಾನು ನನ್ನಲಿಲ್ಲ.. ಅಪ್ಪು ನೆನೆದು ಸ್ವೀಟ್ ನಮನ ಸಲ್ಲಿಸಿದ ರಮ್ಯಾ!
ಐಟಂ ಸಾಂಗ್ನಲ್ಲಿ ನಟಿಸುವಂತೆ ಹೆಚ್ಚಾಯ್ತು ಡಿಮ್ಯಾಂಡ್!
ನಟಿ ಸಮಂತಾ 'ಪುಷ್ಪ' ಸಿನಿಮಾದಲ್ಲಿ ಐಟಂ ಸಾಂಗ್ ಒಂದರಲ್ಲಿ ನಟಿಸುತ್ತಿದ್ದಂತೆ, ಇಂತಹದ್ದೇ ಹಾಡುಗಳಲ್ಲಿ ನಟಿಸುವಂತೆ ಹೆಚ್ಚು ಆಫರ್ ಬರುತ್ತಿದೆ. ಹೂಂ ಅಂಟವಾ ಮಾಮಾ.. ಹೂಂ ಹೂಂ ಅಂಟವಾ ಮಾಮ ಹಾಡು ಅಲ್ಲು ಅರ್ಜುನ್ ಹಾಗೂ ಸಮಂತಾ ಅಭಿಮಾನಿಗಳನ್ನು ರಂಜಿಸಿದೆ. ಥಿಯೇಟರ್‌ನಲ್ಲಿ ಪ್ರೇಕ್ಷಕರು ಒನ್ಸ್ ಮೋರ್ ಅಂತ ಕೇಕೆ ಹಾಕುತ್ತಿದ್ದಾರೆ. ಇದನ್ನು ಅರಿತಿರುವ ನಿರ್ಮಾಪಕರು ತಮ್ಮ ಸಿನಿಮಾಗೂ ಐಟಂ ಸಾಂಗಿನಲ್ಲಿ ನಟಿಸಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ಸಮಂತಾ ನನಗೆ ಐಟಂ ಸಾಂಗ್ನಲ್ಲಿ ನಟಿಸುವ ಆಸೆ ಇಲ್ಲ. ಇಂತಹ ಹಾಡುಗಳಿಂದ ದೂರ ಇರಲು ಸಮಂತಾ ನಿರ್ಧರಿಸಿದ್ದಾರಂತೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ