• Home
  • »
  • News
  • »
  • entertainment
  • »
  • Samantha Ruth Prabhu: ಸಮಂತಾರನ್ನು ಕಾಡುತ್ತಿರುವ ಆಟೋಇಮ್ಯೂನ್ ಕಾಯಿಲೆ ವಿರುದ್ಧ ಗೆದ್ದ ಸೆಲೆಬ್ರಿಟಿಗಳಿವರು!

Samantha Ruth Prabhu: ಸಮಂತಾರನ್ನು ಕಾಡುತ್ತಿರುವ ಆಟೋಇಮ್ಯೂನ್ ಕಾಯಿಲೆ ವಿರುದ್ಧ ಗೆದ್ದ ಸೆಲೆಬ್ರಿಟಿಗಳಿವರು!

ಸಮಂತಾ

ಸಮಂತಾ

ಸೆಲೆನಾ ಗೊಮೆಜ್ ನಿಂದ ಹಿಡಿದು ಲೇಡಿ ಗಾಗಾವರೆಗಿನ ಅನೇಕ ಸೆಲೆಬ್ರಿಟಿಗಳು ತಮ್ಮ ಜೀವವನ್ನು ಅಪಾಯಕ್ಕೆ ಸಿಲುಕಿಸಿದ್ದ ಆಟೋಇಮ್ಯೂನ್ ಕಾಯಿಲೆಗಳೊಂದಿಗೆ ಹೇಗೆ ಹೋರಾಡಿ ಗೆದ್ದರು ಎಂಬುದರ ಬಗ್ಗೆ ಹಂಚಿಕೊಂಡಿದ್ದಾರೆ.

  • Trending Desk
  • Last Updated :
  • Bangalore, India
  • Share this:

ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅವರು ಮಯೋಸೈಟಿಸ್ ಎಂಬ ಆಟೋಇಮ್ಯೂನ್ ಕಾಯಿಲೆಯ (Autoimmune Disease) ವಿರುದ್ದ ಹೋರಾಡಿದ ಬಗ್ಗೆ ಸಾಮಾಜಿಕ ಮಾಧ್ಯಮ (Social Media) ಪೋಸ್ಟ್ ವೊಂದರಲ್ಲಿ ತುಂಬಾನೇ ಧೈರ್ಯದಿಂದ ಹಂಚಿಕೊಂಡಿದ್ದಾರೆ ನೋಡಿ. ನಾವು ಯಾವಾಗಲೂ ಬಲಶಾಲಿಗಳು ಅಂತ ತೋರಿಸುವ ಅಗತ್ಯವಿಲ್ಲ ಎಂದು ನಾನು ನಿಧಾನವಾಗಿ ಅರಿತುಕೊಳ್ಳುತ್ತಿದ್ದೇನೆ. ಈ ದೌರ್ಬಲ್ಯವನ್ನು ಒಪ್ಪಿಕೊಳ್ಳುವುದು ಸಹ ಒಂದು ರೀತಿಯ ಸದೃಡತೆಯನ್ನು ಒದಗಿಸುತ್ತದೆ ಎಂದು ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಪೋಸ್ಟ್ ನಲ್ಲಿ ಬರೆದು ಕೊಂಡಿದ್ದಾರೆ.


ಇದರ ಜೊತೆಗೆ ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತಾರೆ ಎಂಬ ವಿಶ್ವಾಸವನ್ನು ತಮ್ಮ ವೈದ್ಯರು ಹೊಂದಿದ್ದಾರೆ ಎಂದು ಸಹ ಹೇಳಿಕೊಂಡಿದ್ದಾರೆ. ಹಲವಾರು ವರ್ಷಗಳಿಂದ, ಸೆಲೆನಾ ಗೊಮೆಜ್ ನಿಂದ ಹಿಡಿದು ಲೇಡಿ ಗಾಗಾವರೆಗಿನ ಅನೇಕ ಸೆಲೆಬ್ರಿಟಿಗಳು ತಮ್ಮ ಜೀವವನ್ನು ಅಪಾಯಕ್ಕೆ ಸಿಲುಕಿಸಿದ್ದ ಆಟೋಇಮ್ಯೂನ್ ಕಾಯಿಲೆಗಳೊಂದಿಗೆ ಹೇಗೆ ಹೋರಾಡಿ ಗೆದ್ದರು ಎಂಬುದರ ಬಗ್ಗೆ ಹಂಚಿಕೊಂಡಿದ್ದಾರೆ.


ಮಯೋಸೈಟಿಸ್ ವಿರುದ್ಧ ಹೋರಾಡುತ್ತಿರುವ ನಟಿ ಸಮಂತಾ


ಸಮಂತಾ ರುತ್ ಪ್ರಭು ಅವರು ಶನಿವಾರ ಮಯೋಸೈಟಿಸ್ ಎಂಬ ಆಟೋಇಮ್ಯೂನ್ ಸ್ಥಿತಿಯಿಂದ ಬಳಲುತ್ತಿದ್ದಾರೆ ಎಂದು ಹೇಳಿದ್ದಾರೆ. ಇದು ಗುಣಮುಖವಾದ ನಂತರ ಇದರ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಹಂಚಿಕೊಳ್ಳಲು ನಾನು ಬಯಸುತ್ತೇನೆ. ಆದರೆ ಇದು ನಾನು ನಿರೀಕ್ಷಿಸಿದ್ದಕ್ಕಿಂತ ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ ಎಂದು ಸಮಂತಾ ಆಸ್ಪತ್ರೆಯಲ್ಲಿರುವ ಫೋಟೋವೊಂದನ್ನು ಪೋಸ್ಟ್ ಮಾಡಿ ಬರೆದುಕೊಂಡಿದ್ದಾರೆ.


ರೋಗ ನಿರೋಧಕ ಶಕ್ತಿ


ಮಯೋಸೈಟಿಸ್ ಎಂಬುದು ಸ್ನಾಯುಗಳು ದುರ್ಬಲವಾಗುವುದು. ದಣಿವು ಮತ್ತು ತೀವ್ರವಾದ ನೋವಿನಿಂದ ಬಳಲುವಂತೆ ಮಾಡಲು ಕಾರಣವಾಗುವ ಅಪರೂಪದ ಪರಿಸ್ಥಿತಿಗೆ ಹೆಸರಾಗಿದೆ. ಇದು ಸಾಮಾನ್ಯವಾಗಿ ಪ್ರತಿರಕ್ಷಣಾ ವ್ಯವಸ್ಥೆಯ ಸಮಸ್ಯೆಯಿಂದ ಉಂಟಾಗುತ್ತದೆ. ಅಲ್ಲಿ ಅದು ತಪ್ಪಾಗಿ ಆರೋಗ್ಯಕರ ಅಂಗಾಂಶದ ಮೇಲೆ ದಾಳಿ ಮಾಡುತ್ತದೆ.


ಇದನ್ನೂ ಓದಿ: Actress Samantha: ಸಮಂತಾರನ್ನು ಕಾಡುತ್ತಿರುವ ಈ ವಿಚಿತ್ರ ಕಾಯಿಲೆ ಬಗ್ಗೆ ಗೊತ್ತಾ? ವ್ಯಕ್ತಿಯನ್ನೇ ಕುಗ್ಗಿಸುತ್ತಾ ಮೈಯೋಸಿಟಿಸ್?


"ನಾನು ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಒಳ್ಳೆಯ ಮತ್ತು ಕೆಟ್ಟ ದಿನಗಳೆರಡನ್ನು ನೋಡಿದ್ದೇನೆ. ನಾನು ಇದರ ಇನ್ನೊಂದು ದಿನವನ್ನು ನಿಭಾಯಿಸಲು ಸಾಧ್ಯವಿಲ್ಲ ಎಂದು ಅನಿಸಿದರೂ, ಆ ಕ್ಷಣವು ಹೇಗೋ ಕಳೆದು ಹೋಗುತ್ತದೆ. ನಾನು ಚೇತರಿಕೆಗೆ ಇನ್ನೂ ಒಂದು ದಿನ ಹತ್ತಿರವಾಗಿದ್ದೇನೆ ಎಂದು ನಾನು ಊಹಿಸುತ್ತೇನೆ... ಈ ಸಮಯ ಸಹ ಕಳೆದು ಹೋಗುತ್ತದೆ" ಎಂದು ಅವರು ಹೇಳಿದರು.


ಲುಪಸ್ ನಿಂದ ಬಳಲುತ್ತಿದ್ದರು ಸೆಲೆನಾ ಗೊಮೆಜ್


ಪಾಪ್ ಸೆನ್ಸೇಷನ್ ಸೆಲೆನಾ ಗೊಮೆಜ್ ಅವರು ಸಂಗೀತದಿಂದ ವಿರಾಮ ತೆಗೆದುಕೊಂಡಿದ್ದರು. ಇದಕ್ಕೆ ಲುಪಸ್ ಕಾರಣ ಎಂದು ಬಹಿರಂಗಪಡಿಸಿದಾಗ ತುಂಬಾನೇ ಸುದ್ದಿ ಮಾಡಿದ್ದರು.


21ನೇ ವಯಸ್ಸಿನಲ್ಲಿ, ಗಾಯಕಿ ಉರಿಯೂತ, ನೋವು ಮತ್ತು ಊತವನ್ನು ಉಂಟು ಮಾಡುವ ದೀರ್ಘಕಾಲದ ಆಟೋಇಮ್ಯೂನ್ ಸ್ಥಿತಿಗೆ ಕೀಮೋಥೆರಪಿ ಚಿಕಿತ್ಸೆಗೆ ಒಳಗಾಗಬೇಕಾಯಿತು. ಇನ್‌ಸ್ಟಾಗ್ರಾಮ್ ಪೋಸ್ಟ್ ನಲ್ಲಿ , ಮೂತ್ರಪಿಂಡ ಕಸಿಯನ್ನು ಪಡೆಯಲು ಅಗತ್ಯವಿರುವ ತೊಡಕುಗಳ ಬಗ್ಗೆ ಅವರು ಹೇಳಿಕೊಂಡರು.


ಫೈಬ್ರೊಮ್ಯಾಲ್ಜಿಯಾ ವಿರುದ್ಧ ಹೋರಾಡಿದ ಲೇಡಿ ಗಾಗಾ


ಆಸ್ಕರ್ ಪ್ರಶಸ್ತಿ ವಿಜೇತೆ ಲೇಡಿ ಗಾಗಾ ಅವರು ಫೈಬ್ರೊಮ್ಯಾಲ್ಜಿಯಾ ಎಂಬ ದೀರ್ಘಕಾಲದ ಅನಾರೋಗ್ಯದ ವಿರುದ್ಧ ಹೋರಾಡಬೇಕಾಯಿತು. ಇದು ದೇಹದಲ್ಲಿ ವಿಪರೀತ ನೋವನ್ನು ಉಂಟು ಮಾಡುವ ಒಂದು ಸ್ಥಿತಿಯಾಗಿದೆ ಮತ್ತು ಇದರಿಂದ ಬಳಲುತ್ತಿರುವ ಯಾರಾದರೂ ತೀವ್ರ ಆಯಾಸ, ಸ್ನಾಯು ಸೆಳೆತ, ಏಕಾಗ್ರತೆಯ ತೊಂದರೆ ಮತ್ತು ನಿದ್ರೆಯ ಸಮಸ್ಯೆಗಳನ್ನು ಸಹ ಅನುಭವಿಸಬಹುದು. ಈ ಸ್ಥಿತಿಯು ಗಾಯಕಿಯನ್ನು ತನ್ನ ವಿಶ್ವ ಪ್ರವಾಸವನ್ನು ರದ್ದುಗೊಳಿಸುವಂತೆ ಮಾಡಿತು.


ಜಿಜಿ ಹದೀದ್ ಗೆ ಹಶಿಮೊಟೊಸ್ ಕಾಯಿಲೆ ಇರುವುದು ಪತ್ತೆಯಾಗಿತ್ತು


ಸೂಪರ್ ಮಾಡೆಲ್ ಜಿಜಿ ಹದೀದ್ ಅವರು ಹಶಿಮೊಟೊಸ್ ರೋಗದ ವಿರುದ್ಧ ಹೋರಾಡಿದರು, ಇದು ಥೈರಾಯ್ಡ್ ಕಾಯಿಲೆಯಾಗಿದ್ದು, ಇದು ಏಕಾಗ್ರತೆ, ಕೂದಲು ಉದುರುವಿಕೆ, ಆಯಾಸ ಮತ್ತು ತೂಕ ಹೆಚ್ಚಳಕ್ಕೆ ಕಾರಣವಾಗಬಹುದು. ಜಿಜಿಯ ವಿಷಯದಲ್ಲಿ, ತಾರೆ ತೂಕವನ್ನು ಹೆಚ್ಚಿಸಿಕೊಳ್ಳಲು ಹೆಣಗಾಡಿದರು. "ನಾನು ಇನ್ನು ಹೆಚ್ಚಿನ ತೂಕವನ್ನು ಕಳೆದುಕೊಳ್ಳಲು ಬಯಸಲಿಲ್ಲ" ಎಂದು ಅವರು ಹಿಂದೊಮ್ಮೆ ಹೇಳಿದ್ದರು.


ಸಂಧಿವಾತದಂತಹ ಸ್ಥಿತಿಯೊಂದಿಗೆ ಹೋರಾಡಿದ ಜೇರೆಡ್ ಲೆಟೊ


'ಚಾಪ್ಟರ್ 27' ಚಲನಚಿತ್ರದಲ್ಲಿ ಜಾನ್ ಲೆನ್ನನ್ ನ ಹಂತಕ ಮಾರ್ಕ್ ಡೇವಿಡ್ ಚಾಪ್ಮನ್ ಪಾತ್ರವನ್ನು ಮಾಡಿ ಸೈ ಎನಿಸಿಕೊಂಡದ್ದು ಜೇರೆಡ್ ಲೆಟೊ ಅಂತ ಬಹುತೇಕರಿಗೆ ಗೊತ್ತು. ಅವರ ತೀವ್ರವಾದ ತೂಕ ಹೆಚ್ಚಳವು ಅವರನ್ನು ಸಂಧಿವಾತದಂತಹ ಸ್ಥಿತಿಯನ್ನು ಅನುಭವಿಸಲು ಕಾರಣವಾಯಿತು ಎಂದು ವರದಿಯಾಗಿದೆ.


ಇದನ್ನೂ ಓದಿ: Samantha Ruth Prabhu: ಮತ್ತೆ ಸಂಭಾವನೆ ಹೆಚ್ಚಿಸಿಕೊಂಡ ಸಮಂತಾ; ಸ್ಯಾಮ್​ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್!


"ನನ್ನ ಪಾದಗಳಲ್ಲಿ ನನಗೆ ನಿರ್ದಿಷ್ಟ ಸಮಸ್ಯೆ ಇತ್ತು" ಎಂದು ಅವರು ಸುದ್ದಿ ಮಾಧ್ಯಮಕ್ಕೆ ತಿಳಿಸಿದರು. ಈ ಸ್ಥಿತಿಯು ಒಂದು ರೀತಿಯ ಸಂಧಿವಾತವಾಗಿದ್ದು, ಇದು ಊದಿಕೊಂಡ ಮತ್ತು ಗಟ್ಟಿಯಾದ ಕೀಲುಗಳಿಗೆ ಕಾರಣವಾಗುತ್ತದೆ. ಹೆಚ್ಚುವರಿ ತೂಕವನ್ನು ಕಳೆದುಕೊಂಡ ನಂತರ ಮತ್ತು ಫಿಟ್ ದೇಹವನ್ನು ಪಡೆದ ನಂತರ, ಅವರು ಸಿನಿಮಾಗಾಗಿಸ ಮತ್ತೆ ಎಂದಿಗೂ ತೂಕವನ್ನು ಹೆಚ್ಚಿಸುವುದಿಲ್ಲ ಎಂದು ಹೇಳಿದರು.

Published by:Divya D
First published: