ನಟಿ ಸಮಂತಾ(Samantha) ಹಾಗೂ ನಟ ನಾಗಚೈತನ್ಯ(Naga Chaitanya) ಅವರ ಡಿವೋರ್ಸ್ ವಿಚಾರ ಟಾಲಿವುಡ್(Tollywood) ಮಾತ್ರವಷ್ಟೇ ಅಲ್ಲದೇ ಭಾರತೀಯ ಸಿನಿಮಾರಂಗದಲ್ಲಿ ಸಖತ್ ಸುದ್ಧಿ ಮಾಡಿತ್ತು. ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿ ಏಕಾಏಕಿ ದೂರವಾಗುವುದಕ್ಕೆ ಕಾರಣವೇನು ಅಂತ ಹುಡುಕಾಡಿದ್ದರು. ಇಬ್ಬರು ವಿಚ್ಛೇದನ ಪಡೆದು ದೂರವಾಗಿದ್ದಾರೆ. ಇತ್ತ ಸಮಂತಾ ತಮ್ಮ ಸಂಪೂರ್ಣ ದೃಷ್ಟಿಯನ್ನು ಸಿನಿಮಾ(Movie) ಕಡೆ ಹರಿಸಿದ್ದಾರೆ. ಸಮಂತಾ ಅದ್ಭುತ ನಟಿ ಅನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಅವರು ನಟಿಸಿರುವ ಎಲ್ಲ ಸಿನಿಮಾಗಳು ಸೂಪರ್ ಡೂಪರ್ ಹಿಟ್. ಇತ್ತೀಚಿಗೆ ದಿ ಫ್ಯಾಮಿಲಿ ಮ್ಯಾನ್-2(The Family Man-2) ಸೀರೀಸ್ನಲ್ಲಿ ಸಮಂತಾ ಅಭಿನಯ ಕಂಡ ಫ್ಯಾನ್ಸ್ ಫುಲ್ ಖುಷ್ ಆಗಿದ್ದರು. ಇದೇ ವಿಚಾರಕ್ಕೆ ನಾಗಚೈತನ್ಯ ಹಾಗೂ ಸಮಂತಾ ದೂರವಾಗಲು ಕಾರಣ ಅಂತ ಗಾಸೀಪ್ ಕೂಡ ಕೇಳಿಬಂದಿತ್ತು. ಇದೀಗ ಸಮಂತಾ ಹೊಸ ಹೊಸ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಆದರೆ ಸಮಾಚಾರ ಅದಲ್ಲ, ಡಿವೋರ್ಸ್(Divorce) ಬಳಿಕ ಸಮಂತಾ ಹಾಲಿವುಡ್ಗೆ ಹಾರಿದ್ದಾರೆ. ಬ್ರಿಟಿಷ್ ನಿರ್ದೇಶಕ ಫಿಲಿಪ್ ಜಾನ್ ಜೊತೆ ಅವರು ಕೆಲಸ ಮಾಡಲಿದ್ದಾರೆ. ಫಿಲಿಪ್ ಜಾನ್ (Philip John) ನಿರ್ದೇಶನ ಮಾಡಲಿರುವ ‘ಅರೇಂಜ್ಮೆಂಟ್ಸ್ ಆಫ್ ಲವ್’ (Arrangements of Love) ಸಿನಿಮಾದಲ್ಲಿ ಸಮಂತಾ (Samantha) ಮುಖ್ಯ ಪಾತ್ರ ನಿಭಾಯಿಸಲಿದ್ದಾರೆ. ನಿರ್ದೇಶಕನನ್ನು ತಬ್ಬಿಕೊಂಡಿರುವ ಫೋಟೋ ಹಂಚಿಕೊಳ್ಳುವ ಮೂಲಕ ಬಹಿರಂಗಪಡಿಸಿದ್ದಾರೆ.
ಹಾಲಿವುಡ್ ಸಿನಿಮಾದಲ್ಲಿ ಬ್ಯೂಟಿ ಕ್ವೀನ್
ಈ ಹಿಂದೆ ಸಮಂತಾ ನಟಿಸಿದ್ದ ‘ಓಹ್ ಬೇಬಿ’ ಸಿನಿಮಾವನ್ನು ನಿರ್ಮಾಣ ಮಾಡಿದ್ದ ‘ಗುರು ಫಿಲ್ಮ್ಸ್’ ಬ್ಯಾನರ್ ಮೂಲಕವೇ ‘ಅರೇಂಜ್ಮೆಂಟ್ಸ್ ಆಫ್ ಲವ್’ ಸಿನಿಮಾ ತಯಾರಾಗಲಿದೆ. ಅದೇ ಶೀರ್ಷಿಕೆಯ ಕಾದಂಬರಿ ಆಧರಿಸಿ ಈ ಚಿತ್ರ ಮೂಡಿಬರಲಿದೆ. ಸ್ವಂತ ಡಿಟೆಕ್ಟೀವ್ ಏಜೆನ್ಸಿ ನಡೆಸುವ ತಮಿಳು ಉಭಯಲಿಂಗಿ ಮಹಿಳೆಯಾಗಿ ಸಮಂತಾ ಕಾಣಿಸಿಕೊಳ್ಳಲಿದ್ದಾರೆ. ಪುರುಷರಿಗೆ ಮಾತ್ರ ಅಲ್ಲ ಮಹಿಳೆಯರಿಗೂ ಇಷ್ಟವಾಗುವ ಗೆಟಪ್ನಲ್ಲಿ ನಟಿ ಸಮಂತಾ ಕಾಣಿಸಿಕೊಳ್ಳಲಿದ್ದಾರೆ. ಈ ವಿಚಾರ ಅವರ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಸದ್ಯ ತೆಲುಗಿನ ಎರಡು ಸಿನಿಮಾಗಳಿಗೆ ಈಗಾಗಲೇ ಸಮಂತಾ ಸಹಿ ಹಾಕಿದ್ದಾರೆ.
ಇದನ್ನು ಓದಿ : ವಿಘ್ನೇಶ್-ಸಮಂತಾ ಜತೆ ಹುಟ್ಟುಹಬ್ಬ ಆಚರಿಸಿಕೊಂಡ Nayanthara
ಇದು ನನಗೆ ಹೊಸ ಪ್ರಪಂಚ ಅಂತ ಸಮಂತಾ ಟ್ವೀಟ್
‘ಇದು ನನಗೆ ಹೊಸ ಪ್ರಪಂಚ. ನಾನು ಕೊನೆ ಬಾರಿಗೆ ಆಡಿಷನ್ ನೀಡಿದ್ದು 2009ರಲ್ಲಿ ‘ಏ ಮಾಯ ಚೇಸಾವೆ’ ಚಿತ್ರಕ್ಕಾಗಿ. 12 ವರ್ಷಗಳ ಬಳಿಕ ಮತ್ತೆ ಆಡಿಷನ್ ನೀಡಿದ್ದೇನೆ. ಮತ್ತೆ ಅದೇ ರೀತಿ ನರ್ವಸ್ ಆಗಿದ್ದೇನೆ. ಫಿಲಿಪ್ ಜಾನ್ ಜೊತೆ ಕೆಲಸ ಮಾಡುವುದು ತುಂಬ ಅಪರೂಪದ ಅವಕಾಶ. ಈ ಪಾತ್ರಕ್ಕೆ ಆಯ್ಕೆ ಆಗಿರುವುದು ತುಂಬ ಖುಷಿ ಆಗುತ್ತಿದೆ. ಈ ಪಯಣ ಆರಂಭಿಸಲು ಕಾತರದಿಂದ ಕಾಯುತ್ತಿದ್ದೇನೆ’ ಎಂದು ಸಮಂತಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ ಬ್ರಿಟಿಷ್ ನಿರ್ದೇಶಕ ಫಿಲಿಪ್ ಜಾನ್ ಅವರನ್ನು ತಬ್ಬಿಕೊಂಡಿರುವ ಫೋಟೋ ಹಾಗೂ ‘ಅರೇಂಜ್ಮೆಂಟ್ಸ್ ಆಫ್ ಲವ್’ ಸಿನಿಮಾದ ಪೋಸ್ಟರ್ವೊಂದನ್ನು ಶೇರ್ ಮಾಡಿದ್ದಾರೆ.
ಇದನ್ನು ಓದಿ : ರಿವೀಲ್ ಆಯ್ತು Kaathu Vaakula Rendu Kaadhal ಚಿತ್ರದಲ್ಲಿ Samantha ಅಭಿನಯದ ಪಾತ್ರದ ಫಸ್ಟ್ ಲುಕ್
ಪುಷ್ಪ ಸಿನಿಮಾದ ಐಟಂ ಸಾಂಗ್ನಲ್ಲಿ ಸಮಂತಾ!
ಭಾರತೀಯ ಸಿನಿಮಾರಂಗದಲ್ಲಿ ಭಾರೀ ನಿರೀಕ್ಷೆ ಮೂಡಿಸಿರುವ ಸಿನಿಮಾ ಅಂದರೆ ಪುಷ್ಮ. ಅಲ್ಲು ಅರ್ಜುನ್ ಮೊದಲ ಬಾರಿಗೆ ರಕ್ತ ಚಂದನ ಮರಗಳ್ಳನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಡಿಸೆಂಬರ್ 17ರಂದು ಸಿನಿಮಾ 5 ಭಾಷೆಗಳಲ್ಲಿ ತೆರೆಕಾಣುತ್ತಿದೆ. ಈ ಸಿನಿಮಾದ ಐಟಂ ಸಾಂಗ್ನಲ್ಲಿ ಬ್ಯೂಟಿ ಕ್ವೀನ್ ಸಮಂತಾ ಕಾಣಿಸಿಕೊಳ್ಳಲಿದ್ದಾರಂತೆ. ಈ ಐಟಂ ಸಾಂಗ್ನಲ್ಲಿ ನಟಿಸಲು ಸಮಂತಾ ಬರೋಬ್ಬರಿ 1.5 ಕೋಟಿ ರೂಪಾಯಿ ಕೇಳಿದ್ದಾರೆ ಎಂಬ ಸುದ್ದಿ ಇದೀಗ ಎಲ್ಲೆಡೆ ಹರಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ