• Home
  • »
  • News
  • »
  • entertainment
  • »
  • Samantha: ಹೊಸ ವರ್ಷಕ್ಕೆ ಸೂಪರ್​ ಲುಕ್​ನಲ್ಲಿ ಸಮಂತಾ ಎಂಟ್ರಿ, ಮತ್ತಷ್ಟು ಬೋಲ್ಡ್​ ಪಾತ್ರದಲ್ಲಿ ಮಿಂಚುತ್ತಾರಂತೆ!

Samantha: ಹೊಸ ವರ್ಷಕ್ಕೆ ಸೂಪರ್​ ಲುಕ್​ನಲ್ಲಿ ಸಮಂತಾ ಎಂಟ್ರಿ, ಮತ್ತಷ್ಟು ಬೋಲ್ಡ್​ ಪಾತ್ರದಲ್ಲಿ ಮಿಂಚುತ್ತಾರಂತೆ!

ಸಮಂತಾ

ಸಮಂತಾ

ಹೊಸ ವರ್ಷಕ್ಕೆ ಜನರು ಅನೇಕ ರೀತಿಯ ರೆಸೊಲ್ಯೂಶನ್ ಗಳನ್ನು ಹಾಕಿಕೊಳ್ಳುವುದನ್ನು ನಾವು ನೋಡಿರುತ್ತೇವೆ. ಇದಕ್ಕೆ ಚಿತ್ರೋದ್ಯಮದ ನಟ ಮತ್ತು ನಟಿಯರು ಹೊರತಾಗಿರುವುದಿಲ್ಲ ಅಂತ ಹೇಳಬಹುದು.

  • Share this:

ಹೊಸ ವರ್ಷ (New Year) ಶುರುವಾಗುವ ತಿಂಗಳ ಮುಂಚೆಯೇ ಅನೇಕರು ‘ಏನಪ್ಪಾ ಮಾಡೋದು ಡಿಸೆಂಬರ್ 31ಕ್ಕೆ ರಾತ್ರಿ? ಎಲ್ಲಿ ಮತ್ತು ಯಾರ ಜೊತೆ ಸೇರಿಕೊಂಡು ಹೊಸ ವರ್ಷವನ್ನು ಅದ್ದೂರಿ (Grand) ಯಾಗಿ ಬರಮಾಡಿಕೊಳ್ಳಬೇಕು’ ಅಂತೆಲ್ಲಾ ಯೋಚನೆಗಳನ್ನು ಮಾಡಲು ಶುರು ಮಾಡಿರುತ್ತಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಇದಷ್ಟೇ ಅಲ್ಲದೆ, ಜನರು ಹೊಸ ವರ್ಷಕ್ಕೆ ಎಂತಹ ನಿರ್ಣಯಗಳನ್ನು ತೆಗೆದುಕೊಳ್ಳಬೇಕು, ಎಂದರೆ, ನ್ಯೂ ಇಯರ್ ರೆಸೊಲ್ಯೂಶನ್ (New Year Resolution) ಗಳು ಹೇಗಿರಬೇಕು ಎಂದೆಲ್ಲಾ ಯೋಚನೆ ಮಾಡಿಟ್ಟು ಕೊಂಡಿರುವುದನ್ನು ನಾವು ನೋಡುತ್ತೇವೆ.


ಹೊಸ ವರ್ಷಕ್ಕೆ ಜನರು ಅನೇಕ ರೀತಿಯ ರೆಸೊಲ್ಯೂಶನ್ ಗಳನ್ನು ಹಾಕಿಕೊಳ್ಳುವುದನ್ನು ನಾವು ನೋಡಿರುತ್ತೇವೆ. ಇದಕ್ಕೆ ಚಿತ್ರೋದ್ಯಮದ ನಟ ಮತ್ತು ನಟಿಯರು ಹೊರತಾಗಿರುವುದಿಲ್ಲ ಅಂತ ಹೇಳಬಹುದು. ಇಲ್ಲೊಬ್ಬ ನಟಿ ಸಹ ತಮ್ಮ 2023 ರ ಹೊಸ ವರ್ಷದ ರೆಸೊಲ್ಯೂಶನ್ ಗಳ ಬಗ್ಗೆ ಮಾತಾಡಿದ್ದಾರೆ ನೋಡಿ.


ಸಮಂತಾ ಅವರ 2023 ರ ರೆಸೊಲ್ಯೂಶನ್ ಗಳೇನು ಗೊತ್ತೇ?


2022 ರಲ್ಲಿ ತಮ್ಮ ಮಾದಕವಾದ ಡ್ಯಾನ್ಸ್ ಸ್ಟೆಪ್ಸ್ ಗಳಿಂದ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದ ‘ಊ ಅಂಟಾವಾ ಮಾವ ಊಊ ಅಂಟಾವಾ’ ಹಿಟ್ ಹಾಡಿಗೆ ಡ್ಯಾನ್ಸ್ ಮಾಡಿದ ತೆಲುಗು ನಟಿ ಸಮಂತಾ ರುತ್ ಪ್ರಭು ಅವರು ಹೊಸ ವರ್ಷಕ್ಕೆ ಏನೆಲ್ಲಾ ರೆಸೊಲ್ಯೂಶನ್ ಗಳನ್ನು ಹಾಕಿಕೊಳ್ಳುತ್ತಾರೆ ಮತ್ತು ಅವು ಹೇಗಿರಬೇಕು ಅನ್ನೋದರ ಬಗ್ಗೆ ಮಾತಾಡಿದ್ದಾರೆ.


ಯಶೋಧಾ ಚಿತ್ರದಲ್ಲಿ ಕೊನೆಯ ಬಾರಿಗೆ ಪರದೆಯ ಮೇಲೆ ಕಾಣಿಸಿಕೊಂಡ ಸಮಂತಾ ರುತ್ ಪ್ರಭು, ಮುಂಬರುವ ವರ್ಷದಲ್ಲಿ ತೆಗೆದುಕೊಳ್ಳುವ ಕೆಲವು ನಿರ್ಣಯಗಳನ್ನು ಗುರುವಾರ ತಮ್ಮ ಸಾಮಾಜಿಕ ಮಾಧ್ಯಮವಾದ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಸೆಲ್ಫಿಯನ್ನು ಕ್ಲಿಕ್ಕಿಸಿಕೊಂಡು ಅದನ್ನು ಹಂಚಿಕೊಂಡ ಸಮಂತಾ, ನಮ್ಮ ಕೈಯಲ್ಲಿ ನಿಯಂತ್ರಿಸಬಹುದಾದುದನ್ನು ಮಾತ್ರ ನಿಯಂತ್ರಿಸುವ ಬಗ್ಗೆ ಮಾತನಾಡಿದರು.


ಶೀರ್ಷಿಕೆಯಲ್ಲಿ ಏನಂತ ಬರೆದ್ರು ಸಮಂತಾ?


ಅವರು ತಮ್ಮ ಪೋಸ್ಟ್ ನ ಶೀರ್ಷಿಕೆಯಲ್ಲಿ "ಮುಂದೆ ಇದನ್ನು ಮಾಡಬೇಕಿದೆ... ನಾವು ಏನು ಮಾಡಲು ಸಾಧ್ಯವೋ ಅದನ್ನು ಮಾತ್ರ ಮಾಡಬೇಕು!! ಇದು ಹೊಸ ಮತ್ತು ಸುಲಭವಾದ ನಿರ್ಣಯಗಳಿಗೆ ಸಮಯ ಎಂದು ಊಹಿಸಿ.. ಆ ದೇವರು 2023 ಒಳ್ಳೆಯ ವರ್ಷವನ್ನಾಗಿ ಆಶೀರ್ವದಿಸಲಿ" ಎಂದು ಬರೆದುಕೊಂಡಿದ್ದಾರೆ.


ಅಕ್ಟೋಬರ್ ನಲ್ಲಿ ಸಮಂತಾ ರುತ್ ಪ್ರಭು ತನ್ನ ಆಟೋಇಮ್ಯೂನ್ ಸ್ಥಿತಿಯಾದ ಮಯೋಸಿಟಿಸ್ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದರು. ಅನಾರೋಗ್ಯದ ಕಾರಣದಿಂದಾಗಿ ಅವರು ತಮ್ಮ ಕೆಲವು ಹಿಂದಿ ಚಲನಚಿತ್ರ ಯೋಜನೆಗಳಿಂದ ಹೊರ ನಡೆದಿದ್ದಾರೆ ಎಂದು ಇತ್ತೀಚಿನ ವರದಿಗಳು ತಿಳಿಸಿದ್ದವು.


ಇದನ್ನೂ ಓದಿ: ಅಂಬಿ ಜೊತೆಗಿನ ಫೋಟೋ ಹಂಚಿಕೊಂಡ ದೀಪಿಕಾ ದಾಸ್


ಆದಾಗ್ಯೂ, ಅವರ ಪ್ರತಿನಿಧಿಗಳು ಈ ಹೇಳಿಕೆಗಳನ್ನು ನಿರಾಕರಿಸಿ "ಸಮಂತಾ ಅವರು ಅಧಿಕೃತವಾಗಿ ಒಪ್ಪಿಕೊಂಡ ಯಾವುದೇ ಯೋಜನೆಗಳಿಂದ ಹೊರ ಬಂದಿಲ್ಲ. ಅವರ ಮುಂಬರುವ ಯೋಜನೆಗಳಿಂದ ಅವರು ನಿರ್ಗಮಿಸಿರುವ ಬಗ್ಗೆ ಇಲ್ಲಿವರೆಗೆ ಬಂದ ವರದಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ" ಎಂದು ಅವರ ವಕ್ತಾರರು ತಿಳಿಸಿದ್ದಾರೆ.


ಅನಾರೋಗ್ಯದ ಕಾರಣದಿಂದಾಗಿ ಕೆಲವು ಸಿನೆಮಾಗಳನ್ನ ಬಿಟ್ರಾ ನಟಿ?


ಈ ಮೊದಲು ಅವರು ತಮ್ಮ ಬಾಲಿವುಡ್ ಪ್ರಾಜೆಕ್ಟ್ ನಲ್ಲಿ ಜನವರಿಯಿಂದ ಕೆಲಸ ಮಾಡಲು ಪ್ರಾರಂಭಿಸಬೇಕಾಗಿತ್ತು, ಅದು ಈಗ ವಿಳಂಬವಾಗಿದೆ ಮತ್ತು ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಚಿತ್ರೀಕರಣವನ್ನು ಪ್ರಾರಂಭಿಸುತ್ತಾರೆ ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ: ಮಾನ್ವಿತಾ ಕಾಮತ್ ಕುತ್ತಿಗೆಯಲ್ಲಿ ಅಕ್ಷರಮಾಲೆಯ ಕಾಜಲ್ ಟ್ಯಾಟೂ


"ಆದರೆ ಅನಿರೀಕ್ಷಿತ ಸನ್ನಿವೇಶಗಳಿಂದಾಗಿ, ಚಲನಚಿತ್ರಗಳ ಚಿತ್ರೀಕರಣವು ಸುಮಾರು ಆರು ತಿಂಗಳು ವಿಳಂಬವಾಗಬಹುದು. ಆದ್ದರಿಂದ ಈಗ ಅವರು ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ತಮ್ಮ ಹಿಂದಿ ಚಿತ್ರದ ಚಿತ್ರೀಕರಣದಲ್ಲಿ ಮಾತ್ರ ಭಾಗವಹಿಸಲು ಸಾಧ್ಯವಾಗುತ್ತದೆ" ಎಂದು ತಿಳಿದುಬಂದಿದೆ. ಸಮಂತಾ ರುತ್ ಪ್ರಭು ಅವರ ಮುಂಬರುವ ಚಿತ್ರಗಳಲ್ಲಿ ಶಾಕುಂತಲಂ ಮತ್ತು ಖುಷಿ ಚಿತ್ರಗಳು ಇವೆ. ಖುಷಿ ಚಿತ್ರದಲ್ಲಿ ಇವರು ನಟ ವಿಜಯ್ ದೇವರಕೊಂಡ ಅವರೊಂದಿಗೆ ನಟಿಸುತ್ತಿದ್ದಾರೆ.

Published by:ವಾಸುದೇವ್ ಎಂ
First published: