Samantha: ಈ ಇಬ್ಬರಿಂದಾಗಿ ಇನ್ನೂ ಜೀವಂತವಾಗಿದ್ದೇನೆ ಎಂದ ಸಮಂತಾ, ಅವ್ರೊಂದಿಗೆ ಸಖತ್​ ಎಂಜಾಯ್​ ಮಾಡ್ತಿರೋ ನಟಿ!

ವಿಚ್ಛೇದನದ ನಂತರ ಗ್ಯಾಪ್ ತಗೊಂಡಿರುವ ಸಮಂತಾ ಸಾಕಷ್ಟು ಪ್ರವಾಸ ಹೋಗುತ್ತಿದ್ದಾರೆ. ಸದ್ಯ ಸಮಂತಾ ಯುರೋಪ್ ಟ್ರಿಪ್‌ನಲ್ಲಿದ್ದು ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.

ನಟಿ ಸಮಂತಾ

ನಟಿ ಸಮಂತಾ

  • Share this:
ಬ್ಯೂಟಿ ಕ್ವೀನ್ ಸಮಂತಾ ರುಥ್‌ ಪ್ರಭು(Samantha Ruthu Prabhu) ಸದ್ಯ ಟ್ರೆಂಡಿಂಗ್‌ನಲ್ಲಿರುವ ಬೆಡಗಿ. ಸಿನಿಮಾ, ವೈಯಕ್ತಿಕ ಬದುಕಿನಲ್ಲಾದ ವಿಚ್ಛೇದನದಂತ ಕೆಲವು ವಿಚಾರಗಳಿಂದಾಗಿ ಹಾಟ್ ಟಾಪಿಕ್‌ನಲ್ಲಿರುವ ನಟಿ. ಅದರಲ್ಲೂ ಪುಷ್ಪ(Pushp) ಸಿನಿಮಾದ ಐಟಂ ಸಾಂಗ್(Item Song) ಒಂದರಲ್ಲಿನ ಸಮಂತಾ ಮೈಮಾಟ, ನೋಟ, ಡ್ಯಾನ್ಸ್‌ ಈ ನಟಿಯ ಬೇಡಿಕೆಯನ್ನು ಹೆಚ್ಚಿಸಿ ಬಿಟ್ಟಿದೆ. ಸಮಂತಾ ಅಭಿಮಾನಿಗಳಂತೂ ವಾಟೆ ಬ್ಯೂಟಿ ಎಂದಿದ್ದಾರೆ.ತೆಲಗು ಮತ್ತು ತಮಿಳು ಸಿನಿಮಾ ಚಿತ್ರರಂಗದಲ್ಲಿನ ಬಹು ಬೇಡಿಕೆಯ ನಟಿ ಸಮಂತಾ. ತನ್ನ ನಟನೆ, ಸಹಜ ಸೌಂದರ್ಯದಿಂದಲೇ ಅಭಿಮಾನಿಗಳ ಮನಗೆದಿದ್ದಾರೆ. ಸಾಲು ಸಾಲು ಚಿತ್ರಗಳಲ್ಲಿ ಬಿಗ್ ಸ್ಟಾರ್ಸ್(Big Starts) ಜೊತೆ ಸಮಂತಾ ನಟಿಸಿ ಸೈ ಎನಿಸಿಕೊಂಡಿದ್ದಾಳೆ.ಎಲ್ಲಾ ಸರಿಯಾಗಿ ಹೋಗುತ್ತಿರುವಾಗಲೇ ಸಮಂತಾ ವಿಚ್ಚೇದನ(Divorce)ದ ಶಾಕಿಂಗ್ ನ್ಯೂಸ್ ಕೊಟ್ಟಿದ್ದರು. ಸದ್ಯ ವಿಚ್ಛೇದನದ ನಂತರ ಸಮಂತಾ ಸೋಶಿಯಲ್ ಮೀಡಿಯಾದಲ್ಲಿ ಹಾಟ್ ಟಾಪಿಕ್ ಆಗಿದ್ದಾರೆ. ಸಮಂತಾ ಇನ್ಸ್ಟಾಗ್ರಾಮ್‌ನಲ್ಲಿ ಹೆಚ್ಚು ಆ್ಯಕ್ಟಿವ್ ಆಗಿದ್ದು, ಇನ್ಸ್ಟಾಗ್ರಾಮ್‌ನಲ್ಲಿ 21 ಮಿಲಿಯನ್‌ಗೂ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ.ಆಗಾಗ ತನ್ನ ಅಭಿಮಾನಿಗಳಿಗಾಗಿ ಸೋಶಿಯಲ್ ಮಿಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಪ್ರಸ್ತುತ ಪ್ರವಾಸದಲ್ಲಿರುವ ಸ್ಯಾಮ್ ಇನ್ಸ್ಟಾಗ್ರಾಮ್‌ನಲ್ಲಿ ಪ್ರವಾಸದ ಫೋಟೋ ಶೇರ್ ಮಾಡಿದ್ದಾರೆ.

ಯುರೋಪ್ ಪ್ರವಾಸದಲ್ಲಿ ಸಮಂತಾ

ವಿಚ್ಛೇದನದ ನಂತರ ಗ್ಯಾಪ್ ತಗೊಂಡಿರುವ ಸಮಂತಾ ಸಾಕಷ್ಟು ಪ್ರವಾಸ ಹೋಗುತ್ತಿದ್ದಾರೆ. ಸದ್ಯ ಸಮಂತಾ ಯುರೋಪ್ ಟ್ರಿಪ್‌ನಲ್ಲಿದ್ದು ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.

ಸ್ಕೀಯಿಂಗ್ ಮಾಡಿದ ಸ್ಯಾಮ್

ಯುರೋಪ್‌ನಲ್ಲಿ ಸ್ಕೀಯಿಂಗ್ ಮಾಡಿದ ಸ್ಯಾಮ್ ಅದರ ವಿಡಿಯೋ ಮತ್ತು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸ್ಕೀಯಿಂಗ್ ತರಬೇತುದಾರರಿಗೆ ಧನ್ಯವಾದ ಅರ್ಪಿಸುತ್ತಾ, “ನಾನು ನನ್ನ ಸ್ಕೀಯಿಂಗ್ ಪ್ರಯಾಣವನ್ನು ಅಂಬೆಗಾಲಿಡುವ ಮೂಲಕ ಪ್ರಾರಂಭಿಸಿದ್ದೇನೆ. ನೂರಾರು ಬಾರಿ ಬಿದ್ದು ಮತ್ತೆ ಎದ್ದಿದ್ದೇನೆ. ಬಿದ್ದಾಗ ಕೆಲಸವನ್ನು ಕೈ ಬಿಡದೇ ಮತ್ತೆ ಮಾಡಲು ಆಲೋಚಿಸಿದ್ದೇನೆ. ಇಳಿಜಾರಿನಲ್ಲಿ ಮಾಡುವ ಸ್ಕೀಯಿಂಗ್ ನಿಜಕ್ಕೂ ಖುಷಿ ಕೊಟ್ಟಿದೆ ಎಂದು ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.ಈ ಇಬ್ಬರಿಂದಾಗಿ ಇನ್ನೂ ಜೀವಂತವಾಗಿದ್ದೇನೆ

ಸ್ಕಿಯಿಂಗ್ ಪೂರ್ಣಗೊಳಿಸಲು ತೆಗೆದುಕೊಂಡ ಸಮಯ ಮತ್ತು ಶ್ರಮದಲ್ಲಿ ನಾನು ನಿಜವಾಗಿಯೂ ವಿಶೇಷವಾದದ್ದನ್ನು ಕಂಡುಕೊಂಡೆ. ನನ್ನ ಟ್ರೈನಿ ಕೇಟ್‌ ನಿಜವಾಗಲೂ ನನ್ನನ್ನು ಹುರಿದುಂಬಿಸಿದಳು ಅಂತಾ ಸಮಂತಾ ತರಬೇತುದಾರರಿಗೆ ಧನ್ಯವಾದ ಹೇಳಿದ್ದಾಳೆ. ಈ ಇಬ್ಬರಿಂದಾಗಿ ನಾನು ಇನ್ನೂ ಜೀವಂತವಾಗಿದ್ದೇನೆ ಎಂದು ಹಾಸ್ಯಮಯವಾಗಿ ಬರೆದುಕೊಂಡಿದ್ದಾರೆ. ಸಮಂತಾ ಸ್ಕೀಯಿಂಗ್ ವಿಡಿಯೋಗೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ.

ಇದನ್ನು ಓದಿ: ತಮನ್ನಾ.. ಥಳಕು ಬಳುಕು ಸುಂದರಿ, ನೋಡಿದ್ರೆ ಹೆಚ್ಚುತ್ತೆ ಹಾರ್ಟ್​ಬೀಟ್​!

ಬ್ಲ್ಯಾಕ್ ಎಂಡ್ ವೈಟ್ ಲುಕ್​ನಲ್ಲಿ ಸಮಂತಾ

ಸಮಂತಾ ತನ್ನ ಸ್ಕೀಯಿಂಗ್ ತರಬೇತುದಾರಳ ಜೊತೆ ತೆಗಿಸಿಕೊಂಡಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಫೋಟೋದಲ್ಲಿ, ಸಮಂತಾ ಕಪ್ಪು ಮತ್ತು ಬಿಳಿ ಸ್ವೆಟರ್‌ನ ಮೇಲೆ ಕಪ್ಪು ಪಫರ್ ಜಾಕೆಟ್ ಧರಿಸಿದ್ದು ಮತ್ತು ತಲೆಗೆ ಹೆಡ್‌ಬ್ಯಾಂಡ್ ಹಾಕಿಕೊಂಡಿದ್ದಾರೆ. ಜಾಕೆಟ್ ಲುಕ್‌ನಲ್ಲಿ ನ್ಯಾಚುರಲ್ ಬ್ಯೂಟಿ ನಟಿ ಸಮಂತಾ ರುತ್ ಪ್ರಭುಸಕ್ಕತ್ತಾಗಿ ಕಾಣಿಸಿದ್ದಾರೆ.

ಸ್ಯಾಮ್ ಮುಂದಿನ ಚಿತ್ರಗಳು

ಸಮಂತಾ ಕೈಯಲ್ಲಿ ಸಾಲು ಸಾಲು ಚಿತ್ರಗಳಿದ್ದು2022ರಲ್ಲಿ ಬಿಡುಗಡೆಗೆ ಕೆಲ ಚಿತ್ರಗಳು ಸಜ್ಜಾಗಿವೆ. ಸಮಂತಾ ತಮ್ಮ ಹೊಸ ಚಿತ್ರ ಯಶೋದಾ ಚಿತ್ರೀಕರಣವನ್ನು ಪುಣೆಯಲ್ಲಿ ಈಗಾಗಲೇ ಆರಂಭಿಸಿದ್ದಾರೆ. ಈ ಚಿತ್ರವನ್ನು ಹರಿ ಮತ್ತು ಹರೀಶ್ ನಿರ್ದೇಶಿಸಲಿದ್ದು, ತೆಲುಗು, ಮಲಯಾಳಂ, ತಮಿಳು, ಕನ್ನಡ, ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಸಮಂತಾ ಲೇಖಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ಹೊಸ ಚಿತ್ರದ ಪೋಸ್ಟರ್ ಅನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದರು.

ಇದನ್ನು ಓದಿ: ಕೈಯಲ್ಲಿ ಸಿನಿಮಾಗಳು ಇಲ್ಲದೇ ಖಾಲಿ ಕೂತ ಪೂಜಾ ಹೆಗ್ಡೆ, ಸಂಭಾವನೆ ಹೆಚ್ಚಿಸಿಕೊಂಡಿದ್ದಕ್ಕೆ ಹಿಂಗಾಯ್ತಂತೆ!

2022ರಲ್ಲಿ ಬಿಡುಗಡೆಯಾಗಲಿರುವ ಗುಣಶೇಖರ್ ನಿರ್ದೇಶನದ ಶಾಕುಂತಲಂ ಚಿತ್ರದಲ್ಲಿ ದೇವ್ ಮೋಹನ್ ಜೊತೆ ಸಮಂತಾ ನಟಿಸಲಿದ್ದಾರೆ. ಅಲ್ಲು ಅರ್ಜುನ್ ಅವರ ಪುತ್ರಿ ಅಲ್ಲು ಅರ್ಹಾ ಕೂಡ ಈ ಪೌರಾಣಿಕ ಚಿತ್ರದಲ್ಲಿ ನಟಿಸಲಿದ್ದಾಳೆ. ಈ ಪೌರಾಣಿಕ ಚಲನಚಿತ್ರವು ಕೆಲವು ಸುಧಾರಿತ VFX ತಂತ್ರಜ್ಞಾನವನ್ನು ಬಳಸಿಕೊಂಡು ಮಾಡಲಾಗುತ್ತಿದೆ.
Published by:Vasudeva M
First published: