ಸಮಂತಾ (Samantha) ಅವರ ಇತ್ತೀಚಿನ ವಿಡಿಯೋ (Video) ಒಂದು ವೈರಲ್ (Viral) ಆಗುತ್ತಿದೆ. ಇದು ಜಾಹೀರಾತಿನ ವಿಡಿಯೋ ಕ್ಲಿಪ್ ಆಗಿದ್ದರೂ ಅದರ ಕಾನ್ಸೆಪ್ಟ್ ವಿಚಾರವಾಗಿ ಸಖತ್ ಫೇಮಸ್ ಆಗಿದೆ. ಗೂಗಲ್ನಲ್ಲಿ ಅತ್ಯಧಿಕ ಹುಡುಕಲ್ಪಟ್ಟ ಸೌತ್ ಇಂಡಿಯಾ ನಟಿ ಇವರು. ನಟಿ ಇತ್ತೀಚೆಗೆ ಪೆಪ್ಸಿ ಜಾಹೀರಾತಿನಲ್ಲಿ ಈಝಿ ಗೋಯಿಂಗ್ ಆ್ಯಟಿಟ್ಯೂಡ್ ಹುಡುಗಿಯಾಗಿ ಕಾಣಿಸಿಕೊಂಡರು. ಈ ಜಾಹೀರಾತು ಒಂದು ಜಾಹೀರಾತು ಮಾತ್ರವಲ್ಲ ಸಮಾಜದಲ್ಲಿ (Society) ಮಹಿಳೆಯರ (Women) ಕುರಿತು ಕೆಲವು ಸ್ಟಿರಿಯೋಟೈಪ್ಸ್ಗಳನ್ನು ತೊಡೆದುಹಾಕುವ ವಿಚಾsರ ವಸ್ತುವನ್ನು ಕೂಡಾ ಹೊಂದಿದೆ.
ಸಮಂತಾ ವಧುವಿನಂತೆ ಡ್ರೆಸ್ ಮಾಡಿರುವುದು ಕಾಣಿಸುತ್ತದೆ. ಅಲ್ಲಿದ್ದ ಹಿರಿಯ ಮಹಿಳೆಯರೆಲ್ಲ ಸರಿಯಾದ ಸಮಯಕ್ಕೆ ಹೆಣ್ಣುಮಕ್ಕಳ ಮದುವೆಯಾಗಬೇಕು ಎಂದು ಮಾತನಾಡುತ್ತಿರುತ್ತಾರೆ. ಆ ಸಂದರ್ಭ ಇದನ್ನು ಒಪ್ಪದ ಸಮಂತಾ ಹೆಣ್ಣುಮಕ್ಕಳಿಗೆ ಯಾವಾಗ ತಾನು ರೆಡಿ ಎಂದು ಅನಿಸುತ್ತದೋ ಆಗ ಮದುವೆಯಾಗಬೇಕು, ಸಮಾಜದ ನಿರೀಕ್ಷೆಗಳಂತೆ ಮದುವೆಯಾಗಬಾರದು ಎನ್ನುತ್ತಾರೆ.
ತಡರಾತ್ರಿ ಯುವತಿ ಹೋಗುತ್ತಿರುವಾಗ ವಾಚ್ಮ್ಯಾನ್ ಯಾವ ಕೆಲಸ ರಾತ್ರಿ 12 ಗಂಟೆಗೆ ಮುಗಿಯುತ್ತದೆ ಎಂದು ಟಾಂಗ್ ಕೊಡುತ್ತಾರೆ. ಅದಕ್ಕೆ ಪ್ರತಿಕ್ರಿಯಿಸುವ ಸಮಂತಾ 12 ಗಂಟೆ ಆದರೂ ಕೆಲಸ ಮುಗಿಯಲ್ಲ ಎಂದು ಹೇಳುತ್ತಾರೆ.
ಇದನ್ನೂ ಓದಿ: Malaika Arora: ಆಟೋ ಡ್ರೈವರ್ಗೆ ಸೆಲ್ಫಿ ನಿರಾಕರಿಸಿದ ಮಲೈಕಾ ಟ್ರೋಲ್!
ಆ್ಯಕ್ಷನ್ ಅಂತೂ ಹೀರೋನೇ ಮಾಡ್ಬೇಕಲ್ಲಾ ಎಂದು ಹೀರೋ ಒಬ್ಬ ಹೇಳುತ್ತಾನೆ. ಆದರೆ ಈ ಸಿನಿಮಾದ ಹೀರೋ ನಾನು ಎಂದು ವಿಲನ್ಗಳನ್ನು ಒದೆಯುತ್ತಾರೆ ಸಮಂತಾ.
ಎಲ್ಲರ ಮಾತುಗಳನ್ನೂ ಕೇಳುತ್ತಾ ಕುಳಿತರೆ ನಿಮಗನಿಸಿದ್ದನ್ನು ನೀವು ಯಾವಾಗ ಮಾಡುತ್ತೀರಿ ಎಂದು ಸಮಂತಾ ದಿಟ್ಟತನದಿಂದ ಪ್ರಶ್ನಿಸುತ್ತಾರೆ. ಸಮಾಜ ನಿಮ್ಮನ್ನು ಕೆಳಗೆ ಎಳೆಯಲು ಪ್ರಯತ್ನಿಸುತ್ತದೆ. ಬೇಬ್ ನೀನು ಮೇಲೆ ಬರಲೇಬೇಕು ಎನುತ್ತಾರೆ ಸಮಂತಾ.
ಸಮಂತಾ ಅವರ ಈ ವಿಡಿಯೋಗೆ ಅವರ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಗೋ ಸ್ಯಾಮ್ ಎಂದು ಸೋಫಿ ಚೌಧರಿ ಕಮೆಂಟ್ ಮಾಡಿದ್ದಾರೆ. ಪ್ರಿಯಾ ಅಟ್ಲೀ ಮೋರ್ ಪವರ್ ಟು ಯು ಎಂದು ಹೇಳಿದ್ದಾರೆ. ಜಗತ್ತು ನಿಮ್ಮನ್ನು ಕೆಳಗೆ ಎಳಿಯುತ್ತದೆ. ನೀವು ಯಾವಾಗಲೂ ಮೇಲೇರಿದ್ದೀರಿ ಸ್ಯಾಮ್ ಎಂದಿದ್ದಾರೆ. ಇನ್ನೊಬ್ಬರು ಯೂ ಗೋ ಗರ್ಲ್ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಸ್ಯಾಮ್ ಸ್ವಾಗ್ ಎಂದು ಹೊಗಳಿದ್ದಾರೆ.
ಸಮಂತಾ ಮಾರ್ಕ್ಸ್ ಕಾರ್ಡ್ ವೈರಲ್
ತೆಲುಗು ನಟಿ ಸಮಂತಾ ಅವರು ಬ್ರೈಟ್ & ಸ್ಮಾರ್ಟ್ ಎನ್ನುವುದರಲ್ಲಿ ಡೌಟೇ ಇಲ್ಲ. ನಿಮಗೆ ಗೊತ್ತಾ? ಸಿನಿಮಾ ಅಷ್ಟೇ ಅಲ್ಲ ಶಿಕ್ಷಣದಲ್ಲಿಯೂ ಸಮಂತಾ ಸೂಪರ್. ಅವರ ಪರ್ಫಾಮೆನ್ಸ್ ಶೀಟ್ ನೋಡಿದರೆ ಅವರು ಬ್ರೈಟ್ ಸ್ಟೂಡೆಂಟ್ ಎನ್ನುವುದು ಗೊತ್ತಾಗುತ್ತದೆ. ನಟಿ ಸಮಂತಾ ರುತ್ ಪ್ರಭು ಶೈಕ್ಷಣಿಕ ವಿಚಾರದಲ್ಲೂ ಅವರು ಬ್ರಿಲಿಯಂಟ್ ವಿದ್ಯಾರ್ಥಿನಿ. ಸದ್ಯ ನಟಿಯ 10ನೇ ತರಗತಿಯ ಮಾರ್ಕ್ಸ್ ಕಾರ್ಡ್ ವೈರಲ್ ಆಗಿದೆ. ಆರಂಭದ ದಿನಗಳಿಂದಲೂ ಸಮಂತಾ ಅವರು ಬುದ್ಧಿವಂತ ವಿದ್ಯಾರ್ಥಿನಿಯಾಗಿದ್ದರು.
ಸಮಂತಾ ಅವರು ಇಂಗ್ಲಿಷ್ನಲ್ಲಿ 100ರಲ್ಲಿ 90 ಹಾಗೂ ಮ್ಯಾಥ್ಸ್ನಲ್ಲಿ 100ರಲ್ಲಿ 100 ಮಾರ್ಕ್ಸ್ ಗಳಿಸಿ ಸೈ ಎನಿಸಿಕೊಂಡಿದ್ದರು. ನಟಿ 10ನೇ ತರಗತಿ ಪಾಸ್ ಮಾಡಿದ್ದು 2001-2002ರ ಸಂದರ್ಭದಲ್ಲಿ. ಈ ಚೆಲುವೆ ಓದಿದ್ದೆಲ್ಲಾ ಚೆನ್ನೈನಲ್ಲಿಯೇ.ನಟಿ ಸಮಂತಾ ಅವರು ಸದ್ಯ ಟಾಲಿವುಡ್ನಲ್ಲಿ ಹೆಚ್ಚು ಸಿನಿಮಾಗಳನ್ನು ಮಾಡುತ್ತಿದ್ದಾರೆ. ಮುಖ್ಯವಾಗಿ ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಸಮಂತಾ. ಆದರೆ ಈಗ ತೆಲುಗಿನಲ್ಲಿಯೇ ಯಶೋದಾ, ಶಾಕುಂತಲಂ ಸಿನಿಮಾ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ