• Home
  • »
  • News
  • »
  • entertainment
  • »
  • Samantha: ಯಶ್​ ಬಗ್ಗೆ ಹೀಗಂದ್ರಾ ಸಮಂತಾ? ರಾಕಿಂಗ್ ಸ್ಟಾರ್ ಬಗ್ಗೆ ಪುಷ್ಪ ಬೆಡಗಿ ಮಾತು

Samantha: ಯಶ್​ ಬಗ್ಗೆ ಹೀಗಂದ್ರಾ ಸಮಂತಾ? ರಾಕಿಂಗ್ ಸ್ಟಾರ್ ಬಗ್ಗೆ ಪುಷ್ಪ ಬೆಡಗಿ ಮಾತು

ಸಮಂತಾ ಹಾಗೂ ಯಶ್​

ಸಮಂತಾ ಹಾಗೂ ಯಶ್​

Samantha And Yash: ಈ ಶೋನಲ್ಲಿ ಸಮಂತಾ ಬಹಳ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಹಾಗೆಯೇ, ಕರಣ್ ಸಮಂತಾಗೆ ನಿಮ್ಮ ಬೆಸ್ಟ್ ಫ್ರೆಂಡ್ ಬ್ಯಾಚುಲರ್ ಪಾರ್ಟಿಯಲ್ಲಿ ನೀವು ಡ್ಯಾನ್ಸ್ ಮಾಡಬೇಕಾದರೆ ಯಾವ ಹೀರೋ ಜೊತೆಗೆ ಡ್ಯಾನ್ಸ್ ಮಾಡುತ್ತೀರಿ ಎಂದು ಪ್ರಶ್ನೆ ಕೇಳಿದ್ದಾರೆ.

  • Share this:

ಸ್ಯಾಂಡಲ್​ವುಡ್​ನಿಂದ (Sandalwood) ಬಾಲಿವುಡ್​ವರೆಗೆ (Bollywood) ಸದ್ಯ ಸುದ್ದಿಯಲ್ಲಿರುವ ಹೆಸರು ಎಂದರೆ ರಾಕಿಂಗ್ ಸ್ಟಾರ್ ಯಶ್​ (Rocking Star Yash) ಹಾಗೂ ಸಮಂತಾ (Samantha). ಕೆಜಿಎಫ್ 2 (KGF 2) ಮೂಲಕ ಯಶ್​ ಪ್ಯಾನ್​ ಇಂಡಿಯಾ ಸ್ಟಾರ್ ಆಗಿರುವುದು ಮಾತ್ರವಲ್ಲದೇ ಎಲ್ಲರ ಕಣ್ಣು ಇವರ ಮೇಲಿದೆ. ಹಾಗೆಯೇ ಸಮಂತಾ ಸಹ ಎಲ್ಲೆಡೆ ಸುದ್ದಿಯಲ್ಲಿದ್ದಾರೆ. ಅವರ ಸಿನಿಮಾ ಜೊತೆಗೆ ಅವರ ಹೇಳಿಕೆಗಳು ಎಲ್ಲೆಡೆ ಸದ್ದು ಮಾಡುತ್ತದೆ. ಇದೀಗ ಅವರು ರಾಕಿಂಗ್ ಸ್ಟಾರ್ ಯಶ್​ ಬಗ್ಗೆ ಹೇಳಿ ನೀಡಿದ್ದು, ಈಗ ಅದು ಸದ್ಯ ಇದೇ ಎಲ್ಲೆಡೆ ಹರಿದಾಡುತ್ತಿದೆ.


ಯಶ್​ ವಾಯ್ಸ್​ ಎಂದರೆ ಇಷ್ಟ ಎಂದ ಸಮಂತಾ


ಎಲ್ಲರಿಗೂ ಗೊತ್ತಿರುವಂತೆ ಸಮಂತಾ ಬಾಲಿವುಡ್​ನಲ್ಲಿ ಸಹ ಹೆಸರುಗಳಿಸಿದ್ದಾರೆ. ಫ್ಯಾಮಿಲಿ ಮ್ಯಾನ್​ ಸೀರೀಸ್​ ನಂತರ ಅವರು ಬಾಲಿವುಡ್​ನಲ್ಲಿ ಸಿನಿಮಾ ಮಾಡುತ್ತಾರೆ ಎನ್ನುವ ಸುದ್ದಿ ಹರಿದಾಡಿತ್ತು. ಈಗಾಗಲೇ ಅವರು 2 ಸಿನಿಮಾ ಒಪ್ಪಿಕೊಂಡಿರುವ ಬಗ್ಗೆ ಮಾಹಿತಿ ಇದೆ. ಈ ಮಧ್ಯೆ ಸಮಂತಾ ಇತ್ತೀಚೆಗಷ್ಟೇ ಪ್ರತಿಷ್ಠಿತ ಶೋ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು, ಈ ಸಮಯದಲ್ಲಿ ಅವರು ಯಶ್​ ಬಗ್ಗೆ ಮಾತನಾಡಿದ್ದಾರೆ.


rocking star Yash preparing for his next film


ಈ ಕಾರ್ಯಕ್ರಮದಲ್ಲಿ ಅಕ್ಷಯ್​ ಕುಮಾರ್ ಜೊತೆ ಸಮಂತಾ ಭಾಗವಹಿಸಿದ್ದರು, ಅದರ ವಿಡಿಯೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನು ಶೋನಲ್ಲಿ ಕರಣ್ ಜೋಹರ್ ರ್ಯಾಪಿಡ್​ ಫೈರ್​ ಮಾಡಿದ್ದು, ಅದರಲ್ಲಿ ಅವರು ಕೇಳಿರುವ ಒಂದು ಪ್ರಶ್ನೆಗೆ ಸಮಂತಾ ಯಶ್​ ಹೆಸರನ್ನು ಹೇಳಿದ್ದಾರೆ. ಕರಣ್ ಸಮಂತಾಗೆ ನಿಮ್ಮ ಜಿಪಿಎಸ್​(ಮ್ಯಾಪ್​) ಗೆ ಯಾರ ಧ್ವನಿ ಬೇಕು ಎಂದು ಕೇಳಿದಾಗ ಸಮಂತಾ ಯಶ್​ ಅವರ ವಾಯ್ಸ್ ಬೇಕು ಎಂದಿದ್ದಾರೆ. ಈ ಮೂಲಕ ಸಮಂತಾ ತಮಗೆ ಯಶ್ ವಾಯ್ಸ್ ಇಷ್ಟ ಎಂಬುದನ್ನ ತಿಳಿಸಿದ್ದಾರೆ.


ಈ ಶೋನಲ್ಲಿ ಸಮಂತಾ ಬಹಳ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಹಾಗೆಯೇ, ಕರಣ್ ಸಮಂತಾಗೆ ನಿಮ್ಮ ಬೆಸ್ಟ್ ಫ್ರೆಂಡ್ ಬ್ಯಾಚುಲರ್ ಪಾರ್ಟಿಯಲ್ಲಿ ನೀವು ಡ್ಯಾನ್ಸ್ ಮಾಡಬೇಕಾದರೆ ಯಾವ ಹೀರೋ ಜೊತೆಗೆ ಡ್ಯಾನ್ಸ್ ಮಾಡುತ್ತೀರಿ ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಸಮಂತಾ, ರಣವೀರ್ ಸಿಂಗ್  ಎಂದರೆ ಇಷ್ಟ ಅವರ ಜೊತೆ ಡ್ಯಾನ್ಸ್ ಮಾಡುತ್ತೇನೆ ಎಂದಿದ್ದಾರೆ. ಇದನ್ನು ಕೇಳಿದ ಅಕ್ಷಯ್ ಕುಮಾರ್ ಸಹ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಈ ನಟಿಮಣಿಯರಿಗೆ ಫಿಲ್ಮೇ ಲೈಫ್ ಅಂತೆ! ಏಜ್ ಆದ್ರೂ ಮದ್ವೆ ಆಗಿಲ್ಲ ಈ ಸುರಸುಂದರಿಯರು!


ಈ ಮಧ್ಯೆ ಕಾರ್ಯಕ್ರಮದ ಆರಂಭದಲ್ಲಿ  ಅಕ್ಷಯ್ ಕುಮಾರ್, ಸಮಂತಾ ಎಂಟ್ರಿಯನ್ನು ಕರಣ್ ಘೋಷಿಸಿದ್ದರು,  ಕಾರ್ಯಕ್ರಮಕ್ಕೆ ಎಂಟ್ರಿಯಾದ ತಕ್ಷಣ ಸಮಂತಾ ಅವರನ್ನು ಒಮ್ಮೆಲೇ ಎತ್ತಿಕೊಂಡು ಬಂದಿದ್ದು, ಈ ವಿಡಿಯೋ ಎಲ್ಲಡೆ ಸಖತ್ ವೈರಲ್ ಆಗಿದ್ದವು.


ಶೋನಲ್ಲಿ ಮನಬಿಚ್ಚಿ ಮಾತನಾಡಿದ ಸುಂದರಿ


ಅಲ್ಲದೇ, ಈ ಹಿಂದೆ ಸಮಂತಾ ಕರಣ್ ಬಗ್ಗೆ ಹೇಳಿದ್ದ ಮಾತು ಸಹ ಬಹಳ ಚರ್ಚೆಗೆ ಕಾರಣವಾಗಿತ್ತು. ಮದುವೆಯ ನಂತರದ ಜೀವನ ನಿರೀಕ್ಷಿತ ಮಟ್ಟದಲ್ಲಿ ಇರದಿರಲು ನೀವೇ (ಕರಣ್ ಜೋಹರ್) ಕಾರಣ ಎಂದಿದ್ದರು. ಮದುವೆಯ ನಂತರದ ಜೀವನ ಕಭಿ ಖುಷಿ ಕಬಿ ಗಮ್ ಅಂತ ತೋರಿಸಿದ್ದಾರೆ. ಆದರೆ ವಾಸ್ತವದಲ್ಲಿ ಅದೆಲ್ಲ ಬೇರೆ. ಮದುವೆಯ ನಂತರದ ಲೈಫ್​ ಕೆಜಿಎಫ್ ತರ ಇರುತ್ತದೆ ಎಂದಿದ್ದಾರೆ.
ಇದನ್ನೂ ಓದಿ: ಮಿಸೆಸ್​ ಇಂಡಿಯಾ ಪ್ರಶಸ್ತಿ ಮುಡಿಗೇರಿಸಿಕೊಂಡ ನಿವೇದಿತಾ ಗೌಡ, ಜನರ ಫೇವರೇಟ್​ ಅಂತೆ ಗೊಂಬೆ


ಸ್ಟಾರ್ ಹೀರೋಯಿನ್ ಸಮಂತಾ ಮದುವೆ ಮ್ಯಾಟರ್, ಆ ನಂತರ ಡೈವೋರ್ಸ್ ಮ್ಯಾಟರ್ ಎಷ್ಟು ವೈರಲ್ ಆಗಿತ್ತು. ಅಕ್ಕಿನೇನಿ ನಾಗ ಚೈತನ್ಯ ಅವರನ್ನು ಮದುವೆಯಾಗಿದ್ದ ಸಮಂತಾ ನಾಲ್ಕು ವರ್ಷಗಳ ಕಾಲ ಅವರೊಂದಿಗೆ ಸಂಸಾರ ನಡೆಸಿ ಇತ್ತೀಚೆಗೆ ಡೈವೋರ್ಸ್ ಪಡೆದಿದ್ದಾರೆ.

Published by:Sandhya M
First published: