• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Samantha: ಶಾಕುಂತಲಂ ಸಿನಿಮಾ ಬಗ್ಗೆ ಯಾರಿಗೂ ತಿಳಿಯದ 5 ಸತ್ಯ! ಕ್ರೇಜಿ ವಿಚಾರಗಳ ಬಗ್ಗೆ ಬಾಯ್ಬಿಟ್ಟ ಸಮಂತಾ

Samantha: ಶಾಕುಂತಲಂ ಸಿನಿಮಾ ಬಗ್ಗೆ ಯಾರಿಗೂ ತಿಳಿಯದ 5 ಸತ್ಯ! ಕ್ರೇಜಿ ವಿಚಾರಗಳ ಬಗ್ಗೆ ಬಾಯ್ಬಿಟ್ಟ ಸಮಂತಾ

ನಟಿ ಸಮಂತಾ

ನಟಿ ಸಮಂತಾ

ಶಾಕುಂತಲಂ ಸಿನಿಮಾ ಬಗ್ಗೆ ಯಾರಿಗೂ ತಿಳಿಯದ 5 ಕ್ರೇಜಿ ವಿಷಯಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಸಮಂತಾ ಹಂಚಿಕೊಂಡಿದ್ದಾರೆ. 

  • Share this:

ನಟಿ ಸಮಂತಾ (Samantha) ಅಭಿನಯದ ಬಹುನಿರೀಕ್ಷಿತ ಸಿನಿಮಾ ಶಾಕುಂತಲಂ ಸಿನಿಮಾಗಾಗಿ (Shaakuntalam Movie) ಅಭಿಮಾನಿಗಳು ಕಾಯ್ತಿದ್ದಾರೆ. ಪೋಸ್ಟರ್, ಟೀಸರ್​ ಹಾಗೂ ಹಾಡುಗಳ ಮೂಲಕ  ಸಿನಿಮಾ ಬಗ್ಗೆ ಸಖತ್ ಹೈಪ್​ ಕ್ರಿಯೇಟ್​ ಆಗಿದೆ. ಕೆಲ ದಿನಗಳಿಂದ ನಟಿ ಸಮಂತಾ ಶಾಕುಂತಲಂ (Shaakuntalam) ಸಿನಿಮಾ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಇದೀಗ ಸಮಂತಾ,  ಶಾಕುಂತಲಂ ಸಿನಿಮಾ ಬಗ್ಗೆ ಯಾರಿಗೂ ತಿಳಿಯದ 5 ಕ್ರೇಜಿ ವಿಷಯಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 


ಸಮಂತಾ ಫ್ಲವರ್ ಅಲರ್ಜಿ ಆಗಿತ್ತಂತೆ!


ಶಾಕುಂತಲಂ ಸಿನಿಮಾದಲ್ಲಿ ಶಾಕುಂತಲೆಯಾಗಿ ಅಭಿನಯ ಮಾಡಲು ಪಾತ್ರಕ್ಕೆ ತಕ್ಕಂತೆ ಸಿದ್ಧವಾಗಿದ್ದೆ ಎಂದು ಸಮಂತಾ ಹೇಳಿದ್ದಾರೆ. ನನ್ನ ಕೈ ಹಾಗೂ ಕುತ್ತಿಗೆಗೆ ಹೂವಿನಿಂದ ಮಾಡಿದ ಹಾರವನ್ನು ಕಟ್ಟಿದ್ರು. ಆ್ಯಕ್ಟ್​ ಮಾಡುವಾಗ ಯಾವುದೇ ತೊಂದರೆಯಾಗಿಲ್ಲ ಆದ್ರೆ ಸಂಜೆ ಅದನ್ನು ತೆಗೆದಾಗ ನನ್ನ ಕೈಗಳ ಮೇಲೆ ಹೂವಿನ ಟ್ಯಾಟೋ ರೀತಿ ಮೂಡಿತ್ತು. ಫ್ಲವರ್ ಅಲರ್ಜಿ ಆಗಿತ್ತು. 6 ತಿಂಗಳು ಅದು ಹಾಗೇ ಉಳಿದಿದೆ. ನಾನು ನನ್ನ ಕೈಗೆ ಮೇಕಪ್ ಮಾಡಿಕೊಂಡು ಓಡಾಡುತ್ತಿದೆ ಎಂದು ಸ್ಯಾಮ್ ಹೇಳಿದ್ದಾರೆ.


ಡಬ್ಬಿಂಗ್ ಮಾಡುತ್ತಾ ನಿದ್ದೆಗೆ ಜಾರುತ್ತಿದೆ


ಶಾಕುಂತಲಂ ಸಿನಿಮಾ ತೆಲುಗು, ಹಿಂದಿ, ತಮಿಳು, ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ರಿಲೀಸ್​ ಆಗಲಿದೆ.  ಸ್ಯಾಮ್, ಹಿಂದಿ, ತೆಲುಗು, ತಮಿಳು ಭಾಷೆಗಳಲ್ಲಿ ಡಬ್ಬಿಂಗ್ ಮಾಡಿದ್ದಾರೆ. ಇದು ನಿಜಕ್ಕೂ ತುಂಬಾ ಕಷ್ಟವಾತಯ್ತು. ಇತರ ನಟರು ಹೇಗೆ ಮಾಡುತ್ತಾರೆ ಎಂದು ನನಗೆ ಗೊತ್ತಿಲ್ಲ. ನಾನು ಡೈಲಾಗ್ ಹೇಳಿ ಹೇಳಿ ಸುಸ್ತಾಗಿ ಮಲಗಿ ಬಿಡುತ್ತಿದೆ. ಇದು ಯಾರಿಗೂ ತಿಳಿದಿಲ್ಲ ಎಂದು ಸಮಂತಾ ಹೇಳಿದ್ದಾರೆ.


ಸಮಂತಾ


30 ಕೆಜಿಯ ಲೆಹಂಗಾ ತೊಟ್ಟು ಡ್ಯಾನ್ಸ್​


ನೀತಾ ಮ್ಯಾಮ್​ ಸಿನಿಮಾಗೆ ಕಾಸ್ಟ್ಯೂಮ್ ಡಿಸೈನರ್ ಆಗಿದ್ರು. ಅವರು ನನ್ನ ಪಾತ್ರಕ್ಕಾಗಿ ಬ್ಯೂಟಿಫುಲ್ ಕಾಸ್ಟ್ಯೂಮ್​ ಡಿಸೈನ್ ಮಾಡಿದ್ರು. ಸಿನಿಮಾ ಹಾಡುಗಳಿಗಾಗಿ ಅನೇಕ ಲೆಹಂಗಾಗಳನ್ನು ಧರಿಸಿದ್ದೆ ಕೆಲವು ಸಿಂಪಲ್​ ಆಗಿದ್ದವು ಇನ್ನೂ ಕೆಲವು ಭಾರವಾಗಿರುವ ಲೆಹಂಗಾಗಳನ್ನು ತೊಟ್ಟಿದ್ದೇನೆ.


30 ಕೆಜಿಯ ಲೆಹಂಗಾ ಹಾಕಿಕೊಂಡು ಡ್ಯಾನ್ಸ್ ಮಾಡಿದ್ದೇನೆ. ಭಾರವಾಗಿದ್ದ ಲೆಹಂಗಾ ತೊಟ್ಟು ನನಗೆ ಡ್ಯಾನ್ಸ್​ ಮಾಡಲು ತುಂಬಾ ಕಷ್ಟವಾಗಿತ್ತು. 30 ಕೆಜಿ ಲೆಹಂಗಾ ಧರಿಸಿ ಒಂದು ಸುತ್ತು ಸುತ್ತಿದೆ. ಲೆಹಂಗಾ ನನ್ನನ್ನು ಬೇರೆಡೆಗೆ ಎಳೆದುಕೊಂಡು ಹೋಗ್ತಿತ್ತು. ಅನೇಕ ಭಾರೀ ಫ್ರೇಮ್​​ನಿಂದ ಹೊರಗೆ ಹೋಗಿದ್ದೇನೆ. 10-15 ಟೆಕ್ ತೆಗೆದುಕೊಂಡು ಶೂಟ್​ ಮಾಡಿದ್ದೇನೆ ಎಂದು ಸಮಂತಾ ಹೇಳಿದ್ದಾರೆ.




ಅದು ನನ್ನ ಕೂದಲು ಅಲ್ಲವೇ ಅಲ್ಲ


ಶಾಕುಂತಲೆ ನೀಳ ಕೂದಲು ಹೊಂದಿದ ಸುಂದರಿ. ಶಾಕುಂತಲಂ ಸಿನಿಮಾದಲ್ಲಿರುವುದು ನನ್ನ ನಿಜವಾದ ಕೂದಲು ಅಲ್ಲ ಎಂದು ಸಮಂತಾ ಹೇಳುತ್ತಾ ಸ್ಯಾಮ್ ನಕ್ಕಿದ್ದಾರೆ. ಶಾಕುಂತಲಂ ಸಿನಿಮಾ ಬಗ್ಗೆ ಯಾರಿಗೂ ತಿಳಿಯದ 5 ಕ್ರೇಜಿ ವಿಷಯಗಳನ್ನು ಸಮಂತಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.


ಏಪ್ರಿಲ್ 14ರಂದು ಸಿನಿಮಾ ರಿಲೀಸ್


ಪೌರಾಣಿಕ ಹಿನ್ನೆಲೆ ಇರುವ ಈ ಸಿನಿಮಾದಲ್ಲಿ ಸಮಂತಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಗುಣಶೇಖರ್ ನಿರ್ದೇಶಿಸಿದ್ದು, ನೀಲಿಮಾ ಗುಣ ಮತ್ತು ದಿಲ್ ರಾಜು ಜಂಟಿ ನಿರ್ಮಾಪಕರಾಗಿದ್ದಾರೆ. ಶಾಕುಂತಲಂ ಸಿನಿಮಾ  ಏಪ್ರಿಲ್ 14 ರಂದು ರಿಲೀಸ್ ಆಗಲಿದೆ.


ಇದನ್ನೂ ಓದಿ: Divya Suresh: ಬಾಯ್​ಫ್ರೆಂಡ್​ಗೆ ರೊಮ್ಯಾಂಟಿಕ್ ವಿಶ್ ಮಾಡಿದ ದಿವ್ಯಾ ಸುರೇಶ್! ಯಾವಾಗ ಮದುವೆ ಅಂತಿದ್ದಾರೆ ಫ್ಯಾನ್ಸ್



top videos





    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು