• Home
  • »
  • News
  • »
  • entertainment
  • »
  • Shaakuntalam Movie: ಶಾಕುಂತಲಂ ಸಿನಿಮಾ ಮೊದಲ ಹಾಡು​ ರಿಲೀಸ್​, ಮೆಲೋಡಿ ಸಾಂಗ್​ ಸೂಪರ್ ಅಂತಿದ್ದಾರೆ ಫ್ಯಾನ್ಸ್

Shaakuntalam Movie: ಶಾಕುಂತಲಂ ಸಿನಿಮಾ ಮೊದಲ ಹಾಡು​ ರಿಲೀಸ್​, ಮೆಲೋಡಿ ಸಾಂಗ್​ ಸೂಪರ್ ಅಂತಿದ್ದಾರೆ ಫ್ಯಾನ್ಸ್

ಶಾಕುಂತಲಂ ಸಿನಿಮಾ ಹಾಡು ರಿಲೀಸ್​

ಶಾಕುಂತಲಂ ಸಿನಿಮಾ ಹಾಡು ರಿಲೀಸ್​

ಈಗಾಗಲೇ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದೀಗ ಸಿನಿಮಾದ ಮಲ್ಲಿಕಾ.. ಮಲ್ಲಿಕಾ ಎಂಬ ಮೊದಲ ಹಾಡು ಕೂಡ ರಿಲೀಸ್ ಮಾಡಲಾಗಿದೆ.

  • Share this:

ನಟಿ ಸಮಂತಾ (Samantha) ಅಭಿನಯದ ಬಹುನಿರೀಕ್ಷಿತ ಸಿನಿಮಾ ಶಾಕುಂತಲಂ ಸಿನಿಮಾಗಾಗಿ (Shaakuntalam Movie) ಅಭಿಮಾನಿಗಳು ಕಾಯ್ತಿದ್ದಾರೆ. ಪೋಸ್ಟರ್ ಮೂಲಕವೇ ಸಖತ್ ಹೈಪ್​ ಕ್ರಿಯೇಟ್​ ಮಾಡಿದ್ದ ಶಾಕುಂತಲಂ ಸಿನಿಮಾ ಟೀಸರ್​ ಕೂಡ ಭಾರೀ ಸದ್ದು ಮಾಡಿತ್ತು. ಮಯೋಸಿಟಿಸ್​ನಿಂದ ಬಳಲುತ್ತಿದ್ದ ಸಮಂತಾ ಗುಣಮುಖರಾಗಿದ್ದು,  ಶಾಕುಂತಲಂ (Shaakuntalam) ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು . ಇದೀಗ ಶಾಕುಂತಲಂ ಸಿನಿಮಾದ ಹಾಡು (Song) ರಿಲೀಸ್ ಆಗಿದೆ. 


ಫೆಬ್ರವರಿ 17ರಂದು  ಶಾಕುಂತಲಂ ಸಿನಿಮಾ ರಿಲೀಸ್


ಪೌರಾಣಿಕ ಹಿನ್ನೆಲೆ ಇರುವ ಈ ಸಿನಿಮಾದಲ್ಲಿ ಸಮಂತಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಗುಣಶೇಖರ್ ನಿರ್ದೇಶಿಸಿದ್ದು, ನೀಲಿಮಾ ಗುಣ ಮತ್ತು ದಿಲ್ ರಾಜು ಜಂಟಿ ನಿರ್ಮಾಪಕರಾಗಿದ್ದಾರೆ. ಶಾಕುಂತಲಂ ಸಿನಿಮಾ ಫೆಬ್ರವರಿ 17 ರಂದು ರಿಲೀಸ್ ಆಗಲಿದೆ. ತೆರೆ ಮೇಲೆ ಪೌರಾಣಿಕ ಹಿನ್ನೆಲೆಯಿರುವ ಪ್ರೇಮಕಾವ್ಯ ನೋಡಲು ಪ್ರೇಕ್ಷಕರು ಕಾತುರದಿಂದ ಕಾಯ್ತಿದ್ದಾರೆ. ಈ ನಡುವೆ ಚಿತ್ರ ತಂಡ ಸಾಂಗ್​ ವೊಂದನ್ನು ರಿಲೀಸ್ ಮಾಡಿದೆ.
ಶಾಕುಂತಲಂ ಸಿನಿಮಾದ ಮೊದಲ ಹಾಡು ರಿಲೀಸ್​


ಈಗಾಗಲೇ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದೀಗ ಸಿನಿಮಾದ ಮಲ್ಲಿಕಾ.. ಮಲ್ಲಿಕಾ ಎಂಬ ಹಾಡು ಕೂಡ ರಿಲೀಸ್ ಮಾಡಲಾಗಿದೆ. ಈ ಹಾಡಿಗೆ ಮಣಿ ಶರ್ಮಾ ಮೂಸಿಕ್ ನೀಡಿದ್ದಾರೆ. ಈ ಸಾಂಗಿಗೆ ಗಾಯಕಿ ರಮ್ಯಾ ಬೆಹರಾ ಧ್ವನಿಯಾಗಿದ್ದಾರೆ. ಚೈತನ್ಯ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ. ಮಲ್ಲಿಕಾ..ಮಲ್ಲಿಕಾ ಎನ್ನುವ ಈ ಮೆಲೋಡಿ ಹಾಡು ಸಖತ್​ ಆಗಿದೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿರುವ ಈ ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಹಾಡು ತೆಲುಗು ಮಾತ್ರವಲ್ಲದೆ ಹಿಂದಿ, ತಮಿಳು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಬಿಡುಗಡೆಯಾಗಿದೆ.ಶಾಕುಂತಲಂ ಸಿನಿಮಾ ಟ್ರೇಲರ್ ಔಟ್​


ಫೆಬ್ರವರಿ 17ಕ್ಕೆ  ಶಾಕುಂತಲಂ ಸಿನಿಮಾ ರಿಲೀಸ್​ ಆಗಲಿದೆ. ಈ ಚಿತ್ರ ಪೋಸ್ಟರ್​ ಗಳೇ ಪ್ರೇಕ್ಷಕರಲ್ಲಿ ನಾನಾ ಕುತೂಹಲ ಮೂಡಿಸಿತ್ತು. ಚಿತ್ರದ ಟ್ರೇಲರ್ ಕೂಡ ಬಿಡುಗಡೆಯಾಗಿತ್ತು. ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಕಥೆಗಾರ ಮತ್ತು ನಿರ್ದೇಶಕರಾಗಿರುವ ಗುಣಶೇಖರ್ ಮಾತಿಗೆ ಸಮಂತಾ ಕಣ್ಣೀರಿಟ್ಟಿದ್ದರು.


ದಿಲ್ ರಾಜು ತೆರೆ ಮರೆಯ ನಾಯಕ


'ಶಾಕುಂತಲಂ'ಗೆ ಮೂವರು ನಾಯಕರಿದ್ದಾರೆ. ಕಥೆಯ ನಾಯಕ ದೇವ್ ಮೋಹನ್ ಆಗಿದ್ದರೆ, ಈ ಸಿನಿಮಾದ ನಾಯಕಿ ಸಮಂತಾ. ದಿಲ್ ರಾಜು ತೆರೆಮರೆಯ ನಾಯಕ ಎಂದು ಹೇಳಿದ್ದರು. ಈ ಸಿನಿಮಾದ ಕ್ರೆಡಿಟ್ ಅನ್ನು ದಿಲ್ ರಾಜು ಅವರಿಗೆ ನೀಡುತ್ತೇನೆ. ‘ಶಾಕುಂತಲಂ’ ವಿಚಾರದಲ್ಲಿ ಪ್ರೇಕ್ಷಕರ ನಂಬಿಕೆಗೆ ಸ್ವಲ್ಪವೂ ಧಕ್ಕೆಯಾಗುವುದಿಲ್ಲ. ನನ್ನ ಪಕ್ಕದಲ್ಲಿ ದಿಲ್ ರಾಜು ಇದ್ದುದರಿಂದ ನಾನು ಬಯಸಿದ ಚಿತ್ರದ ಚಿತ್ರೀಕರಣಕ್ಕೆ ಅವಕಾಶವಾಯಿತು ಗುಣಶೇಖರ್ ಹೇಳಿದ್ದಾರೆ.
ನಟಿ ಸಮಂತಾ ಕಣ್ಣೀರು


ಶಕುಂತಲಾ ಪಾತ್ರದಲ್ಲಿ ಸಮಂತಾ ಚೆನ್ನಾಗಿ ಹೊಂದಾಣಿಕೆಯಾಗುತ್ತೆ ಎಂದು ತಿಳಿದೆವು. ಹಾಗಾಗಿ ಸಮಂತಾಗೆ ಕಥೆ ಹೇಳಿದೆ. ಅವರಿಗೆ ಕಥೆ ತುಂಬಾ ಇಷ್ಟವಾಯಿತು. ನಂತರ ದಿಲ್ ರಾಜು ಈ ಯೋಜನೆಯ ಭಾಗವಾದರು. ದಿಲ್​ ರಾಜು ಒಬ್ಬ ನಾಯಕಿಯನ್ನು ನಂಬಿ ಇಷ್ಟು ಕೋಟಿ ಖರ್ಚು ಮಾಡಿದ್ದಾರೆ. ಅದಕ್ಕೆ ಧನ್ಯವಾದ ಎಂದು ಗುಣಶೇಖರ್ ಭಾವುಕರಾದರು. ಈ ವೇಳೆ ವೇದಿಕೆ ಮೇಲಿದ್ದ ಸಮಂತಾ ಕೂಡ ಕಣ್ಣೀರು ಹಾಕಿದ್ದರು.


Published by:ಪಾವನ ಎಚ್ ಎಸ್
First published: