ಸಮಂತಾ (Samantha) ಸದ್ಯ ಟಾಫ್ ಆಫ್ ದಿ ಟೌನ್ (Talk of The Town) ಆಗಿದ್ದಾರೆ. ಅವರು ಏನೇ ಮಾಡಿದರೂ ದೊಡ್ಡ ಸುದ್ದಿಯಾಗುತ್ತಿದೆ. ಇನ್ನೇನು 2021 ಮುಗಿಯಲುಕೆಲವೇ ದಿನಗಳು ಬಾಕಿ ಇದೆ. ಹೊಸ ವರ್ಷ (New Year)ವನ್ನು ಆಚರಿಸಲು ತಾರೆಯರು ಟ್ರಿಪ್ ಹೋಗುತ್ತಿದ್ದಾರೆ, ಕೋವಿಡ್ ಮತ್ತೆ ಹೆಚ್ಚುತ್ತಿರುವುದು ಎಲ್ಲರಿಗೂ ಆತಂಕ ಮೂಡಿಸಿದೆ. ಹೀಗಾಗಿ ಅನೇಕ ಸೆಲೆಬ್ರೆಟಿ (Celebrity)ಗಳು ವಿದೇಶಕ್ಕೆ ತೆರಳದೆ, ಭಾರತದಲ್ಲೇ ಈ ಬಾರಿ ಹೊಸ ವರ್ಷವನ್ನು ಆಚರಿಸಲು ಮುಂದಾಗುತ್ತಿದ್ದಾರೆ. ನಟಿ ಸಮಂತಾ ಕೂಡ ಹೊಸ ವರ್ಷ ಆಚರಣೆಗೆ ಗೋವಾ (Goa)ಗೆ ತೆರಳಿದ್ದಾರೆ. ಸಮಂತಾ ಗೋವಾದಲ್ಲಿರುವ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳನ್ನು ಕಂಡು ಫ್ಯಾನ್ಸ್ ಫಿದಾ ಆಗಿದ್ದಾರೆ. ಅಷ್ಟೆ ಅಲ್ಲದೇ ಸಮಂತಾ ಶೇರ್ ಮಾಡಿಕೊಂಡಿರುವ ಫೋಟೋಗಳು ಸಖತ್ ಹಾಟ್ (Hot) ಆಗಿದೆ. ಇದನ್ನು ಕಂಡ ಪಡ್ಡೆ ಹೈಕ್ಳು ಜೊಲ್ಲು ಸುರಿಸುತ್ತಿದ್ದಾರೆ. ಪುಷ್ಪ (Pushpa) ಸಿನಿಮಾದಲ್ಲಿ ಮೊದಲ ಬಾರಿಗೆ ಐಟಂ ಸಾಂಗ್ (Item Song)ನಲ್ಲಿ ನಟಿಸಿದ್ದ ಸಮಂತಾ, ಇದೀಗ ಆಫ್ ಸ್ಕ್ರೀನ್ನಲ್ಲೂ ಸಖತ್ ಮಾದಕವಾಗಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇಷ್ಟೇ ಅಲ್ಲದೇ ಪುಷ್ಪ ಐಟಂ ಸಾಂಗ್ ನೋಡಿದೆ ಅನೇಕ ನಿರ್ಮಾಪಕರು (Producers) ತಮ್ಮ ಸಿನಿಮಾದಲ್ಲೂ ಐಟಂ ಸಾಂಗ್ನಲ್ಲಿ ನಟಿಸುವಂತೆ ಸಮಂತಾ ಹಿಂದೆ ಬಿದ್ದಿದ್ದಾರಂತೆ.
ಡಿವೋರ್ಸ್ ಬಳಿಕ ಸಮಂತಾ ಫುಲ್ ಆ್ಯಕ್ಟೀವ್!
ಹೌದು, ನಾಗಚೈತನ್ಯ ಅವರ ಜೊತೆ ಡಿವೋರ್ಸ್ ಪಡೆದ ಬಳಿಕ ಸಮಂತಾ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಷ್ಟೆ ಅಲ್ಲದೇ ಸೋಶಿಯಲ್ ಮೀಡಿಯಾದಲ್ಲೂ ಆ್ಯಕ್ಟೀವ್ ಆಗಿದ್ದಾರೆ. ಸದಾ ಸಾಮಾಜಿಕ ಜಾಲತಾಣದಲ್ಲಿ ಒಂದೊಲ್ಲ ಒಂದು ಪೋಸ್ಟ್ಗಳನ್ನು ಮಾಡುತ್ತಾ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದಾರೆ. ಇದೀಗ ಅವರು ಜಾಲಿ ಮೂಡ್ನಲ್ಲಿದ್ದಾರೆ. ಗರ್ಲ್ಸ್ ಗ್ಯಾಂಗ್ ಜೊತೆ ಗೋವಾದಲ್ಲಿದ್ದಾರೆ. ಹೊಸ ವರ್ಷ ಸಂಭ್ರಮವನ್ನು ಅವರು ಅಲ್ಲೇ ಆಚರಿಸಲಿದ್ದಾರಂತೆ. ಇನ್ನೂ ಸಮಂತಾ ಅವರ ಗೋವಾ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಡಿಸೈನರ್ ಶಿಲ್ಪಾ ರೆಡ್ಡಿ ಹಾಗೂ ವಕೀಲೆ ವಾಸು ಪೂಂಜ್ ಜತೆ ಸಮಂತಾ ವರ್ಷಾಂತ್ಯ ಆಚರಣೆ ಮಾಡುತ್ತಿದ್ದಾರೆ.
View this post on Instagram
ಇದನ್ನು ಓದಿ: `ಸೆಕೆಂಡ್ ಹ್ಯಾಂಡ್ ಐಟಂ’ ಅಂದವನಿಗೆ ಸಮಂತಾ ಕ್ಲಾಸ್: ನಟಿ ಕೊಟ್ಟ ಉತ್ತರ ನೋಡಿದ್ರೆ ಶಹಬ್ಬಾಸ್ ಅಂತೀರಾ..!
Pretty Smile ❤️❤️ @Samanthaprabhu2 #Goa #Samantha #SamanthaRuthPrabhu pic.twitter.com/gQm9byRhgk
— Troll Who Trolls Samantha™ (@TeamTWTS) December 27, 2021
ಸೆಕೆಂಡ್ ಹ್ಯಾಂಡ್ ಐಟಂ ಎಂದ ಕಿಡಿಗೇಡಿ!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ