ಸಾಮಾನ್ಯವಾಗಿ ಚಿತ್ರೋದ್ಯಮದಲ್ಲಿರುವ ನಟ (Actors) ಮತ್ತು ನಟಿಯರು (Actresses) ಬೆಳಿಗ್ಗೆ ಎದ್ದು ಜಿಮ್ನಲ್ಲಿ ತಮ್ಮ ಸಾಮರ್ಥ್ಯಗನುಗುಣವಾಗಿ ತಾಲೀಮುಗಳನ್ನು(Workout) ಮಾಡಿ ಬೆವರು ಸುರಿಸಿ ತಮ್ಮ ದೇಹವನ್ನು ಫಿಟ್ ಆಗಿ ಇರಿಸಿಕೊಳ್ಳುವುದನ್ನು ನಾವೆಲ್ಲರೂ ನೋಡಿರುತ್ತೇವೆ.ಆದರೆ ಇಲ್ಲೊಬ್ಬ ಟಾಲಿವುಡ್ ನಟಿ ಇದ್ದಾರೆ, ಅವರು ಪ್ರತಿದಿನ ಜಿಮ್ನಲ್ಲಿ ಕಠಿಣವಾದ ತಾಲೀಮು ಮಾಡುವುದು ಏಕೆ ಅಂತ ಗೊತ್ತಾದರೆ ನೀವು ಶಾಕ್ ಆಗ್ತೀರಾ.ಯಾರಪ್ಪಾ ಆ ತೆಲುಗಿನ ನಟಿ ಅಂತ ನಿಮಗೆ ಕುತೂಹಲ ಇರಬೇಕಲ್ಲವೇ? ಆ ನಟಿ ಸಮಂತಾ ರುಥ್ ಪ್ರಭು, ( Samantha Ruth Prabhu) ಈಕೆ ಜಿಮ್ನಲ್ಲಿ( Gym) ಕಠಿಣವಾದ ತಾಲೀಮು ಮಾಡುತ್ತಾರೆ ಎಂಬುದು ಬಹುತೇಕರಿಗೆ ಗೊತ್ತೇ ಇದೆ.
ತಾಲೀಮಿನ ವಿಡಿಯೋ
ಈ ನಟಿ ಫಿಟ್ನೆಸ್ ಉತ್ಸಾಹಿಯಾಗಿದ್ದು ಮತ್ತು ಆಗಾಗ್ಗೆ ಜಿಮ್ನಲ್ಲಿ ತೆಗೆಸಿಕೊಂಡ ತಾಲೀಮು ವಿಡಿಯೋ ತುಣುಕುಗಳನ್ನು ಮತ್ತು ಫೋಟೋಗಳನ್ನು ನಟಿಯ ಇನ್ಸ್ಟಾಗ್ರಾಮ್ ಪ್ರೊಫೈಲ್ನಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ.ಸಮಂತಾ ಇನ್ಸ್ಟಾಗ್ರಾಮ್ ಪ್ರೊಫೈಲ್ ಆಕೆ ಜಿಮ್ನಲ್ಲಿ ಮಾಡಿದ ತಾಲೀಮಿನ ವಿಡಿಯೋ ತುಣುಕುಗಳಿಂದ ತುಂಬಿದೆ ಎಂದರೆ ತಪ್ಪಾಗುವುದಿಲ್ಲ.
ವಿಡಿಯೋ ನೋಡಿ:
ಸಮಂತಾ ಯಾಕಿಷ್ಟು ತಾಲೀಮು ಮಾಡ್ತಾರೆ
ಸಮಂತಾ ಜಿಮ್ನಲ್ಲಿ ತುಂಬಾನೇ ಕಠಿಣವಾದ ತಾಲೀಮು ಮಾಡಲು ಇಷ್ಟಪಡುತ್ತಾರೆ. ಕೆಲವು ವಾರಗಳ ಹಿಂದೆ, ಸಮಂತಾ ತನ್ನ ಫಿಟ್ನೆಸ್ ವಿಡಿಯೋವನ್ನು ಹಂಚಿಕೊಂಡಿದ್ದರು. ಅದರಲ್ಲಿ ಅವರು ಡಂಬೆಲ್ಗಳನ್ನು ಹಿಡಿದುಕೊಂಡು ಸ್ಕ್ವಾಟ್ಸ್ ಮಾಡುವುದರಿಂದ ಹಿಡಿದು ಭಾರ ಎತ್ತುವವರೆಗೆ ಆಕೆಯ ಭುಜ ಬಲದ ಮೇಲೆ ಕೆಲಸ ಮಾಡುತ್ತಿರುವುದನ್ನು ನಾವು ನೋಡಬಹುದಿತ್ತು. ಆದೇ ಒಂದು ದಿನದ ಹಿಂದೆ, ಸಮಂತಾ ಏಕೆ ಜಿಮ್ನಲ್ಲಿ ಇಷ್ಟೊಂದು ಕಠಿಣವಾದ ತಾಲೀಮು ಮಾಡುತ್ತಾರೆ ಎಂದು ನಿಜವಾದ ಕಾರಣವನ್ನು ನಮಗೆ ತಿಳಿಸಿದ್ದಾರೆ.
ಇದನ್ನೂ ಓದಿ: Samantha: ಗೋವಾದಲ್ಲಿ ಸ್ನೇಹಿತರೊಂದಿಗೆ ಸಮಂತಾ ಫುಲ್ ಮಸ್ತಿ: ನಟಿಯ ಹಾಟ್ ಫೋಟೋಗಳು ವೈರಲ್!
ತಿನ್ನಲು ವರ್ಕ್ ಔಟ್ ಮಾಡಿ
ಸಮಂತಾಗೆ ತಿನ್ನುವುದು ಎಂದರೆ ತುಂಬಾನೇ ಇಷ್ಟವಂತೆ, ಹಾಗಾಗಿ ಈ ತಾಲೀಮು ಮಾಡಿದ ನಂತರ ಅವರು ಸೇವಿಸುವ ಹೆಚ್ಚುವರಿ ಕ್ಯಾಲೋರಿಯ ಬಗ್ಗೆ ಯೋಚಿಸದೆ ಒಂದು ಪ್ಲೇಟ್ ಪೂರ್ತಿಯಾಗಿ ಸಮೋಸಾ ತಿನ್ನಬಹುದು ಎಂದು ನಟಿ ಹೇಳಿಕೊಂಡಿದ್ದಾರಂತೆ. ಈ ನಟಿ ಹಂಚಿಕೊಂಡಿರುವ ವಿಡಿಯೋದಲ್ಲಿ ತೂಕ ಎತ್ತುವುದನ್ನು ನೋಡಬಹುದಾಗಿದೆ. ಕಪ್ಪು ಬಣ್ಣದ ಬಟ್ಟೆ ತೊಟ್ಟ ಸಮಂತಾ ಎರಡೂ ಕೈಗಳಿಂದ ತೂಕವನ್ನು ಹಿಡಿದು ನಂತರ ಅವುಗಳನ್ನು ಒಂದೇ ತ್ವರಿತ ಚಲನೆಯಲ್ಲಿ ಎತ್ತುವುದನ್ನು ಮತ್ತು ಇದೇ ಪ್ರಕ್ರಿಯೆಯನ್ನು ಕೆಲವು ಬಾರಿ ಪುನರಾವರ್ತಿಸುವುದನ್ನು ಸಹ ನಾವು ಇಲ್ಲಿ ಕಾಣಬಹುದು. "ತಿನ್ನಲು ವರ್ಕ್ ಔಟ್ ಮಾಡಿ" ಎಂದು ಸಮಂತಾ ತನ್ನ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದಿದ್ದಾರೆ.
ತೂಕ ಎತ್ತುವುದರಿಂದಾಗುವ ಆರೋಗ್ಯ ಪ್ರಯೋಜನಗಳು
ಹೀಗೆ ತೂಕ ಎತ್ತುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ, ಇದರಿಂದ ನಮ್ಮ ದೇಹದ ಮೂಳೆಯ ಬಲ ಮತ್ತು ಸ್ನಾಯು ರಾಶಿಯನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಇದು ದೇಹದಿಂದ ಹೆಚ್ಚುವರಿ ಕೊಬ್ಬನ್ನು ಕರಗಿಸಲು ಮತ್ತು ಆ ಮೂಲಕ ತೂಕದ ಮೇಲೆ ನಿಗಾ ಇಡಲು ಸಹಾಯ ಮಾಡುತ್ತದೆ. ದೈನಂದಿನ ಫಿಟ್ನೆಸ್ ದಿನಚರಿಯಲ್ಲಿ ನಾವು ತೂಕ ಎತ್ತುವುದರಿಂದ ನಮ್ಮ ದೈಹಿಕ ಆರೋಗ್ಯವನ್ನು ಅಭಿವೃದ್ಧಿಪಡಿಸಿಕೊಳ್ಳಬಹುದು.
ಇದನ್ನೂ ಓದಿ: `ಸೆಕೆಂಡ್ ಹ್ಯಾಂಡ್ ಐಟಂ’ ಅಂದವನಿಗೆ ಸಮಂತಾ ಕ್ಲಾಸ್: ನಟಿ ಕೊಟ್ಟ ಉತ್ತರ ನೋಡಿದ್ರೆ ಶಹಬ್ಬಾಸ್ ಅಂತೀರಾ..!
ವೀಕ್ಷಕರು ಪ್ರಶಂಸೆಯ ಸುರಿಮಳೆ
ಸಮಾಂತ ಅವರು ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾದಲ್ಲಿ “ಊ ಅಂಟಾವ ಊ ಊ ಅಂಟಾವ” ಹಾಡಿಗೆ ಹೆಜ್ಜೆ ಹಾಕಿದ್ದು, ಅದು ಅವರ ಪ್ರಪ್ರಥಮ ಐಟಂ ಡಾನ್ಸ್ ಆಗಿದೆ. ಈ ಹಾಡಿನಲ್ಲಿ ಸಮಂತಾ ನಿರ್ವಹಿಸಿರುವ ಕೆಲಸವನ್ನು ಕಂಡು ವೀಕ್ಷಕರು ಪ್ರಶಂಸೆಯ ಸುರಿಮಳೆ ಸುರಿಸುತ್ತಿದ್ದಾರೆ. ಅಷ್ಟೇ ಅಲ್ಲಾ, ಸಮಂತಾ ಅವರ ಈ ಹೊಚ್ಚ ಹೊಸ “ಊ ಅಂಟಾವ ಊ ಊ ಅಂಟಾವ” ಹಾಡು. ಯೂಟ್ಯೂಬ್ನ ಟಾಪ್ 100 ಮ್ಯೂಸಿಕ್ ವಿಡಿಯೋಗಳಲ್ಲಿ ಒಂದನೇ ಸ್ಥಾನದಲ್ಲಿದೆ. ಎಷ್ಟೇ ಅನುಮಾನಗಳಿದ್ದರೂ ಲೆಕ್ಕಿಸದೆ, ತಮ್ಮ ಮೇಲೆ ನಂಬಿಕೆ ಇಟ್ಟು ಸಮಂತಾ ರುತ್ ಪ್ರಭು ಅವರು ಈ ಹಾಡಿನಲ್ಲಿ ಕೆಲಸ ಮಾಡಿದ್ದಕ್ಕೆ , ಇತ್ತೀಚೆಗೆ ನಡೆದ ಪುಷ್ಪ ಸಿನಿಮಾದ ಯಶಸ್ಸಿನ ಪಾರ್ಟಿಯಲ್ಲಿ, ಅಲ್ಲು ಅರ್ಜುನ್ ಅವರು ಸಮಂತಾಗೆ ಧನ್ಯವಾದ ಅರ್ಪಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ