Samantha: ಜಿಮ್​ನಲ್ಲಿ ಸಮಂತಾಗೆ ವರ್ಕೌಟ್​ ಮಾಡೋಕೆ ಬಿಡ್ತಿಲ್ವಂತೆ ಇವ್ರು! ಎಲ್ಲಿ ಹೋದ್ರೂ ಅಲ್ಲೇ ಬರ್ತಾರಂತೆ

‘ಪುಷ್ಪ’(Pushpa) ಸಿನಿಮಾದ ‘ಹು ಅಂತಿಯಾ ಮಾವ ಊಹೂ ಅಂತಿಯಾ ಮಾವ’ ಹಾಡು ಸೂಪರ್​ ಹಿಟ್​ ಆದ ನಂತರ ಪ್ಯಾನ್​ ಇಂಡಿಯಾ Pan India) ಮಟ್ಟದಲ್ಲಿ ಸಮಂತಾ ಫೇಮಸ್​ ಆಗಿಬಿಟ್ಟರು. ಇದೀಗ ಇವರಿಗೆ ಜಿಮ್​ನಲ್ಲಿ ಯಾರೋ ಕಾಟ ಕೊಡ್ತಿದ್ದಾರಂತೆ. ಯಾರು ಅಂತೀರಾ? ಮುಂದೆ ನೋಡಿ

ನಟಿ ಸಮಂತಾ

ನಟಿ ಸಮಂತಾ

  • Share this:
ಸಮಂತಾ (Samantha) ಭಾರತೀಯ ಚಿತ್ರರಂಗದಲ್ಲಿ ಸದ್ಯಕ್ಕೆ ಟಾಕ್​ ಆಫ್​ ದಿ ಟೌನ್ ​(Talk of The Town) ಅಂದರೆ ತಪ್ಪಾಗುವುದಿಲ್ಲ. ಒಂದಲ್ಲ ಒಂದು ವಿಚಾರಕ್ಕೆ ಸಮಂತಾ ಸುದ್ದಿಯಾಗುತ್ತಿರುತ್ತಾರೆ. ನಟಿ ಸಮಂತಾ ಸದ್ಯ ‘ಶಾಕುಂತಲೆ’ ಅವತಾರ ರಿವೀಲ್ ಮಾಡಿ ಸುದ್ದಿ ಆಗಿದ್ದರು. ‘ಶಾಕುಂತಲೆ’ ರೂಪದಲ್ಲಿ ದರ್ಶನ ಕೊಟ್ಟ ಸಮಂತಾಳನ್ನು ಅಭಿಮಾನಿ(Fans)ಗಳು ಕೊಂಡಾಡಿದ್ದಾರೆ. ‘ಶಾಕುಂತಲಂ’ (Shaakuntalam) ಚಿತ್ರದ ಪೋಸ್ಟರ್ ವೈರಲ್ ಆಗಿತ್ತು. ಒಂದಲ್ಲ ಒಂದು ವಿಚಾರಕ್ಕೆ ನಟಿ ಸಮಂತಾ ಸುದ್ದಿಯಲ್ಲಿರುತ್ತಾರೆ. ‘ಪುಷ್ಪ’(Pushpa) ಸಿನಿಮಾದ ‘ಹು ಅಂತಿಯಾ ಮಾವ ಊಹೂ ಅಂತಿಯಾ ಮಾವ’ ಹಾಡು ಸೂಪರ್​ ಹಿಟ್​ ಆದ ನಂತರ ಪ್ಯಾನ್​ ಇಂಡಿಯಾ Pan India) ಮಟ್ಟದಲ್ಲಿ ಸಮಂತಾ ಫೇಮಸ್​ ಆಗಿಬಿಟ್ಟರು. ಇದೀಗ ಇವರಿಗೆ ಜಿಮ್​ನಲ್ಲಿ ಯಾರೋ ಕಾಟ ಕೊಡ್ತಿದ್ದಾರಂತೆ. ಯಾರು ಅಂತೀರಾ? ಮುಂದೆ ನೋಡಿ

ಸಮಂತಾಗೆ ವರ್ಕೌಟ್​ ಮಾಡೋಕೆ ಬಿಡಲ್ವಂತೆ!

ಇತ್ತೀಚೆಗೆ ಸಮಂತಾ ತನ್ನ ಇನ್ಸ್ಟಾಗ್ರಾಮ್‌ನಲ್ಲಿ ಫೋಟೊ ಶೇರ್ ಮಾಡಿಕೊಂಡಿದ್ದಾರೆ. ಅದರಲ್ಲಿ ಸಮಂತಾ ಇಬ್ಬರು ವ್ಯಕ್ತಿಗಳನ್ನು ಪರಿಚಯಿಸಿದ್ದಾರೆ. ನಿಮಗೆ ಈಗಾಗಲೇ ತಿಳಿದಿರುವಂತೆ, ಸಮಂತಾ ಸಂಪೂರ್ಣ ಫಿಟ್ನೆಸ್ ಫ್ರೀಕ್. ಸಮಯ ತನ್ನ ಬಿಡುವಿನ ವೇಳೆಯನ್ನು ಜಿಮ್‌ನಲ್ಲಿ ಬೆವರು ಸುರಿಸುತ್ತಾರೆ. ಆದರೆ, ಈ ವಿಶೇಷ ವ್ಯಕ್ತಿಗಳು ಸಮಂತಾಗೆ ವರ್ಕೌಟ್ ಮಾಡಲು ಬಿಡುವುದಿಲ್ಲವಂತೆ. ಸಮಂತಾ ಎಲ್ಲೇ ಹೋದರೂ, ಅಲ್ಲೇ ಹೋಗಿ ತೊಂದರೆ ಕೊಡ್ತಾರಂತೆ. ಹೀಗೆ ತೊಂದರೆ ಕೊಡುತ್ತಿರುವುದು ಬೇರೆ ಯಾರು ಅಲ್ಲ. ಸಶಾ ಮತ್ತು ಹ್ಯಾಶ್ ಹೆಸರಿನ ನಾಯಿಗಳು.

ಸಖತ್​ ಕಿರಿಕ್​ ಮಾಡ್ತಾರಂತೆ ಹ್ಯಾಶ್​ & ಸಶಾ!

ಸಮಂತಾ ತಮ್ಮ ವರ್ಕ್‌ಔಟ್ ಸಮಯದಲ್ಲಿ ತನ್ನ ಶ್ವಾನಗಳಾದ ಸಶಾ ಮತ್ತು ಹ್ಯಾಶ್ ಫೋಟೋವನ್ನು ಹಂಚಿಕೊಂಡಿದ್ದಾರೆ. ಅಲ್ಲದೇ ಅದಕ್ಕೆ ಕ್ಯಾಪ್ಷನ್‌ ಕೂಡ ಬರೆದುಕೊಂಡಿರುವ ಅವರು ‘ನನಗೆ ತಿಳಿದಿರುವಂತೆ ಜೀವನ @ ಸಹೋದರರ ಸಮಸ್ಯೆಗಳು’ ಎಂದು ಬರೆದಿದ್ದಾರೆ.  ವರ್ಕ್‌ಔಟ್‌ ಮಾಡಲು ತೊಂದರೆ ನೀಡುತ್ತವೆ. ಈ ಬಗ್ಗೆ ಬರೆದುಕೊಂಡಿರುವ ಸಮಂತಾ ಸಶಾ ಮತ್ತು ಹ್ಯಾಶ್‌ರ ತರಲೆ ಫೋಟೊಗಳನ್ನು ಹಂಚಿಕೊಂಡಿದ್ದಾರೆ.ಇದನ್ನೂ ಓದಿ: ನಾಗ ಚೈತನ್ಯ ನನ್ನ ಜೀವನದ ಶ್ರೇಷ್ಠ ಸಂಗತಿ ಎಂದಿದ್ದ ಸಮಂತಾ, ಅಂದ್ಮೇಲೆ ಬೇರೆಯಾಗಿದ್ದೇಕೆ?

ವಿಜಯ್​ ದೇವರಕೊಂಡ ಜೊತೆ ಸಮಂತಾ ರೊಮ್ಯಾನ್ಸ್​!

ಡಿವೋರ್ಸ್ ಬಳಿಕ ಸಮಂತಾ ಮತ್ತಷ್ಟು ಬ್ಯುಸಿಯಾಗಿದ್ದಾರೆ. ಹಲವಾರು ಸಿನಿಮಾಗಳು ಸಮಂತಾ ಕೈಯಲ್ಲಿವೆ. ಸಮಂತಾ ಅದೆಷ್ಟೋ ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾರೆ. ಈ ಎಲ್ಲಾ ಕಾರಣಕ್ಕೆ ಸಮಂತಾಗೆ ಚಿತ್ರರಂಗದಲ್ಲಿ ಬೇಡಿಕೆ ಹೆಚ್ಚಿದೆ. ಸೂಪರ್‌ಸ್ಟಾರ್‌ಗಳಿಂದ ಹಿಡಿದು ಇತ್ತೀಚೆಗೆ ಬಂದ ಹೀರೊಗಳವರೆಗೂ ಸಮಂತಾ ಬೇಡಿಕೆ ನಟಿಯಾಗಿದ್ದಾರೆ. ಈಗ ಟಾಲಿವುಡ್‌ನಲ್ಲಿ ಹೊಸ ಸುದ್ದಿಯೊಂದು ಹರಿದಾಡುತ್ತಿದ್ದು, ಸಮಂತಾ ಹಾಗೂ ವಿಜಯ್ ದೇವರಕೊಂಡ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ ಅಂತಿದೆ. ಇಂಥದ್ದೊಂದು ಗಾಸಿಪ್​ ಟಾಲಿವುಡ್​ನಲ್ಲಿ ಹರಿದಾಡುತ್ತಿದೆ. ಅಸಲಿಗೆ ಏನಿದು ಕಥೆ ಅಂತೀರಾ? ಮುಂದೆ ನೋಡಿ.

ಇದನ್ನೂ ಓದಿ: ಡಿವೋರ್ಸ್ ಬಳಿಕ ವಿಜಯ್​ ದೇವರಕೊಂಡ ಜೊತೆ ಸಮಂತಾ ರೊಮ್ಯಾನ್ಸ್​! ಹಾಗಿದ್ರೆ ರಶ್ಮಿಕಾ ಕಥೆಯೇನು?

ವಿಜಯ್​-ಸಮಂತಾ ಕಾಂಬೋದಲ್ಲಿ ಬರ್ತಿದೆ ಸಿನಿಮಾ!

ಮೊದಲ ಬಾರಿಗೆ ವಿಜಯ್ ದೇವರಕೊಂಡ ಹಾಗೂ ಸಮಂತಾ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಜೋರಾಗಿ ಸದ್ದು ಮಾಡುತ್ತಿದೆ.. ಈ ಸಿನಿಮಾವನ್ನು ಶಿವ ನಿರ್ಮಾಣ ನಿರ್ದೇಶನ ಮಾಡುತ್ತಿದ್ದಾರೆ. ರೊಮ್ಯಾಂಟಿಕ್ ಬ್ಯಾಕ್‌ಗ್ರೌಂಡ್‌ನಲ್ಲಿ ವಿಭಿನ್ನ ಕಥೆಯನ್ನು ಹೇಳಲು ಹೊರಟಿದ್ದಾರೆ. ಈ ಕಥೆ ಕೇಳಿದ ಕೂಡಲೇ ಸಮಂತಾ ಹಾಗೂ ವಿಜಯ್ ದೇವರಕೊಂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. ಇಷ್ಟು ದಿನ ರಶ್ಮಿಕಾ ಮಂದಣ್ಣ ಜೊತೆ ಸಿನಿಮಾ ಮಾಡುತ್ತಿದ್ದ ವಿಜಯ್​ ದೇವರಕೊಂಡ ಸಮಂತಾ ಜೊತೆ ಮೊಟ್ಟ ಮೊದಲ ಬಾರಿಗೆ ರೊಮ್ಯಾನ್ಸ್​ ಮಾಡಲಿದ್ದಾರೆ.
Published by:Vasudeva M
First published: