Samantha Ruth Prabhu: "ಊ ಅಂಟಾವಾ" ಅಂತ ಕಿಚ್ಚು ಹಚ್ಚಿ, ಈಗ ಸ್ವಿಮ್‌ಸೂಟ್‌ನಲ್ಲಿ ಪೋಸ್ ಕೊಟ್ಟ ಸಮಂತಾ!

"ಊ ಅಂಟಾವಾ" ಅಂತ ಕುಣಿದು ಹುಡುಗರ ಹಾರ್ಟಿಗೆ ಕಿಚ್ಚು ಹಚ್ಚಿದ ಸಮಂತಾ, ಈಗ ಜಲಪಾತದ ಕೆಳಗೆ ತಣ್ಣಗೆ ನಿಂತುಕೊಂಡಿದ್ದಾರೆ. ಆದರೆ ಅವರ ಹಾಟ್ ಲುಕ್ ನೋಡಿದ ಪಡ್ಡೆ ಹೈಕಳು ಮತ್ತೆ ಹಾರ್ಟ್‌ಗೆ ಕೆರೆದುಕೊಳ್ಳುತ್ತಿದ್ದಾರೆ!

ನಟಿ ಸಮಂತಾ ರುತ್ ಪ್ರಭು

ನಟಿ ಸಮಂತಾ ರುತ್ ಪ್ರಭು

  • Share this:
    ಪುಷ್ಪ ಚಿತ್ರದ (Pushpa Movie) ಯಶಸ್ಸಿನ ನಂತರ ನಟಿ ಸಮಂತಾ ರುತ್ ಪ್ರಭು (Samantha Ruth Prabu)ಗೆ ಸಿನಿಮಾ ರಂಗದಲ್ಲಿ (Cinema Industry) ಭಾರೀ ಬೇಡಿಕೆ ಬಂದಿದೆ. ಸೌತ್ ಸಿನಿಮಾದ ಜೊತೆಗೆ ಈಗ ಬಾಲಿವುಡ್ (Bollywood) ಅಭಿಮಾನಿಗಳ ಹೃದಯಕ್ಕೂ ಸಮಂತಾ ಲಗ್ಗೆ ಹಾಕಿದ್ದಾರೆ. ಸಮಂತಾ ಅವರ ಅಭಿಮಾನಿಗಳ ಸಂಖ್ಯೆ ಈಗ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಪುಷ್ಪ ಸಿನಿಮಾದ ‘ಊ ಅಂಟಾವಾ ಮಾವಾ’ ಹಾಡು (Song) ಸಖತ್ ಹಿಟ್ ಆಗಿದೆ. ಹಾಡಿನಲ್ಲಿ ಮೈ ಚಳಿ ಬಿಟ್ಟು ಕುಣಿದಿರುವ ಸಮಂತಾ ಅಭಿಮಾನಿಗಳಲ್ಲಿ ಕಿಚ್ಚು ಹೊತ್ತಿಸಿದ್ದಾರೆ. ಚಿತ್ರವು ತುಂಬಾ ಚೆನ್ನಾಗಿ ಮೂಡಿ ಬಂದಿದ್ದು, ಅಭಿಮಾನಿಗಳ ಪ್ರೀತಿಗೆ ಪಾತ್ರವಾಗಿದೆ. ಈಗ ಸಮಂತಾ ಅಭಿಮಾನಿಗಳು ಸಮಂತಾ ಅವರ ಪ್ರತಿ ಚಟುವಟಿಕೆಗಳ ಮೇಲೂ ನಿಗಾವಹಿಸುತ್ತಿದ್ದಾರೆ. ಸಮಂತಾ ಅವರ ಮುಂದಿನ ಸಿನಿಮಾ ಯಾವುದು..? ಮುಂದೆ ಯಾವ ಲುಕ್ ನಲ್ಲಿ ಬ್ಯೂಟಿ ಕಾಣಿಸಿಕೊಳ್ಳಲಿದ್ದಾರೆ ಎಂದು ಕಾಯುತ್ತಿರುತ್ತಾರೆ.

    ಅದರಲ್ಲೂ ಇನ್​ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಸಮಂತಾ ಅವರ ಸುದ್ದಿಗಳ ಬಗ್ಗೆಯೂ ಅಭಿಮಾನಿಗಳು ಕಣ್ಣಿಟ್ಟಿದ್ದಾರೆ.  






    ಕೇರಳದ ಅತಿರಪ್ಪಿಲ್ಲಿ ಫಾಲ್ಸ್‌ ನಲ್ಲಿ ಸಮಂತಾ

    ಸದ್ಯ ನಟಿ ಸಮಂತಾ ರುತ್ ಪ್ರಭು ಇನ್​ಸ್ಟಾಗ್ರಾಮ್ ನಲ್ಲಿ ತಮ್ಮ ಫೋಟೋಗಳನ್ನು ಹಂಚಿಕೊಂಡಿದ್ದು, ಸಖತ್ ವೈರಲ್ ಆಗುತ್ತಿವೆ. ಶನಿವಾರ (ಫೆ. 19) ರಂದು ಕೇರಳದ ಅಥಿರಪ್ಪಿಲ್ಲಿ ಫಾಲ್ಸ್‌ಗೆ ನಟಿ ಸಮಂತಾ ರುತ್ ಪ್ರಭು ಭೇಟಿ ನೀಡಿದ್ದಾರೆ. ಗುಲಾಬಿ ಬಣ್ಣದ ಸ್ವಿಮ್ ಸೂಟ್ ನಲ್ಲಿ ಬಂಡೆಯ ಮೇಲೆ ನಿಂತಿರುವ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಮಂತಾ ಫೋಟೋಗಳನ್ನು ಶೇರ್ ಮಾಡುತ್ತಿದ್ದಂತೆಯೇ 1 ಮಿಲಿಯನ್‌ಗಿಂತಲೂ ಹೆಚ್ಚು ವೀವ್ಸ್ ಪಡೆದುಕೊಂಡಿವೆ. ಸಾಕಷ್ಟು ಜನರು ಹಾರ್ಟ್ ಎಮೋಜಿ ಹಾಕಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಭಿಮಾನಿಗಳು ಫೋಟೋಗಳನ್ನು ಲೈಕ್ ಮಾಡಿದ್ದಾರೆ.

    ಇದನ್ನೂ ಓದಿ: ಈ ಸಿನಿಮಾ ಕತೆಗಳೆಲ್ಲಾ ನಿಜ ಜೀವನದಲ್ಲಿ ನಡೆದಿರೋದೇ! ನೀವು ನೋಡಿದ್ದೀರಾ?






    “ಜೀವನವನ್ನು ಬಂದಂತೆ ಸ್ವೀಕರಿಸಿ”

    ಒಂದು ಫೋಟೋದಲ್ಲಿ” ಜೀವನದಲ್ಲಿ ಏರಿಳಿತಗಳು ಉಂಟಾಗುವುದು ಸಹಜ. ನೀವು ಆ ಏರಿಳಿತಗಳನ್ನು ಆನಂದಿಸಿ ಅಥವಾ ಅದು ಬಂದಂತೆ ಸ್ವೀಕರಿಸಿ” ಎನ್ನುವ ಜೀವನ ಸಂದೇಶ ಸಾರುವ ಕೆಲ ಸಾಲುಗಳನ್ನು ಬರೆದುಕೊಂಡು, ಪೋಸ್ಟ್ ಮಾಡಿದ್ದಾರೆ. ಫೋಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಾಕಷ್ಟು ವೈರಲ್ ಆಗಿವೆ.

    ಬಂಡೆಯ ಮೇಲೆ ಕುಳಿತು ಸಮಂತಾ ಧ್ಯಾನ

    ನಟಿ ಸಮಂತಾ ಬಂಡೆಗಳ ಮೇಲೆ ಕುಳಿತು ಧ್ಯಾನ ಮಾಡುತ್ತಿರುವ ವಿಡಿಯೋವನ್ನು ಸಹ ಹಂಚಿಕೊಂಡಿದ್ದಾರೆ. ವಿಡಿಯೋ ಜತೆಗೆ ಸದ್ಗುರು ಅವರ ಕೋಟ್ಸ್ ನ್ನು ಉಲ್ಲೇಖ ಮಾಡಿದ್ದಾರೆ.  “ಧ್ಯಾನವು ನಿಮ್ಮ ಅಸ್ತಿತ್ವದ ಸೌಂದರ್ಯವನ್ನು ಅರಿತುಕೊಳ್ಳುವ ಸಾಧನ ಆಗಿದೆ” ಎಂದು ಬರೆದುಕೊಂಡಿದ್ದಾರೆ.

    ಸದ್ಯ ಸಮಂತಾ ತಮ್ಮೊಂದಿಗೆ ಸಮಯ ಕಳೆಯುತ್ತಿದ್ದಾರೆ. ಕೇರಳದ ಸುಂದರ, ಮನಮೋಹಕಗೊಳಿಸುವ ಜಲಪಾತಗಳನ್ನು ನೋಡಿ ಕಣ್ತುಂಬಿಕೊಂಡಿದ್ದಾರೆ. ಕೇರಳದ ಸುಂದರ ಪ್ರದೇಶದಲ್ಲಿ ಆನಂದ ಹೊಂದಿದ್ದಾರೆ. ನೈಸರ್ಗಿಕ ಸೌಂದರ್ಯವನ್ನು ಅನುಭವಿಸುತ್ತ, ಆನಂದಿಸಿದ್ದಾರೆ. ಜೀವನವನ್ನು ಬಂದಂತೆ ಸ್ವೀಕರಿಸಿ ಎಂಬ ಸಾಲು ಬರೆದುಕೊಂಡಿದ್ದಾರೆ. ಕೇರಳ ಜಲಪಾತದ ಸೌಂದರ್ಯವನ್ನು ನಟಿ ಸಮಂತಾ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಬಂಡೆಯ ಮೇಲೆ ಸಮಂತಾ ಧ್ಯಾನ ಮಾಡುತ್ತಿರುವ ಚಿತ್ರವನ್ನೂ ಸಹ ಹಂಚಿಕೊಂಡಿದ್ದಾರೆ.

    ಇದನ್ನೂ ಓದಿ: ಚೆಂದಕ್ಕಿಂತ ಚೆಂದ ನೀವೇ ಸುಂದರ.. ಸೀರೆಯಲ್ಲೂ ಶ್ರದ್ಧಾ ದಾಸ್ ಮೋಡಿ!

    ಸಮಂತಾ 2022 ರಲ್ಲಿ ತಮಿಳು ರೊಮ್ಯಾಂಟಿಕ್ ಹಾಸ್ಯ ‘ಕಾತುವಾಕುಲ ರೆಂದು ಕಾದಲ್’ ಮತ್ತು ತೆಲುಗು ಪೌರಾಣಿಕ ನಾಟಕ ‘ಶಾಕುಂತಲಂ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಸಮಂತಾ ಗೆ  ದೊಡ್ಡ ಪ್ರಾಜೆಕ್ಟ್ ಆಫರ್ ಸಿಕ್ಕಿದೆ. ಶೀಘ್ರದಲ್ಲೇ ಅವರು ಫಿಲಿಪ್ ಜಾನ್ ಅವರ 'ಅರೇಂಜ್ಮೆಂಟ್ಸ್ ಆಫ್ ಲವ್' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಅವರು ಗೂಢಚಾರಿಕೆ ಮಾಡುವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
    Published by:renukadariyannavar
    First published: