ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದ ನಟಿ ಸಮಂತಾ (Actress Samantha) ಇದೀಗ ಸಂಪೂರ್ಣ ಗುಣಮುಖರಾಗಿದ್ದಾರೆ. ಸಮಂತಾ ಅವರು ಮೈಯೋಸಿಟಿಸ್ (Myositis) ಹೆಸರಿನ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದರು. ಸಿನಿಮಾ ಕೆಲಸಕ್ಕೂ ಬ್ರೇಕ್ ನೀಡಿದ್ದ ನಟಿ ಸಮಂತಾ ಇದೀಗ ಮತ್ತೆ ಸಿನಿಮಾ ಶೂಟಿಂಗ್ಗಳಲ್ಲಿ (Shooting) ಭಾಗಿ ಆಗ್ತಿದ್ದಾರೆ. ಸ್ಯಾಮ್ ಬಹುನಿರೀಕ್ಷಿತ ಸಿನಿಮಾ ಶಾಕುಂತಲಂ (Shaakuntalam) ಶೀಘ್ರದಲ್ಲೇ ರಿಲೀಸ್ ಆಗಲಿದೆ. ನಟಿ ಕೂಡ ಸಿನಿಮಾ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ.
ಜಿಮ್ನಲ್ಲಿ ಸಮಂತಾ ವರ್ಕೌಟ್
ತಾನು ಮೈಯೋಸಿಟಿಸ್ ಕಾಯಿಲೆಯಿಂದ ಬಳಲುತ್ತಿರುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಈ ಕಾಯಿಲೆ ಕಾಣಿಸಿದ ನಂತರ ಸ್ನಾಯುಗಳಲ್ಲಿ ಸೆಳೆತ ಶುರುವಾಗಿತ್ತು. ಅನೇಕ ದಿನಗಳ ಕಾಲ ವಿಶ್ರಾಂತಿ ಪಡೆದ ನಟಿ ಸಮಂತಾ ಟ್ರಿಟ್ಮೆಂಟ್ ಪಡೆದು ಗುಣಮುಖರಾಗಿದ್ದಾರೆ. ಇದೀಗ ಮತ್ತೆ ತಮ್ಮ ಫಿಟ್ನೆಸ್ ಬಗ್ಗೆ ಗಮನಹರಿಸಿರುವ ಸಮಂತಾ ಜಿಮ್ನಲ್ಲಿ ವರ್ಕೌಟ್ ಶುರು ಮಾಡಿದ್ದಾರೆ. ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ (Social Media) ಶೇರ್ ಮಾಡಿಕೊಂಡಿದ್ದಾರೆ.
View this post on Instagram
ಅತಿಯಾಗಿ ಜಿಮ್ ಮಾಡುವುದರಿಂದಲೂ Myositis ಕಾಯಿಲೆ ಬರುತ್ತದೆ ಎಂದು ವೈದ್ಯರು ಹೇಳುತ್ತಾರೆ. ಸಮಂತಾ ಕೂಡ ಸಾಕಷ್ಟು ಸಮಯ ಜಿಮ್ನಲ್ಲಿ ಕಳೆದಿದ್ದರಿಂದಲೇ ಅವರಿಗೆ Myositis ರೋಗ ಕಾಣಿಸಿಕೊಂಡಿದೆ ಎನ್ನಲಾಗಿತ್ತು. ಕಾಯಿಲೆ ಕಾಣಿಸಿಕೊಂಡ ಬಳಿಕ ಸಮಂತಾ ವರ್ಕೌಟ್ ಮಾಡುವುದನ್ನೇ ಬಿಟ್ಟಿದ್ದರು. ಇದೀಗ ಮತ್ತೆ ಶುರು ಮಾಡಿದ್ದಾರೆ.
ಫಿಟ್ನೆಸ್ಗೆ ಆದ್ಯತೆ ಕೊಡ್ತಿದ್ದಾರೆ ಸ್ಯಾಮ್
ಕಾಯಿಲೆಯಿಂದ ಗುಣಮುಖರಾಗಿ ಕೆಲ ತಿಂಗಳ ಬಳಿಕ ಕಾಣಿಸಿಕೊಂಡ ಸಮಂತಾ ಫೋಟೋಗಳು ಕೂಡ ಟ್ರೋಲ್ ಆಗಿತ್ತು. ಸಮಂತಾ ಮುಖದಲ್ಲಿ ಮೊದಲಿನ ಕಳೆ ಇಲ್ಲ ಎಂದು ಅನೇಕ ನೆಟ್ಟಿಗರು ಕಮೆಂಟ್ ಮಾಡಿದ್ರು. ಟೀಕೆಗಳಿಗೆಲ್ಲಾ ನಟಿ ಸಮಂತಾ ಕೂಡ ತಿರುಗೇಟು ನೀಡಿದ್ದರು.
ಫುಲ್ ಫಿಟ್ ಆಗ್ತಿದ್ದಾರೆ ಸಮಂತಾ
ಮೊದಲಿನಿಂದಲೂ ಫಿಟ್ನೆಸ್ಗೆ ಹೆಚ್ಚು ಆದ್ಯತೆ ನೀಡುತ್ತಿದ್ದ ಸಮಂತಾ ತಮ್ಮ ವರ್ಕೌಟ್ ಫೋಟೋಗಳನ್ನು ಕೂಡ ಶೇರ್ ಮಾಡುತ್ತಿದ್ರು. ಜಿಮ್ನಲ್ಲಿ ಸಾಕಷ್ಟು ಸಮಯ ಕಳೆಯುತ್ತಿದ್ರು, ಈ ವಿಚಿತ್ರ ಕಾಯಿಲೆ ಕಾಣಿಸಿಕೊಂಡ ನಂತರದಲ್ಲಿ ಅನಿವಾರ್ಯವಾಗಿ ದಿನಚರಿಯಲ್ಲಿ ಹಲವು ಬದಲಾವಣೆ ಮಾಡಿಕೊಂಡಿದ್ದಾರೆ.
ಸಮಂತಾ ನಟನೆಯ ಯಶೋದ ಚಿತ್ರ 2022ರಲ್ಲಿ ರಿಲೀಸ್ಗೂ ಮುನ್ನವೇ ಸಮಂತಾ ಕಾಯಿಲೆಗೆ ಒಳಗಾಗಿದ್ರು. ಈ ಸಿನಿಮಾ ಡಬ್ಬಿಂಗ್ ಸಂದರ್ಭದಲ್ಲಿ ಕೈಗೆ ಡ್ರಿಪ್ ಹಾಕಿಕೊಂಡಿದ್ದ ಫೋಟೋ ವೈರಲ್ ಆಗಿತ್ತು. ಈ ವೇಳೆ ಅಭಿಮಾನಿಗಳಿಗೆ ಸಾಕಷ್ಟು ಬೇಸರ ಹೊರಹಾಕಿದ್ರು. ಸಮಂತಾ ಶೀಘ್ರವೇ ಗುಣಮುಖರಾಗಿ ಎಂದು ಅನೇಕರು ಕಮೆಂಟ್ ಮಾಡಿದ್ರು.
ಡಯೆಟ್ ಫಾಲೋ ಮಾಡ್ತಿದ್ದಾರೆ ಸಮಂತಾ
ನಟಿ ಸಮಂತಾ ತಾವು ಆಟೋಇಮ್ಯೂನ್ ಡಯೆಟ್ (Autoimmune Diet) ಫಾಲೋ ಮಾಡುತ್ತಿರುವುದಾಗಿ ಹೇಳಿದ್ದಾರೆ. ತಾವು ವರ್ಕೌಟ್ ಮಾಡುತ್ತಿರುವ ವಿಡಿಯೋದಲ್ಲಿ ಆಟೋಇಮ್ಯೂನ್ ಡಯೆಟ್ ಬಗ್ಗೆ ಹೇಳಿದ್ದಾರೆ. ವಿಡಿಯೋ ಜೊತೆಗೆ ನೋಟ್ ಕೂಡ ಬರೆದಿದ್ದ ಸಮಂತಾ ಅದರಲ್ಲಿ ತಾವು ಗ್ರಾವಿಟಿಗೆ ಧನ್ಯವಾದ ಹೇಳುವುದಾಗಿ ತಿಳಿಸಿದ್ದಾರೆ.
ಫೆಬ್ರವರಿ 17ರಂದು ಶಾಕುಂತಲಂ ರಿಲೀಸ್
ಸಮಂತಾ ‘ಶಾಕುಂತಲಂ’ ಸಿನಿಮಾ ರಿಲೀಸ್ಗಾಗಿ ಕಾಯುತ್ತಿದ್ದಾರೆ. ಫೆಬ್ರವರಿ 17ರಂದು ಈ ಚಿತ್ರ ರಿಲೀಸ್ ಆಗುತ್ತಿದೆ. ಶಾಕುಂತಲೆಯ ಕಥೆಯನ್ನು ಆಧರಿಸಿ ಈ ಸಿನಿಮಾ ಸಿದ್ಧಗೊಳ್ಳುತ್ತಿದೆ. ಈ ಚಿತ್ರದ ಪ್ರಚಾರ ಕಾರ್ಯದಲ್ಲೂ ಸಮಂತಾ ಭಾಗಿ ಆಗಲಿದ್ದಾರೆ ಎನ್ನಲಾಗಿದೆ. ಸಮಂತಾ ಅವರು ಸ್ಟ್ರಿಕ್ಟ್ ಆಗಿ ಡಯಟ್ ಫಾಲೋ ಮಾಡುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ